ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಇಫ್ಪಿ 52 ರಲ್ಲಿ ಭಾರತೀಯ ಪನೋರಮಾ ವಿಭಾಗ ಉದ್ಘಾಟಿಸಿದ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್


ಸೂಕ್ತವಾದ ವಸ್ತುವಿಷಯ ಭಾರತೀಯ ಸಿನಿಮಾವನ್ನು ಜಾಗತಿಕ ಪ್ರೇಕ್ಷಕರ ಬಳಿಗೆ ತೆಗೆದುಕೊಂಡು ಹೋಗುತ್ತದೆ: ಅನುರಾಗ್ ಸಿಂಗ್ ಠಾಕೂರ್

ಚಲನಚಿತ್ರಗಳು ನಮ್ಮ ಆಕಾಂಕ್ಷೆ ಮತ್ತು ಕನಸುಗಳನ್ನು ಪ್ರತಿಬಿಂಬಿಸುತ್ತವೆ: ಹಿಮಾಚಲ ಪ್ರದೇಶ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್

ಸೆಮ್ಖೋರ್: ಇಫ್ಫಿಯಲ್ಲಿ ಪ್ರದರ್ಶಿಸಲಾದ ಪ್ರಪ್ರಥಮ ದಿಮಾಸಾ ಭಾಷೆಯ ಚಲನಚಿತ್ರ

ವೇದ್-ದಿ ವಿಷನರಿ, ಆರಂಭಿಕ ಚಲನಚಿತ್ರ (ನಾನ್-ಫೀಚರ್ - ಇಂಡಿಯನ್ ಪನೋರಮಾ) ಚಲನಚಿತ್ರ ನಿರ್ಮಾಪಕರ ಹೋರಾಟ ಮತ್ತು ಸಂಯಮದ ಕಥೆಯನ್ನು ಹೇಳುತ್ತದೆ

Posted On: 21 NOV 2021 3:03PM by PIB Bengaluru

ಭಾರತದ ಮೂಲೆ ಮೂಲೆಗಳಿಂದ ಸಂಗ್ರಹಿಸಿದ ಕಥೆಗಳನ್ನು ರಜತ ಪರದೆಯ ಮೇಲೆ ಅನಾವರಣ ಮಾಡವ ಭರವಸೆಯೊಂದಿಗೆ, ಗೋವಾದಲ್ಲಿ ನಡೆಯುತ್ತಿರುವ 52ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗಕ್ಕೆ ಇಂದು ಚಾಲನೆ ದೊರೆಯಿತು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಖೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು 52 ನೇ ಇಫ್ಫಿ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದರು. ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ರಾಜ್ಯಪಾಲರಾದ ಶ್ರೀ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭವು ವರ್ಷಕ್ಕೆ ಭಾರತೀಯ ಪನೋರಮಾ 2021 ವಿಭಾಗದ ಅಡಿಯಲ್ಲಿ ಇಫ್ಫಿಯ ಅಧಿಕೃತ ಆಯ್ಕೆಯ 24 ಫೀಚರ್ ಮತ್ತು 20 ನಾನ್- ಫೀಚರ್ ಸಿನಿಮಾಗಳನ್ನು ಪ್ರೇಕ್ಷಕರಿಗೆ ಪರಿಚಯಿಸಿತು.

ಹಿಮಾಚಲ ಪ್ರದೇಶದ ರಾಜ್ಯಪಾಲರಾದ ಶ್ರೀ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಕೇಂದ್ರ ಸಚಿವರೊಂದಿಗೆ ಆರಂಭಿಕ ಚಿತ್ರಗಳಾದ ಸೆಮ್ಖೋರ್ (ಫೀಚರ್) ಮತ್ತು ವೇದ್- ದಿ ವಿಷನರಿ (ನಾನ್-ಫೀಚರ್) ಸಿನಿಮಾದ ನಿರ್ಮಾಪಕರು ಮತ್ತು ಕಲಾವಿದರು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು ಮತ್ತು ಅವರಿಗೆ ಪಾಲ್ಗೊಳ್ಳುವಿಕೆಯ ಪ್ರಮಾಣಪತ್ರಗಳನ್ನು ನೀಡಿದರು.

ಚಲನಚಿತ್ರ ನಿರ್ಮಾಪಕರನ್ನು ಅಭಿನಂದಿಸಿದ ಕೇಂದ್ರ ಸಚಿವರು, “ನೀವೆಲ್ಲರೂ ದೇಶದ ದೂರದ ಮೂಲೆಗಳಿಂದ ಕಥೆಗಳನ್ನು ತರಲು ಪ್ರಯತ್ನಿಸಿದ್ದೀರಿ ಮತ್ತು ಹೋರಾಟ ಮಾಡಿದ್ದೀರಿ. ಈಗ, ವಸ್ತುವಿಷಯವೇ ದೊರೆಯಾಗಿದೆ ಮತ್ತು ನೀವು ಸರಿಯಾದ ವಸ್ತುವಿಷಯವನ್ನು ರಚಿಸಿದರೆ, ಅದು ರಾಷ್ಟ್ರಕ್ಕೆ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗುತ್ತದೆ. ನಮ್ಮಲ್ಲಿ ಪ್ರತಿಭೆ ಇದೆ ಮತ್ತು ನಿಮ್ಮೆಲ್ಲರ ಸಹಾಯದಿಂದ ನಾವು ಇಫ್ಫಿಯನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತೇವೆ. ಗೋವಾದ ತೀರಕ್ಕೆ ಇಫ್ಫಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿವಂಗತ ಮನೋಹರ್ ಪರಿಕ್ಕರ್ ಅವರನ್ನು ಸಚಿವರು ಸ್ಮರಿಸಿದರು.

ಹಿಂದೆ ಚಲನಚಿತ್ರೋತ್ಸವಗಳಲ್ಲಿ ನಟರು, ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಮಾತ್ರ ಪ್ರಶಸ್ತಿ ನೀಡುವುದನ್ನು ನಾವು ನೋಡಿದ್ದೇವೆ ಆದರೆ ಈಗ ನಾವು ತಂತ್ರಜ್ಞರನ್ನೂ ಗೌರವಿಸುತ್ತಿದ್ದೇವೆ, ಚಲನಚಿತ್ರ ಪೂರ್ಣಗೊಳ್ಳಲು ಹಿನ್ನೆಲೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಳನ್ನು ಸಹ ಗೌರವಿಸುತ್ತೇವೆ ಎಂದೂ ಅವರು ಹೇಳಿದರು. ಅಂತಾರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರಿಗೆ ಭಾರತದಲ್ಲಿ ಬಂದು ಚಿತ್ರೀಕರಣ ಮಾಡುವಂತೆ ಆಗ್ರಹಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಹಿಮಾಚಲ ಪ್ರದೇಶದ ರಾಜ್ಯಪಾಲರಾದ ಶ್ರೀ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, “ನಾನು ಚಲನಚಿತ್ರ ವಿಮರ್ಶಕ ಅಥವಾ ಚಲನಚಿತ್ರಗಳ ಕಟ್ಟಾ ಅನುಯಾಯಿ ಅಲ್ಲ, ಆದರೆ ನಾನು ಯಾವಾಗಲೂ ಭಾರತೀಯ ಪನೋರಮಾವನ್ನು ನೋಡುತ್ತೇನೆ, ನಮ್ಮ ಚಲನಚಿತ್ರಗಳು ನಮ್ಮ ಸಮಾಜವನ್ನು ಹೇಗೆ ಪ್ರತಿಬಿಂಬಿಸುತ್ತವೆ. ಭಾರತೀಯ ಚಲನಚಿತ್ರಗಳು ನಮ್ಮ ಸಮಾಜದ ಆಕಾಂಕ್ಷೆಗಳು, ಅಗತ್ಯಗಳು ಮತ್ತು ಹೋರಾಟಗಳನ್ನು ಸುಂದರವಾಗಿ ಪ್ರತಿಬಿಂಬಿಸಿವೆ ಮತ್ತು ತೋರಿಸಿವೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ ಎಂದರು.

ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿಸಲಾದ ಫೀಚರ್ ಫಿಲ್ಮ್ ವಿಭಾಗದ ಆರಂಭಿಕ ಚಿತ್ರ, ಸೆಮ್ಖೋರ್, ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿಸಲಾದ ಪ್ರಪ್ರಥಮ ದಿಮಾಸಾ ಭಾಷೆಯ ಚಲನಚಿತ್ರವಾಗಿದೆ. ಚಿತ್ರದ ನಿರ್ದೇಶಕರಾದ ಐಮೀ ಬರುವಾ, ಚಿತ್ರಕ್ಕೆ ನೀಡಿದ ಗೌರವ ಮತ್ತು ಮನ್ನಣೆಗಾಗಿ ಇಫ್ಫಿಗೆ ಧನ್ಯವಾದ ಅರ್ಪಿಸಿದರು. ಸೆಮ್ಖೋರ್ ಚಲನಚಿತ್ರವು ಸಾಮಾಜಿಕ ನಿಷೇಧಗಳೊಂದಿಗೆ ವ್ಯವಹರಿಸುತ್ತದೆ ಮತ್ತು ಚಿತ್ರದ ಮೂಲಕ ಅಸ್ಸಾಂನಲ್ಲಿ ದಿಮಾಸಾ ಸಮುದಾಯವು ಎದುರಿಸುತ್ತಿರುವ ಹೋರಾಟಗಳನ್ನು ಮುಂದಿಡಲು ಪ್ರಯತ್ನಿಸಿದೆ ಎಂದು ಅವರು ಹೇಳಿದರು.

ನಾನ್ ಫೀಚರ್ ಫಿಲ್ಮ್ ವಿಭಾಗದ ಆರಂಭಿಕ ಚಿತ್ರದ ನಿರ್ದೇಶಕ ರಾಜೀವ್ ಪ್ರಕಾಶ್, ವೇದ್ -ದಿ ವಿಷನರಿ, “ಇದು ಚಲನಚಿತ್ರ ನಿರ್ಮಾಣ ಕ್ಷೇತ್ರದಲ್ಲಿ ತಮ್ಮ ತಂದೆಯ ಸ್ಥೈರ್ಯ, ಸ್ಥೈರ್ಯದ ಕಥೆ. ಸಿನಿಮಾ ಇತಿಹಾಸದಲ್ಲಿ ಹುದುಗಿರುವ ಅವರ ಪ್ರಯತ್ನಗಳನ್ನು ತೋರಿಸುತ್ತದೆ ಎಂದರು.

ಸಂದರ್ಭದಲ್ಲಿ ಫೀಚರ್ ಮತ್ತು ನಾನ್-ಫೀಚರ್ ಸಿನಿಮಾಗಳ ತೀರ್ಪುಗಾರ ಮಂಡಳಿ ಸದಸ್ಯರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.

ಭಾರತೀಯ ಪನೋರಮಾವು ಇಫ್ಫಿಯ ಪ್ರಮುಖ ಭಾಗವಾಗಿದೆ, ಇದರ ಅಡಿಯಲ್ಲಿ ಅತ್ಯುತ್ತಮ ಸಮಕಾಲೀನ ಭಾರತೀಯ ಚಲನಚಿತ್ರಗಳನ್ನು ಚಲನಚಿತ್ರ ಕಲೆಯ ಪ್ರಚಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಭಾರತೀಯ ಚಲನಚಿತ್ರಗಳು ಮತ್ತು ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಸಿನಿಮಾ ಕಲೆಯನ್ನು ಉತ್ತೇಜಿಸಲು ಇಫ್ಫಿ ಛತ್ರಿಯ ಭಾಗವಾಗಿ ಇದನ್ನು 1978 ರಲ್ಲಿ ಪರಿಚಯಿಸಲಾಯಿತು.

ಭಾರತೀಯ ಪನೋರಮಾದ ಆರಂಭಿಕ ಚಲನಚಿತ್ರಗಳ ಬಗ್ಗೆ:

ಸೆಮ್ಖೋರ್

ಡಿರೋ ಸೆಮ್ಖೋರ್‌ ಸಂಸಾ ಸಮುದಾಯಕ್ಕೆ ಸೇರಿದವರು. ಡಿರೋ ಮರಣಹೊಂದಿದಾಗ, ಸಹಾಯಕ ಸೂಲಗಿತ್ತಿಯಾಗಿ ಕೆಲಸ ಮಾಡಿದ ಆತನ ಹೆಂಡತಿ ಮೂರು ಮಕ್ಕಳನ್ನು ಸಲಹುತ್ತಾರೆ. ಆಕೆ ಕೇವಲ ಹನ್ನೊಂದು ವರ್ಷದ ತನ್ನ ಏಕೈಕ ಪುತ್ರಿ ಮುರಿಯನ್ನು ದಿನಾರ್‌ ಗೆ ಕೊಟ್ಟು ಮದುವೆ ಮಾಡುತ್ತಾಳೆ. ದುರದೃಷ್ಟವಶಾತ್, ಮುರಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಸಾಯುತ್ತಾಳೆ. ಸೆಮ್ಖೋರ್ ಪದ್ಧತಿಯ ಪ್ರಕಾರ, ಹೆರಿಗೆಯ ಸಮಯದಲ್ಲಿ ಮಹಿಳೆ ಸತ್ತರೆ, ತಾಯಿಯೊಂದಿಗೆ ಮಗುವನ್ನು ಜೀವಂತವಾಗಿ ಹೂಳಲಾಗುತ್ತದೆ. ಆದರೆ ಡಿರೋನ ಪತ್ನಿ ಮುರಿಯ ಶಿಶುವನ್ನು ರಕ್ಷಿಸುತ್ತಾಳೆ, ಇದು ಸೆಮ್ಖೋರ್ ನಲ್ಲಿ ಹೊಸ ಉದಯವನ್ನು ಸೂಚಿಸುತ್ತದೆ.

ವೇದ್ ... ದಿ ವಿಷನರಿ

ಚಲನಚಿತ್ರವು  ಸಿನಿಮಾ ನಿರ್ಮಾಪಕ ವೇದ್ ಪ್ರಕಾಶ್ ಅವರ ಕಥೆಯನ್ನು ಮತ್ತು 1939-1975 ಅವಧಿಯಲ್ಲಿ ನ್ಯೂಸ್‌ ರೀಲ್ ಚಿತ್ರೀಕರಣದ ಜಗತ್ತನ್ನು ಹಿಡಿದ ಅವರ ಪಯಣವನ್ನು ಸಾರುತ್ತದೆ. ಅವರ ಅಸಾಮಾನ್ಯ ಕೃತಿಗಳಲ್ಲಿ ಜನವರಿ 1948ರಲ್ಲಿ ಮಹಾತ್ಮಾ ಗಾಂಧಿಯವರ ಅಂತ್ಯಕ್ರಿಯೆಯ ಸುದ್ದಿ ಪ್ರಸಾರ, ಇದನ್ನು 1949 ರಲ್ಲಿ ಬ್ರಿಟಿಷ್ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲಾಗಿತ್ತು; ಭಾರತ ಸ್ವತಂತ್ರವಾದಾಗ ಅಧಿಕಾರದ ಬದಲಾವಣೆ; ಭಾರತದ ವಿಭಜನೆಯ ನಂತರ ಸಂಭವಿಸಿದ ದುರಂತ, ಇತ್ಯಾದಿ ಒಳಗೊಂಡಿತ್ತು. ಭಾರತದ ದೃಶ್ಯಗಳ ಹೆಚ್ಚಿನ ಭಾಗವು ಅದರ ಪ್ರಕ್ಷುಬ್ಧತೆ ವರ್ಷಗಳ ಮತ್ತು ಸೌಂದರ್ಯಕ್ಕೆ ಅವರ ಕಠಿಣ ಪರಿಶ್ರಮದ ಕೊಡುಗೆಯಾಗಿದೆ.

* * *



(Release ID: 1773898) Visitor Counter : 187