ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ (ಪಿಎಂಜಿಎಸ್.ವೈ)- 1, ಪಿ.ಎಂ.ಜಿ.ಎಸ್.ವೈ.-2 ಮತ್ತು ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಯೋಜನೆ (ಆರ್.ಸಿ.ಪಿ.ಎಲ್.ವಿ.ಇ.ಎ.) ಮುಂದುವರಿಕೆಗೆ ಸಂಪುಟದ ಅನುಮೋದನೆ
ಪಿ.ಎಂ.ಜಿ.ಎಸ್.ವೈ.ನ ಎಲ್ಲಾ ಪ್ರಸ್ತುತ ಕಾಮಗಾರಿಗಳನ್ನು ಪೂರ್ಣಗೊಳಿಸಲು 2021-22 ರಿಂದ 2024-25 ರವರೆಗೆ ರಾಜ್ಯ ಪಾಲು ಸೇರಿದಂತೆ ಒಟ್ಟು 1,12,419 ಕೋಟಿ ರೂ. ವೆಚ್ಚ ಮಾಡುವ ಸಾಧ್ಯತೆ
9 ರಾಜ್ಯಗಳ 44 ಜಿಲ್ಲೆಗಳಲ್ಲಿ 2016ರಿಂದ ಆರ್.ಸಿ.ಪಿ.ಎಲ್.ಡಬ್ಲ್ಯು.ಇ.ಎ. ಅಡಿಯಲ್ಲಿ 4,490 ಕಿ.ಮೀ ಉದ್ದದ ರಸ್ತೆ ಮತ್ತು 105 ಸೇತುವೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ
ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಈಶಾನ್ಯ ಮತ್ತು ಗಿರಿ ರಾಜ್ಯಗಳಿಗೆ ಸಹಾಯ ಮಾಡಲು ಸೆಪ್ಟೆಂಬರ್ 2022ರವರೆಗೆ ಕಾಲಾವಧಿ ವಿಸ್ತರಣೆ
Posted On:
17 NOV 2021 3:33PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯು, ಬಾಕಿ ಇರುವ ರಸ್ತೆ ಮತ್ತು ಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲು 2022ರ ಸೆಪ್ಟೆಂಬರ್ ವರೆಗೆ ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ-1 ಮತ್ತು 2ರ ಮುಂದುವರಿಸಬೇಕೆಂಬ ಗ್ರಾಮೀಣಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಸ್ತಾವನೆಗಳಿಗೆ ತನ್ನ ಅನುಮೋದನೆ ನೀಡಿದೆ. ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳಿಗೆ (ಆರ್.ಸಿಪಿಎಲ್.ಡಬ್ಲ್ಯುಇಎ) ರಸ್ತೆ ಸಂಪರ್ಕ ಯೋಜನೆಯನ್ನು ಮಾರ್ಚ್ 2023ರವರೆಗೆ ಮುಂದುವರಿಸಲೂ ಸಿಸಿಇಎ ತನ್ನ ಅನುಮೋದನೆ ನೀಡಿದೆ.
ಭಾರತ ಸರ್ಕಾರವು, ರಸ್ತೆ ಸಂಪರ್ಕ ಇಲ್ಲದ 500+ ಜನಸಂಖ್ಯೆ ಇರುವ ಸಾಧಾರಣ ಪ್ರದೇಶಗಳು ಮತ್ತು 250+ ಜನಸಂಖ್ಯೆಯಿರುವ ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳ ಜನವಸತಿಗಳಿಗೆ ಸಂಪರ್ಕ ಒದಗಿಸಲು ಪಿಎಂಜಿಎಸ್ ವೈ-1 ಅನ್ನು ಪ್ರಾರಂಭಿಸಿದೆ. ಆಯ್ದ ಎಡಪಂಥೀಯ ಉಗ್ರವಾದ ವಿಭಾಗಗಳಲ್ಲಿ, 100+ ಜನಸಂಖ್ಯೆಯ ಜನವಸತಿಗಳಿಗೂ ಸಂಪರ್ಕವನ್ನು ಒದಗಿಸಲಾಗುತ್ತಿದೆ. ಒಟ್ಟು 1,84,444 ಜನವಸತಿಗಳ ಪೈಕಿ ಕೇವಲ 2,432 ಜನವಸತಿ ಪ್ರದೇಶಗಳು ಮಾತ್ರ ಈಗ ಬಾಕಿ ಇವೆ. ಒಟ್ಟು ಮಂಜೂರಾದ 6,45,627 ಕಿ.ಮೀ ಉದ್ದದ ರಸ್ತೆ ಮತ್ತು 7,523 ಸೇತುವೆಗಳ ಪೈಕಿ 20,950 ಕಿ.ಮೀ ಉದ್ದದ ರಸ್ತೆ ಮತ್ತು 1,974 ಸೇತುವೆಗಳು ಮಾತ್ರ ಪೂರ್ಣಗೊಳ್ಳಲು ಬಾಕಿ ಇವೆ. ಹೀಗಾಗಿ, ಈ ಕಾಮಗಾರಿಗಳು ಈಗ ಪೂರ್ಣಗೊಳ್ಳಲಿವೆ.
ಪಿಎಂಜಿಎಸ್ ವೈ-2ರ ಅಡಿಯಲ್ಲಿ 50,000 ಕಿ.ಮೀ ಗ್ರಾಮೀಣ ರಸ್ತೆ ಜಾಲವನ್ನು ಮೇಲ್ದರ್ಜೆಗೇರಿಸಲು ಯೋಜಿಸಲಾಗಿದೆ. ಒಟ್ಟು 49,885 ಕಿ.ಮೀ ಉದ್ದದ ರಸ್ತೆ ಮತ್ತು 765 ಎಲ್.ಎಸ್.ಬಿಗಳನ್ನು ಮಂಜೂರು ಮಾಡಲಾಗಿದೆ, ಅವುಗಳಲ್ಲಿ 4,240 ಕಿ.ಮೀ ಉದ್ದದ ರಸ್ತೆ ಮತ್ತು 254 ಸೇತುವೆಗಳು ಮಾತ್ರ ಬಾಕಿ ಇವೆ. ಹೀಗಾಗಿ, ಈ ಕಾಮಗಾರಿಗಳು ಈಗ ಪೂರ್ಣಗೊಳ್ಳಲಿವೆ.
ಕೋವಿಡ್ ಲಾಕ್ ಡೌನ್, ವ್ಯಾಪಕ ಮಳೆ, ಚಳಿಗಾಲ, ಅರಣ್ಯ ಸಮಸ್ಯೆಗಳಂತಹ ಅಂಶಗಳಿಂದಾಗಿ ಪಿಎಂಜಿಎಸ್ ವೈ-1 ಮತ್ತು 2 ರ ಅಡಿಯಲ್ಲಿ ಬಾಕಿ ಇರುವ ಹೆಚ್ಚಿನ ಕಾಮಗಾರಿಗಳು ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳಲ್ಲಿವೆ. ಗ್ರಾಮೀಣ ಆರ್ಥಿಕತೆಗೆ ಸಂಬಂಧಿಸಿದ ಈ ನಿರ್ಣಾಯಕ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಮಯ ವಿಸ್ತರಣೆಗಾಗಿ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ವಿನಂತಿಸಿವೆ. ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಈ ರಾಜ್ಯಗಳಿಗೆ ಸಹಾಯ ಮಾಡಲು ಸೆಪ್ಟೆಂಬರ್, 2022ರವರೆಗೆ ಕಾಲಾವಧಿಯನ್ನು ವಿಸ್ತರಿಸಲಾಗುತ್ತಿದೆ.
ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳ ರಸ್ತೆ ಸಂಪರ್ಕ ಯೋಜನೆಯನ್ನು (ಆರ್.ಸಿಪಿಎಲ್.ಡಬ್ಲ್ಯುಇಎ) 2016ರಲ್ಲಿ 9 ರಾಜ್ಯಗಳ 44 ಎಲ್.ಡಬ್ಲ್ಯು.ಇ ಬಾಧಿತ ಜಿಲ್ಲೆಗಳಲ್ಲಿ ಸಂಪರ್ಕ ಸುಧಾರಣೆಗಾಗಿ ಪ್ರಾರಂಭಿಸಲಾಯಿತು. 5,714 ಕಿ.ಮೀ ಉದ್ದದ ರಸ್ತೆ 358 ಸೇತುವೆ ಕಾಮಗಾರಿಗಳು ಪೂರ್ಣಗೊಳ್ಳಲು ಬಾಕಿ ಉಳಿದಿವೆ ಮತ್ತು ಇನ್ನೂ 1,887 ಕಿ.ಮೀ ಉದ್ದದ ರಸ್ತೆ ಮತ್ತು 40 ಸೇತುವೆಗಳನ್ನು ಮಂಜೂರು ಮಾಡಲಾಗುತ್ತಿದೆ. ಸಂವಹನ ಮತ್ತು ಭದ್ರತಾ ದೃಷ್ಟಿಯಿಂದಿಂದ ಬಹಳ ನಿರ್ಣಾಯಕವಾಗಿರುವ ಈ ಯೋಜನೆಗಳನ್ನು ಪೂರ್ಣಗೊಳಿಸಲು ಈ ಯೋಜನೆಯನ್ನು ಮಾರ್ಚ್, 2023 ರವರೆಗೆ ವಿಸ್ತರಿಸಲಾಗುತ್ತಿದೆ.
ಗ್ರಾಮೀಣ ರಸ್ತೆಗಳ ನಿರ್ಮಾಣದಲ್ಲಿ ಹೊಸ ಮತ್ತು ಹಸಿರು ತಂತ್ರಜ್ಞಾನದ ಬಳಕೆಯನ್ನು ಪಿಎಂಜಿಎಸ್.ವೈ ಉತ್ತೇಜಿಸುತ್ತದೆ. ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ರಸ್ತೆ ನಿರ್ಮಾಣದಲ್ಲಿ ವೆಚ್ಚ- ದಕ್ಷ ಮತ್ತು ವೇಗದ ನಿರ್ಮಾಣವನ್ನು ಉತ್ತೇಜಿಸುವ ಸಲುವಾಗಿ ಬಳಸಲಾಗುತ್ತದೆ. ಇಲ್ಲಿಯವರೆಗೆ ಹೊಸ ಮತ್ತು ಹಸಿರು ತಂತ್ರಜ್ಞಾನವನ್ನು ಬಳಸಿಕೊಂಡು 1 ಲಕ್ಷ ಕಿ.ಮೀ.ಗೂ ಹೆಚ್ಚು ಉದ್ದದ ರಸ್ತೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ 61,000 ಕಿ.ಮೀ.ಗೂ ಹೆಚ್ಚು ಪೂರ್ಣಗೊಂಡಿದೆ. ಉತ್ತರ ಪ್ರದೇಶ ರಾಜ್ಯಕ್ಕೆ ಇತ್ತೀಚೆಗೆ ಪೂರ್ಣ ಆಳ ಸುಧಾರಣೆ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಾಣಕ್ಕಾಗಿ 1,255 ಕಿ.ಮೀ ಉದ್ದದ ರಸ್ತೆಯನ್ನು ಮಂಜೂರು ಮಾಡಲಾಗಿದೆ, ಇದು ವೆಚ್ಚ ಮತ್ತು ಸಮಯವನ್ನು ದೊಡ್ಡ ರೀತಿಯಲ್ಲಿ ಉಳಿಸುವುದಲ್ಲದೆ, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುತ್ತದೆ ಮತ್ತು ಇಂಗಾಲದ ಹೆಜ್ಜೆ ಗುರುತನ್ನು ಕಡಿಮೆ ಮಾಡುತ್ತದೆ.
ನಿರ್ಮಾಣ ಮತ್ತು ನಿರ್ಮಾಣದ ನಂತರದ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು ಪಿಎಂಜಿಎಸ್.ವೈ ಮೂರು ಹಂತದ ಗುಣಮಟ್ಟ ಖಾತ್ರಿ ವ್ಯವಸ್ಥೆಯನ್ನು ರೂಪಿಸುತ್ತದೆ. ಉತ್ತಮ ಗುಣಮಟ್ಟದ ನಿರ್ವಹಣೆಗಾಗಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಗುಣಮಟ್ಟದ ನಿಗಾ ಸಂಖ್ಯೆಯನ್ನು ಮತ್ತು ತಪಾಸಣೆಗಳ ತೀವ್ರತೆಯನ್ನು ಹೆಚ್ಚಿಸಲಾಗಿದೆ. ತೃಪ್ತಿಕರ ಕಾಮಗಾರಿಗಳ ಪ್ರಮಾಣವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಪ್ರವೃತ್ತಿಗೆ ಸಾಕ್ಷಿಯಾಗಿದೆ.
2025ರ ಮಾರ್ಚ್ ವೇಳೆಗೆ 1,25,000 ಕಿ.ಮೀ ಉದ್ದದ ರಸ್ತೆಯ ಬಲವರ್ಧನೆಗಾಗಿ ಸರ್ಕಾರ 2019ರಲ್ಲಿ ಪಿಎಂಜಿಎಸ್ ವೈ-3 ಅನ್ನು ಪ್ರಾರಂಭಿಸಿತು. ಪಿಎಂಜಿಎಸ್ ವೈ-3 ರ ಅಡಿಯಲ್ಲಿ ಈವರೆಗೆ ಸುಮಾರು 72,000 ಕಿ.ಮೀ ಉದ್ದದ ರಸ್ತೆಯನ್ನು ಮಂಜೂರು ಮಾಡಲಾಗಿದೆ, ಇದರಲ್ಲಿ 17,750 ಕಿ.ಮೀ ಪೂರ್ಣಗೊಂಡಿದೆ.
ಪಿಎಂಜಿಎಸ್.ವೈ.ನ ಎಲ್ಲಾ ಪ್ರಸ್ತುತ ಕಾಮಗಾರಿಗಳನ್ನು ಪೂರ್ಣಗೊಳಿಸಲು 2021-22 ರಿಂದ 2024-25 ರವರೆಗೆ ರಾಜ್ಯದ ಪಾಲೂ ಸೇರಿದಂತೆ ಒಟ್ಟು 1,12,419 ಕೋಟಿ ರೂ. ವೆಚ್ಚ ಮಾಡುವ ನಿರೀಕ್ಷೆ ಇದೆ.
ಅಂಶವಾರು ವಿವರಗಳು
ಪಿಎಂಜಿಎಸ್.ವೈ-1
· ಈ ಯೋಜನೆಯಡಿ 2001ರ ಜನಗಣತಿಯಂತೆ ಸಾಧಾರಣ ಪ್ರದೇಶಗಳಲ್ಲಿ 500+ ಮತ್ತು ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಲ್ಲಿ 250+ ಜನಸಂಖ್ಯೆ ಇರುವ ಅರ್ಹ ಸಂಪರ್ಕ ರಹಿತ ಜನವಸತಿಗಳಿಗೆ ಸಂಪರ್ಕ ಕಲ್ಪಿಸಲು ಪಿ.ಎಂ.ಜಿ.ಎಸ್.ವೈ.1ನ್ನು 2000ದಲ್ಲಿ ಆರಂಭಿಸಲಾಯಿತು. ಈ ಯೋಜನೆಯು ಎಲ್ಲಾ ಅರ್ಹ ಜನ ವಸತಿ ಪ್ರದೇಶಗಳಲ್ಲಿ ರಸ್ತೆಗಳಿರುವ ಜಿಲ್ಲೆಗಳಿಗೆ ಅಸ್ತಿತ್ವದಲ್ಲಿರುವ ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಅಂಶವನ್ನು ಸಹ ಒಳಗೊಂಡಿತ್ತು.
· 2013 ರಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು ಗುರುತಿಸಿರುವ ಎಡಪಂಥೀಯ ಉಗ್ರವಾದ ಬಾಧಿತ ವಿಭಾಗಗಳಲ್ಲಿ 2001 ರ ಜನಗಣತಿಯ ಪ್ರಕಾರ ಜನಸಂಖ್ಯೆಯ ಗಾತ್ರದ 100-249 ಜನ ವಸತಿ ಪ್ರದೇಶಗಳನ್ನು ಸಹ ಒಳಗೊಳ್ಳಲು ನಿರ್ಧರಿಸಲಾಯಿತು.
· ಯೋಜನೆಯಡಿ ಗುರುತಿಸಲಾದ 250+ ಮತ್ತು 500+ ಜನಸಂಖ್ಯೆಯ ಗಾತ್ರದ 1,78,184 ಜನ ವಸತಿಗಳ ಪೈಕಿ, 1,71,494 ಜನ ವಸತಿ ಪ್ರದೇಶಗಳನ್ನು ಈಗಾಗಲೇ ಸಂಪರ್ಕಿಸಲಾಗಿದೆ ಮತ್ತು 1,968 ಜನ ವಸತಿ ಪ್ರದೇಶಗಳು 2021ರ ನವೆಂಬರ್ 15ರಲ್ಲಿದ್ದಂತೆ ಬಾಕಿ ಉಳಿದಿವೆ. ಉಳಿದ 4722 ಜನವಸತಿ ಪ್ರದೇಶಗಳನ್ನು ಕೈಬಿಡಲಾಗಿದೆ ಅಥವಾ ಕಾರ್ಯ ಸಾಧ್ಯವಲ್ಲ ಎಂದು ಪರಿಗಣಿಸಲಾಗಿದೆ. 100-249 ಜನರಿರುವ ಪ್ರವರ್ಗದಲ್ಲಿ, ಒಟ್ಟು ಮಂಜೂರಾದ 6,260 ಜನ ವಸತಿಗಳಲ್ಲಿ, 2021ರ ನವೆಂಬರ್ 15ರಲ್ಲಿದ್ದಂತೆ ಕೇವಲ 464 ಜನ ವಸತಿ ಪ್ರದೇಶಗಳು ಮಾತ್ರ ಬಾಕಿ ಇವೆ.
· ಪಿಎಂಜಿಎಸ್ ವೈ-1 ರ ಅಡಿಯಲ್ಲಿ ಒಟ್ಟು 6,45,627 ಕಿ.ಮೀ ಉದ್ದದ ರಸ್ತೆ ಮತ್ತು 7,523 ಸೇತುವೆಗಳನ್ನು ಮಂಜೂರು ಮಾಡಲಾಗಿದೆ, ಅವುಗಳಲ್ಲಿ ಕೇವಲ 20,950 ಕಿ.ಮೀ ಉದ್ದದ ರಸ್ತೆ ಮತ್ತು 1,974 ಸೇತುವೆಗಳು 2021 ರ ನವೆಂಬರ್ 15ರಲ್ಲಿದ್ದಂತೆ ಬಾಕಿ ಇವೆ.
· ಬಾಕಿ ಇರುವ ಹೆಚ್ಚಿನ ಯೋಜನೆಗಳು ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿವೆ.
· ಆಗಸ್ಟ್ 9, 2018 ರಂದು ಸಿಸಿಇಎ ಮಾರ್ಚ್, 2019ರವರೆಗೆ ಕಾಲಮಿತಿ ವಿಸ್ತರಣೆಗೆ ಅನುಮೋದನೆ ನೀಡಿತ್ತು.
· ಎಲ್ಲಾ ಬಾಕಿ ಜನ ವಸತಿ ಪ್ರದೇಶಗಳನ್ನು ಉದ್ದೇಶಿತ ವಿಸ್ತರಿತ ಅವಧಿಯೊಳಗೆ ಅಂದರೆ ಸೆಪ್ಟೆಂಬರ್, 2022 ರೊಳಗೆ 20,950 ಕಿ.ಮೀ ಉದ್ದದ ರಸ್ತೆ ಮತ್ತು 1,974 ಸೇತುವೆಗಳನ್ನು ನಿರ್ಮಿಸುವ ಮೂಲಕ ಸಂಪರ್ಕದ ಗುರಿ ಸಾಧಿಸಲಾಗುತ್ತದೆ.
ಪಿಎಂಜಿಎಸ್.ವೈ-2
· 2013ರ ಮೇ ತಿಂಗಳಲ್ಲಿ ಸಚಿವ ಸಂಪುಟವು ಅನುಮೋದಿಸಿದ ಪಿಎಂಜಿಎಸ್.ವೈ-2, ಅಸ್ತಿತ್ವದಲ್ಲಿರುವ ಗ್ರಾಮೀಣ ರಸ್ತೆ ಜಾಲದ 50,000 ಕಿ.ಮೀ. ಕ್ರೋಡೀಕರಣಕ್ಕೆ ಉದ್ದೇಶಿಸಿತ್ತು.
· ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಪ್ರಸ್ತಾಪಗಳನ್ನು ಮಂಜೂರು ಮಾಡಲಾಗಿದೆ.
· ಯೋಜನೆಯಡಿ ಮಂಜೂರಾದ ಒಟ್ಟು 49,885 ಕಿ.ಮೀ ರಸ್ತೆ ಮತ್ತು 765 ಸೇತುವೆಗಳ ಪೈಕಿ ಕೇವಲ 4,240 ಕಿ.ಮೀ ಉದ್ದದ ರಸ್ತೆ ಮತ್ತು 254 ಸೇತುವೆಗಳು ಮಾತ್ರ ಬಾಕಿ ಇವೆ.
· ಬಾಕಿ ಇರುವ ಹೆಚ್ಚಿನ ಯೋಜನೆಗಳು ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತು ಬಿಹಾರ ರಾಜ್ಯದಲ್ಲಿವೆ.
· ಆಗಸ್ಟ್ 9, 2018 ರಂದು ಸಿಸಿಇಎ ಮಾರ್ಚ್, 2020 ರವರೆಗೆ ಕಾಲಮಿತಿ ವಿಸ್ತರಣೆಗೆ ಅನುಮೋದನೆ ನೀಡಿತ್ತು.
· ಬಾಕಿ ಇರುವ ಎಲ್ಲಾ ಯೋಜನೆಗಳನ್ನು ಉದ್ದೇಶಿತ ವಿಸ್ತೃತ ಅವಧಿಯೊಳಗೆ ಅಂದರೆ ಸೆಪ್ಟೆಂಬರ್, 2022 ರವರೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.
ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳಿಗೆ ರಸ್ತೆ ಸಂಪರ್ಕ ಯೋಜನೆ
· 9 ರಾಜ್ಯಗಳು ಅಂದರೆ ಆಂಧ್ರಪ್ರದೇಶ, ಬಿಹಾರ, ಛತ್ತೀಸಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ ಮತ್ತು ಉತ್ತರ ಪ್ರದೇಶಗಳ 44 ಜಿಲ್ಲೆಗಳಲ್ಲಿ 5,412 ಕಿ.ಮೀ ಉದ್ದದ ರಸ್ತೆ ಮತ್ತು ವ್ಯೂಹಾತ್ಮಕ ಪ್ರಾಮುಖ್ಯತೆಯ 126 ಸೇತುವೆಗಳ ನಿರ್ಮಾಣ/ಮೇಲ್ದರ್ಜೆಗೇರಿಸಲು 11,725 ಕೋಟಿ ರೂಪಾಯಿ ಹಂಚಿಕೆಯೊಂದಿಗೆ 2016ರಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು.
· ಅನುಷ್ಠಾನ ಅವಧಿ: 2016-17 ರಿಂದ 2019-20
· ಈ ಯೋಜನೆಯಡಿ ಕೈಗೊಳ್ಳಲಾಗುವ ರಸ್ತೆ ಮತ್ತು ಸೇತುವೆ ಕಾಮಗಾರಿಗಳನ್ನು ರಾಜ್ಯಗಳು ಮತ್ತು ಭದ್ರತಾ ಪಡೆಗಳೊಂದಿಗೆ ಸಮಾಲೋಚಿಸಿ ಗೃಹ ವ್ಯವಹಾರಗಳ ಸಚಿವಾಲಯ ಗುರುತಿಸಿದೆ.
· 10,231 ಕಿ.ಮೀ ಉದ್ದದ ರಸ್ತೆ ಮತ್ತು ಸೇತುವೆಗಳನ್ನು ಈ ಯೋಜನೆಯಡಿ ಈವರೆಗೆ 9,822 ಕೋಟಿ ರೂ.ಗಳ ವೆಚ್ಚದೊಂದಿಗೆ ಮಂಜೂರು ಮಾಡಲಾಗಿದೆ, ಇದರಲ್ಲಿ ಎಂಎಚ್ಎ ಶಿಫಾರಸು ಮಾಡಿದ ಹೆಚ್ಚುವರಿ ಪ್ರಸ್ತಾವನೆಗಳೂ ಸೇರಿವೆ.
· ಈಗಾಗಲೇ 4,490 ಕಿ.ಮೀ ಉದ್ದದ ರಸ್ತೆ ಹಾಗೂ 105 ಸೇತುವೆಗಳು ಪೂರ್ಣಗೊಂಡಿವೆ.
· ಇನ್ನೂ ಮಂಜೂರು ಮಾಡಲಾಗದ ಸುಮಾರು 1,887 ಕಿ.ಮೀ.ನ ರಸ್ತೆ ಯೋಜನೆಗಳು ಬಾಕಿ ಇದ್ದು, ಹೆಚ್ಚುವರಿ ಯೋಜನೆಗಳನ್ನು ಉದ್ದೇಶಿತ ವಿಸ್ತೃತ ಅವಧಿಯೊಳಗೆ ಅಂದರೆ 2023ರ ಮಾರ್ಚ್ ಒಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಉದ್ಯೋಗ ಸೃಷ್ಟಿ ಸಾಮರ್ಥ್ಯ ಸೇರಿದಂತೆ ಪ್ರಮುಖ ಪರಿಣಾಮಗಳು
· ಪಿಎಂಜಿಎಸ್.ವೈ ಮೇಲೆ ನಡೆಸಲಾದ ವಿವಿಧ ಸ್ವತಂತ್ರ ಪರಿಣಾಮ ಮೌಲ್ಯಮಾಪನ ಅಧ್ಯಯನಗಳು ಈ ಯೋಜನೆಯು ಕೃಷಿ, ಆರೋಗ್ಯ, ಶಿಕ್ಷಣ, ನಗರೀಕರಣ ಮತ್ತು ಉದ್ಯೋಗ ಸೃಷ್ಟಿ ಇತ್ಯಾದಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ತೀರ್ಮಾನಿಸಿವೆ.
· ಗ್ರಾಮೀಣ ಸಂಪರ್ಕವು ಅಭಿವೃದ್ಧಿಗೆ ಅನಿವಾರ್ಯವಾಗಿದೆ. ಜನವಸತಿಗಳನ್ನು ಸಮತೋಲನಗೊಳಿಸಲು ಸರ್ವ ಋತು ರಸ್ತೆ ಸಂಪರ್ಕವು ಸಂಪರ್ಕಿತ ಜನವಸತಿಗಳ ಆರ್ಥಿಕ ಸಾಮರ್ಥ್ಯವನ್ನು ಹೊರಗೆಡವುತ್ತದೆ. ಅಸ್ತಿತ್ವದಲ್ಲಿರುವ ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು ಜನರು, ಸರಕು ಮತ್ತು ಸೇವೆಗಳ ಸಾರಿಗೆ ಸೇವೆಗಳನ್ನು ಪೂರೈಸುವವರಾಗಿ ರಸ್ತೆ ಜಾಲದ ಒಟ್ಟಾರೆ ದಕ್ಷತೆಯನ್ನು ಸುಧಾರಿಸುತ್ತದೆ. ರಸ್ತೆಗಳ ನಿರ್ಮಾಣ/ ಮೇಲ್ದರ್ಜೆಗೇರಿಸುವಿಕೆಯು ಸ್ಥಳೀಯ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ.
ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು
· ಸಮಯ ವಿಸ್ತರಣೆಯನ್ನು ಕೋರಲಾದ ಕಾಮಗಾರಿಗಳು /ವರ್ಟಿಕಲ್ ಗಳು ಈಗಾಗಲೇ ಪಿಎಂಜಿಎಸ್.ವೈ ಅಡಿಯಲ್ಲಿ ಅನುಷ್ಠಾನದಲ್ಲಿವೆ. ಪಿಎಂಜಿಎಸ್ ವೈ-1 ಮತ್ತು 2 ರ ಅಡಿಯಲ್ಲಿ ಎಲ್ಲಾ ಯೋಜನೆಗಳನ್ನು ಈಗಾಗಲೇ ಮಂಜೂರು ಮಾಡಲಾಗಿದೆ.
· ಸಚಿವಾಲಯವು ಡಿಸೆಂಬರ್, 2021ರೊಳಗೆ ಆರ್.ಸಿಪಿಎಲ್.ಡಬ್ಲ್ಯುಇಎ ಅಡಿಯಲ್ಲಿ ಬಾಕಿ ಹೆಚ್ಚುವರಿ ಪ್ರಸ್ತಾಪವನ್ನು ಮಂಜೂರು ಮಾಡಲು ಪ್ರಯತ್ನಿಸುತ್ತಿದೆ.
· ವಿಸ್ತೃತ ಕಾಲಮಿತಿಯೊಂದಿಗೆ ಬಾಕಿ ಯೋಜನೆಗಳನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ರಾಜ್ಯಗಳೊಂದಿಗೆ ಪ್ರಗತಿಯ ಬಗ್ಗೆ ನಿರಂತರ ನಿಗಾ ಇಡುತ್ತದೆ.
ಹಿನ್ನೆಲೆ
· ಪ್ರದೇಶಗಳ ಒಟ್ಟಾರೆ ಸಾಮಾಜಿಕ ಆರ್ಥಿಕ ಅಭಿವೃದ್ಧಿಗಾಗಿ ನಿಗದಿತ ಜನಸಂಖ್ಯೆಯ ಗಾತ್ರದ ಅರ್ಹ ಸಂಪರ್ಕರಹಿತ ವಸತಿಗಳಿಗೆ (ಸಾಧಾರಣ ಪ್ರದೇಶದಲ್ಲಿ 500+ ಮತ್ತು 250+ ಈಶಾನ್ಯ, ಗಿರಿ, ಬುಡಕಟ್ಟು ಮತ್ತು ಮರುಭೂಮಿ ಪ್ರದೇಶಗಳಲ್ಲಿ 250+ ಪ್ರದೇಶಗಳ ಒಟ್ಟಾರೆ ಸಾಮಾಜಿಕ ಆರ್ಥಿಕ ಅಭಿವೃದ್ಧಿಗಾಗಿ ಏಕ ಸರ್ವಋತು ರಸ್ತೆ ಸಂಪರ್ಕವನ್ನು ಒದಗಿಸುವ ಉದ್ದೇಶದಿಂದ ಪಿಎಂಜಿಎಸ್.ವೈ-1 ಅನ್ನು ಪ್ರಾರಂಭಿಸಲಾಯಿತು. ತದನಂತರ ಸರ್ಕಾರವು ಪಿಎಂಜಿಎಸ್.ವೈ-2, ಆರ್.ಸಿಪಿಎಲ್.ಡಬ್ಲ್ಯುಇಎ ಮತ್ತು ಪಿಎಂಜಿಎಸ್.ವೈ-3 ಎಂಬ ಹೊಸ ಇಂಟರ್ ವೆನ್ಷನ್ ಗಳು/ವರ್ಟಿಕಲ್ ಗಳನ್ನು ಪ್ರಾರಂಭಿಸಿತು.
· ಪ್ರಸ್ತುತ ಪ್ರಸ್ತಾಪವು ಪಿಎಂಜಿಎಸ್ ವೈ-1, ಐಐ ಮತ್ತು ಆರ್ ಸಿಪಿಎಲ್ ಡಬ್ಲ್ಯುಇಎಗೆ ಸಮಯರೇಖೆಯನ್ನು ವಿಸ್ತರಿಸುವ ಪ್ರಸ್ತಾಪವಾಗಿದೆ.
· ಗ್ರಾಮೀಣ ಕೃಷಿ ಮಾರುಕಟ್ಟೆಗಳು, ಹಿರಿಯ ಮಾಧ್ಯಮಿಕ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳು ಮತ್ತು ಪ್ರಮುಖ ಗ್ರಾಮೀಣ ಸಂಪರ್ಕಗಳ ಮೂಲಕ ಅಸ್ತಿತ್ವದಲ್ಲಿರುವ 1,25,000 ಕಿ.ಮೀ.ರಸ್ತೆ ಕ್ರೋಡೀಕರಣಕ್ಕಾಗಿ ಪಿಎಂಜಿಎಸ್.ವೈ-3 ಅನ್ನು 2019ರಲ್ಲಿ ಪ್ರಾರಂಭಿಸಲಾಯಿತು ಮತ್ತು ಯೋಜನೆಯ ಅನುಷ್ಠಾನ ಅವಧಿ ಮಾರ್ಚ್, 2025 ರವರೆಗೆ ಇರುತ್ತದೆ.
***
(Release ID: 1772717)
Visitor Counter : 352
Read this release in:
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam