ಪ್ರಧಾನ ಮಂತ್ರಿಯವರ ಕಛೇರಿ
ನ.17ರಂದು 82ನೇ ಅಖಿಲ ಭಾರತ ಸಭಾಧ್ಯಕ್ಷರ ಸಮ್ಮೇಳನದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ
Posted On:
15 NOV 2021 8:34PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ನವೆಂಬರ್ 17ರಂದು ಬೆಳಗ್ಗೆ 10 ಗಂಟೆಗೆ 82ನೇ ಅಖಿಲ ಭಾರತ ಸಭಾಧ್ಯಕ್ಷರ ಸಮ್ಮೇಳನದ ಉದ್ಘಾಟನಾ ಸಮಾರಂಭನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.
ಭಾರತದ ಶಾಸಕಾಂಗಗಳ ಅತ್ಯುನ್ನತ ಸಂಸ್ಥೆ ಎನಿಸಿದ `ಅಖಿಲ ಭಾರತ ಸಭಾಧ್ಯಕ್ಷರ ಸಮ್ಮೇಳನʼವು (ಎಐಪಿಒಸಿ) 2021ರಲ್ಲಿ ಶತಮಾನೋತ್ಸವ ಆಚರಿಸುತ್ತಿದೆ. ಇದರ ನೆನಪಿಗಾಗಿ, 2021ರ ನವೆಂಬರ್ 17-18ರಂದು ಶಿಮ್ಲಾದಲ್ಲಿ 82ನೇ ʻಅಖಿಲ ಭಾರತ ಸಭಾಧ್ಯಕ್ಷರ ಸಮ್ಮೇಳನʼ ಹಮ್ಮಿಕೊಳ್ಳಲಾಗಿದೆ. ʻಎಐಪಿಒಸಿʼಯ ಮೊದಲ ಸಮ್ಮೇಳನವೂ 1921ರಲ್ಲಿ ಶಿಮ್ಲಾದಲ್ಲಿ ನಡೆದಿತ್ತು.
ಈ ಸಂದರ್ಭದಲ್ಲಿ ಲೋಕಸಭೆ ಸ್ಪೀಕರ್, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಮತ್ತು ರಾಜ್ಯಸಭೆ ಉಪ ಸಭಾಪತಿ ಉಪಸ್ಥಿತರಿರುವರು.
***
(Release ID: 1772291)
Visitor Counter : 207
Read this release in:
Marathi
,
Tamil
,
Gujarati
,
English
,
Urdu
,
Hindi
,
Bengali
,
Manipuri
,
Punjabi
,
Odia
,
Telugu
,
Malayalam