ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಫಿಟ್‌ ಇಂಡಿಯಾ 2021 ಈ ಸಾಲಿನ ರಸಪ್ರಶ್ನೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ಎರಡು ಸುತ್ತಿನಲ್ಲಿ ಪ್ರಾಥಮಿಕ ಹಂತವನ್ನು ಏರ್ಪಡಿಸಲಾಗುವುದು

Posted On: 15 NOV 2021 2:43PM by PIB Bengaluru

ಮುಖ್ಯಾಂಶಗಳು

• ಪ್ರಾಥಮಿಕ ಸುತ್ತಿನಲ್ಲಿ ವಿಜೇತರಾದ ವಿದ್ಯಾರ್ಥಿಗಳು ಡಿಸೆಂಬರ್‌ ತಿಂಗಳಿನಲ್ಲಿ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.  

• ರಾಜ್ಯ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ರಾಷ್ಟ್ರಪಟ್ಟದಲ್ಲಿ ಏರ್ಪಡಿಸುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಲು ಅರ್ಹರಾಗುತ್ತಾರೆ. ರಾಷ್ಟ್ರೀಯ ಮಟ್ಟದ ಸ್ಪರ್ಧೆಯನ್ನು 2022ರ ಜನವರಿ ಅಂತ್ಯ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ಹಮ್ಮಿಕೊಳ್ಳಲಾಗುತ್ತದೆ

ಫಿಟ್‌ ಇಂಡಿಯಾ ರಸಪ್ರಶ್ನೆಯ ಮೊದಲ ಆವೃತಿಯನ್ನು ಈ ವರ್ಷದ ಆರಂಭದಲ್ಲಿ ಆಯೋಜಿಸಲಾಗಿತ್ತು. ಈ ಸಲ ಎರಡು ಸುತ್ತಿನಲ್ಲಿ ಪ್ರಾಥಮಿಕ ಹಂತವನ್ನು ಆಯೋಜಿಸಲಾಗುತ್ತಿದೆ. ಒಮ್ಮೆ ಬರೆದು ಆಯ್ಕೆಯಾಗದಿದ್ದಲ್ಲಿ ವಿದ್ಯಾರ್ಥಿಗಳು ಎರಡೂ ಟೆಸ್ಟ್‌ ಬರೆಯಬಹುದು. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಸಿಗಬೇಕು ಎಂಬುದೇ ಎರಡನೆಯ ಸುತ್ತನ್ನು ಆಯೋಜಿಸುವ ಉದ್ದೇಶವಾಗಿದೆ. 

ಎರಡು ಪ್ರಾಥಮಿಕ ಸುತ್ತುಗಳ ನಂತರ ಎರಡೂ ಸುತ್ತಿನಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳ ಹೆಸರನ್ನು ಮುಂದಿನ ಸುತ್ತಿಗೆ ಅಂತಿಮಗೊಳಿಸಲಾಗುವುದು. ಎರಡೂ ಸಲ ರಸಪ್ರಶ್ನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ, ಯಾವುದರಲ್ಲಿ ಅತಿ ಹೆಚ್ಚು ಅಂಕ ಪಡೆಯುವರೋ, ಅದನ್ನು ಪರಿಗಣಿಸಲಾಗುವುದು. 

ಎರಡನೆಯ ಸುತ್ತಿನ ಆಯ್ಕೆಯ ರಸಪ್ರಶ್ನೆಯ ಸಮಯ ಮತ್ತು ದಿನಾಂಕವನ್ನು ಕೆಲದಿನಗಳಲ್ಲಿಯೇ ಘೋಷಿಸಲಾಗುವುದು.  

ಮೊದಲ ಸುತ್ತಿನಲ್ಲಿ ವಿಜೇತರಾದ ವಿದ್ಯಾರ್ಥಿಗಳು ಡಿಸೆಂಬರ್‌ನಲ್ಲಿ ಆಯೋಜಿಸಲಾಗುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗುವರು. ರಾಜ್ಯಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು2022ರ ಜನವರಿ ಅಥವಾ ಫೆಬ್ರುವರಿಯಲ್ಲಿ ಆಯೋಜಿಸಲಾಗುವ ರಾಷ್ಟ್ರೀಯ ಮಟ್ಟದ ಫಿಟ್‌ ಇಂಡಿಯಾ 2021 ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗುವರು.  

ವಿಜೇತರು ಭಾರತದ ಮೊದಲ ಫಿಟ್‌ ಇಂಡಿಯಾ ರಾಜ್ಯ/ ರಾಷ್ಟ್ರ ಮಟ್ಟದ ಕ್ವಿಜ್‌ ಚಾಂಪಿಯನ್‌ ಸ್ಪರ್ಧೆಯಲ್ಲಿ ಪಾಲ್ಗೊಂಡ ಹೆಗ್ಗಳಿಕೆಯೊಂದಿಗೆ ಪ್ರತಿ ಹಂತದಲ್ಲಿಯೂ ನಗದು ಬಹುಮಾನ ಪಡೆಯುವರು. 

ಈ ರಸಪ್ರಶ್ನೆಯ ಮುಖ್ಯ ಉದ್ದೇಶವೆಂದರೆ, ಭಾರತೀಯ ಕ್ರೀಡಾ ಇತಿಹಾಸ ಹಾಗೂ ಅಮೋಘವಾದ ಪರಂಪರೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದಾಗಿದೆ. ಮತ್ತು ಭಾರತೀಯ ಪರಂಪರಾಗತ ಕ್ರೀಡೆ, ಕ್ರೀಡಾಳುಗಳ ಕುರಿತು, ಶತಮಾನಗಳ ಕುರಿತ ಕ್ರೀಡಾ ಇತಿಹಾಸದ ಕುರಿತು ತಿಳಿಸುವುದೂ ಆಗಿದೆ.

***



(Release ID: 1772086) Visitor Counter : 223