ಹಣಕಾಸು ಸಚಿವಾಲಯ
azadi ka amrit mahotsav

ಕರ್ನಾಟಕ ಸೇರಿ 19 ರಾಜ್ಯಗಳ ಸ್ಥಳೀಯ ಸಂಸ್ಥೆಗಳಿಗೆ 8,453.92 ಕೋಟಿ ರೂ. ಆರೋಗ್ಯ ವಲಯದ ಅನುದಾನ ಬಿಡುಗಡೆ


ಪ್ರಾಥಮಿಕ ಆರೋಗ್ಯ ಆರೈಕೆ ಮಟ್ಟದಲ್ಲಿನ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿನ ನಿರ್ಣಾಯಕ ಅಂತರ ನಿವಾರಿಸುವುದು ಮತ್ತು ಆರೋಗ್ಯ ವ್ಯವಸ್ಥೆಯ ಬಲವರ್ಧನೆಗೆ ಅನುದಾನ ಮೀಸಲು

ಕರ್ನಾಟಕ ರಾಜ್ಯಕ್ಕೆ ಆರೋಗ್ಯ ಸೇವೆ ಬಲವರ್ಧನೆಗೆ 551.53 ಕೋಟಿ ರೂ. ಅನುದಾನ ಮಂಜೂರು

Posted On: 13 NOV 2021 8:48AM by PIB Bengaluru

  ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ಕರ್ನಾಟಕ ಸೇರಿದಂತೆ 19 ರಾಜ್ಯಗಳ ಗ್ರಾಮೀಣ ಮತ್ತು ನಗರ  ಸ್ಥಳೀಯ ಸಂಸ್ಥೆಗಳಿಗೆ 8,453.92 ಕೋಟಿ ರೂ. ಆರೋಗ್ಯ ವಲಯದ ಅನುದಾನ ಮೊತ್ತವನ್ನು ಬಿಡುಗಡೆ ಮಾಡಿದೆ. ಕರ್ನಾಟಕ ರಾಜ್ಯಕ್ಕೆ 551.53 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಈ ಅನುದಾನಗಳನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯವಾರು ಬಿಡುಗಡೆಯಾಗಿರುವ ಅನುದಾನದ ಮೊತ್ತ ಕೆಳಗಿನ ಪಟ್ಟಿಯಲ್ಲಿದೆ. 

15ನೇ ಹಣಕಾಸು ಆಯೋಗ (FC-XV) 2021-22 ರಿಂದ 2025-26ವರೆಗಿನ ಅವಧಿಯ ತಮ್ಮ ವರದಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಒಟ್ಟಾರೆ 4,27,911 ಕೋಟಿ ರೂ. ಅನುದಾನಕ್ಕೆ ಶಿಫಾರಸು ಮಾಡಿದೆ. ಆಯೋಗ ಶಿಫಾರಸು ಮಾಡಿರುವ ಒಟ್ಟಾರೆ ಮೊತ್ತದಲ್ಲಿ 70,051 ಕೋಟಿ ರೂ. ಆರೋಗ್ಯ ವಲಯದ ಅನುದಾನವೂ ಸೇರಿದೆ. ಆ ಮೊತ್ತದ ಪೈಕಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 43,928 ಕೋಟಿ ರೂ. ಮತ್ತು 26,123 ಕೋಟಿ ರೂ. ನಗರ ಸ್ಥಳೀಯ ಸಂಸ್ಥೆಗಳಿಗೆ ಶಿಫಾರಸು ಮಾಡಲಾಗಿದೆ.

ಪ್ರಾಥಮಿಕ ಆರೋಗ್ಯ ಆರೈಕೆ ಮಟ್ಟದಲ್ಲಿನ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿನ ನಿರ್ಣಾಯಕ ಅಂತರ ನಿವಾರಿಸುವುದು ಮತ್ತು ಆರೋಗ್ಯ ವ್ಯವಸ್ಥೆಯ ಬಲವರ್ಧನೆಗೆ ಅನುದಾನ ಮೀಸಲಾಗಿದೆ

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಪ್ರಾಥಮಿಕ ಆರೋಗ್ಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಬಲವರ್ಧನೆಗೊಳಿಸಲು ನೇರ ಕಾರಣವಾಗುವ ಮಧ್ಯಪ್ರವೇಶ ಉಪಕ್ರಮಗಳನ್ನು ಆಯೋಗ ಗುರುತಿಸಿದೆ ಮತ್ತು ಪ್ರತಿಯೊಂದು ಮಧ್ಯಪ್ರವೇಶಕ್ಕೂ ಅನುದಾನವನ್ನು ಮೀಸಲಿರಿಸಿದೆ.  

ಆ ಮಧ್ಯಪ್ರವೇಶ ಉಪಕ್ರಮಗಳೆಂದರೆ:

  1. ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸೌಕರ್ಯಗಳಿಗೆ ಡಯಾಗ್ನಾಸ್ಟಿಕ್ ಮೂಲಸೌಕರ್ಯ ಬೆಂಬಲಕ್ಕೆ- 16,377 ಕೋಟಿ ರೂ.
  2. ಗ್ರಾಮೀಣ ಪ್ರದೇಶದ ಬ್ಲಾಕ್ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ಘಟಕಗಳಿಗೆ- 5,279 ಕೋಟಿ  ರೂ.
  3. ಗ್ರಾಮೀಣ ಪ್ರದೇಶಗಳಲ್ಲಿನ ಪಿಎಚ್ ಸಿಗಳು, ಸಿಎಚ್ ಸಿಗಳು, ಉಪ ಕೇಂದ್ರಗಳಲ್ಲಿ ಕಟ್ಟಡಗಳ ನಿರ್ಮಾಣಕ್ಕಾಗಿ- 7,167 ಕೋಟಿ ರೂ.
  4. ಗ್ರಾಮೀಣ ಪಿಎಚ್ ಸಿಗಳನ್ನು ಮತ್ತು ಉಪಕೇಂದ್ರಗಳನ್ನು ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳನ್ನಾಗಿ ಪರಿವರ್ತಿಸಲು- 15,105 ಕೋಟಿ ರೂ.
  5. ನಗರ ಪ್ರದೇಶಗಳಲ್ಲಿನ ಪ್ರಾಥಮಿಕ ಆರೋಗ್ಯ ಸೌಕರ್ಯಗಳಲ್ಲಿ ಡಯಾಗ್ನಾಸ್ಟಿಕ್ ಮೂಲ ಸೌಕರ್ಯ ವೃದ್ಧಿಗೆ ಬೆಂಬಲ ನೀಡಲು- 2,095 ಕೋಟಿ ರೂ.
  6. ನಗರ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳಿಗೆ- (ಎಚ್ ಡಬ್ಲೂ ಸಿಗಳು) –24,028 ಕೋಟಿ ರೂ.

2021-22ನೇ ಹಣಕಾಸು ವರ್ಷಕ್ಕೆ ಒಟ್ಟು 13,192 ಕೋಟಿ ರೂ. ಬಿಡುಗಡೆಗೆ ಶಿಫಾರಸು ಮಾಡಲಾಗಿದೆ. ಇದರಲ್ಲಿ 8,273 ಕೋಟಿ ರೂ. ಗ್ರಾಮೀಣ ಮತ್ತು 4,919 ಕೋಟಿ ರೂ. ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರಿದೆ.

ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಪ್ರಾಥಮಿಕ ಆರೋಗ್ಯ ಸೇವೆಗಳ ವಿತರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ, ವಿಶೇಷವಾಗಿ ಅತ್ಯಾಧುನಿಕ ಮಟ್ಟದಲ್ಲಿ ಮತ್ತು ಸಾರ್ವತ್ರಿಕ ಆರೋಗ್ಯ ಆರೈಕೆ ಉದ್ದೇಶ ಸಾಧನೆಯಲ್ಲಿ ಸಹಾಯ ಮಾಡುತ್ತವೆ. ಸಂಪನ್ಮೂಲಗಳು, ಆರೋಗ್ಯ ಮೂಲಸೌಕರ್ಯ ಮತ್ತು ಸಾಮರ್ಥ್ಯ ನಿರ್ಮಾಣದ ವಿಷಯದಲ್ಲಿ ಸ್ಥಳೀಯ ಸರ್ಕಾರಗಳನ್ನು ಬಲಪಡಿಸುವುದು, ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ನಿರ್ವಹಣೆಯಲ್ಲಿ ವೇಗವರ್ಧಕ ಪಾತ್ರ ನಿರ್ವಹಣೆಗೆ ಸಹಕಾರಿಯಾಗಲಿದೆ.

ಈ ಪ್ರಾಥಮಿಕ ಆರೋಗ್ಯ ಸಂಸ್ಥೆಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸರ್ಕಾರಗಳನ್ನು ಮೇಲ್ವಿಚಾರಣಾ ಸಂಸ್ಥೆಗಳನ್ನಾಗಿ ಸೇರ್ಪಡೆ ಮಾಡಿಕೊಳ್ಳುವುದರಿಂದ ಒಟ್ಟಾರೆ ಪ್ರಾಥಮಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಬಲವರ್ಧನೆಗೊಳಿಸುತ್ತದೆ ಮತ್ತು ಸ್ಥಳೀಯ ಸರ್ಕಾರಗಳ ಒಳಗೊಳ್ಳುವಿಕೆ ಆರೋಗ್ಯ ವ್ಯವಸ್ಥೆ ಜನರಿಗೆ ಉತ್ತರದಾಯಿಯನ್ನಾಗಿ ಮಾಡುತ್ತದೆ.

ಉಳಿದ 9 ರಾಜ್ಯಗಳಿಗೆ ಅಯಾ ರಾಜ್ಯಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಕ ಪ್ರಸ್ತಾವನೆಗಳನ್ನು ಸ್ವೀಕರಿಸಿದ ಬಳಿಕ ಆರೋಗ್ಯ ವಲಯದ ಅನುದಾನವನ್ನು ಬಿಡುಗಡೆ ಮಾಡಲಾಗುವುದು.

ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾಗಿರುವ ಆರೋಗ್ಯ ವಲಯದ ಅನುದಾನ

ಕ್ರ.ಸಂ

ರಾಜ್ಯ

ಬಿಡುಗಡೆಯಾಗಿರುವ ಮೊತ್ತ

(ಕೋಟಿ ರೂ.ಗಳಲ್ಲಿ)

1.

ಆಂಧ್ರಪದೇಶ

488.1527

2.

ಅರುಣಾಚಲಪ್ರದೇಶ

46.944

3.

ಅಸ್ಸಾಂ

272.2509

4.

ಬಿಹಾರ

1116.3054

5.

ಛತ್ತೀಸ್ ಗಢ

338.7944

6.

ಹಿಮಾಚಲ ಪ್ರದೇಶ

98.0099

7.

ಜಾರ್ಖಂಡ್

444.3983

8.

ಕರ್ನಾಟಕ

551.53

9.

ಮಧ್ಯಪ್ರದೇಶ

922.7992

10.

ಮಹಾರಾಷ್ಟ್ರ

778.0069

11.

ಮಣಿಪುರ

42.8771

12.

ಮಿಜೋರಾಂ

31.19

13.

ಒಡಿಶಾ

461.7673

14.

ಪಂಜಾಬ್

399.6558

15.

ರಾಜಾಸ್ಥಾನ್

656.171

16.

ಸಿಕ್ಕಿಂ

20.978

17.

ತಮಿಳುನಾಡು

805.928

18.

ಉತ್ತರಾಖಂಡ್

150.0965

19.

ಪಶ್ಚಿಮ ಬಂಗಾಳ

828.0694

 

ಒಟ್ಟು

8453.9248

***  


(Release ID: 1771679) Visitor Counter : 286