ಪ್ರಧಾನ ಮಂತ್ರಿಯವರ ಕಛೇರಿ

ಅಮೆರಿಕದ ಕಾಂಗ್ರೆಸ್ ಸಂಸದರ ನಿಯೋಗವನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

Posted On: 13 NOV 2021 12:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸೆನೆಟರ್ ಜಾನ್ ಕಾರ್ನಿನ್ ನೇತೃತ್ವದ ಅಮೆರಿಕದ ಕಾಂಗ್ರೆಸ್ ಸಂಸದರ ನಿಯೋಗವನ್ನು ಭೇಟಿ ಮಾಡಿದರು. ನಿಯೋಗದಲ್ಲಿ ಸೆನೆಟರ್ ಮೈಕೆಲ್ ಕ್ರಾಪೋ, ಸೆನೆಟರ್ ಥಾಮಸ್ ಟ್ಯೂಬರ್ವಿಲ್ಲೆ, ಸೆನೆಟರ್ ಮೈಕೆಲ್ ಲೀ, ಕಾಂಗ್ರೆಸ್‌ನ ಟೋನಿ ಗೊನ್ಸಾಲ್ಸ್ ಮತ್ತು ಕಾಂಗ್ರೆಸ್‌ನ ಜಾನ್ ಕೆವಿನ್ ಎಲಿಜಿ ಮತ್ತಿರರಿದ್ದರು. ಸೆನೆಟರ್ ಜಾನ್ ಕಾರ್ನಿನ್, ಭಾರತ ಮತ್ತು ಭಾರತೀಯ ಅಮೆರಿಕನ್ನರ ಒಕ್ಕೂಟದ ಸಹ ಸಂಸ್ಥಾಪಕ ಮತ್ತು ಸಹ ಅಧ್ಯಕ್ಷರಾಗಿದ್ದಾರೆ.

ಅತಿ ಹೆಚ್ಚಿನ ಮತ್ತು ವಿಭಿನ್ನ ಜನಸಂಖ್ಯೆ ಇದ್ದರೂ ಸಹ ಭಾರತದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದನ್ನು  ಕಾಂಗ್ರೆಸ್ ಸಂಸದರ ನಿಯೋಗ ಉಲ್ಲೇಖಿಸಿತು. ದೇಶದ ಪ್ರಜಾಪ್ರಭುತ್ವಗಾಥೆಯಲ್ಲಿ ಜನರ ಭಾಗಿದಾರಿಕೆ ಕಳೆದ ಶತಮಾನದ ಅತ್ಯಂತ ಭೀಕರ ಸಾಂಕ್ರಾಮಿಕಗಳಲ್ಲಿ ಒಂದಾದ ಕೋವಿಡ್ ಅನ್ನು ನಿರ್ವಹಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿತು ಪ್ರಧಾನಮಂತ್ರಿ ಅವರು ಹೇಳಿದರು. 

ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ನೆಲೆಗೊಂಡಿರುವ ಭಾರತ – ಕಾಂಗ್ರೆಸ್ ಸಮಗ್ರ ಜಾಗತಿಕ ಕಾರ್ಯತಾಂತ್ರಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲವರ್ಧನೆಗೊಳಿಸುವಲ್ಲಿ ಅಮೆರಿಕ – ಕಾಂಗ್ರೆಸ್ ನ ಸ್ಥಿರ ಬೆಂಬಲ ಮತ್ತು ರಚನಾತ್ಮಕ ಪಾತ್ರವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.

ದಕ್ಷಿಣ ಏಷ್ಯಾ ಮತ್ತು ಭಾರತ ಪೆಸಿಫಿಕ್ ಪ್ರಾಂತ್ಯಕ್ಕೆ ಸಂಬಂಧಿಸಿದ ವಿಷಯಗಳು ಸೇರಿದಂತೆ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ವಿಚಾರಗಳ ಬಗ್ಗೆ ಸೌಹಾರ್ದ ಮತ್ತು ಸ್ಪಷ್ಟ ಸಮಾಲೋಚನೆಗಳು ನಡೆದವು. ಪ್ರಧಾನಮಂತ್ರಿ ಮತ್ತು ಭೇಟಿ ನೀಡಿದ ನಿಯೋಗ, ಉಭಯ ಕಾರ್ಯತಂತ್ರ ಪಾಲುದಾರಿಕೆಗಳ ನಡುವೆ ಕಾರ್ಯತಂತ್ರ ಹಿತಾಸಕ್ತಿಯ ಸಮನ್ವಯತೆ ಹೆಚ್ಚಳವನ್ನು ಗಮನಿಸಿತು ಮತ್ತು ಜಾಗತಿಕ ಶಾಂತಿ ಮತ್ತು ಸ್ಥಿರತೆ ಉತ್ತೇಜನ ಗುರಿಯೊಂದಿಗೆ ಪರಸ್ಪರ ಸಹಕಾರವನ್ನು ಮತ್ತಷ್ಟು ವೃದ್ಧಿಸುವ ಬಯಕೆಯನ್ನು ವ್ಯಕ್ತಪಡಿಸಿದರು.       

ಸಮಕಾಲಿನ ಜಾಗತಿಕ ಸಮಸ್ಯೆಗಳಾದ ಭಯೋತ್ಪಾದನೆ, ಹವಾಮಾನ ವೈಪರೀತ್ಯ ಹಾಗೂ ನಿರ್ಣಾಯಕ ತಂತ್ರಜ್ಞಾನಗಳಿಗೆ ವಿಶ್ವಾಸಾರ್ಹ ಪೂರೈಕೆ ಸರಣಿಯಂತಹ ದ್ವಿಪಕ್ಷೀಯ ಸಂಬಂಧ ಹೆಚ್ಚಿಸುವಂತಹ ಮತ್ತು ಸಹಕಾರವನ್ನು ಬಲಪಡಿಸುವ ಸಾಮರ್ಥ್ಯದ ಬಗ್ಗೆ ಪ್ರಧಾನಮಂತ್ರಿ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

***



(Release ID: 1771672) Visitor Counter : 195