ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಖಿ ಮಾರ್ಗ ಮತ್ತು ಶ್ರೀ ಸಂತ ತುಕಾರಾಂ ಮಹಾರಾಜ್ ಪಾಲ್ಖಿ ಮಾರ್ಗದ ನಾಲ್ಕು ಪಥಗಳ ರಸ್ತೆ ಕಾಮಗಾರಿಗಳಿಗೆ ಪ್ರಧಾನಿಯವರಿಂದ ನವೆಂಬರ್ 8 ರಂದು ಶಂಕುಸ್ಥಾಪನೆ


ಈ ರಾಷ್ಟ್ರೀಯ ಹೆದ್ದಾರಿಗಳ ಎರಡೂ ಬದಿಯಲ್ಲಿ 'ಪಾಲ್ಖಿ'ಗಾಗಿ ಮೀಸಲಾದ ನಡಿಗೆ ಪಥಗಳನ್ನು ನಿರ್ಮಿಸಲಾಗುವುದು

ಪಂಢರಪುರಕ್ಕೆ ಸಂಪರ್ಕವನ್ನು ಹೆಚ್ಚಿಸುವ ಬಹು ರಸ್ತೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಿ

Posted On: 07 NOV 2021 3:49PM by PIB Bengaluru

ಪಂಢರಪುರಕ್ಕೆ ಭಕ್ತರ ಸಂಚಾರವನ್ನು ಸುಲಭಗೊಳಿಸುವ ಪ್ರಯತ್ನದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಖಿ ಮಾರ್ಗದ (ಎನ್ ಹೆಚ್-965) ಐದು ವಿಭಾಗಗಳು ಮತ್ತು ಶ್ರೀ ಸಂತ ತುಕಾರಾಂ ಮಹಾರಾಜ್ ಪಾಲ್ಖಿ ಮಾರ್ಗದ (ಎನ್ ಹೆಚ್-965G) ಮೂರು ವಿಭಾಗಗಳ ನಾಲ್ಕು ಪಥಗಳ ರಸ್ತೆ ಕಾಮಗಾರಿಗಳಿಗೆ ನವೆಂಬರ್ 8, 2021 ರಂದು ಮಧ್ಯಾಹ್ನ 3:30ಕ್ಕೆ  ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳ ಎರಡೂ ಬದಿಗಳಲ್ಲಿ 'ಪಾಲ್ಖಿ'ಗಾಗಿ ಮೀಸಲಾದ ನಡಿಗೆ ಪಥಗಳನ್ನು ನಿರ್ಮಿಸಲಾಗುವುದು, ಇದು ಭಕ್ತರಿಗೆ ತಡೆರಹಿತ ಮತ್ತು ಸುರಕ್ಷಿತ ಮಾರ್ಗವನ್ನು ಒದಗಿಸುತ್ತದೆ.

ದಿವೇಘಾಟ್‌ನಿಂದ ಮೊಹೋಲ್‌ವರೆಗಿನ ಸಂತ ಜ್ಞಾನೇಶ್ವರ್ ಮಹಾರಾಜ್ ಪಾಲ್ಖಿ ಮಾರ್ಗದ ಸುಮಾರು 221 ಕಿ.ಮೀ ಮತ್ತು ಪಟಾಸ್‌ನಿಂದ ತೊಂಡಲೆಬೊಂಡಲೆವರೆಗೆ ಸಂತ ತುಕಾರಾಂ ಮಹಾರಾಜ್ ಪಾಲ್ಖಿ ಮಾರ್ಗದ ಸುಮಾರು 130 ಕಿ.ಮೀ ಎರಡೂ ಬದಿಗಳಲ್ಲಿ 'ಪಾಲ್ಖಿ' ಗಾಗಿ ಮೀಸಲಾದ ನಡಿಗೆ ಪಥ (ವಾಕ್‌ವೇ) ಗಳೊಂದಿಗೆ ನಾಲ್ಕು ಪಥಗಳ ರಸ್ತೆಯನ್ನು ಕ್ರಮವಾಗಿ ರೂ. 6690 ಕೋಟಿ ಮತ್ತು ಸುಮಾರು 4400 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವುದು.

ಸಂದರ್ಭದಲ್ಲಿ, ಪಂಢರಪುರಕ್ಕೆ ಸಂಪರ್ಕವನ್ನು ಹೆಚ್ಚಿಸಲು ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ 1180 ಕೋಟಿ ರೂ.ಗೂ ಹೆಚ್ಚು ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ 223 ಕಿ.ಮೀ.ಗೂ ಹೆಚ್ಚು ಪೂರ್ಣಗೊಂಡ ಮತ್ತು ನವೀಕರಿಸಿದ ರಸ್ತೆ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಯೋಜನೆಗಳಲ್ಲಿ ಮ್ಹಾಸ್ವಾಡ್- ಪಿಲಿವ್ - ಪಂಢರಪುರ (ಎನ್ ಹೆಚ್ 548E), ಕುರ್ದುವಾಡಿ - ಪಂಢರಪುರ (ಎನ್ ಹೆಚ್ 965C), ಪಂಢರಪುರ - ಸಂಗೋಲಾ (ಎನ್ ಹೆಚ್ 965C), ಎನ್ ಹೆಚ್ 561A ತೆಂಭೂರ್ನಿ-ಪಂಢರಪುರ ವಿಭಾಗ ಮತ್ತು ಎನ್ ಹೆಚ್ 56 ಪಂಢರಪುರ - ಮಂಗಳವೇಢಾ - ಉಮ್ಮಡಿ ವಿಭಾಗಗಳು ಸೇರಿವೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಯವರು ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

***


(Release ID: 1770033) Visitor Counter : 232