ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಿಒಪಿ26 ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರಾಷ್ಟ್ರೀಯ ಘೋಷಣೆ

Posted On: 01 NOV 2021 11:30PM by PIB Bengaluru

ಸ್ನೇಹಿತರೆ,

ಸಾವಿರಾರು ವರ್ಷಗಳ ಹಿಂದೆಯೇ ವಿಶ್ವಕ್ಕೆ ಒಗ್ಗೂಡುವಿಕೆಯ ಮಂತ್ರ ನೀಡಿರುವ ಭೂಮಿಯನ್ನು ನಿಮ್ಮ ನಡುವೆ ಪ್ರತಿನಿಧಿಸುತ್ತಿರುವೆ.

सम्-गच्छ-ध्वम्,

सम्--दद्वम् ,

सम् वो मानसि जानताम्।

ಮ್ ಗಚ್ಛ ಧ್ವಮು ಅಂದ್ರೆ ಒಟ್ಟಿಗೆ ನಡೆಯೋಣ, ಮ್ ದ್ವಮ್‌ ಅಂದ್ರೆ ಒಟ್ಟಿಗೆ ಸಂವಾದಿಸೋಣ, ಮ್ ವೋ ಮಾನಸಿ ಜಾನತಾಮು ಅಂದ್ರೆ ಪ್ರತಿಯೊಬ್ಬರೂ ಏಕತ್ರವಾಗಿ ಯೋಚಿಸೋಣ ಎಂಬುದು ಮಂತ್ರದ ಅರ್ಥ.

ಸ್ನೇಹಿತರೆ,

ಕ್ಲೈಮೆಟ್‌ ಸಮ್ಮಿಟ್‌ಗೆ ಮೊದಲ ಸಲ ನಾನು ಬಂದಾಗ, ಜಗತ್ತಿನಲ್ಲಿ ನೀಡಲಾಗಿರುವ ಹಲವು ಭಾಷೆಗಳಲ್ಲಿ ನಾನೂ ಒಂದು ಹೊಸ ಭಾಷೆಯನ್ನು ಸೇರ್ಪಡೆ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನಾನೊಂದು ಕಾಳಜಿಯಿಂದ ಬಂದೆ. ಕಾಳಜಿ ಇಡೀ ಮನುಕುಲಕ್ಕೆ ಸಂಬಂಧಿಸಿದ್ದು. ನಾನು ಬಂದಿರುವ ಭೂಮಿಯ ಸಂಸ್ಕೃತಿಸರ್ವೇ ಭವಂತು ಸುಖಿನಃಭೂಮಿಯಲ್ಲಿರುವ ಎಲ್ಲರೂ ಸುಖದಿಂದಿರಲಿ ಎಂದು ಬಯಸುತ್ತದೆಸಂತೋಷದಿಂದಿರಲಿ ಎಂದು ಆಶಿಸುತ್ತದೆ.

ಹಾಗಾಗಿ ಪ್ಯಾರಿಸ್‌ನಲ್ಲಿ ನಡೆದಿದ್ದ ಸಮ್ಮೇಳನ ನನಗೆ ಕೇವಲ ಸಮ್ಮೇಳನವಾಗಿರಲಿಲ್ಲ. ನನಗದು ಸಂವೇದನೆಯಾಗಿತ್ತು. ಬದ್ಧತೆಯಾಗಿತ್ತು. ಭಾರತವು ವಿಶ್ವಕ್ಕೆ ಕೇವಲ ಭಾಷೆಗಳನ್ನು ನೀಡುತ್ತಿಲ್ಲ. ಆಣೆ ಪ್ರಮಾಣಗಳನ್ನು ಮಾಡುತ್ತಿಲ್ಲ. ಭಾಷೆಯನ್ನು ಭಾರತದ 125 ಜನಸಂಖ್ಯೆಯ ಜನರು ತಮಗೆ ತಾವೇ ಆಣೆ ಪ್ರಮಾಣ ಮಾಡಿಕೊಂಡಿದ್ದಾರೆ...

ಭಾರತದಂಥ ಅಭಿವೃದ್ಧಿಪರ ದೇಶದಲ್ಲಿ ಕೋಟಿಗಟ್ಟಲೆ ಜನರನ್ನು ಬಡತನದಿಂದ ಮೇಲೆತ್ತಲು, ಸಮಯಮೀರಿ, ಗುರಿಮೀರಿ ಶ್ರಮಿಸುತ್ತಿದ್ದೇವೆ ಎಂದು ಹೇಳಲು ಸಂತೋಷವಾಗುತ್ತದೆ. ಜನರ ಜೀವನ ಸರಳಗೊಳಿಸಲು, ಸುಲಲಿತಗೊಳಿಸಲು ಅವಿರತವಾಗಿ ಶ್ರಮಿಸುತ್ತಿದೆ. ಜಗತ್ತಿನ ಶೇ 17ರಷ್ಟು ಜನಸಂಖ್ಯೆ ಭಾರತದಲ್ಲಿದೆ. ಆದರೆ ಭಾರತದ ಮಾಲಿನ್ಯದ ಪ್ರಮಾಣ ಶೇ 5ರಷ್ಟು ಮಾತ್ರ ಇದೆ. ಆದರೆ ಬಗ್ಗೆ ಯಾವುದೇ ಮೈಲಿಗಲ್ಲುಗಳನ್ನು ಭಾರತ ಸೃಷ್ಟಿಸಿಲ್ಲ. ಅಥವಾ ಪುರಾವೆ ಒದಗಿಸುತ್ತಿಲ್ಲ.

ಭಾರತ ದೇಶ ಮಾತ್ರ ಅತಿ ಬೃಹತ್‌ ಆರ್ಥಿಕತೆಯನ್ನು ಹೊಂದಿರುವ ದೇಶವಾಗಿದೆ ಎಂದು ಇಡೀ ವಿಶ್ವವು ನಂಬಿದೆ. ಪ್ಯಾರಿಸ್‌ ಬದ್ಧತೆಯಲ್ಲಿ ಭಾರತವು ಬಗ್ಗೆ ಸ್ಪಷ್ಟಪಡಿಸಿದೆ. ನಮ್ಮ ದೃಢನಿಶ್ಚಯ ಮತ್ತು ಪರಿಶ್ರಮಗಳು ತಮ್ಮ ಫಲಿತಾಂಶವನ್ನು ತೋರುತ್ತಿವೆ.

ಸ್ನೇಹಿತರೆ,

ನಾನಿಂದು ನಿಮ್ಮ ನಡುವೆ ಬಂದಿರುವೆ. ಜೊತೆಗೆ ಭಾರತದಿಂದ ಹಲವು ಪುರಾವೆಗಳನ್ನು ತಂದಿರುವೆ. ನನ್ನ ಮಾತುಗಳಿವು... ಕೇವಲ ಮಾತುಗಳಲ್ಲ. ಇವು ಭವಿಷ್ಯದ ಪೀಳಿಗೆಗಳಿಗೆ ಸುಂದರವಾದ ಭವಿಷ್ಯ ನೀಡುವ ಮಾತುಗಳಿವು. ನವೀಕರಿಸುವ ಇಂಧನಗಳಿಗೆ ಸಂಬಂಧಿಸಿದಂತೆ ಪ್ರಯತ್ನ ಪಡುವ ದೇಶಗಳಲ್ಲಿ ಭಾರತವು ನಾಲ್ಕನೆಯ ಸ್ಥಾನದಲ್ಲಿದೆ.

ಏಳು ವರ್ಷಗಳಲ್ಲಿ ಭಾರತವು ಸಾಂಪ್ರದಾಯಿಕ ಮೂಲವಲ್ಲದ ಇಂಧನಗಳ ಬಳಕೆಯಲ್ಲಿ ಶೇ 25ರಷ್ಟು ಹೆಚ್ಚಾಗಿದೆ. ಸಮ್ಮಿಶ್ರ ಇಂಧನ ಬಳಕೆಯಲ್ಲಿ ಶೇ 40ರಷ್ಟು ಹೆಚ್ಚಳ ಸದ್ಯಕ್ಕೆ ಕಂಡು ಬಂದಿದೆ.  

ಸ್ನೇಹಿತರೆ,

ಪ್ರಪಂಚದ ಸಂಪೂರ್ಣ ಜನಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಜನರು ಭಾರತೀಯ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. 2030 ಹೊತ್ತಿಗೆ ಇಡಿಯ ರೈಲ್ವೆ ವಲಯವು ನೆಟ್‌ ಜೀರೊ ಆಗುವ ಗುರಿಯನ್ನು ಹೊಂದಿರುತ್ತದೆ. ಇದೊಂದೇ ಕ್ರಮದಿಂದ ಒಟ್ಟು ಮಾಲಿನ್ಯದಿಂದ ಶೇ 60ರಷ್ಟು ಮಾಲಿನ್ಯ ಕಡಿಮೆಯಾಗುತ್ತದೆ. ಇದರಂತೆಯೇ ನಮ್ಮ ಎಲ್‌ಇಡಿ ಬಲ್ಬ್‌ನ ಅಭಿಯಾನವು ಶೇ 40ರಷ್ಟು ಇಂಧನಬಳಕೆಯ ಪ್ರಮಾಣವನ್ನು ಕಡಿತಗೊಳಿಸಿದೆಹೀಗೆ ಭಾರತವು ವಿವಿಧ ಆಯಾಮಗಳಲ್ಲಿ ಸಾಂಪ್ರದಾಯಿಕ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ, ಮಾಲಿನ್ಯವನ್ನು ಕಡಿಮೆ ಮಾಡುವುದರಲ್ಲಿ ಸಾಕಷ್ಟು ಕ್ರಮವಹಿಸಿದೆ

ಇದರೊಟ್ಟಿಗೆ ಭಾರತವು ಸಾಂಸ್ಥಿಕ ಪರಿಹಾರವನ್ನು ನೀಡುವಲ್ಲಿಯೂ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಇಂತಹ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸೌರಶಕ್ತಿಯ ಉತ್ಪಾದನೆಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಮಾಡಿಕೊಂಡಿದೆ. ವಾತಾವರಣಕ್ಕೆ ಹೊಂದಿಕೆಯಾಗುವ, ಅನ್ವಯಿಸುವಂತಾಗಲು ಪ್ರಕೃತಿವಿಕೋಪಕ್ಕೆ ಸಂಬಂಧಿಸಿದಂತೆ ಹಲವಾರು ಒಪ್ಪಂದಗಳನ್ನೂ ಮಾಡಿಕೊಳ್ಳಲಾಗುತ್ತದೆ. ಇದು ಭಾರತದ ಹಲವಾರು ಜನಸಂಖ್ಯೆಯ ಜೀವ ಉಳಿಸುವಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ.

ಸ್ನೇಹಿತರೆ,

ನಾನು ಇಂದು ನಿಮ್ಮೆಲ್ಲರ ಗಮನವನ್ನು ಇನ್ನೊಂದು ಪ್ರಮುಖ ಅಂಶದತ್ತ ಸೆಳೆಯಲು ಯತ್ನಿಸುವೆ. ಕ್ಲೈಮೆಟ್‌ ಚೇಂಜ್‌ನಲ್ಲಿ ನಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕು ಎನ್ನುವ ಸತ್ಯವನ್ನು ಎಲ್ಲರೂ ಅರಿತುಕೊಂಡಿದ್ದಾರೆ. ಇಂದು ವಿಷಯವನ್ನು ಚಳವಳಿಯಾಗಿ, ಒಂದು ಪದದ ಚಳವಳಿಯಾಗಿಒನ್‌ ವರ್ಡ್‌ ಮೂವ್ಮೆಂಟ್‌ಆಗಿ ಬದಲಾಗಬೇಕು ಎಂದು ನಾನು ಪ್ರಸ್ತಾವ ಸಲ್ಲಿಸುತ್ತೇನೆ.

ಒಂದು ಪದ (ಒನ್‌ ವರ್ಡ್‌), ಕ್ಲೈಮೆಟ್‌ನ ವಿಷಯ ಬಂದಾಗ ಏಕ ಜಗತ್ತು ಎಂಬ ಮೂಲದ ಪದವಾಗಬೇಕು. word ಮತ್ತು world ಅಂತಾಗುತ್ತದೆ. LIFE... ಜೀವನವನ್ನು L, I, F, E ಅದರಂತೆ ಪರಿಸರಕ್ಕಾಗಿ ಜೀವನಶೈಲಿ ಬದಲಿಸುವ ಅಗತ್ಯ ಇದೆ. ಮತ್ತು ಇದನ್ನು ಎಲ್ಲರೂ ಒಟ್ಟಾಗಿ ಪರಿವರ್ತನೆ ತರಬೇಕಿದೆ. ಇಂದು ನಮಗೆ ಎಲ್ಲರೂ ಒಟ್ಟಾಗಿ ನಡೆಯುವ ಅಗತ್ಯವಿದೆ. ಒಟ್ಟಾಗಿ, ಒಗ್ಗೂಡಿ, ಸಮಗ್ರ ಪಾಲ್ಗೊಳ್ಳುವಿಕೆಯ ಅಗತ್ಯವಿದೆ. ಪರಿಸರಕ್ಕಾಗಿ ಜೀವನಶೈಲಿ (LIFE :Lifestyle For Environment) ಪದ ಒಂದು ಚಳವಳಿಯಾಗಿ ಬದಲಾಗಬೇಕಿದೆ.

ಪರಿಸರಕ್ಕಾಗಿ ಪ್ರಜ್ಞಾವಂತಿಕೆಯ ಆಯ್ಕೆಯಾಗಿ, ಸಾಮೂಹಿಕ ಚಳವಳಿಯಾಗಬೇಕಿದೆ. ಉದ್ದೇಶಪೂರ್ವಕವಾಗಿ ಹಾಗೂ ಚೇತನಪೂರ್ಣವಾಗಿ ಇರುವುದು ಇಂದಿನ ಅಗತ್ಯವಾಗಿದೆ. ನಾವು ವಿನಾಶಕಾರಿಯಾದ, ಉದ್ದೇಶವಿಲ್ಲದಂತೆ ಇರುವುದು ನಿಲ್ಲಿಸಬೇಕಾಗಿದೆ ಚಳವಳಿಗಳು ಒಟ್ಟಾಗಿ ಒಂದು ಗುರಿ, ಉದ್ದೇಶವನ್ನು ನಿರ್ಧರಿಸಬೇಕು. ಅವು ಪರಿಸರ ಬದಲಾವಣೆಯಲ್ಲಿ ಕ್ರಾಂತಿಕಾರಿ ಕ್ರಮಗಳಾಗಿ ಬದಲಾಗುತ್ತವೆ. ವೈವಿಧ್ಯಮಯ ಜೈವಿಕ, ಭೌಗೋಳಿಕ ಪ್ರದೇಶಗಳಲ್ಲಿಯೂ ಇವು ಕ್ರಾಂತಿಕಾರಕ ಬದಲಾವಣೆಗಳನ್ನು ತರಬಲ್ಲವು. ಮೀನುಗಾರಿಕೆ, ಕೃಷಿ, ಸ್ವಾಸ್ಥ್ಯ, ಪ್ಯಾಕೇಜಿಂಗ್, ಗೃಹ ನಿರ್ಮಾಣ, ಆತಿಥ್ಯ, ಪ್ರವಾಸ, ಜವಳಿ, ಫ್ಯಾಷನ್, ನೀರು ನಿರ್ವಹಣೆ ಮತ್ತು ಇಂಧನ ಕ್ಷೇತ್ರಗಳಲ್ಲಿ ಸಾಕಷ್ಟು ಬದಲಾವಣೆ ತರಬಹುದಾಗಿದೆ

ಇವೆಲ್ಲವೂ ಎಂಥ ಕ್ಷೇತ್ರಗಳೆಂದರೆ ಪ್ರತಿದಿನವೂ ಪ್ರತಿ ಹೆಜ್ಜೆಯಲ್ಲಿಯೂ ನಾವು ಪ್ರಜ್ಞಾಪೂರ್ವಕ ಆಯ್ಕೆಗಳನ್ನು ಮಾಡಬೇಕಾಗುತ್ತದೆ. ಇಂಥ ಪ್ರಜ್ಞಾಪೂರ್ವಕ ಆಯ್ಕೆಗಳನ್ನು ಕೋಟ್ಯಂತರ ಜನರು ಪ್ರತಿದಿನವೂ ಕೈಗೊಂಡಾಗ ಕ್ಲೈಮೆಟ್‌ ಚೇಂಜ್‌ ವಿಷಯದಲ್ಲಿ ಮಹತ್ತರ ಬದಲಾವಣೆ ಕಾಣಬಹುದಾಗಿದೆ. ಕೋಟ್ಯಂತರ ಹೆಜ್ಜೆಗಳು ಒಂದೇ ಗುರಿಗಾಗಿ ಪ್ರತಿದಿನವೂ ಒಂದೇ ದಿಕ್ಕಿನಲ್ಲಿ ಸಾಗಬೇಕಾಗುತ್ತದೆ.

 ಮತ್ತು ನಾನಿದನ್ನು ಆರ್ಥಿಕ, ವೈಜ್ಞಾನಿಕ ಕ್ಷೇತ್ರಗಳನ್ನೂ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿಯೂ ಚಳವಳಿಯಾಗಿಯೇ ಇದು ಮಾರ್ಪಡುತ್ತದೆ. ಕಳೆದ ಶತಮಾನದ ಅನುಭವ, ಅರಿವು ಸೇರಿದಂತೆ ಪ್ರತಿ ಆಯಾಮದಲ್ಲಿಯೂ ನಮಗೊಂದು ಪಾಠವಂತೂ ತಕ್ಕಿದೆ. ಸ್ವ ಅರಿವಿನ ದಾರಿ ಇದು. ಮತ್ತು ಇದು ಸುದೀರ್ಘಕಾಲದ ಬದಲಾವಣೆಯಾಗುವುದೇ ಲಾಭವಾಗಿದೆ

ಸ್ನೇಹಿತರೆ,

ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಐದು ಅಮೃತ ಸಮಾನವಾದ ವಿಷಯಗಳನ್ನು ಪಂಚಾಮೃತದ ರೂಪದಲ್ಲಿ ನಾನು ಉಣಬಡಿಸಲು ಇಷ್ಟಪಡುತ್ತೇನೆ. ಪಂಚಾಮೃತವು ನಿಶ್ಚಿತವಾಗಿಯೂ ಚಿಕಿತ್ಸಕ ರೂಪ ತಾಳುತ್ತದೆ.

ಮೊದಲನೆಯದ್ದು 2030 ಒಳಗೆ ಭಾರತವು ಸಾಂಪ್ರದಾಯಿಕ ಮೂಲವಲ್ಲದ ಆಗರದಿಂದ 500‌ ಗಿಗಾ ವಾಟ್ಸ್‌ ಸಾಮರ್ಥ್ಯದ ಶಕ್ತಿ ಉತ್ಪಾದಿಸುವಲ್ಲಿ ಯಶಸ್ವಿಯಾಗುತ್ತದೆ.

ಎರಡನೆಯದ್ದು: ಭಾರತವು 2030 ಹೊತ್ತಿಗೆ ತಾನು ಬಳಸುತ್ತಿರುವ ಇಂಧನಶಕ್ತಿಯಲ್ಲಿ ಶೇ 50ರಷ್ಟನ್ನು ನವೀಕರಿಸಬಹುದಾದ ಇಂಧನದಿಂದ ಬಳಸುತ್ತದೆ

ಮೂರನೆಯದ್ದು: ಕ್ಷಣದಿಂದ 2030ರವರೆಗೆ ಒಟ್ಟು ಭಾರತವು ಉಗುಳುತ್ತಿರುವ ಕಾರ್ಬನ್‌ ಮೌಲ್ಯವನ್ನು ಒಂದು ಕೋಟಿ ಟನ್‌ನಷ್ಟು ಕಡಿಮೆ ಮಾಡುವುದು.

ನಾಲ್ಕನೆಯದು: 2030ರವರೆಗೆ ಭಾರತವು ಕಾರ್ಬನ್‌ ತೀವ್ರತೆಯನ್ನು ಅದರ ಆರ್ಥಿಕ ವ್ಯವಸ್ಥೆಯ ಶೇ 45ರಷ್ಟು ಕಡಿಮೆ ಮಾಡುವುದು.

ಐದನೆಯದ್ದು: 2070 ಹೊತ್ತಿಗೆ ಭಾರತವು ತನ್ನ ಗುರಿ ತಲುಪಿ, ನೆಟ್‌ ಜೀರೊ ಹಂತವನ್ನು ಸಾಧಿಸುವುದು.

ಪಂಚಾಮೃತಗಳು ಪರಿಸರ ಬದಲಾವಣೆಯಲ್ಲಿ ಹಾಗೂ ಕ್ಲೈಮೆಟ್‌ ಚೇಂಜ್‌ನಲ್ಲಿ ತನ್ನದೇ ಆದ ಕೊಡುಗೆಯನ್ನು ಭಾರತ ನೀಡಲಿದೆ.

ಸ್ನೇಹಿತರೆ,

ನಮಗೆಲ್ಲ ಗೊತ್ತಿದೆ. ಮತ್ತು ಆಣೆ ಪ್ರಮಾಣಗಳ ಭಾಷೆ ನೀಡುವುದು ಹೊತ್ತಿನವರೆಗೂ ಪೊಳ್ಳು ಆಣೆಗಳಾಗಿವೆ ಎಂಬುದು ಸಾಬೀತಾಗಿದೆ. ನಾವೆಲ್ಲರೂ ಸದ್ಯ ಕ್ಲೈಮೆಟ್‌ ಚೇಂಜ್‌ಗಾಗಿ ಒಂದಷ್ಟು ಕ್ರಿಯಾಯೋಜನೆಯನ್ನು ಕಾರ್ಯಾನುಷ್ಠಾನಕ್ಕೆ ಇಳಿಸಿದ್ದೇವೆ. ಪ್ಯಾರಿಸ್‌ ಒಪ್ಪಂದದ ಸಮಯದಲ್ಲಿ ಒಂದಷ್ಟು ಆಣೆ ಪ್ರಮಾಣಗಳು ಉಳಿದೇ ಹೋಗಿವೆ. ಪರಿಸರಕ್ಕೆ ಸಂಬಂಧಿಸಿದ ಆರ್ಥಿಕ ಮತ್ತು ಹಣಕಾಸಿನ ಒಪ್ಪಂದವು ಸದಾ ಏಕರೀತಿಯಲ್ಲಿರುವುದು ಸಾಧ್ಯವಿಲ್ಲ.

ಭಾರತವು ಹೊಸ ಬದ್ಧತೆ ಮತ್ತು ಹೊಸ ಶಕ್ತಿಯೊಂದಿಗೆ ಕಾರ್ಯಕ್ರಮಗಳ ಕಾರ್ಯಾನುಷ್ಠಾನಕ್ಕೆ ಹಾಗೂ ಪರಿಹಾರಕ್ಕೆ ಬದ್ಧವಾಗುತ್ತಿದೆ. ಇಂಥ ಸಮಯದಲ್ಲಿ ಪರಿಸರ ಅರ್ಥಿಕತೆ, ಕನಿಷ್ಠ ಬೆಲೆಯ ಪರಿಸರ ತಂತ್ರಜ್ಞಾನಗಳು ಅತಿ ಹೆಚ್ಚು ಮಹತ್ವ ಪಡೆಯುತ್ತವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ ಭಾರತವು $1 ಟ್ರಿಲಿಯನ್ ನಷ್ಟು ಶೀಘ್ರವಾಗಿ ನಿರೀಕ್ಷಿಸುತ್ತದೆ. ಇಂದು ಹವಾಮಾನ ವೈಪರೀತ್ಯದಲ್ಲಿ ಬದಲಾವಣೆಯನ್ನು ತಗ್ಗಿಸುವ ಕುರಿತು, ದಾಖಲೀಕರಣ ಸಾಗಿದೆ. ಅದರಂತೆಯೇ ವಾತಾವರಣ ಆರ್ಥಿಕತೆಯ ಕುರಿತು ದಾಖಲೀಕರಣವಾಗಬೇಕು.

ಹವಾಮಾನ ಹಣಕಾಸಿನ ಕುರಿತು ಗಮನವಹಿಸದ, ಮಾತು ನಿರ್ವಹಿಸದ ದೇಶಗಳ ಮೇಲೆ ಒತ್ತಡ ಹೇರುವುದು ನ್ಯಾಯಯುತವಾದ ಕ್ರಮವಾಗಿದೆ.

ಸ್ನೇಹಿತರೆ,

ಪರಿಸರ ಹಾಗೂ ಹವಾಮಾನಕ್ಕೆ ಸಂಬಂಧಿಸಿದಂತೆ ಭಾರತವು ತನ್ನ ಗುರಿಯತ್ತ ನಿಖರವಾದ ದಾಪುಗಾಲನ್ನು ಹಾಕುತ್ತಿದೆ. ಭಾರತಕ್ಕೆ ಇನ್ನಿತರ ಅಭಿವೃದ್ಧಿಪರ ದೇಶಗಳ ಪರಿಸ್ಥಿತಿಯ ಕುರಿತೂ ಅರಿವಿದೆ. ಅವುಗಳೊಂದಿಗೆ ಹಂಚಿಕೊಳ್ಳುವಿಕೆ ಹಾಗೂ ನಿರೀಕ್ಷೆಗಳನ್ನು ಅಭಿವ್ಯಕ್ತಪಡಿಸುವುದನ್ನು ಮುಂದುವರಿಸುತ್ತದೆ.

ಅನೇಕ ಅಭಿವೃದ್ಧಿಪರ ರಾಷ್ಟ್ರಗಳಿಗೆ ಹವಾಮಾನ ಬದಲಾವಣೆಯು ಅವುಗಳ ಅಸ್ತಿತ್ವಕ್ಕಿಂತಲೂ ದೊಡ್ಡದಾಗಿದೆ. ನಾವಿಂದು ಜಗತ್ತಿನ ಉಳಿವಿಗಾಗಿ ಬೃಹತ್‌ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದು ಕ್ಷಣದ ತುರ್ತು ಅಗತ್ಯವಾಗಿದೆ. ಮತ್ತು ವೇದಿಕೆಗೆ ಇದು ಅತ್ಯಗತ್ಯವೂ ಆಗಿದೆ. ಗ್ಲಾಸ್ಗೋನಲ್ಲಿ ತೆಗೆದುಕೊಳ್ಳಲಾಗುವ ನಿರ್ಣಯಗಳು ನಮ್ಮ ಭವಿಷ್ಯತ್ತಿನ ಪೀಳಿಗೆಯ ಭವಿಷ್ಯವನ್ನು ಸುರಕ್ಷಿತವಾಗಿರಿಸುವಲ್ಲಿ ಸಫಲವಾಗುತ್ತವೆ ಎಂಬ ವಿಶ್ವಾಸ ನನಗಿದೆ. ಮುಂದಿನ ಪೀಳಿಗೆಗೆ ಒಂದು ಸುರಕ್ಷಿತ ಹಾಗೂ ಸಮೃದ್ಧ ಬದುಕು ನೀಡುವಂತಾಗುತ್ತದೆ.

ಮಾನ್ಯ ಸಭಾಧ್ಯಕ್ಷರೆ ನಾನು ಬಹಳ ಸಮಯ ತೆಗೆದುಕೊಂಡಿರುವುದಕ್ಕೆ ನಿಮ್ಮ ಕ್ಷಮೆಯಾಚಿಸುತ್ತೇನೆ. ಆದರೆ ನಾನಿದನ್ನು ಅಭಿವೃದ್ಧಿಪರ ದೇಶಗಳ ಪರ ಧ್ವನಿ ಎತ್ತುವ ನನ್ನ ಕರ್ತವ್ಯ ಎಂದು ಕೊಳ್ಳುತ್ತೇನೆ. ಹಾಗಾಗಿಯೇ ವಿಷಯದ ಮೇಲೂ ನಾನು ಹೆಚ್ಚಿನ ಒತ್ತು ನೀಡಿರುವೆ. ಮತ್ತೊಮ್ಮೆ ನಾನು ನಿಮಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಓದುಗರ ಗಮನಕ್ಕೆ: ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿರುವ ಭಾಷಣದ ಸಂಗ್ರಹ ರೂಪವಾಗಿದೆ. ಮೂಲ ಹಿಂದಿ ಭಾಷೆಯಲ್ಲಿ ಮಾತನಾಡಿದ್ದರು.

***


(Release ID: 1768941) Visitor Counter : 394