ಪ್ರಧಾನ ಮಂತ್ರಿಯವರ ಕಛೇರಿ
ಗ್ಲಾಸ್ಗೋದಲ್ಲಿ ಕಾಪ್ 26 ಶೃಂಗಸಭೆಯಲ್ಲಿ 'ಕ್ರಮ ಮತ್ತು ಏಕತೆಯ-ನಿರ್ಣಾಯಕ ದಶಕ' ಕುರಿತ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣ
Posted On:
01 NOV 2021 11:33PM by PIB Bengaluru
ಘನತೆವೆತ್ತರೆ,
ನನ್ನ ಸ್ನೇಹಿತರಾದ ಬೋರಿಸ್ ಅವರೇ, ಅಳವಡಿಕೆಯಂತಹ ಪ್ರಮುಖ ವಿಷಯದ ಕುರಿತಂತೆ ನನ್ನ ಅಭಿಪ್ರಾಯಗಳನ್ನು ಮಂಡಿಸಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು!
ಜಾಗತಿಕ ಹವಾಮಾನ ಕುರಿತ ಚರ್ಚೆಯಲ್ಲಿ ತಗ್ಗಿಸುವಿಕೆ ಪಡೆದಷ್ಟು ಪ್ರಾಮುಖ್ಯತೆಯನ್ನು ಅಳವಡಿಕೆ ಪಡೆಯಲಿಲ್ಲ. ಇದು ಹವಾಮಾನ ಬದಲಾವಣೆಯಿಂದ ಹೆಚ್ಚು ಬಾಧಿತವಾಗಿರುವ ಅಭಿವೃದ್ಧಿಶೀಲ ದೇಶಗಳಿಗೆ ಆದ ಅನ್ಯಾಯ.
ಭಾರತ ಸೇರಿದಂತೆ ಬಹುತೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ರೈತರಿಗೆ ಹವಾಮಾನವು ಒಂದು ಪ್ರಮುಖ ಸವಾಲಾಗಿದೆ - ಬೆಳೆ ಪದ್ಧತಿ ಬದಲಾಗುತ್ತಿದೆ, ಅಕಾಲಿಕ ಮಳೆ ಮತ್ತು ಪ್ರವಾಹ ಅಥವಾ ಆಗಾಗ್ಗೆ ಬಿರುಗಾಳಿಯಿಂದ ಬೆಳೆಗಳು ನಾಶವಾಗುತ್ತಿವೆ. ಕುಡಿಯುವ ನೀರಿನ ಮೂಲಗಳಿಂದ ಹಿಡಿದು ಕೈಗೆಟುಕುವ ಮನೆಗಳವರೆಗೆ, ಇವೆಲ್ಲವೂ ಹವಾಮಾನ ಬದಲಾವಣೆಯ ವಿರುದ್ಧ ತಾಳಿಕೊಳ್ಳುವ ಅಗತ್ಯವಿದೆ.
ಘನತೆವೆತ್ತರೆ,
ಈ ನಿಟ್ಟಿನಲ್ಲಿ ನನ್ನ ಮೂರು ನಿಲುವುಗಳಿವೆ. ಮೊದನೆಯದು, ನಾವು ನಮ್ಮ ಅಭಿವೃದ್ಧಿ ನೀತಿಗಳು ಮತ್ತು ಯೋಜನೆಗಳಲ್ಲಿ ಅಳವಡಿಕೆಯನ್ನು ಪ್ರಮುಖ ಭಾಗವನ್ನಾಗಿ ಮಾಡಿಕೊಳ್ಳಬೇಕು. ‘ನಳ್ ಸೆ ಜಲ್’ – ಎಲ್ಲರಿಗೂ ನಳದಿಂದ ನೀರು, ‘ಸ್ವಚ್ಛಭಾರತ’ – ಭಾರತವನ್ನು ಸ್ವಚ್ಛವಾಗಿಡುವುದು ಮತ್ತು ‘ಉಜ್ವಲಾ’ – ಭಾರತದಲ್ಲಿಎಲ್ಲರಿಗೂ ಶುದ್ಧ ಅಡುಗೆ ಇಂಧನ, ಇವು ನಮ್ಮ ಅಗತ್ಯ ಇರುವ ನಾಗರಿಕರಿಗೆ ಅಳವಡಿಕೆಯ ಸೌಲಭ್ಯವನ್ನು ಮಾತ್ರವೇ ಒದಗಿಸಲಿಲ್ಲ, ಜೊತೆಗೆ ಅವು ಅವರ ಜೀವನ ಮಟ್ಟವನ್ನೂ ಸುಧಾರಿಸಿವೆ. ಎರಡನೆಯದಾಗಿ ಹಲವು ಸಾಂಪ್ರದಾಯಿಕ ಸಮುದಾಯಗಳು ಪ್ರಕೃತಿಯೊಂದಿಗೆ ಸೌಹಾರ್ದತೆಯಿಂದ ಬಾಳುವ ಅರಿವನ್ನು ಗಳಿಸಿಕೊಂಡಿವೆ.
ನಮ್ಮ ಅಳವಡಿಕೆ ನೀತಿಗಳಲ್ಲಿ ಈ ಸಾಂಪ್ರದಾಯಿಕ ಆಚರಣೆಗಳಿಗೆ ಸೂಕ್ತವಾದ ಪ್ರಾಮುಖ್ಯತೆ ನೀಡಲೇಬೇಕಾಗಿದೆ. ಈ ಜ್ಞಾನದ ಹರಿವು ಹೊಸ ಪೀಳಿಗೆಗೆ ತಲುಪುವಂತೆ ಶಾಲಾ ಪಠ್ಯಕ್ರಮದಲ್ಲಿಯೂ ಸೇರಿಸಬೇಕಿದೆ. ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಜೀವನಶೈಲಿಯನ್ನು ಸಂರಕ್ಷಿಸುವುದು ಸಹ ಅಳವಡಿಕೆಯ ಪ್ರಮುಖ ಸ್ತಂಭವಾಗಿದೆ. ಮೂರನೆಯದಾಗಿ, ಅಳವಡಿಕೆಯ ವಿಧಾನಗಳು ಸ್ಥಳೀಯವಾಗಿರಬಹುದು, ಆದರೆ ಹಿಂದುಳಿದ ದೇಶಗಳು ಅವುಗಳಿಗೆ ಜಾಗತಿಕ ಬೆಂಬಲವನ್ನು ಪಡೆಯಬೇಕು.
ಸ್ಥಳೀಯ ಅಳವಡಿಕೆಗೆ ಜಾಗತಿಕ ಬೆಂಬಲದ ಕಲ್ಪನೆಯೊಂದಿಗೆ ಭಾರತವು ವಿಪತ್ತು ತಾಳಿಕೊಳ್ಳುವ ಮೂಲಸೌಕರ್ಯ ಮೈತ್ರಿ ಸಿಡಿಆರ್.ಐ ಉಪಕ್ರಮವನ್ನು ಕೈಗೊಂಡಿದೆ. ಎಲ್ಲ ರಾಷ್ಟ್ರಗಳು ಈ ಉಪಕ್ರಮದಲ್ಲಿ ಸೇರುವಂತೆ ನಾನು ಮನವಿ ಮಾಡುತ್ತೇನೆ.
ಧನ್ಯವಾದಗಳು.
ಘೋಷಣೆ: ಇದು ಪ್ರಧಾನಮಂತ್ರಿಯವರ ಹೇಳಿಕೆಯ ಅಂದಾಜು ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
***
(Release ID: 1768799)
Visitor Counter : 282
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam