ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಏಕತಾ ದಿನದಂದು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ


“ಸರ್ದಾರ್ ಪಟೇಲ್ ಕೇವಲ ಐತಿಹಾಸಿಕ ವ್ಯಕ್ತಿಯಾಗಿಲ್ಲ, ಪ್ರತಿಯೊಬ್ಬ ದೇಶವಾಸಿಗಳ ಹೃದಯದಲ್ಲೂ ಜೀವಂತವಾಗಿದ್ದಾರೆ”

“130 ಕೋಟಿ ಭಾರತೀಯರು ವಾಸಿಸುವ ಈ ಭೂಮಿಯು ಎಲ್ಲರ ಆತ್ಮ, ಕನಸು ಮತ್ತು ಆಕಾಂಕ್ಷೆಗಳ ಅವಿಭಾಜ್ಯ ಅಂಗವಾಗಿದೆ“

“ಸರ್ದಾರ್ ಪಟೇಲ್ ಬಲಿಷ್ಠ, ಸಮಗ್ರ, ಸಂವೇದನಾಶೀಲ ಮತ್ತು ಜಾಗೃತ ಭಾರತವನ್ನು ಬಯಸಿದ್ದರು’’

“ಸರ್ದಾರ್ ಪಟೇಲ್ ಅವರಿಂದ ಸ್ಫೂರ್ತಿ ಪಡೆದ ಭಾರತವು ಬಾಹ್ಯ ಮತ್ತು ಆಂತರಿಕ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸನ್ನದ್ಧವಾಗುತ್ತಿದೆ”

“ನೀರು, ಆಕಾಶ, ಭೂಮಿ ಮತ್ತು ಬಾಹ್ಯಾಕಾಶದಲ್ಲಿ ದೇಶದ ಸಂಕಲ್ಪ, ಸಾಮರ್ಥ್ಯಗಳು ಅಭೂತಪೂರ್ವವಾಗಿದೆ ಮತ್ತು ರಾಷ್ಟ್ರ ಆತ್ಮನಿರ್ಭರ ಭಾರತದ ಹೊಸ ಮಾರ್ಗದತ್ತ ಸಾಗುತ್ತಿದೆ’’

“ಆಜಾ಼ದಿ ಕಾ ಅಮೃತ ಕಾಲ’ದಲ್ಲಿ ಅಭೂತಪೂರ್ವ ಬೆಳವಣಿಗೆಯನ್ನು ಹೊಂದಿದೆ, ಕಠಿಣ ಗುರಿಗಳನ್ನು ಸಾಧಿಸುತ್ತದೆ ಮತ್ತು ಸರ್ದಾರ್ ಸಾಹೀಬ್ ಕನಸಿನ ಭಾರತವನ್ನು ನಿರ್ಮಾಣ ಮಾಡುತ್ತದೆ”

“ಸರ್ಕಾರದ ಜತೆ ಜನರ ‘ಗತಿಶಕ್ತಿ’ಯು ಸೇರಿದರೆ ಯಾವುದೂ ಅಸಾಧ್ಯವಲ್ಲ”

Posted On: 31 OCT 2021 10:25AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರೀಯ ಏಕತಾ ದಿನದ ತಮ್ಮ ಭಾಷಣದಲ್ಲಿ ದೇಶವಾಸಿಗಳಿಗೆ ಶುಭ ಕೋರಿದ್ದಾರೆ. ‘ಏಕ ಭಾರತ್ ಶ್ರೇಷ್ಠ ಭಾರತ್’ ಆದರ್ಶಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಸರ್ದಾರ್ ಪಟೇಲ್ ಅವರಿಗೆ ಪ್ರಧಾನಿ ಗೌರವ ನಮನ ಸಲ್ಲಿಸಿದರು. ಸರ್ದಾರ್ ಪಟೇಲ್ ಅವರು ಕೇವಲ ಐತಿಹಾಸಿಕ ವ್ಯಕ್ತಿಯಲ್ಲ, ಅವರು ದೇಶದ ಪ್ರತಿಯೊಬ್ಬರ ಹೃದಯದಲ್ಲೂ ನೆಲೆಸಿದ್ದಾರೆ ಮತ್ತು ಅವರ ಏಕತೆಯ ಸಂದೇಶವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಜನರಲ್ಲಿ ಒಗ್ಗಟ್ಟಿನ ಬಿರುಕಿಲ್ಲದ ಏಕತೆಯ ಭಾವನೆಯ ನೈಜ ಸಂಕೇತವಾಗಿದ್ದಾರೆ.  ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲೂ ರಾಷ್ಟ್ರೀಯ ಏಕತಾ ಪರೇಡ್ ಗಳು ನಡೆಯುತ್ತಿವೆ ಮತ್ತು ಏಕತಾ ಪ್ರತಿಮೆಯ ಜಾಗದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅದೇ ಭಾವನೆ ಪ್ರತಿಫಲನಗೊಳ್ಳುತ್ತಿದೆ ಎಂದು ಹೇಳಿದರು.    
    ಭಾರತ ಕೇವಲ ಭೌಗೋಳಿಕವಾಗಿ ಐಕ್ಯವಾಗಿಲ್ಲ, ಆದರೆ ಆದರ್ಶಗಳು, ಕಲ್ಪನೆಗಳು, , ನಾಗರಿಕತೆ ಮತ್ತು ಸಂಸ್ಕೃತಿಯ ಉದಾರ ಮಾನದಂಡಗಳಿಂದ ತುಂಬಿರುವ ರಾಷ್ಟ್ರವಾಗಿದೆ ಎಂದು ಅವರು ಹೇಳಿದರು. “130 ಕೋಟಿ ಭಾರತೀಯರು ಜೀವಿಸುವ ಈ ಭೂ ಪ್ರದೇಶವು ನಮ್ಮ ಆತ್ಮ, ಕನಸುಗಳು ಮತ್ತು ಆಶೋತ್ತರಗಳು ಅವಿಭಾಜ್ಯ ಅಂಗವಾಗಿದೆ” ಎಂದು ಅವರು ಹೇಳಿದರು. 
ಏಕಭಾರತ ಭಾವನೆಯೊಂದಿಗೆ ಭಾರತದ ಪ್ರಜಾಸತ್ತಾತ್ಮಕ ಪರಂಪರೆಯನ್ನು ಬಲವರ್ಧನೆಗೊಳಿಸುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ದೇಶದ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಗಳ ಸಾಮೂಹಿಕ ಪ್ರಯತ್ನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಸರ್ದಾರ್ ಪಟೇಲ್ ಅವರು ಬಲಿಷ್ಠ, ಸಮಗ್ರ, ಸಂವೇದನಾಶೀಲ ಮತ್ತು ಜಾಗೃತ ಭಾರತವನ್ನು ಬಯಸಿದ್ದರು ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಜತೆಗೆ ಭಾರತ ಅಭಿವೃದ್ಧಿಯೂ ಹೊಂದುತ್ತಿದೆ. “ಸರ್ದಾರ್ ಪಟೇಲ್ ಅವರಿಂದ ಸ್ಫೂರ್ತಿಪಡೆದ ಭಾರತ ಬಾಹ್ಯ ಮತ್ತು ಆಂತರಿಕ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸನ್ನದ್ಧವಾಗುತ್ತಿದೆ” ಎಂದು ಅವರು ಹೇಳಿದರು. 
    ಕಳೆದ 7 ವರ್ಷಗಳಲ್ಲಿ ದೇಶದ ಬಲವರ್ಧನೆಗೆ ಕೈಗೊಂಡಿರುವ ಕ್ರಮಗಳನ್ನು ಉಲ್ಲೇಖಿಸಿರುವ ಪ್ರಧಾನಮಂತ್ರಿ ಅವರು, ದೇಶ ಇಂದು ಅನಗತ್ಯ ಹಳೆಯ ಕಾನೂನುಗಳಿಂದ ಮುಕ್ತವಾಗಿದೆ. ಏಕತೆಯ ಆದರ್ಶಗಳು ಬಲವರ್ಧನೆಗೊಂಡಿದೆ. ಮೂಲಸೌಕರ್ಯ ಮತ್ತು ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಿರುವುದರಿಂದ ಭೌಗೋಳಿಕ ಹಾಗೂ ಸಾಂಸ್ಕೃತಿಕ ಅಂತರ ತಗ್ಗಿದೆ ಎಂದು ಹೇಳಿದರು. 
    “ಇಂದು ‘ಏಕ ಭಾರತ ಶ್ರೇಷ್ಠ ಭಾರತ’ ಭಾವನೆ ಬಲವರ್ಧನೆಗೊಳಿಸುವುದು, ಸಾಮಾಜಿಕ, ಆರ್ಥಿಕ ಮತ್ತು ಸಾಂವಿಧಾನಿಕ ಏಕೀಕರಣದ ‘ಮಹಾಯಾಗ’ ನಡೆಯುತ್ತಿದೆ”. ನೀರು, ಆಕಾಶ, ಭೂಮಿ ಮತ್ತು ಬಾಹ್ಯಾಕಾಶದ ಸಾಮರ್ಥ್ಯವು ಅಭೂತಪೂರ್ವವಾಗಿದೆ ಮತ್ತು ರಾಷ್ಟ್ರವು ಆತ್ಮನಿರ್ಭರ ಭಾರತದ ಹೊಸ ಧ್ಯೇಯದ ಪಥದತ್ತ ಸಾಗಲಾರಂಭಿಸಿದೆ ಎಂದು ಅವರು ಹೇಳಿದರು. 
ಸ್ವಾತಂತ್ರ್ಯೋತ್ಸವ ಈ ಅಮೃತ ಕಾಲದಲ್ಲಿ ‘ಸಬ್ ಕಾ ಪ್ರಯಾಸ್’ ಅತಿ ಹೆಚ್ಚು ಪ್ರಸ್ತುತವಾಗಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಈ ‘ಆಜಾ಼ದಿ ಕಾ ಅಮೃತ ಕಾಲ’ದಲ್ಲಿ ಅಭೂತಪೂರ್ವ ಪ್ರಗತಿಯನ್ನು ಹೊಂದಲಾಗುತ್ತಿದೆ, ಕಷ್ಟಕರ ಗುರಿಗಳ ಸಾಧಿಸುತ್ತದೆ ಮತ್ತು ಸರ್ದಾರ್ ಸಾಹೀಬ್ ಅವರ ಕನಸಿನ ಭಾರತವನ್ನು ನಿರ್ಮಾಣ  ಮಾಡುತ್ತದೆ. ಸರ್ದಾರ್ ಪಟೇಲ್ ಅವರಿಗೆ ‘ಏಕ್ ಭಾರತ್’ ಎಂದರೆ ಸರ್ವರಿಗೂ ಸಮಾನ ಅವಕಾಶಗಳು ಎಂಬುದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನಮಂತ್ರಿಗಳು ಆ ಪರಿಕಲ್ಪನೆಯನ್ನು ವಿವರಿಸಿದರು ಮತ್ತು ‘ಏಕ ಭಾರತ’ವೆಂದರೆ ಮಹಿಳೆಯರು, ದಲಿತರು, ದುರ್ಬಲ ವರ್ಗದವರು, ಆದಿವಾಸಿಗಳು ಮತ್ತು ಅರಣ್ಯವಾಸಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸಿಕೊಡುವ ಭಾರತ ಎಂದರ್ಥ. ಅಲ್ಲಿ ವಸತಿ, ವಿದ್ಯುಚ್ಛಕ್ತಿ ಮತ್ತು ನೀರು ಯಾವುದೇ ತಾರತಮ್ಯವಿಲ್ಲದೆ ಎಲ್ಲವೂ ಕೈಗೆಟಕುತ್ತದೆ. ದೇಶ ‘ಸಬ್ ಕಾ ಪ್ರಯಾಸ್’ ನೊಂದಿಗೆ ಅದೇ ರೀತಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. 
    ‘ಸಬ್ ಕಾ ಪ್ರಯಾಸ್’ನ ಶಕ್ತಿಯನ್ನು ಕೋವಿಡ್-19 ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಕಂಡಿದ್ದೇವೆ. ಅಲ್ಲಿ ಹೊಸ ಆಸ್ಪತ್ರೆಗಳು, ಅಗತ್ಯ ಔಷಧಗಳು, 100 ಕೋಟಿ ಡೋಸ್ ಲಸಿಕೆ ನೀಡಿಕೆ ಇವುಗಳೆಲ್ಲಾ ಸಾಧ್ಯವಾಗಿದ್ದು, ಪ್ರತಿಯೊಬ್ಬ ಪ್ರಜೆಗಳ ಸಾಮೂಹಿಕ ಪ್ರಯತ್ನಗಳಿಂದಾಗಿ ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದರು.  
    ಸರ್ಕಾರದ ಎಲ್ಲ ಇಲಾಖೆಗಳ ಸಾಮೂಹಿಕ ಶಕ್ತಿ ಬಳಕೆ ಮಾಡಲು ಇತ್ತೀಚೆಗೆ ಆರಂಭಿಸಲಾದ ಪಿಎಂ ಗತಿಶಕ್ತಿ ರಾಷ್ಟ್ರೀಯ ಕ್ರಿಯಾಯೋಜನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಸರ್ಕಾರದ ಜತೆ ಜನರ ‘ಗತಿಶಕ್ತಿ’ಯೂ ಸದುಪಯೋಗ ಪಡಿಸಿಕೊಂಡರೆ ಯಾವುದೂ ಅಸಾಧ್ಯವಲ್ಲ ಎಂದು ಹೇಳಿದರು. ಆದ್ದರಿಂದ ನಮ್ಮ ಪ್ರತಿಯೊಂದು ಕ್ರಿಯೆಯು ವಿಶಾಲ ರಾಷ್ಟ್ರೀಯ ಗುರಿಗಳನ್ನು ಪರಿಗಣಿಸುವ ಮೂಲಕ ಗುರುತಿಸಲ್ಪಡಬೇಕು ಎಂದು ಅವರು ಹೇಳಿದರು. ಅವರು ವಿದ್ಯಾರ್ಥಿಗಳ ತಮ್ಮ ಅಧ್ಯಯನ ವಿಭಾಗಗಳನ್ನು ಆಯ್ದುಕೊಂಡು ಅದರಲ್ಲಿ ವಲಯ ನಿರ್ದಿಷ್ಟ ಆವಿಷ್ಕಾರಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಬೇಕು. ವಸ್ತುಗಳನ್ನು ಖರೀದಿಸುವಾಗ ಜನರು ಆತ್ಮನಿರ್ಭರ ಭಾರತದ ಗುರಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜತೆಗೆ ವೈಯಕ್ತಿಕ ಆದ್ಯತೆಗಳನ್ನು ಆಯ್ಕೆ ಮಾಡಬೇಕು ಎಂದು ಉದಾಹರಣೆ ನೀಡಿದರು. ಅಂತೆಯೇ ಉದ್ಯಮ ಮತ್ತು ರೈತರು, ಸಹಕಾರಿ ಸಂಸ್ಥೆಗಳು ತಮ್ಮ ಆಯ್ಕೆಗಳನ್ನು ಮಾಡುವಾಗ ದೇಶದ ಗುರಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. 
    ಪ್ರಧಾನಮಂತ್ರಿ ಅವರು, ಸ್ವಚ್ಛ ಭಾರತದ ಉದಾಹರಣೆಯನ್ನು ನೀಡಿದರು ಮತ್ತು ಸರ್ಕಾರ ಜನರ ಭಾಗಿದಾರಿಕೆಯನ್ನು ರಾಷ್ಟ್ರದ ಶಕ್ತಿಯನ್ನಾಗಿ  ಮಾಡಿದೆ ಎಂದು ಹೇಳಿದರು. ‘ಏಕ ಭಾರತ’ ದತ್ತ ಸಾಗಿದಾಗಲೆಲ್ಲಾ ನಾವೆಲ್ಲರೂ ಯಶಸ್ಸು ಪಡೆಯುತ್ತೇವೆ ಮತ್ತು ‘ಶ್ರೇಷ್ಠ ಭಾರತ’ ಕ್ಕೆ  ಕೊಡುಗೆ ನೀಡುತ್ತೇವೆ” ಎಂದು ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

***



(Release ID: 1768188) Visitor Counter : 249