ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ನ್ಯಾಯಬೆಲೆ ಅಂಗಡಿಗಳ ಆರ್ಥಿಕ ಕಾರ್ಯಸಾಧ್ಯತೆ ಹೆಚ್ಚಿಸಲು ತೆಗೆದುಕೊಳ್ಳಬೇಕಾದ ಸಕ್ರಿಯ ಕ್ರಮಗಳು: ಆಹಾರ ಇಲಾಖೆ ಕಾರ್ಯದರ್ಶಿ


ಎಫ್ ಪಿಎಸ್ ಗಳ ಮೂಲಕ ಸಣ್ಣ ಎಲ್ ಪಿಜಿ ಸಿಲಿಂಡರ್ ಗಳನ್ನು ಚಿಲ್ಲರೆ ರೂಪದಲ್ಲಿ ಮಾರಾಟ ಮಾಡುವ ಚಿಂತನೆ

Posted On: 27 OCT 2021 1:00PM by PIB Bengaluru

ನ್ಯಾಯಬೆಲೆ ಅಂಗಡಿಗಳ ಆರ್ಥಿಕ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ಕುರಿತು ವಿಡಿಯೋ ಕಾನ್ಫರೆನ್ಸಿಂಗ್ ನಲ್ಲಿ ಮಾತನಾಡಿದ ಆಹಾರ ಮತ್ತು ಸಾರ್ವಜನಿಕ ವಿತರಣಾ ಕಾರ್ಯದರ್ಶಿ ಶ್ರಿ ಸುಧಾನ್ಷು ಪಾಂಡೆ ಅವರು, ಅದಕ್ಕೆ ಸಕ್ರಿಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಬಲವಾಗಿ ಪ್ರತಿಪಾದಿಸಿದರು.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ( ಎಂಇಐಟಿವೈ), ಹಣಕಾಸು ಸೇವೆಗಳ ಇಲಾಖೆ(ಡಿಎಫ್ಎಸ್ ), ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (ಎಂಒಪಿಎನ್ ಜಿ) ಭಾರತೀಯ ತೈಲ ನಿಗಮ ನಿಯಮಿತ (ಐಒಸಿಎಲ್), ಭಾರತ್ ಪೆಟ್ರೋಲಿಯಂ ನಿಗಮ ನಿಯಮಿತ (ಬಿಪಿಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ ಲಿಮಿಟೆಡ್(ಎಚ್ ಪಿಸಿಎಲ್ ), ಸಿಎಸ್ ಸಿ ಆಡಳಿತ ಸೇವೆಗಳ ಇಂಡಿಯಾ ಲಿಮಿಟೆಡ್ ಮತ್ತು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು.

ಸಿಎಸ್ ಸಿಒ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಎಸ್ ಇಗಳು ಒದಗಿಸುತ್ತಿರುವ ನಾನಾ ಸೇವೆಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ನಂತರ, ಸಿಎಸ್ ಸಿ ಕೈಗೊಂಡಿರುವ ಉಪಕ್ರಮಗಳನ್ನು ಮುಂದುವರಿಸಲು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವ ವಿಧಾನವನ್ನು ಪ್ರಸ್ತುತಪಡಿಸಲಾಯಿತು. ಎಫ್ ಪಿಎಸ್ ಗಳ ಕಾರ್ಯಸಾಧ್ಯತೆಯನ್ನು ಹೆಚ್ಚಿಸಲು ಸಿಎಸ್ ಸಿ ಜೊತೆಗಿನ ಸಹಯೋಗವನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಶ್ಲಾಘಿಸಿದರು ಮತ್ತು ಸ್ಥಳೀಯ ಅಗತ್ಯತೆಗಳು ಮತ್ತು ಬೇಡಿಕೆಗಳ ಅನುಸಾರ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಸಿಎಸ್ ಸಿಯೊಂದಿಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.  

ಡಿಎಫ್ ಇಡಿ ಕಾರ್ಯದರ್ಶಿಗಳು, ಎಫ್ ಪಿಎಸ್ ಗಳ ಸದ್ಯದ ಸ್ಥಿತಿಗತಿ, ಅವುಗಳ ಸಾಮರ್ಥ್ಯ ವೃದ್ಧಿ, ಸಂಭಾವ್ಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತ್ಯೇಕ ಕಾರ್ಯಾಗಾರಗಳು ಮತ್ತು ವೆಬಿನಾರ್ ಗಳನ್ನು ನಡೆಸುವಂತೆ ಸಿಎಸ್ ಇಗಳಿಗೆ ಸಲಹೆ ನೀಡಲಾಯಿತು ಮತ್ತು ಉಪಕ್ರಮಗಳ ಜಾರಿಗೆ ಸಹಕಾರ ನೀಡುವಂತೆ ಸೂಚಿಸಲಾಯಿತು

ತೈಲ ಮಾರುಕಟ್ಟೆ ಕಂಪನಿಗಳ ಪ್ರತಿನಿಧಿಗಳು, ಎಫ್ ಪಿಎಸ್ ಗಳ ಮೂಲಕ ಸಣ್ಣ ಎಲ್ ಪಿಜಿ ಸಿಲಿಂಡರ್ ಗಳ ಚಿಲ್ಲರೆ ಮಾರಾಟದ ಪ್ರಸ್ತಾಪವನ್ನು ಶ್ಲಾಘಿಸಿದರು ಮತ್ತು ಆಸಕ್ತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಮನ್ವಯದೊಂದಿಗೆ ಅಗತ್ಯ ಬೆಂಬಲವನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಹಣಕಾಸು ಸೇವೆಗಳ ಇಲಾಖೆ ಪ್ರತಿನಿಧಿಗಳು, ಎಫ್ ಪಿಎಸ್ ಗಳ ಮೂಲಕ ಹಣಕಾಸು ಸೇವೆಗಳನ್ನು ಒದಗಿಸುವ ಪ್ರಸ್ತಾವವನ್ನು ಶ್ಲಾಘಿಸಿದರು, ಬಂಡವಾಳ ವೃದ್ಧಿಗಾಗಿ ಎಫ್ ಪಿಎಸ್ ಡೀಲರ್ ಗಳಿಗೆ ಮುದ್ರಾ ಸಾಲಗಳನ್ನು ವಿಸ್ತರಿಸುವುದು ಮತ್ತು ಆಸಕ್ತ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಮನ್ವಯದಲ್ಲಿ ಅಗತ್ಯ ಬೆಂಬಲ ಒದಗಿಸಲಾಗುವುದು ಎಂದು ತಿಳಿಸಿದರು.

ಡಿಎಫ್ ಪಿಡಿ ಕಾರ್ಯದರ್ಶಿ ತಮ್ಮ ಸಮಾರೋಪ ಭಾಷಣದಲ್ಲಿ, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಉಪಕ್ರಮಗಳನ್ನು ಕೈಗೊಳ್ಳಬಹುದು ಮತ್ತು ಅವರ ವೈಯಕ್ತಿಕ ಅಗತ್ಯತೆಗಳಿಗೆ ಅನುಗುಣವಾಗಿ ಅವುಗಳನ್ನು ಹೊಂದಿಸಿಕೊಳ್ಳಬಹುದು ಎಂದು ಹೇಳಿದರು. ಅಲ್ಲದೆ, ಡಿಎಫ್ ಇಡಿ ಕಾರ್ಯದರ್ಶಿ ಉಪಕ್ರಮಗಳಿಂದಾಗುವ ಪ್ರಯೋಜನಗಳ ಬಗ್ಗೆ ಎಫ್ ಪಿಎಸ್ ಡೀಲರ್ ಗಳಲ್ಲಿ ಜಾಗೃತಿ ಮೂಡಿಸಲು ನಿರಂತರವಾಗಿ ಜನಸಂಪರ್ಕ ಮತ್ತು ಜಾಗೃತಿ ಅಭಿಯಾನಗಳನ್ನು ಕೈಗೊಳ್ಳುವಂತೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದರು.

***



(Release ID: 1766889) Visitor Counter : 219