ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ತಾಜಾ ಮಾಹಿತಿ

Posted On: 21 OCT 2021 10:03AM by PIB Bengaluru

'ಒಂದು ಶತಕೋಟಿʼ ಲಸಿಕೆಗಳ ಮಹತ್ವದ ಮೈಲಿಗಲ್ಲನ್ನು ಸಾಧಿಸಿದ ಭಾರತ

ಕಳೆದ 24 ಗಂಟೆಗಳಲ್ಲಿ 18,454 ಹೊಸ ಪ್ರಕರಣಗಳು ದಾಖಲಾಗಿವೆ

ಚೇತರಿಕೆ ದರ ಪ್ರಸ್ತುತ 98.15% ರಷ್ಟಿದೆ; ಇದು ಮಾರ್ಚ್ 2020 ನಂತರ ಗರಿಷ್ಠ

ಕಳೆದ 24 ಗಂಟೆಗಳಲ್ಲಿ 17,561 ಚೇತರಿಕೆಗಳೊಂದಿಗೆ ಒಟ್ಟು ಚೇತರಿಕೆ ಪ್ರಮಾಣ 3,34,95,808ಕ್ಕೆ ಏರಿಕೆಯಾಗಿದೆ

ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1% ಕ್ಕಿಂತ ಕಡಿಮೆ ಇದ್ದು, ಪ್ರಸ್ತುತ 0.52% ರಷ್ಟಿದೆ; ಮಾರ್ಚ್ 2020 ಬಳಿಕ ಇದು ಅತ್ಯಂತ ಕನಿಷ್ಠವೆನಿಸಿದೆ

ಭಾರತದ ಸಕ್ರಿಯ ಪ್ರಕರಣಗಳ ಹೊರೆ 1,78,831 ರಷ್ಟಿದೆ

ಸಾಪ್ತಾಹಿಕ ಪಾಸಿಟಿವಿಟಿ ದರ (1.34%) ಕಳೆದ 118 ದಿನಗಳಿಂದ 3% ಕ್ಕಿಂತ ಕಡಿಮೆ ಇದೆ

ದೈನಂದಿನ ಪಾಸಿಟಿವಿಟಿ ದರ (1.48%) ಕಳೆದ 52 ದಿನಗಳಿಂದ 3% ಕ್ಕಿಂತ ಕಡಿಮೆ ಇದೆ

ಇದುವರೆಗೆ ಒಟ್ಟು 59.57 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

***(Release ID: 1765384) Visitor Counter : 231