ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

100 ಕೋಟಿ ಲಸಿಕೆ ಮೈಲುಗಲ್ಲು ಸಾಧನೆ ಹಿನ್ನೆಲೆಯಲ್ಲಿ ವೈದ್ಯರು ಮತ್ತು ದಾದಿಯರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ

प्रविष्टि तिथि: 21 OCT 2021 10:55AM by PIB Bengaluru

ಭಾರತವು 100 ಕೋಟಿ ಲಸಿಕೆ ಮೈಲುಗಲ್ಲು ಸಾಧಿಸಲು ಶ್ರಮಿಸಿದ ವೈದ್ಯರು, ದಾದಿಯರು ಮತ್ತು ಸಾಧನೆಯ ಹಿಂದಿರುವ ಎಲ್ಲರಿಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ,

"ಭಾರತವು ಹೊಸ ಚರಿತ್ರೆಯನ್ನು ಸೃಷ್ಟಿಸಿದೆ.

ಭಾರತೀಯ ವಿಜ್ಞಾನ, ಉದ್ಯಮ ಮತ್ತು 130 ಕೋಟಿ ಭಾರತೀಯರ ಸಾಮೂಹಿಕ ಸ್ಫೂರ್ತಿಯ ವಿಜಯಕ್ಕೆ ನಾವು ಸಾಕ್ಷಿಯಾಗಿದ್ದೇವೆ.

100 ಕೋಟಿ ಲಸಿಕೆ ಮೈಲುಗಲ್ಲು ದಾಟಿದ ಭಾರತಕ್ಕೆ ಅಭಿನಂದನೆಗಳು. ನಮ್ಮ ವೈದ್ಯರು, ದಾದಿಯರು ಮತ್ತು ಸಾಧನೆಮಾಡಲು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳು. #VaccineCentury" ಎಂದಿದ್ದಾರೆ.

***


(रिलीज़ आईडी: 1765372) आगंतुक पटल : 299
इस विज्ञप्ति को इन भाषाओं में पढ़ें: Marathi , Odia , Tamil , Bengali , English , Urdu , हिन्दी , Assamese , Manipuri , Punjabi , Gujarati , Telugu , Malayalam