ಕಲ್ಲಿದ್ದಲು ಸಚಿವಾಲಯ

ಮುಂದಿನ ವರ್ಷದಿಂದ ಪ್ರತಿ ವರ್ಷ 4 ದಶಲಕ್ಷ ಟನ್ ನಿಂದ 20 ದಶಲಕ್ಷ ಟನ್


ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಲು ಪ್ರಯತ್ನಿಸುತ್ತಿರುವ ಎನ್.ಎಲ್.ಸಿ. ಇಂಡಿಯಾ ನಿಯಮಿತ

Posted On: 13 OCT 2021 3:51PM by PIB Bengaluru

ನವರತ್ನ ಪಿ.ಎಸ್.ಯು ಆದ ಎನ್.ಎಲ್.ಸಿ. ಇಂಡಿಯಾ ನಿಯಮಿತದ ಒಡಿಶಾದ 20 ಎಂ.ಟಿ.ಪಿ.. ತಲಬಿರಾ II ಮತ್ತು III ಓಪನ್ ಕ್ಯಾಸ್ಟ್ ಗಣಿ  ತನ್ನ ಮೊದಲ ಪೂರ್ಣ ವರ್ಷದ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ 2 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆಯನ್ನು ದಾಟಿದೆ.

ಎನ್.ಎಲ್.ಸಿ..ಎಲ್. ಪ್ರಸಕ್ತ ಸಾಲಿಗೆ ನಿಗದಿಯಾಗಿರುವ 4 ಮೆ.ಟನ್ ಉತ್ಪಾದನೆಯಿಂದ ವಾರ್ಷಿಕ 6 ಮೆ.ಟನ್ ಗುರಿ ಸಾಧನೆಗೆ ಕ್ರಮಗಳನ್ನು ಕೈಗೊಂಡಿದೆಕಲ್ಲಿದ್ದಲಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಪರಿಗಣಿಸಿ, ಎನ್.ಎಲ್.ಸಿ..ಎಲ್. ತಲಬರಿಯಾ ಗಣಿಯಲ್ಲಿ ಪ್ರಸಕ್ತ ಸಾಲಿನಲ್ಲೇ 10 ಮೆ.ಟನ್ ವರೆಗೆ ಮತ್ತು ಮುಂದಿನ ವರ್ಷದಿಂದ 20 ಮೆ.ಟನ್ ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಲು ಸರ್ವ ಪ್ರಯತ್ನ ಮಾಡುತ್ತಿದೆ.

ಉತ್ಪಾದಿಸಿದ ಕಲ್ಲಿದ್ದಲನ್ನು ತನ್ನ ಅಂತಿಮ ಬಳಕೆಯ ಘಟಕಗಳಲ್ಲಿ ಒಂದಾದ ಎನ್‌.ಎಲ್‌.ಸಿ..ಎಲ್‌. ಅಂಗಸಂಸ್ಥೆಯಾದ ತೂತುಕುಡಿಯಲ್ಲಿನ ಎನ್‌.ಎಲ್‌.ಸಿ. ತಮಿಳುನಾಡು ವಿದ್ಯುತ್ ನಿಯಮಿತದ 2 x 500 ಮೆಗಾವ್ಯಾಟ್ ಘಟಕಕ್ಕೆ ಸಾಗಿಸಲಾಗುತ್ತಿದೆ. ಇಡೀ ಉತ್ಪಾದಿತ ವಿದ್ಯುತ್ ದಕ್ಷಿಣದ ರಾಜ್ಯಗಳ ವಿದ್ಯುತ್ ಅಗತ್ಯವನ್ನು ಪೂರೈಸುತ್ತದೆ, ತಮಿಳುನಾಡಿಗೆ(ಶೇ.40ಕ್ಕಿಂತ ಹೆಚ್ಚು) ಸಿಂಹ ಪಾಲು ದೊರೆಯಲಿದೆ.

ಕಲ್ಲಿದ್ದಲು ಸಚಿವಾಲಯದ ಖನಿಜ ರಿಯಾಯಿತಿ ನಿಯಮಗಳ ಕುರಿತ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆಗೆ ಮಾಡಲಾದ ಇತ್ತೀಚಿನ ತಿದ್ದುಪಡಿ, ಅಂತಿಮ ಬಳಕೆಯ ಸ್ಥಾವರದ ಕಲ್ಲಿದ್ದಲು ಅಗತ್ಯವನ್ನು ಪೂರೈಸಿದ ನಂತರ ಗಣಿಯ ಹೆಚ್ಚುವರಿ ಕಲ್ಲಿದ್ದಲು ಮಾರಾಟಕ್ಕೆ ಅನುವು ಮಾಡಿಕೊಟ್ಟಿದೆ. ಅದರಂತೆ, ಹೆಚ್ಚುವರಿ ಕಲ್ಲಿದ್ದಲನ್ನು ಮಾರಾಟ ಮಾಡಲು ಕಲ್ಲಿದ್ದಲು ಸಚಿವಾಲಯದಿಂದ ಅನುಮತಿ ಕೋರಲಾಗಿದೆ.

***



(Release ID: 1763640) Visitor Counter : 221