ಕಲ್ಲಿದ್ದಲು ಸಚಿವಾಲಯ
ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಗೆ 2 ದಶಲಕ್ಷ ಟನ್ ಗೂ ಅಧಿಕ ಕಲ್ಲಿದ್ದಲು ಪೂರೈಕೆಯ ದಾಖಲು – ಕೇಂದ್ರ ಸಚಿವ ಶ್ರೀ ಪ್ರಹ್ಲಾದ ಜೋಶಿ
ಕಲ್ಲಿದ್ದಲು ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನ
प्रविष्टि तिथि:
13 OCT 2021 3:52PM by PIB Bengaluru
ಎಲ್ಲ ಮೂಲಗಳಿಂದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ಹೆಚ್ಚಳವಾಗಿರುವ ಬಗ್ಗೆ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಶ್ರೀ ಪ್ರಹ್ಲಾದ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ನಲ್ಲಿ ಸಚಿವರು, ಭಾರತೀಯ ಕಲ್ಲಿದ್ದಲು ನಿಯಮಿತ ಸೇರಿದಂತೆ ಒಟ್ಟಾರೆ ಕಲ್ಲಿದ್ದಲು ಪೂರೈಕೆ ನಿನ್ನೆ 2 ದಶಲಕ್ಷ ಟನ್ ಮೀರಿ ದಾಖಲಾಗಿದೆ ಎಂದು ತಿಳಿಸಿದ್ದಾರೆ. ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನಿನ ಖಾತ್ರಿಗಾಗಿ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದೂ ಶ್ರೀ ಜೋಶಿ ತಿಳಿಸಿದ್ದಾರೆ.
***
(रिलीज़ आईडी: 1763635)
आगंतुक पटल : 301