ಪ್ರಧಾನ ಮಂತ್ರಿಯವರ ಕಛೇರಿ
ನಟ ನೇಡುಮುಡಿ ವೇಣು ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
Posted On:
11 OCT 2021 10:59PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಟ ಶ್ರೀ ನೇಡುಮುಡಿ ವೇಣು ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ “ ಶ್ರೀ ನೇಡುಮುಡಿ ವೇಣು ಅವರು ಬಹುಮುಖ ಪ್ರತಿಭೆಯ ನಟರಾಗಿದ್ದರು, ಅವರು ಅನೇಕ ಪ್ರಾಕಾರಗಳಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ಅವರು ಖ್ಯಾತ ಬರಹಗಾರರಾಗಿದ್ದರು ಮತ್ತು ರಂಗಭೂಮಿಯ ಬಗ್ಗೆ ಅತ್ಯುತ್ಸಾಹ ಹೊಂದಿದ್ದರು.ಅವರ ನಿಧನದಿಂದ ಚಲನಚಿತ್ರ ಮತ್ತು ಸಾಂಸ್ಕೃತಿಕ ಜಗತ್ತಿಗೆ ಅಪಾರ ನಷ್ಟವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ” ಎಂದು ಹೇಳಿದ್ದಾರೆ.
***
(Release ID: 1763251)
Visitor Counter : 190