ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ನಾಸ್ಕಾಂನ 'ವಿನ್ಯಾಸ ಮತ್ತು ಎಂಜಿನಿಯರಿಂಗ್ ಶೃಂಗಸಭೆಯ' 13 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2015 ರಲ್ಲಿ ಡಿಜಿಟಲ್ ಇಂಡಿಯಾವನ್ನು ಚಾಲನೆ ಮಾಡಿದಂದಿನಿಂದ, ಭಾರತವು ಜಾಗತಿಕ ಹೊಸತನಶೋಧದ ಸೂಚಿಯನ್ನು ಹೆಚ್ಚಿಸುತ್ತಿದೆ

50 ಅತ್ಯಂತ ನವೀನ ಜಾಗತಿಕ ಕಂಪನಿಗಳಲ್ಲಿ ಶೇ.70 ಕ್ಕಿಂತ ಹೆಚ್ಚು ಕಂಪನಿಗಳು ಭಾರತದಲ್ಲಿ ಆರ್&ಡಿ ಕೇಂದ್ರವನ್ನು ಹೊಂದಿವೆ: ವಿದ್ಯುನ್ಮಾನ ಮತ್ತು  ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್

ಉತ್ಪಾದನೆ, ಎಂಜಿನಿಯರಿಂಗ್, ಡಿಜಿಟಲೀಕರಣದಲ್ಲಿ ಹೆಚ್ಚುತ್ತಿರುವ ಅವಕಾಶಗಳು ಭಾರತದ ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆಯ ಗುರಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ: ವಿದ್ಯುನ್ಮಾನ ಮತ್ತು  ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ  ಶ್ರೀ ರಾಜೀವ್ ಚಂದ್ರಶೇಖರ್

Posted On: 06 OCT 2021 6:41PM by PIB Bengaluru

ವಿದ್ಯುನ್ಮಾನ   ಮತ್ತು ಮಾಹಿತಿ ತಂತ್ರಜ್ಞಾನ ಐಟಿ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್ ಅವರು ಇಂದು ನಾಸ್ಕಾಮ್ ಆಯೋಜಿಸಿದ 13ನೇ ಆವೃತ್ತಿಯ 'ವಿನ್ಯಾಸ ಮತ್ತು ಎಂಜಿನಿಯರಿಂಗ್ ಶೃಂಗಸಭೆಯಲ್ಲಿ' ಭಾಗವಹಿಸಿದರು. ಅಕ್ಟೋಬರ್ 6,7, 2021ಕ್ಕೆ ಆಯೋಜಿಸಲಾಗಿರುವ ಶೃಂಗಸಭೆಯು ಜಾಗತಿಕ ಎಂಜಿನಿಯರಿಂಗ್ ಮತ್ತು ವಿನ್ಯಾಸದ ಪ್ರಯತ್ನವನ್ನು ಈ 4 ಉದ್ದೇಶಗಳ ಮೇಲೆ ವಿಶೇಷ ಗಮನ ಕೇಂದ್ರೀಕರಿಸುತ್ತಿದೆ- ಮೌಲ್ಯವನ್ನು ಸೃಷ್ಟಿಸಲು ಸಂಶೋಧನೆ ಮತ್ತು ಹೊಸತನದ ಶೋಧ , ಪ್ರಮಾಣ ಮತ್ತು ಬೆಳವಣಿಗೆಗೆ ಸಹ ಸೃಷ್ಟಿ, ಗ್ರಾಹಕರ ಯಶಸ್ಸಿಗೆ ಡಿಜಿಟಲೀಕರಣ ಮತ್ತು ವೇಗದ ಉತ್ಪನ್ನ ವೃತ್ತ, ಕೆಲಸದ ಚೌಕಟ್ಟಿನ ಭವಿಷ್ಯವನ್ನು ವ್ಯಾಖ್ಯಾನಿಸುವುದು ಮತ್ತು ವ್ಯಾಪಾರವನ್ನು ಸುಸ್ಥಿರತೆಯ ಗುರಿಗಳಿಗೆ ಜೋಡಿಸುವುದು.

ತಮ್ಮ ಭಾಷಣದ ಆರಂಭದಲ್ಲಿ ಶ್ರೀ ಚಂದ್ರಶೇಖರ್ ರವರು  ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ (ಇಆರ್ & ಡಿ) ವಲಯವು 31 ಶತಕೋಟಿ ಡಾಲರುಗಳಿಗಿಂತ ಹೆಚ್ಚು ಆದಾಯವನ್ನು ಗಳಿಸುತ್ತದೆ ಮತ್ತು 1000 ಕ್ಕೂ ಹೆಚ್ಚು ಜಾಗತಿಕ ಕಂಪನಿಗಳಿಗೆ ನೆಲೆಯಾಗಿದೆ ಮತ್ತು ಅವುಗಳು ವಿವಿಧ ಕ್ಷೇತ್ರಗಳಲ್ಲಿ ಉತ್ಪನ್ನಗಳ ಆರ್ & ಡಿಗಾಗಿ ಕೇಂದ್ರಗಳನ್ನು ಸ್ಥಾಪಿಸಿವೆ. ಇದರ ಜೊತೆಗೆ, ಮೊದಲ 50 ಎಂಜಿನಿಯರಿಂಗ್ ಸೇವಾ ಪೂರೈಕೆದಾರರಲ್ಲಿ 12 ಮಂದಿ ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದಾರೆ ಮತ್ತು 44 ಉನ್ನತ 50 ಸೇವಾ ಪೂರೈಕೆದಾರರು ಭಾರತದಲ್ಲಿ ಇಆರ್ & ಡಿ ಕೇಂದ್ರ ಗಳನ್ನು ಹೊಂದಿದ್ದಾರೆ. 50 ಅತ್ಯಂತ ನವೀನ ಜಾಗತಿಕ ಕಂಪನಿಗಳಲ್ಲಿ 70% ಕ್ಕಿಂತ ಹೆಚ್ಚು ಕಂಪನಿಗಳು ಭಾರತದಲ್ಲಿ ಆರ್ & ಡಿ ಕೇಂದ್ರವನ್ನು ಹೊಂದಿವೆ. ಬಹುತೇಕ ನಾವು ಉಪಯೋಗಿಸುವ ಪ್ರತಿಯೊಂದು ಉತ್ಪನ್ನದಲ್ಲೂ `ಇಂಡಿಯಾ ಇನ್ಸೈಡ್ -  ಭಾರತವು ನಮ್ಮೊಳಗೆ' ಇರುವಂತಿದೆ ಎಂದು ಹೇಳಿದರು.

“ಉತ್ತಮವಾದದ್ದು ಇನ್ನೂ ಬರಬೇಕಿದೆ ಮತ್ತು ಮುಂದಿನ 5 ವರ್ಷಗಳಲ್ಲಿ ಒಂದು ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆಯನ್ನು ತಲುಪುವ ನಮ್ಮ ಮಹತ್ವಾಕಾಂಕ್ಷೆಯಲ್ಲಿ ಉತ್ಪಾದನೆ, ಎಂಜಿನಿಯರಿಂಗ್ ಮತ್ತು ಡಿಜಿಟಲೀಕರಣವು ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಅವರು ಹೇಳಿದರು.

ಸಾಂಕ್ರಾಮಿಕವು ಆವಿಷ್ಕಾರಕ್ಕಾಗಿ ಬದಲಾಯಿಸಲಾಗದ ಬದಲಾವಣೆಯನ್ನು ಸೃಷ್ಟಿಸಿದೆ ಮತ್ತು ಸಂಪರ್ಕರಹಿತ  ವ್ಯವಸ್ಥೆಗಳು, ಬುದ್ಧಿವಂತಿಕೆ ಮತ್ತು ವಿಶ್ಲೇಷಣೆಗಳು ಮತ್ತು ಸಾಫ್ಟ್‌ವೇರ್ ವ್ಯವಸ್ಥೆಗಳ ಮೂಲಕ ಉತ್ಪನ್ನಗಳನ್ನು ಹೇಗೆ   ವಿನ್ಯಾಸಗೊಳಿಸುವುದು, ಉಪಯೋಗಿಸುವುದು ಮತ್ತು ಸೇವೆ ಮಾಡುವುದು ಎನ್ನುವಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಈ ಎಲ್ಲಾ ತಂತ್ರಜ್ಞಾನ ಬದಲಾವಣೆಗಳು, ಎಂಬೆಡೆಡ್ ಸಿಸ್ಟಮ್ಸ್, ಡಿಜಿಟಲ್ ಇನ್ನೊವೇಶನ್ ಮತ್ತು ಸೈಬರ್ ಭದ್ರತೆಗೆ ಸಾಮರ್ಥ್ಯ ಬದಲಾವಣೆಗೆ ಕರೆ ನೀಡುತ್ತವೆ.

ಈ ಕಾರ್ಯಕ್ರಮವು ` ಇಂಜಿನಿಯರಿಂಗ್ ದಿ ನೆಕ್ಸ್ಟ್'ಎಂಬ ಆಸಕ್ತಿದಾಯಕ ವಿಷಯವನ್ನು ಹೊಂದಿದೆ ಎಂದು ಶ್ರೀ ಚಂದ್ರಶೇಖರ್ ಗಮನಿಸಿದರು ಮತ್ತು ಭಾರತವು ಈ ಸ್ಪಷ್ಟವಾದ ಕರೆಯನ್ನು ಮುನ್ನಡೆಸಬೇಕು - ಪ್ರಪಂಚಕ್ಕೆ ಮತ್ತು ಭಾರತಕ್ಕೆ ನವೀನ ಪರಿಹಾರಗಳನ್ನು ನಿರ್ಮಿಸಬೇಕು; ಮುಂದಿನ ಶತಕೋಟಿಗಾಗಿ ನಿರ್ಮಿಸಬೇಕು, ನಮ್ಮ ಎಸ್‌ಡಿಜಿ ಗುರಿಗಳನ್ನು ಪೂರೈಸಲು ಮತ್ತು ಮುಂದಿನ ಸಾಂಕ್ರಾಮಿಕ ರೋಗವನ್ನು ತಡೆಯುವ ಪರಿಹಾರಗಳನ್ನು ನಿರ್ಮಿಸಲು ನಮಗೆ ಸಹಾಯ ಮಾಡುವ ಪರಿಹಾರಗಳನ್ನು ನಿರ್ಮಿಸಬೇಕು. "ನಾನು ಒಬ್ಬ ಎಂಜಿನಿಯರ್ ಆಗಿ, ನಿರ್ಮಿಸುವ ಕಾರ್ಯವು ಸಂತೋಷದ  ಸಂಗತಿಯಾಗಿದೆ ಮತ್ತು ನಮ್ಮ ದೇಶದ ಅಭಿವೃದ್ಧಿ ಮತ್ತು ಹೊಸತನದ ಶೋಧದೊಂದಿಗೆ ಇದು ಕೂಡಿದಾಗ, ಅದು ಮತ್ತಷ್ಟು ಶ್ಲಾಘನೀಯವಾಗುತ್ತದೆ."

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2015 ರಲ್ಲಿ ಡಿಜಿಟಲ್ ಇಂಡಿಯಾವನ್ನು ಪ್ರಾರಂಭಿಸಿದಾಗಿನಿಂದ, ಭಾರತವು ಜಾಗತಿಕ ಹೊಸತನಶೋಧದ ಸೂಚ್ಯಂಕವನ್ನು ಮುಂದುವರಿಸುತ್ತಿದೆ ಮತ್ತು ಪ್ರಸ್ತುತ 46 ನೇ ಸ್ಥಾನದಲ್ಲಿದೆ, 2016 ರಲ್ಲಿ 66 ನೇ ಸ್ಥಾನದಿಂದ 20 ಪಾಯಿಂಟ್ ಸುಧಾರಣೆಯಾಗಿದೆ. ಭಾರತದಲ್ಲಿ ಮತ್ತು ಹೊಸ ಉತ್ಸಾಹವಿದೆ ನಮ್ಮ ನವೋದ್ಯಮದ ಉದ್ಯಮಿಗಳ ನಾವೂ ಮಾಡಬಹುದು ಎನ್ನುವ  ಚೈತನ್ಯದಿಂದಾಗಿ 2021 ವರ್ಷವು 27 ನವೋದ್ಯಮಗಳನ್ನು ಮತ್ತು 20 ಬಿಲಿಯನ್‌ ಡಾಲರಿಗಿಂತ ಹೆಚ್ಚಿನ ಹಣವನ್ನು ಕಂಡಿದೆ. ಭಾರತದಲ್ಲಿ ಹೆಚ್ಚುತ್ತಿರುವ ನವೋದ್ಯಮಗಳ ಐಪಿಒಗಳ ಆಹ್ವಾನಗಳು   ಸ್ಪಷ್ಟವಾಗಿ ಇದನ್ನು ನವೋದ್ಯಮಗಳ - ಸ್ಟಾರ್ಟ್ ಅಪ್ ಗಳ ವರ್ಷವಾಗಿಸುತ್ತದೆ.

ಭಾರತದ ಮಹತ್ವಾಕಾಂಕ್ಷೆಯು ಪ್ರಧಾನಮಂತ್ರಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಬೆಳೆಯುತ್ತಿದೆ ಮತ್ತು ವಿಸ್ತರಿಸುತ್ತಲೇ ಇದೆ ಮತ್ತು ಇದು ಕೇವಲ ನವೋದ್ಯಮಗಳಲ್ಲ, ಸರ್ಕಾರದ ಉತ್ಪಾದನೆ ಆಧಾರಿತ ಪ್ರೋತ್ಸಾಹ (ಪಿಎಲ್ಐ)  ಯೋಜನೆಯು ಅದ್ಭುತವಾದ ಪ್ರತಿಕ್ರಿಯೆಯನ್ನು ಕಂಡಿದೆ. ಎಲೆಕ್ಟ್ರಾನಿಕ್ಸ್ ಹಾರ್ಡ್‌ವೇರ್‌ಗಾಗಿ ಅನುಮೋದಿಸಲಾದ ಪ್ರಸ್ತಾವನೆಗಳು ಮುಂದಿನ 4 ವರ್ಷಗಳಲ್ಲಿ 22 ಬಿಲಿಯನ್ ಡಾಲರ್ ಮೌಲ್ಯದ ಉತ್ಪಾದನೆಯನ್ನು ಉತ್ಪಾದಿಸಬೇಕು. ಪಿಎಲ್‌ಐ ಯೋಜನೆಯನ್ನು ಜವಳಿ, ಆಟೋ ಇತ್ಯಾದಿ ಕ್ಷೇತ್ರಗಳಲ್ಲಿ ವಿಸ್ತರಿಸಲಾಗಿದೆ ಮತ್ತು ‘ಮೇಕ್ ಇನ್ ಇಂಡಿಯಾ’  ಜಾಗತಿಕ ಮತ್ತು ಭಾರತೀಯ ಕಂಪನಿಗಳನ್ನು ದೇಶದಲ್ಲಿ ಉತ್ಪಾದಿಸಲು ಆಕರ್ಷಿಸುತ್ತಿದೆ. ನಾನು ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ (ಇಆರ್ & ಡಿ) ವಲಯದ ಬಗ್ಗೆ ಯೋಚಿಸುವಾಗ ಇದು ಬಹಳ ಮುಖ್ಯವಾಗಿದೆ. ಭಾರತವು ದೇಶದಲ್ಲಿ ವಿನ್ಯಾಸ, ಎಂಜಿನಿಯರ್ ಮತ್ತು ಉತ್ಪಾದನೆಯೊಂದಿಗೆ ಸಂಯೋಜಿತ ಪಾಲುದಾರನಾಗಬಹುದು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ ಶ್ರೀ ಚಂದ್ರಶೇಖರ್ ಅವರು "ತಂತ್ರಜ್ಞಾನ ಮತ್ತು ಕೌಶಲ್ಯದ ನಡುವಿನ ನಿಕಟ ಸಂಪರ್ಕವನ್ನು ಪರಿಗಣಿಸಿ, ಕೌಶಲ್ಯ ಅಭಿವೃದ್ಧಿ ಸಚಿವನಾಗಿ ನನ್ನ ಇನ್ನೊಂದು ಪಾತ್ರದಲ್ಲಿ, ಭಾರತವು ಜಾಗತಿಕ ಡಿಜಿಟಲ್ ಟ್ಯಾಲೆಂಟ್ ಹಬ್ ಆಗುವುದನ್ನು ಖಚಿತಪಡಿಸಿಕೊಳ್ಳಲು ಡಿಜಿಟಲ್ ತಂತ್ರಜ್ಞಾನಗಳು ಮತ್ತು ವ್ಯವಹಾರ ಕೌಶಲ್ಯಗಳಂತಹ   ಉದ್ಯೋಗ ಕೌಶಲ್ಯಗಳ ಅಭಿವೃದ್ಧಿಯನ್ನು ವೇಗಗೊಳಿಸಲು ನಾನು ಉದ್ಯಮದೊಂದಿಗೆ ಕೆಲಸ ಮಾಡುತ್ತಿದ್ದೇನೆ” ಎಂದು ಹೇಳಿದರು.

ಪ್ರಸ್ತುತ, ಭಾರತವು ಇಆರ್ & ಡಿ ಹೊರಗುತ್ತಿಗೆ ಮಾರುಕಟ್ಟೆಯ 32% ಭಾಗವನ್ನು ಹೊಂದಿದೆ ಮತ್ತು ನಮ್ಮೊಂದಿಗೆ ಎಲ್ಲಾ ಅನುಕೂಲಗಳು ಮತ್ತು  ಸರ್ಕಾರದ ವೇಗವರ್ಧಕ ಪಾತ್ರದಿಂದಾಗಿ,   ಇಆರ್ & ಡಿ ಸಮುದಾಯದಲ್ಲಿರುವ ನೀವೆಲ್ಲರೂ ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಮಾರುಕಟ್ಟೆಯ ಶೇ.50% ಭಾಗ ಹೆಚ್ಚಾಗುವುದನ್ನು ಗುರಿಯಾಗಿಸಬೇಕೆಂದು ನಾನು ಬಯಸುತ್ತೇನೆ. ನೀವು ಯಶಸ್ವಿಯಾಗಲು ಸರ್ಕಾರದಿಂದ ನಾವು ಏನು ಬೇಕಾದರೂ ಮಾಡುತ್ತೇವೆ. "ಮಾಡಬಹುದಾದ" ಮನೋಭಾವದಿಂದ ಮುಂದುವರಿಯಿರಿ ಮತ್ತು ಹಾಗೆಯೇ ಪ್ರತಿ ವರ್ಷ ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ (ಇಆರ್ & ಡಿ) ಯ ಯಶಸ್ಸನ್ನು ಆಚರಿಸೋಣ.

***



(Release ID: 1761581) Visitor Counter : 197