ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
azadi ka amrit mahotsav

ಆಜಾ಼ದಿ ಕಾ ಅಮೃತ ಮಹೋತ್ಸವದ ಅಂಗವಾಗಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಆಯೋಜಿಸಿರುವ ಸ್ಮಾರಕ ಸಪ್ತಾಹ ಆಚರಣೆಯನ್ನು ಉದ್ಘಾಟಿಸಿದ ಶ್ರೀ ಮನ್ಸುಖ್ ಮಾಂಡವಿಯ


ಭಾರತವನ್ನು ಜಗತ್ತಿನ ಔಷಧಾಲಯವೆಂದು ಕರೆಯುವುದು ಸರಿಯಾಗಿದೆ: ಇದು ಅತಿ ದೊಡ್ಡ  ಜನರಿಕ್ ಔಷಧಗಳ ಉತ್ಪಾದಕ ರಾಷ್ಟ್ರ

“ಎನ್ ಐಪಿಇಆರ್ ಗಳು ಕೈಗಾರಿಕೆಗಳ ಜೊತೆಗಿನ ಸಹಭಾಗಿತ್ವದ ಮೂಲಕ ಎಂಎಸ್ ಎಂಇ ಗಳಿಗೆ ನವೀನ ಪರಿಹಾರಗಳನ್ನು ಒದಗಿಸುತ್ತಿವೆ”

ಫಾರ್ಮಾ ವಲಯದಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಮುಂದಿನ 25 ವರ್ಷಗಳ ನೀಲ ನಕ್ಷೆ ಸಿದ್ಧಪಡಿಸುವ ಅಗತ್ಯವಿದೆ”

Posted On: 04 OCT 2021 3:24PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಮನ್ಸುಖ್ ಮಾಂಡವಿಯ ಅವರು ಇಂದು ಜಾ಼ದಿ ಕಾ ಅಮೃತ ಮಹೋತ್ಸವದ ಅಂಗವಾಗಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಆಯೋಜಿಸಿರುವ ಸ್ಮಾರಕ ಸಪ್ತಾಹವನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು. ಪಂಜಾಬ್ ಎಸ್ಎಎಸ್ ನಗರದ ರಾಷ್ಟ್ರೀಯ ಫಾರ್ಮಸುಟಿಕಲ್ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ(ಎನ್ಐಪಿಇಆರ್) ಸ್ಮಾರಕ ಸಪ್ತಾಹ ಆಚರಣೆ ಅಂಗವಾಗಿ ಉಪನ್ಯಾಸ ಸರಣಿ, ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಐಕಾನಿಕ್ ಸಪ್ತಾಹ ಉದ್ಘಾಟಿಸಿದ ಶ್ರೀ ಮಾಂಡವಿಯ,ಭಾರತವನ್ನು ಜಗತ್ತಿನ ಔಷಧಾಲಯ ಎಂದು ಕರೆಯುವುದು ಸರಿಯಾಗಿದೆ. ಭಾರತ ಜನರಿಕ್ ಔಷಧಿಗಳ ಉತ್ಪಾದನೆಯಲ್ಲಿ ತೊಡಗಿರುವ ಅತಿ ದೊಡ್ಡ ರಾಷ್ಟ್ರವಾಗಿದೆ. ಅಲ್ಲದೆ, ಭಾರತ ಜನರಿಕ್ ಔಷಧಗಳನ್ನು ವಿಶ್ವದ ಹಲವು ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ ಎಂದರು. ಭಾರತದಲ್ಲಿ ಫಾರ್ಮಾ ಉದ್ಯಮಗಳ ಅಭಿವೃದ್ಧಿಯಲ್ಲಿ ಎನ್ ಐಪಿಇಆರ್ ಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಅವರು ಹೇಳಿದರು. ಅವರ ಪಠ್ಯಕ್ರಮ ಮತ್ತು ಸಂಶೋಧನೆಯು ಕೈಗಾರಿಕೆಗಳ ಅಗತ್ಯಕ್ಕೆ ಹೊಂದಿಕೆಯಾಗಬೇಕು ಮತ್ತು ಅವರು ಎಂಎಸ್ ಎಂಇ ಗಳಿಗೆ ನವೀನ ಪರಿಹಾರಗಳನ್ನು ಒದಗಿಸಬೇಕು ಎಂದು ಅವರು ಹೇಳಿದರು. ಎನ್ ಐಪಿಇಆರ್ ಗಳು ದೇಶದಲ್ಲಿ ಆರಂಭವಾಗುತ್ತಿರುವ ವೈದ್ಯಕೀಯ ಸಾಧನಗಳ ಪಾರ್ಕ್ ಗಳೊಂದಿಗೆ ಸಹಭಾಗಿತ್ವ ಸಾಧಿಸಬೇಕು ಎಂದು ಅವರು ತಿಳಿಸಿದರು

75ನೇ ಸ್ವಾತಂತ್ರೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಫಾರ್ಮಸುಟಿಕಲ್ಸ್ ಇಲಾಖೆ ಮತ್ತು ಎನ್ಐಪಿಇಆರ್ ಗಳು ಮುಂದಿನ 25 ವರ್ಷಗಳ ನೀಲನಕ್ಷೆ ಬಗ್ಗೆ ಯೋಚಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು. ಇಂದು ನಾವು ಸಕ್ರಿಯ ಔಷಧೀಯ ಪದಾರ್ಥ (ಆಕ್ಟಿವ್ ಫಾರ್ಮಸುಟಿಕಲ್ಸ್ ಇಂಗ್ರಿಡಿಯೆಂಟ್ಸ್ -ಎಪಿಐ ) ಗಳಿಗೆ ಆಮದನ್ನು ಅವಲಂಬಿಸಿದ್ದೇವೆ. ಭಾರತದಲ್ಲಿ ಕೆಲವೇ ಕೆಲವು ಔಷಧಗಳಿಗೆ ಪೇಟೆಂಟ್ ಇದೆ. ಇದು ಮುಂದಿನ 25 ವರ್ಷಗಳಲ್ಲಿ ಬದಲಾಗಬೇಕು. ವಲಯದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಅವರು ಹೇಳಿದರು.

ಕೋವಿಡ್-19ಗೆ ದಾಖಲೆಯ ಸಮಯದಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತದಲ್ಲಿ ಬುದ್ಧಿಶಕ್ತಿ ಮತ್ತು ಮಾನವ ಸಂಪನ್ಮೂಲಕ್ಕೆ ಕೊರತೆ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದೇವೆ. ಗೌರವಾನ್ವಿತ ಪ್ರಧಾನಮಂತ್ರಿ ಅವರು ತಮ್ಮ ವಿಜ್ಞಾನಿಗಳು ಮತ್ತು ಸಂಶೋಧಕರ ಸಾಮರ್ಥ್ಯದ ವೇಲೆ ವಿಶ್ವಾಸವಿರಿಸಿ ಪಿಎಂ ಗರೀಬ್ ಕಲ್ಯಾಣ ಪ್ಯಾಕೇಜ್ ನಡಿ ಲಸಿಕೆ ಸಂಶೋಧನೆಗೆ 9000 ಕೋಟಿ ರೂ. ಅನ್ನು ಹಂಚಿಕೆ ಮಾಡಿದ್ದರು ಎಂದು ಅವರು ಹೇಳಿದರು. ಭಾರತದ ಪ್ರಮುಖ ವೈದ್ಯಕೀಯ ಸಂಶೋಧನಾ ಸಂಸ್ಥೆ-ಐಸಿಎಂಆರ್ ಕೋವ್ಯಾಕ್ಸಿನ್ ಅಭಿವೃದ್ಧಿಯಲ್ಲಿ ಸಹಭಾಗಿತ್ವ ಹೊಂದಿದೆ. ಅದೇ ರೀತಿಯಲ್ಲಿ ನಮ್ಮ ಸಂಶೋಧಕರು ಮತ್ತು ಶೈಕ್ಷಣಿಕ ಸಂಸ್ಥೆಗಳು ಕೈಗಾರಿಕೆಗ ಜೊತೆ ಪಾಲುದಾರಿಕೆ ಹೊಂದಬೇಕು ಎಂದು ಅವರು ಹೇಳಿದರು.

ಫಾರ್ಮಸುಟಿಕಲ್ಸ್ ಇಲಾಖೆಯ ಕಾರ್ಯದರ್ಶಿ ಹಾಗೂ  ಎನ್ಐಪಿಇಆರ್ ಗಳ ಅಪೆಕ್ಸ್ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಎಸ್. ಅಪರ್ಣ, ಎನ್ಐಪಿಇಆರ್ ಎಸ್ಎಎಸ್ ನಗರದ ನಿರ್ದೇಶಕ ಪ್ರೊ. ದುಲಾಲ್ ಪಾಂಡ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ  ಸಚಿವಾಲಯದ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ವೆಬ್ ಕಾಸ್ಟ್ ಮಾಡಲಾಯಿತು, ಅದರ ಲಿಂಕ್  https://www.youtube.com/watch?v=OKzn4daXoXM

***


(Release ID: 1760834) Visitor Counter : 312