ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದುಬೈನ ಎಕ್ಸ್‌ ಪೋ 2020ರ ಭಾರತ ಪೆವಿಲಿಯನ್‌ ನಲ್ಲಿ ಪ್ರಧಾನಮಂತ್ರಿಯವರ ಸಂದೇಶ


"ಎಕ್ಸ್‌ ಪೋ ಯುಎಇ ಮತ್ತು ದುಬೈನೊಂದಿಗೆ ನಮ್ಮ ಆಳವಾದ ಮತ್ತು ಐತಿಹಾಸಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವಲ್ಲಿ ಬಹು ದೂರ ಸಾಗುತ್ತದೆ"

"ಈ ಎಕ್ಸ್‌ ಪೋ ಶತಮಾನದಲ್ಲಿ ಒಮ್ಮೆ ಬರುವ ಸಾಂಕ್ರಾಮಿಕದ ವಿರುದ್ಧ ಮಾನವಕುಲದ ಚೇತರಿಕೆಗೆ ಸಾಕ್ಷಿಯಾಗಿದೆ"

"ಭಾರತವು ನಿಮಗೆ ಗರಿಷ್ಠ ಬೆಳವಣಿಗೆಯ ಅವಕಾಶ ನೀಡುತ್ತದೆ.  ವೃದ್ಧಿ ಪ್ರಮಾಣ, ಮಹತ್ವಾಕಾಂಕ್ಷೆಯ ವೃದ್ಧಿ, ಫಲಿತಾಂಶಗಳ ವೃದ್ಧಿ. ಭಾರತಕ್ಕೆ ಬನ್ನಿ ಮತ್ತು ನಮ್ಮ ಬೆಳವಣಿಗೆಯ ಗಾಥೆಯ ಭಾಗವಾಗಿ"

"ನಮ್ಮ ಆರ್ಥಿಕ ಬೆಳವಣಿಗೆಯು ಪರಂಪರೆ ಕೈಗಾರಿಕೆಗಳು ಮತ್ತು ನವೋದ್ಯಮಗಳ ಸಂಯೋಜನೆಯಿಂದ ಮುಂದೆಸಾಗುತ್ತದೆ"

"ಕಳೆದ ಏಳು ವರ್ಷಗಳಲ್ಲಿ, ಭಾರತ ಸರ್ಕಾರವು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ. ಈ ಪ್ರವೃತ್ತಿಯನ್ನು ಮುಂದುವರಿಸಲು ನಾವು ಹೆಚ್ಚು ಶ್ರಮಿಸುತ್ತೇವೆ"

Posted On: 01 OCT 2021 8:53PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದುಬೈನ ಎಕ್ಸ್‌ ಪೋ -2020 ಭಾರತ ಪೆವಿಲಿಯನ್‌ ಗೆ ನೀಡಿದ ಸಂದೇಶದಲ್ಲಿ, ಎಕ್ಸ್‌ ಪೋವನ್ನು ಐತಿಹಾಸಿಕ ಎಂದು ಬಣ್ಣಿಸಿದ್ದು "ಇದು ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ನಡೆಯುತ್ತಿರುವ ಮೊಟ್ಟ ಮೊದಲನೆಯದು ಎಂದು ತಿಳಿಸಿದ್ದಾರೆ. ಯುಎಇ ಮತ್ತು ದುಬೈ ಜೊತೆಗಿನ ನಮ್ಮ ಆಳವಾದ ಮತ್ತು ಐತಿಹಾಸಿಕ ಬಾಂಧವ್ಯಗಳನ್ನು ಇದು ಮತ್ತಷ್ಟು ಬಲಪಡಿಸುವಲ್ಲಿ ಬಹು ದೂರ ಹೋಗುತ್ತದೆ ಎಂಬ ವಿಶ್ವಾಸ ತಮಗಿದೆ ಎಂದು ತಿಳಿಸಿದ್ದಾರೆ. ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಘನತೆವೆತ್ತ ಶೇಖ್ ಖಲೀಫಾ ಬಿನ್ ಜಾಯೆದ್ ಬಿನ್ ಅಲ್ ನಹ್ಯಾನ್ ಮತ್ತು ಯುಎಇಯ ಪ್ರಧಾನಮಂತ್ರಿ ಮತ್ತು ಉಪಾಧ್ಯಕ್ಷ ಮತ್ತು ದುಬೈ ಆಡಳಿತಗಾರ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು. ಅಬುಧಾಬಿಯ ರಾಜಕುಮಾರ ಘನತೆವೆತ್ತ ಶೇಖ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಶುಭಾಶಯಗಳನ್ನು ಪ್ರಧಾನಮಂತ್ರಿಯವರು ತಿಳಿಸಿದರು, "ನಮ್ಮ ವ್ಯೂಹಾತ್ಮಕ ಪಾಲುದಾರಿಕೆಯಲ್ಲಿ ನಾವು ಸಾಧಿಸಿದ ಪ್ರಗತಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ನಮ್ಮ ಎರಡೂ ದೇಶಗಳ ಪ್ರಗತಿ ಮತ್ತು ಏಳಿಗೆಗಾಗಿ ನಮ್ಮ ಕೆಲಸವನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ. ಎಂದು ತಿಳಿಸಿದ್ದಾರೆ.

ಎಕ್ಸ್‌ ಪೋ 2020 ಮುಖ್ಯ ವಿಷಯವೆಂದರೆ: ಮನಸ್ಸುಗಳನ್ನು ಜೋಡಿಸುವುದು, ಭವಿಷ್ಯವನ್ನು ರೂಪಿಸುವುದು ಎಂದು ಪ್ರಧಾನಮಂತ್ರಿ ಹೇಳಿದರು. "ನಾವು ನವ ಭಾರತವನ್ನು ನಿರ್ಮಿಸಲು ಮುಂದಾಗಿದ್ದು ಭಾರತದ ಪ್ರಯತ್ನಗಳಲ್ಲಿ ವಿಷಯದ ಮನೋಭಾವವನ್ನು ಕಾಣಬಹುದು. ಎಕ್ಸ್‌ ಪೋ ಶತಮಾನಕ್ಕೊಮ್ಮೆ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗದ ವಿರುದ್ಧ ಮಾನವಕುಲದ ಚೇತರಿಕೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತದ ಪೆವಿಲಿಯನ್ ಧ್ಯೇಯ 'ಮುಕ್ತತೆ, ಅವಕಾಶ ಮತ್ತು ಬೆಳವಣಿಗೆ' ಎಂಬುದಾಗಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಇಂದಿನ ಭಾರತವು ವಿಶ್ವದ ಅತ್ಯಂತ ಮುಕ್ತ ದೇಶಗಳಲ್ಲಿ ಒಂದಾಗಿದೆ, ಕಲಿಕೆಗೆ ಮುಕ್ತವಾಗಿದೆ, ದೃಷ್ಟಿಕೋನಗಳಿಗೆ ಮುಕ್ತವಾಗಿದೆ, ನಾವೀನ್ಯತೆಗೆ ಮುಕ್ತವಾಗಿದೆ, ಹೂಡಿಕೆಗೆ ಮುಕ್ತವಾಗಿದೆ. ನಿಮಗೆ ಗರಿಷ್ಠ ವೃದ್ಧಿಯನ್ನು ಸಹ ನೀಡುತ್ತದೆ. ಪ್ರಮಾಣದಲ್ಲಿ ವೃದ್ಧಿ, ಮಹತ್ವಾಕಾಂಕ್ಷೆಯಲ್ಲಿ ವೃದ್ಧಿ, ಫಲಿತಾಂಶಗಳಲ್ಲಿ ವೃದ್ಧಿ ನೀಡುತ್ತದೆ. ಭಾರತಕ್ಕೆ ಬಂದು ನಮ್ಮ ಬೆಳವಣಿಗೆಯ ಗಾಥೆಯ ಭಾಗವಾಗಿರಿ ಎಂದು ಪ್ರಧಾನಮಂತ್ರಿಯವರು ಹೂಡಿಕೆದಾರರಿಗೆ ಆಹ್ವಾನ ನೀಡಿದರು.

ಭಾರತದ ಚಲನಶೀಲತೆ ಮತ್ತು ವೈವಿಧ್ಯತೆಯ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು 'ಭಾರತವು ಪ್ರತಿಭೆಯ ಶಕ್ತಿ ಕೇಂದ್ರವಾಗಿದೆ ಮತ್ತು ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಯ ಜಗತ್ತಿನಲ್ಲಿ ಭಾರತವು ಅನೇಕ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಹೇಳಿದರು "ನಮ್ಮ ಆರ್ಥಿಕ ಬೆಳವಣಿಗೆಯು ಪರಂಪರೆಯ ಕೈಗಾರಿಕೆಗಳ ಸಂಯೋಜನೆ ಮತ್ತು ನವೋದ್ಯಮಗಳಿಂದ ಮುಂದೆಸಾಗುತ್ತಿದೆಭಾರತದ ಪೆವಿಲಿಯನ್ ಹಲವು ಕ್ಷೇತ್ರಗಳಲ್ಲಿ ಭಾರತದ ಅತ್ಯುತ್ತಮವಾದವುಗಳನ್ನು ಪ್ರದರ್ಶಿಸುತ್ತದೆ, ಕಳೆದ ಏಳು ವರ್ಷಗಳಲ್ಲಿ, ಭಾರತ ಸರ್ಕಾರವು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ. " ಪ್ರವೃತ್ತಿಯನ್ನು ಮುಂದುವರಿಸಲು ನಾವು ಹೆಚ್ಚು ಶ್ರಮಿಸುತ್ತೇವೆ" ಎಂದೂ ಹೇಳಿದರು.

***


(Release ID: 1760686)