ಹಣಕಾಸು ಸಚಿವಾಲಯ
azadi ka amrit mahotsav

ತೆರಿಗೆ ಕಾನೂನುಗಳ (ತಿದ್ದುಪಡಿ) ಕಾಯ್ದೆ 2021 ಗೆ ಮಾಡಿರುವ ತಿದ್ದುಪಡಿಗಳ ಜಾರಿಗೆ ನಿಯಮಗಳ ಅಧಿಸೂಚನೆ ಹೊರಡಿಸಿದ ಸಿಬಿಡಿಟಿ

Posted On: 02 OCT 2021 2:24PM by PIB Bengaluru

ಆದಾಯ ತೆರಿಗೆ ಕಾಯ್ದೆ 1961ರ (ಆದಾಯ ತೆರಿಗೆ ಕಾಯ್ದೆ)ಗೆ ತಿದ್ದುಪಡಿ ಮಾಡಿ ತೆರಿಗೆ ಕಾನೂನುಗಳ (ತಿದ್ದುಪಡಿ) ಕಾಯ್ದೆ 2021 (2021ರ ಕಾಯ್ದೆ) ತರಲಾಗಿದೆ. ಇದರಿಂದ ಭವಿಷ್ಯದಲ್ಲಿ ಅಂದರೆ 2012ರ ಮೇ 28ರೊಳಗೆ (ಅಂದರೆ ಹಣಕಾಸು ವಿಧೇಯಕ 2012ಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ ದಿನದಿಂದ) ಹಣಕಾಸು ಕಾಯ್ದೆ 2012ರಡಿ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 9ರಡಿ ಮಾಡಲಾದ ತಿದ್ದುಪಡಿಯಂತೆ ಕಡಲಾಚೆಯ ಯಾವುದೇ ಭಾರತೀಯ ಸ್ವತ್ತುಗಳ ಪರೋಕ್ಷ ವರ್ಗಾವಣೆಯಾದರೆ ಭವಿಷ್ಯದಲ್ಲಿ ಅದಕ್ಕೆ  ಯಾವುದೇ ತೆರಿಗೆ ಬೇಡಿಕೆಯನ್ನು ಸಲ್ಲಿಸುವಂತಿಲ್ಲ.

ಅಲ್ಲದೆ, 2021ರ ಕಾಯ್ದೆ 2012ರ ಮೇ 28ಕ್ಕೂ (2012ರ ಹಣಕಾಸು ಕಾಯ್ದೆ ಸೆಕ್ಷನ್ 119ರಡಿ ಬೇಡಿಕೆಯನ್ನು ಮಾನ್ಯ ಮಾಡುವುದು ಒಳಗೊಂಡಿದೆ) ಮುನ್ನ ಕಡಲಾಚೆ ಭಾರತೀಯ ಸ್ವತ್ತುಗಳ ಪರೋಕ್ಷ ವರ್ಗಾವಣೆ ಆಧರಿಸಿ ಬೇಡಿಕೆ ಸಲ್ಲಿಸಿದ್ದರೆ ನಿರ್ದಿಷ್ಟ ಷರತ್ತುಗಳನ್ನು ಪೂರ್ಣಗೊಳಿಸಿದರೆ ಅದನ್ನು ರದ್ದುಗೊಳಿಸಲಾಗುವುದು ಅಥವಾ ವೆಚ್ಚ, ಹಾನಿ, ಬಡ್ಡಿ ಇತ್ಯಾದಿ ಸೇರಿ ಯಾವುದೇ ಹಕ್ಕುಗಳನ್ನು ಮಂಡಿಸುವುದಿಲ್ಲವೆಂದು ಮುಚ್ಚಳಿಕೆ ನೀಡಿ ಬಾಕಿ ವ್ಯಾಜ್ಯವನ್ನು ವಾಪಸ್ ಪಡೆಯಬಹುದು ಮತ್ತು ಅವುಗಳನ್ನು ಸಲ್ಲಿಸಬೇಕು ಮತ್ತು ಸೂಚಿಸಿದ ಇತರೆ ಷರತ್ತುಗಳನ್ನೂ ಸಹ ಪಾಲನೆ ಮಾಡಬೇಕು. ಈ ಪ್ರಕರಣದಲ್ಲಿ ಪಾವತಿಸಿದ/ಸಂಗ್ರಹಿಸಿದ ಮೊತ್ತವನ್ನು ಎಲ್ಲ ಷರತ್ತುಗಳನ್ನು ಪೂರ್ಣಗೊಳಿಸಿದ ಮೇಲೆ ಯಾವುದೇ ಬಡ್ಡಿ ಇಲ್ಲದೆ ಮರುಪಾವತಿಸಲಾಗುವುದು.

1962ರ ಆದಾಯ ತೆರಿಗೆ ನಿಯಮಗಳನ್ನು ತಿದ್ದುಪಡಿ ಮಾಡಿರುವ ನಿಯಮಗಳು, ಮೇಲೆ ಉಲ್ಲೇಖಿಸಿದಂತೆ ನಿರ್ದಿಷ್ಟಪಡಿಸಿದ ಷರತ್ತುಗಳನ್ನು ಸೂಚಿಸುವುದು ಮತ್ತು ಯಾವುದೇ ವೆಚ್ಚ, ಹಾನಿ ಮತ್ತು ಬಡ್ಡಿ ಇತ್ಯಾದಿಗಳ ಮೇಲೆ ಹಕ್ಕು ಮಂಡಿಸದೆ ಬಾಕಿ ವ್ಯಾಜ್ಯವನ್ನು ವಾಪಸ್ ಪಡೆಯುವ ನಮೂನೆಯ ವಿಧಾನ ಒದಗಿಸಲಿದೆ. ಅವುಗಳನ್ನು 2021ರ ಆಗಸ್ಟ್ 28ರಿಂದ ಸಾರ್ವಜನಿಕ ವಲಯದಲ್ಲಿ ಬಿಡುಗಡೆ ಮಾಡಿ, ಅವುಗಳಿಗೆ 2021ರ ಸೆಪ್ಟಂಬರ್ 4ರವರೆಗೆ ಎಲ್ಲ ಪಾಲುದಾರರಿಂದ ಸಲಹೆ/ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. 

ಪಾಲುದಾರರ ಸಲಹೆಗಳನ್ನು ಪರಿಶೀಲಿಸಿದ ನಂತರ ಮತ್ತು ಕೆಲವು ಸಲಹೆಗಳನ್ನು ಅಳವಡಿಸಿಕೊಂಡ ನಂತರ, 2021ರ ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಯಮಗಳನ್ನು ದಿನಾಂಕ 1 ಅಕ್ಟೋಬರ್ 2021ರಂದು ಅಧಿಸೂಚನೆ ಸಂಖ್ಯೆ ಜಿಎಸ್ ಆರ್ 713(ಇ) ಯಲ್ಲಿ ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಅದರಂತೆ ಆದಾಯ ತೆರಿಗೆ ನಿಯಮ 1962 ಅಡಿ ಸೇರ್ಪಡೆ ಮಾಡಲಾದ ನಿಯಮಗಳು ಹೀಗಿವೆ. 

  1. ನಿಯಮ 11 ಯುಇ ಅಡಿಯಲ್ಲಿ 2021ರ ಕಾಯಿದೆ ಅಡಿಯಲ್ಲಿ ಪರಿಹಾರ ಪಡೆಯಲು ಅರ್ಹತೆಯನ್ನು ನಿಗದಿಪಡಿಸಿರುವ ನಿರ್ದಿಷ್ಟ ಷರತ್ತುಗಳನ್ನು ಒಳಗೊಂಡಿದೆ ಮತ್ತು
  2. ನಿಯಮ 11ಯು ಎಫ್ ಅಡಿಯಲ್ಲಿ ಯಾವುದೇ ವೆಚ್ಚ, ಹಾನಿ ಇತ್ಯಾದಿಗಳನ್ನು ಕೇಳದೆ ಬಾಕಿ ವ್ಯಾಜ್ಯಗಳನ್ನು ಹಿಂಪಡೆಯಲು ಕೈಗೊಳ್ಳಬೇಕಾದ ರೂಪ ಮತ್ತು ವಿಧಾನವನ್ನು ಒದಗಿಸುತ್ತದೆ.

ಮೇಲಿನ ನಿಯಮಗಳಿಗೆ ಸಂಬಂಧಿಸಿದ ಅಧಿಸೂಚನೆ ಇಲ್ಲಿ ಲಭ್ಯವಿದೆ www.incometaxindia.gov.in.

***


(Release ID: 1760460) Visitor Counter : 325