ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav g20-india-2023

ದ್ವಿದಳ ಧಾನ್ಯಗಳ ದಾಸ್ತಾನು ಘೋಷಿಸಿದ 11,000 ಕ್ಕೂ ಹೆಚ್ಚು ದಾಸ್ತಾನುದಾರರು


2021 ರ ಸೆಪ್ಟೆಂಬರ್ 20 ರ ವರೆಗೆ 3097694.42 ಮೆಟ್ರಿಕ್ ಟನ್ ದ್ವಿದಳ ಧಾನ್ಯಗಳ ದಾಸ್ತಾನು ಘೋಷಣೆ

ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ ದ್ವಿದಳ ಧಾನ್ಯಗಳ ಮಾಹಿತಿಯ ಡಿಜಿಟಲೀಕರಣ

Posted On: 30 SEP 2021 2:26PM by PIB Bengaluru

ಗ್ರಾಹಕರ ವ್ಯವಹಾರಗಳ ಸಚಿವಾಲಯದ ಅಧಿಕೃತ ಪೋರ್ಟಲ್ ನಲ್ಲಿ 2021 ರ ಸೆಪ್ಟೆಂಬರ್ 20 ರ  ವರೆಗೆ 11,635 ದಾಸ್ತಾನುದಾರರು 3097694.42 ಮೆಟ್ರಿಕ್ ಟನ್ ದ್ವಿದಳ ಧಾನ್ಯಗಳ ದಾಸ್ತಾನು ಘೋಷಿಸಿಕೊಂಡಿದ್ದಾರೆ.

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದಡಿ ಬರುವ ಗ್ರಾಹಕ ವ್ಯವಹಾರಗಳ ಇಲಾಖೆ 22 ಅಗತ್ಯ ವಸ್ತುಗಳ ಉತ್ಪನ್ನಗಳ ಮೇಲೆ ನಿಗಾ ಇರಿಸಿದೆ. ಕಾಳಸಂತೆಗೆ ಕಡಿವಾಣ ಹಾಕುವ, ಮಾರುಕಟ್ಟೆ ನಿಯಂತ್ರಣ, ರಫ್ತು ನಿರ್ಬಂಧಿಸುವ ಮೂಲಕ ಧಾನ್ಯಗಳ ಲಭ್ಯತೆ ಹೆಚ್ಚಿಸುವ ಮತ್ತು ಆಮದು ಪ್ರೋತ್ಸಾಹಿಸುವ, ಕಾಪು ದಾಸ್ತಾನು ನಿರ್ವಹಣೆ, ಅಸಹಜ ಬೆಲೆ ಏರಿಕೆಯನ್ನು ಸರಾಗಗೊಳಿಸುವುದು ಒಳಗೊಂಡಂತೆ ಮುಂತಾದ ಕ್ರಮಗಳ ಮೂಲಕ ವ್ಯವಸ್ಥೆಯನ್ನು ನಿರ್ವಹಣೆ ಮಾಡಲಾಗುತ್ತಿದೆ.

ಸಾರ್ವಜನಿಕ ಮತ್ತು ಖಾಸಗಿ ವಲಯ ಸೇರಿ ವ್ಯಾಪಾರಿಗಳು, ಗಿರಣಿ ಮಾಲೀಕರು, ಆಮದುದಾರರು ಮತ್ತು ಗೋದಾಮುಗಳ ಮಾಹಿತಿ ಕುರಿತು ದತ್ತಾಂಶ ಬ್ಯಾಂಕ್ ಸ್ಥಾಪಿಸಲಾಗಿದೆ. ಮಿಲ್ಲಿಂಗ್ ಉದ್ದೇಶಗಳಿಗಾಗಿ ಉತ್ಪಾದಿಸುವ ಮತ್ತು ದಾಸ್ತಾನು ಮಾಡುವ ರಾಜ್ಯಗಳು ಯಾವುದು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಮಾಹಿತಿ ಪಡೆಯಲು ಸಹಕಾರಿಯಾಗಿದೆ. ಆಹಾರ ಧಾನ್ಯಗಳ ಸಂಗ್ರಹಣೆ ಮತ್ತು ಕೃತಕ ಅಭಾವ ಸೃಷ್ಟಿಯ ಅನಪೇಕ್ಷಿತ ಅಭ್ಯಾಸಗಳ ಮೇಲೆ ನಿಗಾ ಇಡುವ, ನೈಜ ಸಮಯದಲ್ಲಿ ಪರಿಶೀಲನೆ ಮಾಡಲು ಸಾಧ್ಯವಾಗಲಿದೆ.

https://fcainfoweb.nic.in/psp ಪೋರ್ಟಲ್ ಅನ್ನು ಯಾವುದೇ ನಾಗಕರಿಕರು ಪರಿಶೀಲಿಸಬಹುದಾಗಿದೆ. ದಾಸ್ತಾನುದಾರರು ಪೋರ್ಟಲ್ ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು ಇ ಮೇಲ್ ಐಡಿ ಮತ್ತು ಮೊಬೈಲ್ ಮೂಲಕ ಒಟಿಪಿ ಪಡೆದು ಯೂಸರ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಸೃಷ್ಟಿ ಮಾಡಿಕೊಳ್ಳಬಹುದಾಗಿದೆ. ಯೂಸರ್ ಐಡಿ ಮತ್ತು ಪಾಸ್ ವರ್ಡ್ ಮಾಡಿಕೊಂಡ ನಂತರ ನಂತರ ತಮ್ಮ ಪ್ರೊಫೈಲ್ ಮೂಲಕ ವಿವರಗಳನ್ನು ಹಂಚಿಕೊಳ್ಳಬಹುದಾಗಿದೆ ಮತ್ತು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ವಿವಿಧ ಬಗೆಯ ದ್ವಿದಳ ದಾನ್ಯಗಳ ಕುರಿತು ಮಾಹಿತಿ ಅಪ್ ಲೋಡ್ ಮಾಡಬಹುದಾಗಿದೆ. ನಿರಂತರವಾಗಿ ಪರಿಷ್ಕೃತ ಮಾಹಿತಿಯನ್ನು ಪೋರ್ಟಲ್ ಗೆ ಅಪ್ ಲೋಡ್ ಮಾಡುವುದು ದಾಸ್ತಾನುದಾರರ  ಜವಾಬ್ದಾರಿಯಾಗಿದ್ದು, ಮಾಹಿತಿ ಮತ್ತು ಹೆಚ್ಚುವರಿ ವಿವರಗಳನ್ನು ಹಂಚಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಇಲ್ಲಿ ದತ್ತಾಂಶದ ಖಾಸಗಿತನವನ್ನು ರಕ್ಷಿಸುತ್ತಿದ್ದು, ಯಾವುದೇ ದಾಸ್ತಾನುದಾರರು ಘೋಷಿಸಿದ ದತ್ತಾಂಶ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಹೊರತಾಗಿ ಅಪ್  ಲೋಡ್ ಮಾಡಿದವರಿಗೆ ಮಾತ್ರ ಮಾಹಿತಿ ವಿವರಗಳು ದೊರೆಯುತ್ತದೆ. ಈ ದತ್ತಾಂಶದಿಂದ ದಾಸ್ತಾನಿನ ಸಾಗಣೆ ಮತ್ತು ಯಾವ ಪ್ರಮಾಣದಲ್ಲಿ ದಾಸ್ತಾನು ಲಭ್ಯವಿದೆ ಎನ್ನುವುದನ್ನು ಪತ್ತೆ ಮಾಡಲು ಸಂಬಂಧಪಟ್ಟ ರಾಜ್ಯಗಳಿಗೆ ಸಹಕಾರಿಯಾಗಲಿದೆ. ಇದು ಅವರ ರಾಜ್ಯಗಳಲ್ಲಿ ಲಭ್ಯವಿರುವ ವಿವಿಧ ದ್ವಿದಳ ಧಾನ್ಯಗಳ ಒಟ್ಟು ಮಾಹಿತಿಯನ್ನು ನೀಡುತ್ತದೆ. ಯಾವುದೇ ರಾಜ್ಯದ ನಿರ್ದಿಷ್ಟ ಲಭ್ಯತೆ ಮತ್ತು ಕೊರತೆ ಬಗ್ಗೆಯೂ ಇದು ಬೆಳಕು ಚೆಲ್ಲುತ್ತದೆ. ಇದರಿಂದ ರಾಜ್ಯ ಸರ್ಕಾರ ಆಮದು ಮೂಲಕ ಅಥವಾ ಕೇಂದ್ರ ಕಾಪು ದಾಸ್ತಾನು ಮೂಲಕ ಪರಿಸ್ಥಿತಿಗೆ ಅನುಗುಣವಾಗಿ ಸುಗಮ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಗ್ರಾಹಕ ವ್ಯವಹಾರಗಳ ಇಲಾಖೆ ರಾಷ್ಟ್ರಮಟ್ಟದಲ್ಲಿ ನಿಗಾ ವಹಿಸಲಿದೆ. ದೇಶಾದ್ಯಂತ ಯಾವುದೇ ನಿರ್ದಿಷ್ಟ ಲಭ್ಯತೆಯ ನಿರೀಕ್ಷಿತ ಕೊರತೆಯ ಬಗ್ಗೆಯೂ ಇದು ಬೆಳಕು ಚೆಲ್ಲುತ್ತದೆ. ಇದರಿಂದ ಸರ್ಕಾರ ತಕ್ಷಣ ಆಮದುಗಳ ಮೂಲಕ ಸರಾಗವಾಗಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಅಥವಾ ರಫ್ತು ಚಟುವಟಿಕೆಯನ್ನು ನಿರ್ಬಂಧಿಸುತ್ತದೆ ಇಲ್ಲವೆ ಕೇಂದ್ರ ಮಟ್ಟದಲ್ಲಿರುವ ಕಾಪು ದಾಸ್ತಾನನ್ನು ಬಿಡುಗಡೆ ಮಾಡಲು ಅನುಕೂಲವಾಗುತ್ತದೆ.  ಪೋರ್ಟಲ್ ನ ದತ್ತಾಂಶವನ್ನು ಆಧರಿಸಿ ಸರ್ಕಾರ ತೆಗೆದುಕೊಳ್ಳುವ ವಿವಿಧ ಕ್ರಮಗಳು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ದ್ವಿದಳ ಧಾನ್ಯಗಳ ಸುಗಮ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅನುಕೂಲವಾಗಲಿದೆ.    

 

****(Release ID: 1759782) Visitor Counter : 204