ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಶೇಷ ಗುಣಲಕ್ಷಣಗಳನ್ನು ಹೊಂದಿರುವ 35 ಬೆಳೆ ಪ್ರಭೇದಗಳನ್ನು ಛತ್ತೀಸ್ ಗಡದ ರಾಯ್ ಪುರದಲ್ಲಿ ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅವತರಣಿಕೆ

Posted On: 28 SEP 2021 3:22PM by PIB Bengaluru

ನಮಸ್ಕಾರ ಜೀ! ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಜಿ, ಛತ್ತೀಸ್ ಗಢದ ಮುಖ್ಯಮಂತ್ರಿ ಶ್ರೀ ಭೂಪೇಶ್ ಬಘೇಲ್ ಜೀ, ನನ್ನ ಇತರ ಸಹೋದ್ಯೋಗಿಗಳಾದ ಶ್ರೀ ಪುರುಷೋತ್ತಮ ರೂಪಾಲಾ ಜಿ, ಶ್ರೀ ಕೈಲಾಶ್ ಚೌಧರಿ, ಶ್ರೀಮತಿ. ಶೋಭಾ ಜಿ, ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಶ್ರೀ ರಮಣ್ ಸಿಂಗ್ ಜೀ, ಛತ್ತೀಸ್ ಗಢ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಶ್ರೀ ಧರಂ ಲಾಲ್ ಕೌಶಿಕ್ ಜಿ, ಎಲ್ಲಾ ಕುಲಪತಿಗಳು, ನಿರ್ದೇಶಕರು, ಕೃಷಿ ಶಿಕ್ಷಣಕ್ಕೆ ಸಂಬಂಧಿಸಿದ ವೈಜ್ಞಾನಿಕ ಸಹೋದ್ಯೋಗಿಗಳು ಮತ್ತು ನನ್ನ ಪ್ರೀತಿಯ ರೈತ ಸಹೋದರಿಯರು ಮತ್ತು ಸಹೋದರರಿಗೆ ನನ್ನ ಸಮಸ್ಕಾರಗಳು!

ಘಾಘ್ ಮತ್ತು ಭದ್ರಿಯವರ ಕೃಷಿ ಗಾದೆಗಳು ಉತ್ತರ ಭಾರತದಲ್ಲಿ ಬಹಳ ಜನಪ್ರಿಯವಾಗಿವೆ. ಘಾಘ್ ಹಲವು ಶತಮಾನಗಳ ಹಿಂದೆ ಹೀಗೆ ಹೇಳಿದರು -

जेते गहिरा जोते खेत,

परे बीज, फल तेते देत.

ಇದರರ್ಥ ಹೊಲವನ್ನು ಆಳವಾಗಿ ಉಳುಮೆ ಮಾಡಿದರೆ, ಬೀಜವನ್ನು ಬಿತ್ತಿದಾಗ ಹೆಚ್ಚಿನ ಇಳುವರಿ ಬರುತ್ತದೆ. ಭಾರತದ ಕೃಷಿಪದ್ಧತಿಯ ನೂರಾರು ವರ್ಷಗಳ ಹಳೆಯ ಅನುಭವಗಳಿಂದ ಈ ನಾಣ್ಣುಡಿಗಳು ಸೃಷ್ಟಿಸಲಾಗಿದೆ. ಇವುಗಳು ಭಾರತೀಯ ಕೃಷಿ ಎಷ್ಟು ವೈಜ್ಞಾನಿಕವಾಗಿದೆ ಎಂಬುದನ್ನು ತೋರಿಸುತ್ತದೆ. 21 ನೇ ಶತಮಾನದ ಭಾರತಕ್ಕೆ ಕೃಷಿ ಮತ್ತು ವಿಜ್ಞಾನದ ಈ ಸಿನರ್ಜಿ ಬಹಳ ಮುಖ್ಯವಾಗಿದೆ. ಇಂದು ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗುತ್ತಿದೆ. ಇದನ್ನು ನಮ್ಮ ದೇಶದ ಆಧುನಿಕ ರೈತರಿಗೆ ಅರ್ಪಿಸಲಾಗುತ್ತಿದೆ. ಸಣ್ಣ ರೈತರ ಜೀವನವನ್ನು ಬದಲಿಸುವ ಆಶಯದೊಂದಿಗೆ, ನಾನು ಇಂದು ದೇಶದ ಅನೇಕ ರೈತರ ಪಾದಗಳಿಗೆ ಈ ಬೃಹತ್ ಉಡುಗೊರೆಯನ್ನು ಅರ್ಪಿಸುತ್ತಿದ್ದೇನೆ. ಇಂದು ವಿವಿಧ ಬೆಳೆಗಳ 35 ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಇಂದು ರಾಷ್ಟ್ರೀಯ ಜೈವಿಕ ಒತ್ತಡ ನಿರ್ವಹಣಾ ಸಂಸ್ಥೆ ಕೂಡ ರಾಯಪುರದಲ್ಲಿ ಉದ್ಘಾಟಿಸಲಾಗಿದೆ. ಗ್ರೀನ್ ಕ್ಯಾಂಪಸ್ ಪ್ರಶಸ್ತಿಗಳನ್ನು ನಾಲ್ಕು ಕೃಷಿ ವಿಶ್ವವಿದ್ಯಾಲಯಗಳಿಗೆ ನೀಡಲಾಗಿದೆ. ನಾನು ನಿಮ್ಮೆಲ್ಲರನ್ನು, ದೇಶದ ರೈತರು ಮತ್ತು ಕೃಷಿ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ.   

 

ಸ್ನೇಹಿತರೇ, 

 

ಕಳೆದ 6-7 ವರ್ಷಗಳಲ್ಲಿ, ಕೃಷಿ ಸಂಬಂಧಿತ ಸವಾಲುಗಳನ್ನು ಪರಿಹರಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಗೆ ಆದ್ಯತೆ ನೀಡಲಾಗಿದೆ. ನಮ್ಮ ಗಮನವು ಹೆಚ್ಚು ಪೌಷ್ಟಿಕಾಂಶದ ಬೀಜಗಳ ಮೇಲೆ, ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತದೆ, ವಿಶೇಷವಾಗಿ ಬದಲಾಗುತ್ತಿರುವ ಹವಾಮಾನದ ದೃಷ್ಟಿಯಿಂದ. ಇತ್ತೀಚಿನ ವರ್ಷಗಳಲ್ಲಿ, ವಿವಿಧ ಬೆಳೆಗಳ 1300 ಕ್ಕಿಂತ ಹೆಚ್ಚು ಬೀಜಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸರಣಿಯಲ್ಲಿ, ಇನ್ನೂ 35 ಬೆಳೆ ತಳಿಗಳನ್ನು ಇಂದು ದೇಶದ ರೈತರಿಗೆ ಅರ್ಪಿಸಲಾಗುತ್ತಿದೆ. ನಮ್ಮ ವಿಜ್ಞಾನಿಗಳು ಕಂಡುಹಿಡಿದ ಈ ಬೆಳೆ ತಳಿಗಳು ಮತ್ತು ಬೀಜಗಳು ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಮತ್ತು ಅಪೌಷ್ಟಿಕತೆ ಮುಕ್ತ ಭಾರತ ಅಭಿಯಾನದಲ್ಲಿ ಕೃಷಿಯನ್ನು ರಕ್ಷಿಸಲು ಬಹಳ ಸಹಾಯಕವಾಗಿದೆ. ಈ ಹೊಸ ತಳಿಗಳು ಹವಾಮಾನದ ಬದಲಾವಣೆಗಳನ್ನು ಎದುರಿಸಲು ಸಮರ್ಥವಾಗಿಲ್ಲ, ಅವುಗಳು ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿವೆ. ಈ ಪ್ರಭೇದಗಳಲ್ಲಿ ಕೆಲವು ಕಡಿಮೆ ನೀರಿನ ಪ್ರದೇಶಗಳಿಗೆ, ಕೆಲವು ಬೆಳೆಗಳು ಗಂಭೀರ ರೋಗಗಳಿಂದ ರಕ್ಷಿಸಲ್ಪಡುತ್ತವೆ ಮತ್ತು ಕೆಲವು ಬೆಳೆಗಳು ಬೇಗನೆ ಕಟಾವಿಗೆ ಬರುತ್ತವೆ, ಇನ್ನು ಕೆಲವು ಉಪ್ಪುನೀರಿನಲ್ಲಿ ಬೆಳೆಯುತ್ತವೆ. ದೇಶದ ವಿವಿಧ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಭೇದಗಳನ್ನು ಅಭಿವೃದ್ಧಿಪಡಿಸಲಾಗಿದೆ. ಛತ್ತೀಸ್ ಗಢದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬಯೋಟಿಕ್ ಸ್ಟ್ರೆಸ್ ಮ್ಯಾನೇಜ್ಮೆಂಟ್ ರೂಪದಲ್ಲಿ ದೇಶವು ಇಂದು ಹೊಸ ರಾಷ್ಟ್ರೀಯ ಸಂಸ್ಥೆಯನ್ನು ಪಡೆದಿದೆ. ಈ ಸಂಸ್ಥೆಯು ವೈಜ್ಞಾನಿಕ ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡುತ್ತದೆ ಮತ್ತು ಹವಾಮಾನ ಬದಲಾವಣೆ ಮತ್ತು ಇತರ ಪರಿಸ್ಥಿತಿಗಳಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು ದೇಶದ ಉಪಕ್ರಮ-ಪ್ರಯತ್ನಗಳನ್ನು ಬಲಪಡಿಸುತ್ತದೆ. ಇಲ್ಲಿ ತರಬೇತಿ ಪಡೆಯಲಿರುವ ಯುವಶಕ್ತಿಯು ವೈಜ್ಞಾನಿಕ ಮನಸ್ಸಿನ ವಿಜ್ಞಾನಿಗಳಾಗುತ್ತಾರೆ. ಇಲ್ಲಿ ಹೊರಹೊಮ್ಮುವ ಕೃಷಿ ಪರಿಹಾರಗಳು ದೇಶದ ಕೃಷಿ ಮತ್ತು ರೈತರ ಆದಾಯವನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ.

 

ಸ್ನೇಹಿತರೇ,

ಕೀಟಗಳಿಂದಾಗಿ ನಮ್ಮ ದೇಶದಲ್ಲಿ ಹೆಚ್ಚಿನ ಪ್ರಮಾಣದ ಬೆಳೆಗಳು ನಾಶವಾಗಿವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇದರಿಂದ ರೈತರಿಗೂ ಹೆಚ್ಚಿನ ನಷ್ಟ ಉಂಟಾಗುತ್ತದೆ. ಕಳೆದ ವರ್ಷವೇ ಕರೋನಾ ವಿರುದ್ಧದ ಹೋರಾಟದಲ್ಲಿ, ಮಿಡತೆಗಳೂ ಅನೇಕ ರಾಜ್ಯಗಳ ಮೇಲೆ ಹೇಗೆ ದಾಳಿ ಮಾಡಿತು ಎಂಬುದನ್ನು ನಾವು ಗಮನಿಸಿದ್ದೇವೆ. ಈ ದಾಳಿಯನ್ನು ನಿಲ್ಲಿಸಲು ಮತ್ತು ರೈತರನ್ನು ತೀವ್ರ ಹಾನಿಯಿಂದ ರಕ್ಷಿಸಲು ಸಾಕಷ್ಟು ಪ್ರಯತ್ನಗಳ ಅಗತ್ಯವಿದೆ. ಈ ಹೊಸ ಸಂಸ್ಥೆಯು ದೊಡ್ಡ ಜವಾಬ್ದಾರಿಯನ್ನು ಹೊಂದಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಇಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳು ದೇಶದ ನಿರೀಕ್ಷೆಗಳನ್ನು ಪೂರೈಸುವ ವಿಶ್ವಾಸವಿದೆ.

 

ಸ್ನೇಹಿತರೇ,

ಕೃಷಿಯು ರಕ್ಷಣಾತ್ಮಕ ಹೊದಿಕೆಯನ್ನು ಪಡೆದಾಗ, ಅದು ಕೃಷಿಬೆಳೆಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತದೆ. ರೈತರ ಭೂಮಿಯನ್ನು ರಕ್ಷಿಸಲು, 11 ಕೋಟಿ ಮಣ್ಣಿನ ಆರೋಗ್ಯ ಕಾರ್ಡ್ಗಳನ್ನು ಅವರಿಗೆ ವಿವಿಧ ಹಂತಗಳಲ್ಲಿ ನೀಡಲಾಗಿದೆ. ಈ ಮಣ್ಣಿನ ಆರೋಗ್ಯ ಕಾರ್ಡ್ಗಳ ಪರಿಣಾಮವಾಗಿ, ರೈತರು ಸಾಕಷ್ಟು ಲಾಭ ಪಡೆದಿದ್ದಾರೆ. ಈಗ ರೈತರು ತಾವು ಹೊಂದಿರುವ ಭೂಮಿಯ ಮಿತಿಗಳನ್ನು ತಿಳಿದಿದ್ದಾರೆ; ಆ ಭೂಮಿಯ ಉಪಯುಕ್ತತೆ, ಉತ್ತಮ ಇಳುವರಿ ನೀಡುವ ಬೆಳೆ, ಕೀಟನಾಶಕಗಳು, ಅಗತ್ಯ ಪ್ರಮಾಣದ ರಸಗೊಬ್ಬರಗಳು ಮತ್ತು ಮಣ್ಣಿನ ಆರೋಗ್ಯ ಮಾಹಿತಿ ಪಡೆಯುತ್ತಾರೆ. ಇದು ವೆಚ್ಚದಲ್ಲಿ ಇಳಿಕೆಗೆ ಮಾತ್ರವಲ್ಲ, ಇಳುವರಿಯ ಹೆಚ್ಚಳಕ್ಕೂ ಕಾರಣವಾಗಿದೆ. ಅಂತೆಯೇ, ನಾವು 100% ಯೂರಿಯಾದ ಬೇವಿನ ಲೇಪನವನ್ನು ಮಾಡುವ ಮೂಲಕ ಕಾಂಪೋಸ್ಟ್ ಬಗ್ಗೆ ಕಾಳಜಿ ಹೊಂದಿದ್ದೇವೆ. ರೈತರಿಗೆ ನೀರಿನ ಭದ್ರತೆ ಒದಗಿಸುವ ಸಲುವಾಗಿ ನಾವು ನೀರಾವರಿ ಯೋಜನೆಗಳನ್ನು ಆರಂಭಿಸಿದ್ದೇವೆ. ದಶಕಗಳಿಂದ ಬಾಕಿಯಿರುವ ಸುಮಾರು 100 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ನಾವು ಅಭಿಯಾನವನ್ನು ಆರಂಭಿಸಿದ್ದೇವೆ ಮತ್ತು ಇದಕ್ಕಾಗಿ ರೈತರಿಗೆ ನೀರು ಲಭ್ಯವಾಗುವಂತೆ ಬೃಹತ್ ಬಜೆಟ್ ಅನ್ನು ಮೀಸಲಿಟ್ಟಿದ್ದೇವೆ. ಅಂತೆಯೇ, ನಾವು ರೈತರಿಗೆ ಸೂಕ್ಷ್ಮ ನೀರಾವರಿ ಮತ್ತು ನೀರನ್ನು ಉಳಿಸಲು ಸ್ಪ್ರಿಂಕ್ಲರ್ ಗಳಿಗಾಗಿ ಆರ್ಥಿಕ ಸಹಾಯವನ್ನು ಒದಗಿಸಿದ್ದೇವೆ. ರೈತರಿಗೆ ತಮ್ಮ ಬೆಳೆಗಳನ್ನು ಕೀಟಗಳಿಂದ ರಕ್ಷಿಸಲು ಮತ್ತು ಹೆಚ್ಚಿನ ಇಳುವರಿಗಾಗಿ ಹೊಸ ತಳಿಯ ಬೀಜಗಳನ್ನು ನೀಡಲಾಯಿತು. ಪ್ರಧಾನಮಂತ್ರಿ ಕುಸುಮ್ ಅಭಿಯಾನವನ್ನು ರೈತರಿಗಾಗಿ ನಡೆಸಲಾಗುತ್ತಿದೆ, ಇದರಿಂದ ಅವರು ಅಧಿಕ ಉತ್ಪಾದಿಸಬಹುದು

 

ಕೃಷಿಯ ಜೊತೆಗೆ ಇ-ವಿದ್ಯುತ್ ಇದು ಅವರ ಸ್ವಂತ ಅಗತ್ಯಗಳನ್ನು ಪೂರೈಸಲು ಮಾತ್ರ ಸಹಾಯ ಮಾಡುತ್ತದೆ ಆದರೆ ಅವರು ಶಕ್ತಿಯನ್ನು ಸಹ ಪಡೆಯಬಹುದು. ಲಕ್ಷಾಂತರ ರೈತರಿಗೆ ಸೋಲಾರ್ ಪಂಪ್ ಗಳನ್ನು ನೀಡಲಾಗಿದೆ. ಇಂದು, ಹವಾಮಾನವು ಪ್ರಪಂಚದಾದ್ಯಂತ ಕಾಳಜಿಯ ವಿಷಯವಾಗಿದೆ. ಇದೀಗ, ನಮ್ಮ ಛತ್ತೀಸ್ ಗಢದ ಮುಖ್ಯಮಂತ್ರಿಗಳು ನೈಸರ್ಗಿಕ ವಿಕೋಪಗಳು ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ವಿವರವಾಗಿ ವಿವರಿಸಿದರು. ಆಲಿಕಲ್ಲು ಮಳೆ ಮತ್ತು ಹವಾಮಾನದಿಂದ ರೈತರನ್ನು ರಕ್ಷಿಸಲು ಮತ್ತು ಪ್ರಚಲಿತದಲ್ಲಿದ್ದ ನಿಯಮಗಳಲ್ಲಿ ನಾವು ಹಲವಾರು ಬದಲಾವಣೆಗಳನ್ನು ತಂದಿದ್ದೇವೆ ಮತ್ತು ಅವರು ಗರಿಷ್ಠ ಲಾಭವನ್ನು ಪಡೆಯುತ್ತಾರೆ ಮತ್ತು ಯಾವುದೇ ನಷ್ಟದ ಸಂದರ್ಭದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು ಈ ಕಾಳಜಿಯನ್ನು ಪರಿಹರಿಸಲು ಪ್ರಯತ್ನಿಸುತ್ತದೆ ಇದರಿಂದ ರೈತರು ಗರಿಷ್ಠ ಲಾಭ ಮತ್ತು ಭದ್ರತೆಯನ್ನು ಪಡೆಯಬೇಕು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ನಾವು ಪರಿಚಯಿಸಿದ ಬದಲಾವಣೆಗಳು ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳ ರೈತರ ಹಕ್ಕುಗಳನ್ನು ಇತ್ಯರ್ಥಪಡಿಸಲು ಸಹಾಯ ಮಾಡಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ರೈತರ ಬ್ಯಾಂಕು ಖಾತೆಗೆ ಒಂದು ಲಕ್ಷ ಕೋಟಿ ರೂಪಾಯಿಗಳು ಸಂದಾಯವಾಗಿದೆ.

 

ಸ್ನೇಹಿತರೇ,

ಕನಿಷ್ಠ ಮಾರಾಟ ಬೆಲೆ(ಎಂ.ಎಸ್.ಪಿ.)ಯನ್ನು ಹೆಚ್ಚಿಸುವುದರ ಜೊತೆಗೆ, ನಾವು ಸಂಗ್ರಹಣೆ ಪ್ರಕ್ರಿಯೆಯನ್ನು ಸುಧಾರಿಸಿದ್ದೇವೆ ಇದರಿಂದ ಗರಿಷ್ಠ ರೈತರು ಲಾಭವನ್ನು ಪಡೆಯಬಹುದು. ರಬಿ ಋತುವಿನಲ್ಲಿ 430 ಲಕ್ಷಕ್ಕೂ ಹೆಚ್ಚು ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಲಾಗಿದೆ ಮತ್ತು 85,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ರೈತರಿಗೆ ಪಾವತಿಸಲಾಗಿದೆ. ಕೊರೋನದ ಮಧ್ಯೆ ಕೂಡಾ ಗೋಧಿ ಖರೀದಿ ಕೇಂದ್ರಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಅಲ್ಲದೆ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳು ಖರೀದಿ ಕೇಂದ್ರಗಳ ಸಂಖ್ಯೆಯನ್ನು ಸಹ ಮೂರು ಪಟ್ಟು ಹೆಚ್ಚಿಸಲಾಗಿದೆ. ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಹೆಚ್ಚಾಗಿ ಸಣ್ಣ ರೈತರು, ಅವರ ಸಣ್ಣ ಅಗತ್ಯಗಳನ್ನು ಪೂರೈಸಲು, ಸುಮಾರು 1.60 ಲಕ್ಷ ಕೋಟಿ ರೂಪಾಯಿಗಳನ್ನು ನಮ್ಮ 11 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ, ನಮ್ಮ ದೇಶದಲ್ಲಿ 10 ರಲ್ಲಿ ಎಂಟು ರೈತರು ಸಣ್ಣ ರೈತರು, ಅವರು ಬಹಳ ಸಣ್ಣ ಭೂಮಿಯಲ್ಲಿ ಬದುಕುತ್ತಾರೆ. ಈ ಪೈಕಿ, ಒಂದು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಈ ಕೊರೋನ ಅವಧಿಯಲ್ಲಿ ಅವರಿಗೆ ವರ್ಗಾಯಿಸಲಾಗಿದೆ. ರೈತರಿಗೆ ತಂತ್ರಜ್ಞಾನದೊಂದಿಗೆ ಸಂಪರ್ಕ ಸಾಧಿಸಲು ನಾವು ಬ್ಯಾಂಕಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸಿದ್ದೇವೆ. ಇಂದು ರೈತರು ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಉತ್ತಮ ರೀತಿಯಲ್ಲಿ ಪಡೆಯುತ್ತಿದ್ದಾರೆ. ಇತ್ತೀಚೆಗೆ, ಎರಡು ಕೋಟಿಗೂ ಹೆಚ್ಚು ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವ ಅಭಿಯಾನವನ್ನು ಕೈಗೊಳ್ಳಲಾಯಿತು. ಮೀನುಗಾರಿಕೆ ಮತ್ತು ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಕೂಡ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ)ಗೆ ಸಂಬಂಧ ಹೊಂದಿದ್ದಾರೆ. 10,000 ಕ್ಕಿಂತ ಹೆಚ್ಚು ರೈತ ಉತ್ಪಾದಕರ ಸಂಘಟನೆಗಳನ್ನು ರಚಿಸುವ, ಇ-ನಾಮ್ ಯೋಜನೆಯಡಿ ಹೆಚ್ಚಿನ ಕೃಷಿ ಮಾರುಕಟ್ಟೆಗಳನ್ನು ಜೋಡಿಸುವ ಮತ್ತು ಅಸ್ತಿತ್ವದಲ್ಲಿರುವ ಕೃಷಿ ಮಾರುಕಟ್ಟೆಗಳ ಆಧುನೀಕರಣದ ಬಗ್ಗೆ ವಿಷಯಗಳು ವೇಗವಾಗಿ ಸಾಗುತ್ತಿವೆ. ರೈತರು ಮತ್ತು ಕೃಷಿಗಾಗಿ ಕಳೆದ 6-7 ವರ್ಷಗಳಲ್ಲಿ ಕೈಗೊಂಡ ಯೋಜನೆಗಳು ಮುಂಬರುವ 25 ವರ್ಷಗಳ ರಾಷ್ಟ್ರೀಯ ನಿರ್ಣಯಗಳ ಸಾಕ್ಷಾತ್ಕಾರಕ್ಕೆ ಬಲವಾದ ಅಡಿಪಾಯವನ್ನು ಮಾಡಿವೆ. 25 ವರ್ಷಗಳ ನಂತರ ದೇಶವು ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುತ್ತದೆ. ಪ್ರಸ್ತುತ, ನಾವು ಸ್ವಾತಂತ್ರ್ಯದ ಅಮೃತ್ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಬೀಜಗಳು ಮತ್ತು ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ಕಾರ್ಯಗಳು ಒಂದು ಪ್ರಮುಖ ಆರ್ಥಿಕ ಶಕ್ತಿಯಾಗಿ ಭಾರತದ ಪ್ರಗತಿಯ ವೇಗವನ್ನು ಖಚಿತಪಡಿಸುತ್ತದೆ. 

 

ಸ್ನೇಹಿತರೇ,

ಕೃಷಿಯು ಒಂದು ರಾಜ್ಯ ವಿಷಯ ಎಂದು ನಮಗೆಲ್ಲರಿಗೂ ತಿಳಿದಿದೆ ಮತ್ತು ಅನೇಕ ಸಲ ಇದನ್ನು ರಾಜ್ಯ ವಿಷಯ ಎಂದು ಬರೆಯಲಾಗಿದೆ ಮತ್ತು ಭಾರತ ಸರ್ಕಾರ ಮಧ್ಯಪ್ರವೇಶಿಸಬಾರದು. ನನಗೂ ಇದು ತಿಳಿದಿದೆ ಏಕೆಂದರೆ ನಾನು ಹಲವು ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಕೆಲಸ ಮಾಡುವ ಸವಲತ್ತು ಹೊಂದಿದ್ದೆ. ರಾಜ್ಯಕ್ಕೂ ವಿಶೇಷ ಜವಾಬ್ದಾರಿ ಇದೆ ಎಂದು ನನಗೆ ತಿಳಿದಿತ್ತು ಮತ್ತು ನಾನು ಮುಖ್ಯಮಂತ್ರಿಯಾಗಿ ಈ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿತ್ತು. ನನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೆ. ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ನಾನು ಕೃಷಿ ವ್ಯವಸ್ಥೆ, ಕೃಷಿ ನೀತಿಗಳು ಮತ್ತು ಕೃಷಿಯ ಮೇಲೆ ಅವುಗಳ ಪ್ರಭಾವವನ್ನು ಬಹಳ ಹತ್ತಿರದಿಂದ ಅನುಭವಿಸಿದೆ. ಶ್ರೀ ನರೇಂದ್ರ ಸಿಂಗ್ ತೋಮರ್ ಜೀ ಅವರು ಗುಜರಾತಿನಲ್ಲಿ ನನ್ನ ಅಧಿಕಾರಾವಧಿಯಲ್ಲಿ ನಾನು ಏನು ಮಾಡುತ್ತಿದ್ದೆ ಎಂಬುದರ ಬಗ್ಗೆ ಉತ್ತಮ ವಿವರಣೆ ನೀಡುತ್ತಿದ್ದರು. ಒಂದು ಕಾಲದಲ್ಲಿ ಗುಜರಾತಿನಲ್ಲಿ ಕೃಷಿಯು ಕೆಲವು ಬೆಳೆಗಳಿಗೆ ಸೀಮಿತವಾಗಿತ್ತು. ಗುಜರಾತ್ ನ ಹೆಚ್ಚಿನ ಭಾಗದಲ್ಲಿ ನೀರಿನ ಕೊರತೆಯಿಂದಾಗಿ ರೈತರು ಕೃಷಿಯನ್ನು ಕೈಬಿಟ್ಟರು. ಆ ಸಮಯದಲ್ಲಿ ನಾವು ಒಂದು ಮಂತ್ರದೊಂದಿಗೆ ಮುಂದುವರಿಯುತ್ತಿದ್ದೆವು, ರೈತರನ್ನು ನಮ್ಮ ಜೊತೆಯಲ್ಲಿ ಕರೆದುಕೊಂಡು ಹೋದೆವು ಮತ್ತು ಆ ಮಂತ್ರ ಹೀಗಿತ್ತು - ಪರಿಸ್ಥಿತಿ ಬದಲಾಗಬೇಕು ಮತ್ತು ಒಟ್ಟಾಗಿ ನಾವು ಪರಿಸ್ಥಿತಿಯನ್ನು ಬದಲಾಯಿಸುತ್ತೇವೆ. ಆ ಅವಧಿಯಲ್ಲಿಯೇ, ನಾವು ವಿಜ್ಞಾನ ಮತ್ತು ಆಧುನಿಕ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾರಂಭಿಸಿದೆವು. ಇಂದು, ಗುಜರಾತ್ ದೇಶದ ಕೃಷಿ ಮತ್ತು ತೋಟಗಾರಿಕೆಯಲ್ಲಿ ಪ್ರಮುಖ ಪಾಲನ್ನು ಹೊಂದಿದೆ. ಈಗ ಗುಜರಾತಿನಲ್ಲಿ ವರ್ಷವಿಡೀ ಕೃಷಿ ಮಾಡಲಾಗುತ್ತದೆ. ಕಚ್ ನಂತಹ ಪ್ರದೇಶಗಳಲ್ಲಿಯೂ ಸಹ, ಆ ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯಲಾಗಿದ್ದು ಅದನ್ನು ಎಂದಿಗೂ ಯೋಚಿಸಲಾಗಲಿಲ್ಲ. ಈಗ ಕಚ್ ನ ಮರುಭೂಮಿಯಿಂದ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ.

 

ಸಹೋದರ ಸಹೋದರಿಯರೇ,

ಉತ್ಪಾದನೆಯ ಮೇಲೆ ಮಾತ್ರ ಗಮನ ಕೇಂದ್ರೀಕರಿಸಲಿಲ್ಲ, ಗುಜರಾತಿನಾದ್ಯಂತ ವಿಶಾಲವಾದ ಶೀತ ಸರಪಳಿಗಳ ಜಾಲವನ್ನು ಸ್ಥಾಪಿಸಲಾಯಿತು. ಇದರ ಪರಿಣಾಮವಾಗಿ, ಕೃಷಿಯ ವ್ಯಾಪ್ತಿ ವಿಸ್ತಾರವಾಯಿತು ಮತ್ತು ಕೃಷಿಗೆ ಸಂಬಂಧಿಸಿದ ಕೈಗಾರಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳು ಸೃಷ್ಟಿಯಾದವು. ಒಬ್ಬ ಮುಖ್ಯಮಂತ್ರಿಯಾಗಿ, ಇದು ರಾಜ್ಯಕ್ಕೆ ನನ್ನ ಜವಾಬ್ದಾರಿಯಾಗಿತ್ತು, ಮತ್ತು ಅದನ್ನು ನಿರ್ವಹಿಸಲು ನಾನು ಶ್ರಮಿಸಿದೆ.

 

ಸಹೋದರ ಸಹೋದರಿಯರೇ,

ಕೃಷಿಯಲ್ಲಿನ ಇಂತಹ ಆಧುನಿಕ ಬದಲಾವಣೆಗಳನ್ನು ಸ್ವಾತಂತ್ರ್ಯದ ಈ ಯುಗದಲ್ಲಿ ಮತ್ತಷ್ಟು ವಿಸ್ತರಿಸಬೇಕಾಗಿದೆ. ಹವಾಮಾನ ಬದಲಾವಣೆಯು ಕೃಷಿಗೆ ಮಾತ್ರವಲ್ಲ, ನಮ್ಮ ಇಡೀ ಪರಿಸರ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ. ಹವಾಮಾನ ಬದಲಾವಣೆಯು ನಮ್ಮ ಮೀನು ಉತ್ಪಾದನೆ, ಪ್ರಾಣಿಗಳ ಆರೋಗ್ಯ ಮತ್ತು ಉತ್ಪಾದಕತೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ರೈತರು ಮತ್ತು ಮೀನುಗಾರರು ನಷ್ಟ ಅನುಭವಿಸಬೇಕಾಗುತ್ತದೆ. ಹವಾಮಾನ ಬದಲಾವಣೆಯು ಹೊಸ ರೀತಿಯ ಕೀಟಗಳು, ರೋಗಗಳು ಮತ್ತು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತದೆ ಮತ್ತು ಇದರ ಪರಿಣಾಮವಾಗಿ ಭಾರೀ ಅಪಾಯವಿದೆ, ಕಷ್ಟ-ನಷ್ಟಗಳಾಗುತ್ತವೆ.

 

ಮಾನವರ ಆರೋಗ್ಯ ಮತ್ತು ಜಾನುವಾರುಗಳು ಮತ್ತು ಬೆಳೆಗಳ ಮೇಲೂ ಪರಿಣಾಮ ಬೀರುತ್ತದೆ. ಈ ಅಂಶಗಳು ಆಳವಾದ ಸಂಶೋಧನೆಗೆ ಅಗತ್ಯವಾಗಿವೆ. ವಿಜ್ಞಾನ, ಸರ್ಕಾರ ಮತ್ತು ಸಮಾಜ ಒಟ್ಟಾಗಿ ಕೆಲಸ ಮಾಡಿದಾಗ, ಫಲಿತಾಂಶಗಳು ಉತ್ತಮವಾಗಿರುತ್ತವೆ. ರೈತರು ಮತ್ತು ವಿಜ್ಞಾನಿಗಳ ಇಂತಹ ಒಕ್ಕೂಟವು ಹೊಸ ಸವಾಲುಗಳನ್ನು ಎದುರಿಸುವಲ್ಲಿ ದೇಶದ ಬಲವನ್ನು ಹೆಚ್ಚಿಸುತ್ತದೆ. ಜಿಲ್ಲಾ ಮಟ್ಟದಲ್ಲಿ ಇಂತಹ ವಿಜ್ಞಾನ ಆಧಾರಿತ ಕೃಷಿ ಮಾದರಿಗಳು ಕೃಷಿಯನ್ನು ಹೆಚ್ಚು ವೃತ್ತಿಪರ ಮತ್ತು ಲಾಭದಾಯಕವಾಗಿಸುತ್ತದೆ. ಹವಾಮಾನ ಬದಲಾವಣೆಯನ್ನು ಎದುರಿಸಲು ತಂತ್ರಜ್ಞಾನ ಮತ್ತು ಕಾರ್ಯವಿಧಾನಗಳನ್ನು ಪ್ರೋತ್ಸಾಹಿಸಲು ಇಂದು ಆರಂಭಿಸಲಾದ ಅಭಿಯಾನದ ಮೂಲಭೂತವಾಗಿ ಅದೇ ಆತ್ಮವಿದೆ.

 

ಸಹೋದರ ಸಹೋದರಿಯರೇ,

ಮೂಲಭೂತ ವಿಷಯಗಳಿಗೆ ಹಿಂತಿರುಗುವ (ಬ್ಯಾಕ್ ಟು ಬೇಸಿಕ್ಸ್) ಮತ್ತು ಮಾರ್ಚ್ ಫಾರ್ ಫ್ಯೂಚರ್ ನಡುವೆ ನಾವು ಸಮತೋಲನ ಸಾಧಿಸಬೇಕಾದ ಸಮಯ ಇದು. ನಾನು ಮೂಲಭೂತ ವಿಷಯಗಳಿಗೆ ಹಿಂತಿರುಗುವ ಬಗ್ಗೆ ಮಾತನಾಡುವಾಗ, ನಮ್ಮ ಸಾಂಪ್ರದಾಯಿಕ ಕೃಷಿಯ ಸಾಮರ್ಥ್ಯವು ಇಂದಿನ ಹೆಚ್ಚಿನ ಸವಾಲುಗಳನ್ನು ರಕ್ಷಿಸುತ್ತದೆ. ಸಾಂಪ್ರದಾಯಿಕವಾಗಿ, ನಾವು ಒಟ್ಟಿಗೆ ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆಯನ್ನು ಮಾಡುತ್ತಿದ್ದೇವೆ. ಇದರ ಜೊತೆಯಲ್ಲಿ, ಒಂದೇ ಸಮಯದಲ್ಲಿ ಹಲವಾರು ಹೊಲಗಳನ್ನು ಒಂದೇ ಸಮಯದಲ್ಲಿ ಬೆಳೆಯಲಾಯಿತು. ಅಂದರೆ, ನಮ್ಮ ದೇಶದ ಕೃಷಿ ಬಹು ಸಂಸ್ಕೃತಿಯಾಗಿತ್ತು, ಆದರೆ ಅದು ಕ್ರಮೇಣ ಏಕಸಂಸ್ಕೃತಿಯಾಗಿ ಬದಲಾಯಿತು. ವಿವಿಧ ಸನ್ನಿವೇಶಗಳಿಂದಾಗಿ, ರೈತರು ಒಂದೇ ಬೆಳೆಯನ್ನು ಬೆಳೆಯಲು ಆರಂಭಿಸಿದರು. ನಾವು ಒಟ್ಟಾಗಿ ಈ ಪರಿಸ್ಥಿತಿಯನ್ನು ಬದಲಾಯಿಸಬೇಕು. ಹವಾಮಾನ ಬದಲಾವಣೆಯ ಸವಾಲು ಹೆಚ್ಚುತ್ತಿರುವ ಸಮಯದಲ್ಲಿ, ನಾವು ನಮ್ಮ ಕೆಲಸವನ್ನು ವೇಗಗೊಳಿಸಬೇಕು. ಕಳೆದ ಕೆಲವು ವರ್ಷಗಳಲ್ಲಿ, ರೈತರ ಆದಾಯವನ್ನು ಹೆಚ್ಚಿಸಲು ನಾವು ಈ ಮನೋಭಾವವನ್ನು ಪ್ರೋತ್ಸಾಹಿಸಿದ್ದೇವೆ. ರೈತರನ್ನು ಕೇವಲ ಬೆಳೆ ಆಧಾರಿತ ಆದಾಯ ವ್ಯವಸ್ಥೆಯಿಂದ ಹೊರತೆಗೆಯುವ ಮೂಲಕ, ಅವರು ಮೌಲ್ಯವರ್ಧನೆ ಮತ್ತು ಇತರ ಕೃಷಿ ಆಯ್ಕೆಗಳಿಗೆ ಪ್ರೇರಣೆ ನೀಡುತ್ತಿದ್ದಾರೆ. ಸಣ್ಣ ರೈತರಿಗೆ ಇದು ತುಂಬಾ ಅಗತ್ಯವಾಗಿ ಬೇಕಾಗಿದೆ ಮತ್ತು ನಾವು ಸಣ್ಣ ರೈತರಾದ “80 ಪ್ರತಿಶತ ರೈತರ” ಮೇಲೆ ಕೇಂದ್ರೀಕರಿಸಿದ್ದೇವೆ. ಜಾನುವಾರು ಸಾಕಣೆ ಮತ್ತು ಮೀನುಗಾರಿಕೆಯೊಂದಿಗೆ, ಜೇನು ಸಾಕಣೆ, ಹೊಲಗಳಲ್ಲಿ ಸೌರ ವಿದ್ಯುತ್ ಉತ್ಪಾದನೆ, ತ್ಯಾಜ್ಯದಿಂದ ಸಂಪತ್ತಿಗೆ-ಅಂದರೆ ಎಥೆನಾಲ್, ಜೈವಿಕ ಇಂಧನ ಮುಂತಾದವುಗಳು ರೈತರಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಛತ್ತೀಸಗಢ ಸೇರಿದಂತೆ ದೇಶದ ರೈತರು ಈ ಎಲ್ಲ ಹೊಸ ವಿಷಯಗಳನ್ನು ಅತ್ಯಂತ ವೇಗವಾಗಿ ಅಳವಡಿಸಿಕೊಳ್ಳುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಕೃಷಿಯ ಜೊತೆಗೆ, ಅವರು ಇನ್ನೂ ಎರಡು ಅಥವಾ ನಾಲ್ಕು ವಿಷಯಗಳನ್ನು ವಿಸ್ತರಿಸುತ್ತಿದ್ದಾರೆ.

 

ಸ್ನೇಹಿತರೇ,

ಸ್ಥಳೀಯ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಬೆಳೆಗಳ ಉತ್ಪಾದನೆಯು ನಮ್ಮ ಸಾಂಪ್ರದಾಯಿಕ ಕೃಷಿಯ ಶಕ್ತಿಯಾಗಿದೆ. ಬರ ಇರುವಲ್ಲಿ, ಒಂದು ನಿರ್ದಿಷ್ಟ ರೀತಿಯ ಬೆಳೆಗಳನ್ನು ಉತ್ಪಾದಿಸಲಾಗುತ್ತದೆ. ಪ್ರವಾಹ, ಹೆಚ್ಚು ನೀರಿನ ಲಭ್ಯತೆ ಅಥವಾ ಹಿಮಪಾತವಿರುವಲ್ಲಿ, ಅಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ಋತುಮಾನದ ಬೆಳೆಗಳಲ್ಲಿ, ವಿಶೇಷವಾಗಿ ನಮ್ಮ ಒರಟಾದ ಸಿರಿಧಾನ್ಯಗಳು-ರಾಗಿಗಳಲ್ಲಿ ಪೌಷ್ಟಿಕಾಂಶದ ಮೌಲ್ಯವು ಹೆಚ್ಚಿನ ಪ್ರಾಮುಖ್ಯವನ್ನು ಹೊಂದಿದೆ. ಇವುಗಳು ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. ಇಂದಿನ ಜೀವನ ಶೈಲಿಯಿಂದಾಗಿ ವಿವಿಧ ರೀತಿಯ ರೋಗಗಳ ದೃಷ್ಟಿಯಿಂದ, ಈ ಸಿರಿಧಾನ್ಯಗಳು-ರಾಗಿಗಳಿಗೆ ಬೇಡಿಕೆ ತುಂಬಾ ಹೆಚ್ಚುತ್ತಿದೆ.

 

ನನ್ನ ರೈತ ಸಹೋದರ ಸಹೋದರಿಯರೇ,

ಭಾರತದ ಪ್ರಯತ್ನದಿಂದಾಗಿ ವಿಶ್ವಸಂಸ್ಥೆಯು ಮುಂದಿನ ವರ್ಷವನ್ನು ಅಂದರೆ 2023 ಅನ್ನು ಅಂತರರಾಷ್ಟ್ರೀಯ ರಾಗಿ ವರ್ಷವೆಂದು ಘೋಷಿಸಿದೆ ಎಂದು ತಿಳಿದು ನಿಮಗೆ ಸಂತೋಷವಾಗುತ್ತದೆ. ರಾಗಿ ಬೆಳೆಯುವ ನಮ್ಮ ಸಂಪ್ರದಾಯ ಮತ್ತು ನಮ್ಮ ಸಿರಿಧಾನ್ಯಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲು ಮತ್ತು ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು ಇದು ಒಂದು ಉತ್ತಮ ಅವಕಾಶ. ಆದರೆ ಇದಕ್ಕಾಗಿ ನಾವು ಈಗಿನಿಂದಲೇ ಕೆಲಸ ಮಾಡಬೇಕಾಗುತ್ತದೆ. ಇಂದು, ಈ ಸಂದರ್ಭದಲ್ಲಿ, ನಾನು ದೇಶದ ಎಲ್ಲಾ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ರಾಗಿಗೆ ಸಂಬಂಧಿಸಿದ ಆಹಾರ ಉತ್ಸವಗಳನ್ನು ಆಯೋಜಿಸಲು, ರಾಗಿಗಳಿಂದ ಹೊಸ ಆಹಾರ ತಳಿಗಳನ್ನು ಹೇಗೆ ತಯಾರಿಸಬೇಕೆಂಬುದರ ಕುರಿತು ಸ್ಪರ್ಧೆಗಳನ್ನು ನಡೆಸುವಂತೆ ನಾನು ಒತ್ತಾಯಿಸುತ್ತೇನೆ, ಏಕೆಂದರೆ ನಾವು ಇದನ್ನು ಜಗತ್ತಿಗೆ ಮುಂದಕ್ಕೆ ಕೊಂಡೊಯ್ಯಬೇಕಾದರೆ 2023, ನಾವು ಹೊಸತನದಶೋಧಗಳನ್ನು ತರಬೇಕು ಮತ್ತು ಜನರಲ್ಲಿ ಜಾಗೃತಿಯನ್ನು ಹೆಚ್ಚಿಸಬೇಕು. ರಾಗಿಗೆ ಸಂಬಂಧಿಸಿದ ವೆಬ್‌ಸೈಟ್‌ಗಳನ್ನು ಅಭಿವೃದ್ಧಿಪಡಿಸಬಹುದು. ಜಾಗೃತಿ ಅಭಿಯಾನವನ್ನು ನಡೆಸಬಹುದು ಇದರಿಂದ ಜನರು ಮುಂದೆ ಬರಬಹುದು ಮತ್ತು ರಾಗಿಯ ಪಾಕವಿಧಾನಗಳನ್ನು ಮತ್ತು ಅದರ ಅನುಕೂಲಗಳನ್ನು ಹಂಚಿಕೊಳ್ಳಬಹುದು. ಇದರ ಪ್ರಯೋಜನಗಳು ಮತ್ತು ಇತರ ಯಾವುದೇ ಆಸಕ್ತಿದಾಯಕ ಮಾಹಿತಿಯನ್ನು ಈ ವೆಬ್‌ಸೈಟ್‌ನಲ್ಲಿ ಹಾಕಬಹುದು ಇದರಿಂದ ಜನರು ಇದರೊಂದಿಗೆ ಸಂಪರ್ಕ ಹೊಂದಬಹುದು ಎಂದು ನಾನು ಭಾವಿಸುತ್ತೇನೆ. ವಿಜ್ಞಾನಿಗಳು ಮತ್ತು ಪ್ರಗತಿಪರ ರೈತರನ್ನು ಒಳಗೊಳ್ಳುವ ಮೂಲಕ ಎಲ್ಲಾ ರಾಜ್ಯಗಳು ತಮ್ಮ ಕೃಷಿ ಇಲಾಖೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾರ್ಯಪಡೆಗಳನ್ನು ಸ್ಥಾಪಿಸುವಂತೆ ನಾನು ಒತ್ತಾಯಿಸುತ್ತೇನೆ. ಭಾರತದ ಕೊಡುಗೆ ಏನು, ಭಾರತವು ಹೇಗೆ ಮುನ್ನಡೆಸಬಹುದು ಅಥವಾ ಭಾರತೀಯ ರೈತರು ಅದನ್ನು ಹೇಗೆ ಉತ್ತಮವಾಗಿ ಬಳಸಿಕೊಳ್ಳುತ್ತಾರೆ ಎಂಬುದರ ಕುರಿತು ವಿಶ್ವವು ರಾಗಿ ವರ್ಷವನ್ನು ಆಚರಿಸುವ 2023 ಕ್ಕೆ ಪೂರ್ವವಾಗಿ ನಾವು ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

 

ಸ್ನೇಹಿತರೇ,

ವಿಜ್ಞಾನ ಮತ್ತು ಸಂಶೋಧನೆಯ ಪರಿಹಾರಗಳೊಂದಿಗೆ ರಾಗಿ ಮತ್ತು ಇತರ ಧಾನ್ಯಗಳನ್ನು ಅಭಿವೃದ್ಧಿಪಡಿಸುವುದು ಕಡ್ಡಾಯವಾಗಿದೆ. ಇವುಗಳನ್ನು ದೇಶದ ವಿವಿಧ ಭಾಗಗಳಲ್ಲಿ ವಿವಿಧ ಅಗತ್ಯಗಳಿಗೆ ಅನುಗುಣವಾಗಿ ಬೆಳೆಯಬಹುದು ಎಂಬುದು ಇದರ ಉದ್ದೇಶ. ಇಂದು ಆರಂಭಿಸಿರುವ ವಿವಿಧ ಬೆಳೆಗಳಲ್ಲಿ ಈ ಪ್ರಯತ್ನಗಳ ನೋಟವನ್ನು ನಾವು ನೋಡಬಹುದು. ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಕೃಷಿ ತಂತ್ರಗಳ ಪ್ರಯೋಗಗಳು ದೇಶದಲ್ಲಿ 150 ಕ್ಕೂ ಹೆಚ್ಚು ಕ್ಲಸ್ಟರ್ ಗಳಲ್ಲಿ ನಡೆಯುತ್ತಿವೆ ಎಂದು ನನಗೆ ಹೇಳಲಾಗಿದೆ.

 

ಸ್ನೇಹಿತರೇ,

ನಮ್ಮ ಸಾಂಪ್ರದಾಯಿಕ ಕೃಷಿಯ ಜೊತೆಗೆ, ಭವಿಷ್ಯದ ಕಡೆಗೆ ದಾಪುಗಾಲಿಡುವುದು (ಮಾರ್ಚ್ ಟು ಫ್ಯೂಚರ್) ಕೂಡ ಅಷ್ಟೇ ಮುಖ್ಯವಾಗಿದೆ. ನಾವು ಭವಿಷ್ಯದ ಬಗ್ಗೆ ಮಾತನಾಡುವಾಗ, ಆಧುನಿಕ ತಂತ್ರಜ್ಞಾನ ಮತ್ತು ಹೊಸ ಕೃಷಿ ಉಪಕರಣಗಳು ಅದರ ಮೂಲಭೂತವಾಗಿವೆ. ಆಧುನಿಕ ಕೃಷಿ ಯಂತ್ರಗಳು ಮತ್ತು ಸಲಕರಣೆಗಳನ್ನು ಉತ್ತೇಜಿಸುವ ಪ್ರಯತ್ನಗಳು ಇಂದು ಫಲಿತಾಂಶಗಳನ್ನು ತೋರಿಸುತ್ತಿವೆ. ಭವಿಷ್ಯವು ಸ್ಮಾರ್ಟ್ ಯಂತ್ರಗಳು ಮತ್ತು ಸ್ಮಾರ್ಟ್ ಸಾಧನಗಳಿಗೆ ಸೇರಿದೆ. ದೇಶದಲ್ಲಿ ಪ್ರಪ್ರಥಮ ಬಾರಿಗೆ, ನಾವು ಹಳ್ಳಿಯ ಆಸ್ತಿ ದಾಖಲೆಗಳನ್ನು ತಯಾರಿಸುವಲ್ಲಿ ಡ್ರೋನ್ಗಳ ಪಾತ್ರವನ್ನು ನೋಡುತ್ತಿದ್ದೇವೆ. ಈಗ ಆಧುನಿಕ ಡ್ರೋನ್ಗಳು ಮತ್ತು ಸೆನ್ಸರ್ಗಳ ಬಳಕೆಯನ್ನು ಕೃಷಿಯಲ್ಲಿ ಹೆಚ್ಚಿಸಬೇಕಾಗಿದೆ. ಇದು ಮಾಹಿತಿ ಪಡೆಯಲು ಸಹಾಯ ಮಾಡುತ್ತದೆ. ಕೃಷಿಗೆ ಸಂಬಂಧಿಸಿದ ಗುಣಮಟ್ಟದ ಡೇಟಾ. ಇದು ಕೃಷಿಯ ಸವಾಲುಗಳಿಗೆ ನೈಜ ಸಮಯದಲ್ಲಿ ಪರಿಹಾರಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಇತ್ತೀಚಿನ ಡ್ರೋನ್ ನೀತಿಯು ಈ ನಿಟ್ಟಿನಲ್ಲಿ ಹೆಚ್ಚು ಸಹಾಯಕವಾಗಿದೆ ಎಂದು ಸಾಬೀತಾಗಿದೆ.

 

ಸ್ನೇಹಿತರೇ,

ನಾವು ಇಡೀ ಪರಿಸರವನ್ನು ಬಿತ್ತನೆಯಿಂದ ಮಾರ್ಕೆಟಿಂಗ್ ವರೆಗೆ ಆಧುನೀಕರಣಗೊಳಿಸುತ್ತಲೇ ಇರಬೇಕು. ಬೇಡಿಕೆ ಮತ್ತು ಪೂರೈಕೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸುವಲ್ಲಿ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್, ಡೇಟಾ ವಿಶ್ಲೇಷಣೆ ಮತ್ತು ಬ್ಲಾಕ್ ಚೈನ್ ತಂತ್ರಜ್ಞಾನವು ಬಹಳ ದೂರ ಹೋಗಬಹುದು. ಈ ತಂತ್ರಜ್ಞಾನಗಳನ್ನು ಹಳ್ಳಿಗಳಿಗೆ ಕೊಂಡೊಯ್ಯುವಂತಹ ಹೊಸತನದಶೋಧಗಳು ಮತ್ತು ಸ್ಟಾರ್ಟ್ ಅಪ್ ಗಳನ್ನು ನಾವು ಉತ್ತೇಜಿಸಬೇಕು. ದೇಶದ ಪ್ರತಿಯೊಬ್ಬ ರೈತ, ವಿಶೇಷವಾಗಿ ಸಣ್ಣ ರೈತ, ಈ ಹೊಸ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಬಳಸಿದರೆ, ಕೃಷಿ ವಲಯವು ಪರಿವರ್ತನೆಯಾಗುತ್ತದೆ. ರೈತರಿಗೆ ಆಧುನಿಕ ತಂತ್ರಜ್ಞಾನವನ್ನು ಕಡಿಮೆ ಬೆಲೆಯಲ್ಲಿ ಒದಗಿಸುವ ಸ್ಟಾರ್ಟಪ್ ಗಳಿಗೆ ಉತ್ತಮ ಅವಕಾಶವಿದೆ. ದೇಶದ ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ನಾನು ಮನವಿ ಮಾಡುತ್ತೇನೆ.

 

ಸ್ನೇಹಿತರೇ,

ಸ್ವಾತಂತ್ರ್ಯದ ಈ ಐತಿಹಾಸಿಕ ಅವಧಿಯಲ್ಲಿ, ನಾವು ಕೃಷಿಗೆ ಸಂಬಂಧಿಸಿದ ಆಧುನಿಕ ವಿಜ್ಞಾನವನ್ನು ಹಳ್ಳಿಗಳಿಗೆ ಕೊಂಡೊಯ್ಯಬೇಕು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ನಿಟ್ಟಿನಲ್ಲಿ ಕೆಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೃಷಿಗೆ ಸಂಬಂಧಿಸಿದ ಸಂಶೋಧನೆ ಮತ್ತು ತಂತ್ರಜ್ಞಾನವು ನಮ್ಮ ಶಾಲಾ ಪಠ್ಯಕ್ರಮದ ಒಂದು ಭಾಗವಾಗಿರಬೇಕು ಎಂದು ನಾವು ಈಗ ಪ್ರಯತ್ನಿಸಬೇಕು. ನಮ್ಮ ವಿದ್ಯಾರ್ಥಿಗಳು ಕೃಷಿ ಮಟ್ಟವನ್ನು ಶಾಲಾ ಹಂತದಿಂದಲೇ ವೃತ್ತಿಯಾಗಿ ಆಯ್ಕೆ ಮಾಡಲು ತಮ್ಮನ್ನು ತಾವಾಗಿಯೇ ಸಿದ್ಧಪಡಿಸಿಕೊಳ್ಳುವ ಆಯ್ಕೆಯನ್ನು ಮೊದಲು ನಾವು ಹೊಂದಿರಬೇಕು.

 

ಸ್ನೇಹಿತರೇ,

ನಾವು ಇಂದು ಆರಂಭಿಸಿರುವ ಅಭಿಯಾನವನ್ನು ಒಂದು ಜನಾಂದೋಲನವಾಗಿ ಪರಿವರ್ತಿಸಲು ನಾವೆಲ್ಲರೂ ನಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ಈ ಅಭಿಯಾನವು ದೇಶವನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸಲು ನಡೆಯುತ್ತಿರುವ ರಾಷ್ಟ್ರೀಯ ಪೌಷ್ಟಿಕಾಂಶ ಮಿಷನ್ ಅನ್ನು ಸಶಕ್ತಗೊಳಿಸುತ್ತದೆ. ಶಾಲೆಗಳಲ್ಲಿ ಬಡ ಮಕ್ಕಳಿಗೆ ಬಲವರ್ಧಿತ ಅಕ್ಕಿಯನ್ನು ಮಾತ್ರ ನೀಡಲು ಸರ್ಕಾರ ನಿರ್ಧರಿಸಿದೆ. ಇತ್ತೀಚೆಗೆ, ನಾನು ಒಲಿಂಪಿಕ್ಸ್ ಚಾಂಪಿಯನ್ ಗಳಿಗೆ ಅಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸುವಂತೆ ಒತ್ತಾಯಿಸಿದೆ. ಮುಂದಿನ 1-2 ವರ್ಷಗಳಲ್ಲಿ ಕನಿಷ್ಠ 75 ಶಾಲೆಗಳಿಗೆ ಹಾಜರಾಗಲು, ಪೌಷ್ಟಿಕಾಂಶ, ಕ್ರೀಡೆ ಮತ್ತು ದೈಹಿಕ ವ್ಯಾಯಾಮದ ಕುರಿತು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಲು ನಾನು ಪ್ರತಿ ಕ್ರೀಡಾಪಟುವನ್ನು ಒತ್ತಾಯಿಸಿದೆ. ಇಂದು ನಾನು ಎಲ್ಲಾ ಶಿಕ್ಷಣತಜ್ಞರು, ಕೃಷಿ ವಿಜ್ಞಾನಿಗಳು ಮತ್ತು ಎಲ್ಲಾ ಸಂಸ್ಥೆಗಳು ಸ್ವಾತಂತ್ರ್ಯದ ಅಮೃತ್ ಮಹೋತ್ಸವಕ್ಕೆ ತಮ್ಮ ಗುರಿಗಳನ್ನು ಹೊಂದಿಸುವಂತೆ ವಿನಂತಿಸುತ್ತೇನೆ. 75 ಗ್ರಾಮಗಳನ್ನು ದತ್ತು ತೆಗೆದುಕೊಳ್ಳಲು ಮತ್ತು ಪರಿವರ್ತಿಸಲು ಯಾರಾದರೂ 75 ದಿನಗಳ ಅಭಿಯಾನವನ್ನು ಕೈಗೊಳ್ಳಬಹುದು, ಅಥವಾ 75 ಶಾಲೆಗಳಲ್ಲಿ ಜಾಗೃತಿ ಮೂಡಿಸಬಹುದು ಮತ್ತು ಪ್ರತಿಯೊಂದು ಶಾಲೆಗೂ ಒಂದು ನಿರ್ದಿಷ್ಟ ಕೆಲಸವನ್ನು ನಿಯೋಜಿಸಬಹುದು. ಇಂತಹ ಅಭಿಯಾನವನ್ನು ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ವೈಯಕ್ತಿಕ ಮತ್ತು ಸಾಂಸ್ಥಿಕ ಮಟ್ಟದಲ್ಲಿ ನಡೆಸಬಹುದು. ಹೊಸ ಬೆಳೆಗಳು, ಬಲವರ್ಧಿತ ಬೀಜಗಳು ಮತ್ತು ಹವಾಮಾನ ಬದಲಾವಣೆಯ ವಿರುದ್ಧ ರಕ್ಷಣೆ ಕುರಿತು ರೈತರಿಗೆ ಮಾಹಿತಿ ನೀಡಬಹುದು. ನಮ್ಮೆಲ್ಲರ ಇಂತಹ ಮಹತ್ವದ ಪ್ರಯತ್ನವು ದೇಶದ ವ್ಯವಸಾಯವನ್ನು ಹವಾಮಾನ ವೈಪರೀತ್ಯಗಳಿಂದ ರಕ್ಷಿಸುತ್ತದೆ ಮತ್ತು ರೈತರ ಏಳಿಗೆ ಮತ್ತು ದೇಶದ ಆರೋಗ್ಯದ ಭದ್ರತೆಯನ್ನು ಖಾತ್ರಿಪಡಿಸುತ್ತದೆ ಎಂದು ನಾನು ನಂಬುತ್ತೇನೆ. ಮತ್ತೊಮ್ಮೆ, ಹೊಸ ಬೆಳೆ ತಳಿಗಳು ಮತ್ತು ಹೊಸ ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಾಗಿ ಎಲ್ಲ ರೈತ ಸ್ನೇಹಿತರಿಗೆ ಅನೇಕ ಅಭಿನಂದನೆಗಳು. ವೈಜ್ಞಾನಿಕ ವ್ಯವಸ್ಥೆಗಳು, ವೈಜ್ಞಾನಿಕ ಮನಸ್ಸುಗಳು ಮತ್ತು ವೈಜ್ಞಾನಿಕ ವಿಧಾನಗಳು ಮಾತ್ರ ಸವಾಲುಗಳನ್ನು ಎದುರಿಸಲು ಉತ್ತಮ ಪರಿಹಾರಗಳನ್ನು ನೀಡಬಲ್ಲವು ಎಂದು ತೋರಿಸಿಕೊಟ್ಟ ಈ ವಿಶ್ವವಿದ್ಯಾಲಯಗಳಿಗೆ ನನ್ನ ಶುಭಾಶಯಗಳು.

ತುಂಬಾ ಧನ್ಯವಾದಗಳು!

ಹಕ್ಕುತ್ಯಾಗ: ಇದು ಪ್ರಧಾನಮಂತ್ರಿಯವರ ಹಿಂದಿ ಭಾಷಣದ ಕನ್ನಡ ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

****




(Release ID: 1759673) Visitor Counter : 765