ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ನಿಮಾಚ್‌ ಮತ್ತು ರತ್ಲಾಮ್‌ ಜೋಡಿ ರೈಲು ಮಾರ್ಗಕ್ಕೆ ಕ್ಯಾಬಿನೆಟ್‌ ಒಪ್ಪಿಗೆ


ಒಟ್ಟು ವೆಚ್ಚ ಅಂದಾಜು ₹1,095.88 ಕೋಟಿ, ಪೂರ್ಣಗೊಳಿಸಬಹುದಾದ ವೆಚ್ಚ ಅಂದಾಜು ವೆಚ್ಚ ₹ 1,184.67 ಕೋಟಿ

ಪೂರ್ಣಗೊಂಡ ಮೊದಲ ವರ್ಷದಲ್ಲಿ ಹೆಚ್ಚುವರಿ 5.67 ದಶಲಕ್ಷ ಟನ್ ಸರಕು ಸಾಗಣೆ ನಿರೀಕ್ಷಿಸಲಾಗಿದೆ. ಹನ್ನೊಂದನೆ ವರ್ಷಕ್ಕೆ ಈ ಮೊತ್ತವು ಅಂದಾಜು 9.45 ದಶಲಕ್ಷ ಟನ್‌ನಷ್ಟು ಹೆಚ್ಚಲಿದೆ

Posted On: 29 SEP 2021 3:57PM by PIB Bengaluru

ಆರ್ಥಿಕ ವ್ಯವಹಾರ ಸಮಿತಿಯು ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಧ್ಯಕ್ಷರಾದ ಶ್ರೀ ನರೇಂದ್ರ ಮೋದಿ ಅವರು ನಿಮಾಚ್‌ ಮತ್ತು ರತ್ಲಾಮ್‌ ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಾರೆ. ಒಟ್ಟುವೆಚ್ಚ ಅಂದಾಜು ₹1,095.88 ಕೋಟಿ, ಪೂರ್ಣಗೊಳಿಸಬಹುದಾದ ವೆಚ್ಚ ಅಂದಾಜು ವೆಚ್ಚ ₹ 1,184.67 ಕೋಟಿ ಎಂದು ಅಂದಾಜಿಸಲಾಗಿದೆ. ಈ ಜೋಡಿ ಮಾರ್ಗದ ಒಟ್ಟು ಉದ್ದ 132.92 ಕಿ.ಮಿ. ಆಗಿದೆ. ನಾಲ್ಕು ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು.

ಇಲ್ಲಿ ಘಟಕಗಳನ್ನು ನಿರ್ವಹಿಸಿದರೆ ನಿಮಾಚ್‌ ರತ್ಲಮ್‌ ರೈಲು ಮಾರ್ಗದ ಉಪಯುಕ್ತತೆ ಶೇ 145.6ರಷ್ಟು ಹೆಚ್ಚುವುದು.  

ಯೋಜಿತ ಮಾರ್ಗವು ಸಂಚಾರ ನಿರತವಾಗಿರುವುದರಿಂದ ಹಾಗೂ ಸಾಮರ್ಥ್ಯಕ್ಕೆ ಮೀರಿದ ಸಂಚಾರ ಆಗುತ್ತಿರುವುದರಿಂದ ಈ ಜೋಡಿ ಮಾರ್ಗದ ಅಗತ್ಯ ಇದೆ. ಅಲ್ಲಿಯ ಸಾಮರ್ಥ್ಯ ಮೀರಿ ರೈಲುಗಳು ಸಂಚರಿಸುತ್ತಿವೆ. ಕೈಗಾರಿಕೆಗಳಿಗೆ ಕಲ್ಲಿದ್ದಲು ಸಾಗಿಸಲು, ಸಿಮೆಂಟ್‌ ಉದ್ಯಮಕ್ಕೆ ಅನುಕೂಲವಾಗುವಂಥ ಸರಕು ಸಾಗಣೆ ಸಾಗಿಸಲು ಈ ಮಾರ್ಗವನ್ನು ಬಳಸಲಾಗುತ್ತದೆ. ಈ ಪ್ರದೇಶದಲ್ಲಿ ಸಿಮೆಂಟ್‌ ಉತ್ಪಾದನೆಗೆ ಅಗತ್ಯ ಇರುವ ಲೈಮ್‌ಸ್ಟೋನ್‌ ಇರುವುದರಿಂದ ಈ ಮಾರ್ಗ ಇನ್ನೂ ಹೆಚ್ಚಾಗಿ ದುಡಿಯಬಹುದಾಗಿದೆ. ಇದೇ ಕಾರಣದಿಂದ ಜೋಡಿ ಮಾರ್ಗ ಅತ್ಯಗತ್ಯವಾಗಿದೆ.   

ಈ ಎರಡು ನಿಲ್ದಾಣಗಳ ನಡುವಿನ ಮಾರ್ಗವನ್ನು ಜೋಡಿ ಮಾರ್ಗವಾಗಿ ಬದಲಿಸುವುದರಿಂ ರೈಲು ಸಂಚಾರದ ಸಾಮರ್ಥ್ಯ ಹೆಚ್ಚುತ್ತದೆ. ಇದೇ ವ್ಯವಸ್ಥೆಯಲ್ಲಿ ಇನ್ನಷ್ಟು ಸರಕು ಸಾಗಣೆಗೆ ಹಾಗೂ ಪ್ರಯಾಣಿಕರಿಗಾಗಿ ಹೊಸ ರೈಲುಗಳನ್ನೂ ಪರಿಚಯಿಸಬಹುದಾಗಿದೆ. ಸಿಮೆಂಟ್‌ ಕೈಗಾರಿಕೆ ಸ್ಥಾಪನೆಗೆ ಸಾಕಷ್ಟು ಸಾಧ್ಯತೆಗಳಿರುವುದರಿಂದ ಮೊದಲ ವರ್ಷವೇ ಸರಕು ಸಾಗಾಣಿಕೆಯಲ್ಲಿ 5.67 ದಶಲಕ್ಷ ದಷ್ಟು ಹೆಚ್ಚಳ ಕಂಡು ಬರುವ ಅಂದಾಜಿದೆ. ಹನ್ನೊಂದನೆ ವರ್ಷಕ್ಕೆ 9.45 ದಶಲಕ್ಷದಷ್ಟು ಸರಕು ಸಾಗಣೆ ಹೆಚ್ಚಬಹುದಾಗಿದೆ. ಈ ಮಾರ್ಗದಿಂದ ಸರಳವಾದ ಸಂಪರ್ಕ ಸಾಧನವನ್ನು ಆಯೋಜಿಸಿದಂತಾಗುತ್ತದೆ. ಈ ಭಾಗದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ. ಈ ಯೋಜನೆಯಿಂದ ಈ ಪ್ರದೇಶದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ನೀಡಲಿದೆ. ಈ ಯೋಜನೆಯ ಸಮೀಪದಲ್ಲಿರುವ ಉಂಚಗಢ ಕೋಟೆಗೆ ಸಂಚಾರ ಸಂಪರ್ಕ ಸಾಧಿಸಿದಂತೆ ಆಗುತ್ತದೆ.

***(Release ID: 1759403) Visitor Counter : 160