ಕಲ್ಲಿದ್ದಲು ಸಚಿವಾಲಯ

ಹನ್ನೊಂದು ಕಲ್ಲಿದ್ದಲು ಗಣಿಗಳ ಕಲ್ಲಿದ್ದಲು ಮಾರಾಟಕ್ಕಾಗಿ ಹರಾಜು ಪ್ರಕ್ರಿಯೆಯ ಎರಡನೇ ಹಂತ ಆರಂಭ

Posted On: 27 SEP 2021 12:50PM by PIB Bengaluru

ಕೇಂದ್ರ ಕಲ್ಲಿದ್ದಲು ಸಚಿವಾಲಯದ ನಾಮನಿರ್ದೇಶಿತ ಪ್ರಾಧಿಕಾರವು ಇಂದು ಹನ್ನೊಂದು ಕಲ್ಲಿದ್ದಲು ಗಣಿಗಳ ಎರಡನೇ ಹರಾಜು ಹಂತವನ್ನು (4 ಗಣಿಗಳ ಸಿಎಂ (ಎಸ್.ಪಿ) ಕಾಯ್ದೆಯ 12 ಗಣಿ ಮತ್ತು ಎಂ.ಎಂ.ಡಿ.ಆರ್ ಕಾಯಿದೆಯ 2 ಗಣಿಗಳ ಪ್ರಕಾರ) ಕಾಯಿದೆಗಳ ಅಡಿಯಲ್ಲಿ ಸೂಚಿಸಲಾದ ನಿಯಮಗಳಿಗೆ ಅನುಗುಣವಾಗಿ ಕಲ್ಲಿದ್ದಲು ಹರಾಜು ಪ್ರಕ್ರಿಯೆ  ಪ್ರಾರಂಭಿಸಿದೆ 11 ಗಣಿಗಳಲ್ಲಿ, ಆರು ಗಣಿಗಳ ಕೊರೆತವನ್ನು ಸಂಪೂರ್ಣಗೊಳಿಸಲಾಗಿದೆ ಮತ್ತು ಐದರ ಕೊರೆತ ಭಾಗಶಃ ಶೋಧಿಸಲಾಗಿದೆ ವರ್ಷದ ಮಾರ್ಚ್ 25 ರಂದು ಪ್ರಾರಂಭವಾದ ಮೊದಲ ಪ್ರಯತ್ನದಲ್ಲಿ ನೀಡಲಾದ ಗಣಿಗಳು ಇವುಗಳಾಗಿದ್ದು, ಹಾರಾಜಿನ ಒಂದೇ ಬಿಡ್‌ಗಳನ್ನು ಪಡೆದಿವೆ.

ಹರಾಜನ್ನು ಜಾಲತಾಣದಲ್ಲಿ ಪಾರದರ್ಶಕವಾಗಿ ಹಂತದ ಪ್ರಕ್ರಿಯೆಯ ಮೂಲಕ ಶೇಕಡಾವಾರು ಆದಾಯ ಹಂಚಿಕೆಯ ಆಧಾರದ ಮೇಲೆ ನಡೆಸಲಾಗುತ್ತದೆ. ಹರಾಜು ಪ್ರಕ್ರಿಯೆಯ ಪ್ರಮುಖ ಲಕ್ಷಣಗಳೆಂದರೆ ರಾಷ್ಟ್ರೀಯ ಕಲ್ಲಿದ್ದಲು ಸೂಚ್ಯಂಕದ ಪರಿಚಯ, ಮೊದಲಿನ ಕಲ್ಲಿದ್ದಲು ಗಣಿಗಾರಿಕೆ ಅನುಭವಕ್ಕೆ ಯಾವುದೇ ನಿರ್ಬಂಧವಿಲ್ಲದೆ ಸುಲಭವಾಗಿ ಭಾಗವಹಿಸುವಿಕೆ, ಕಲ್ಲಿದ್ದಲು ಬಳಕೆಯಲ್ಲಿ ಸಂಪೂರ್ಣ ನಮ್ಯತೆ, ಸೂಕ್ತ ಪಾವತಿ ರಚನೆಗಳು, ಆರಂಭಿಕ ಉತ್ಪಾದನೆಗೆ ಪ್ರೋತ್ಸಾಹದ ಮೂಲಕ ದಕ್ಷತೆಯ ಪ್ರಚಾರ ಮತ್ತು ಶುದ್ಧ ಕಲ್ಲಿದ್ದಲು ತಂತ್ರಜ್ಞಾನದ ಬಳಕೆ, ಇತ್ಯಾದಿಗಳಾಗಿವೆ.

ಟೆಂಡರ್ ದಸ್ತಾವೇಜು ಮಾರಾಟದ ಆರಂಭವು ಸೆಪ್ಟೆಂಬರ್ 27, 2021 ರಿಂದ ಪ್ರಾರಂಭವಾಗುತ್ತದೆ. ಗಣಿಗಳ ವಿವರಗಳು, ಹರಾಜು ನಿಯಮಗಳು, ಸಮಯಾವಧಿಗಳು ಇತ್ಯಾದಿಗಳನ್ನು ಎಂ.ಎಸ್.ಟಿ.ಸಿ. ಜಾಲತಾಣ ಹರಾಜು ವೇದಿಕೆ (https://www.mstcecommerce.com/auctionhome/coalblock/index.jsp) ಮೂಲಕ ಪಡೆಯಬಹುದು.

***



(Release ID: 1758577) Visitor Counter : 180