ಯುಪಿಎಸ್‍ಸಿ ( ಕೇಂದ್ರ ಸಾರ್ವಜನಿಕ ಸೇವೆಗಳ ಆಯೋಗ)
azadi ka amrit mahotsav

ರಾಷ್ಟ್ರೀಯ ಭದ್ರತಾ ಅಕಾಡೆಮಿ (ಎನ್‌ಡಿಎ), ನೌಕಾಸೇನಾ ಪರೀಕ್ಷೆ 2021 ಸಾಲಿಗಾಗಿ ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಆಹ್ವಾನ, ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ

Posted On: 24 SEP 2021 1:17PM by PIB Bengaluru

ಭೂಸೇನೆ ಮತ್ತು ನಾಕಾ ಸೇನೆಯಲ್ಲಿ ಮಹಿಳೆಯರೂ ಪಾಲ್ಗೊಳ್ಳಬಹುದು ಎಂಬ ಸುಪ್ರೀಮ್‌ ಕೋರ್ಟ್‌ನ ಮಧ್ಯಂತರ ತೀರ್ಪಿಗೆ ಅನುಗುಣವಾಗಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹಾಗೂ ನೌಕಾಸೇನಾ ಅಕಾಡೆಮಿಗಾಗಿ ಮಹಿಳಾ ಅಭ್ಯರ್ಥಿಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.  18–08ರಂದು ಕುಶ್‌ ಕಾಲ್ರಾ /ಯುಒಐ ಮತ್ತು ಇತರರು ಸಂಬಂಧಿಸಿದಂತೆ,  ಆದೇಶದ ಅನ್ವಯ, ಯುಪಿಎಸ್‌ಸಿಯು ಆನ್‌ಲೈನ್‌ ಅರ್ಜಿ ಆಹ್ವಾನಿಸಿದೆ.  (upsconline.nic.in) ಅವಿವಾಹಿತ ಮಹಿಳೆಯರು ಮಾತ್ರ ಈ ಪರೀಕ್ಷೆಗಳಿಗೆ ಅರ್ಹರಾಗಿರುತ್ತಾರೆ. 09/06/2021ರಂದು ಪ್ರಕಟಿಸಿದ ಸುತ್ತೋಲೆ ಸಂಖ್ಯೆ  10/2021-NDA-II ಅನ್ವಯ ಅವಿವಾಹಿತೆಯರಿಗೆ ಮಾತ್ರ ಅವಕಾಶವಿದೆ.

ಈ ಪ್ರಕಟಣೆಯು ಕಮಿಷನ್‌ನ ವೆಬ್‌ಸೈಟ್‌ www.upsc.gov.in ನಲ್ಲಿ ಲಭ್ಯವಿದೆ. 24–09–2021ರಿಂದ 08–10-2021 ಸಂಜೆ ಆರರವರೆಗೆ ಆನ್‌ಲೈನ್‌ನಲ್ಲಿ ಅರ್ಜಿಗಳು ಲಭ್ಯ ಇರುತ್ತವೆ.  

***


(Release ID: 1757665) Visitor Counter : 276