ಪ್ರಧಾನ ಮಂತ್ರಿಯವರ ಕಛೇರಿ
ಕ್ವಾಲ್ಕೋಮ್ ಸಿ.ಇ.ಒ. ಶ್ರೀ ಕ್ರಿಸ್ಟಿಯಾನೋ ಅಮೋನ್ ಜೊತೆ ಪ್ರಧಾನ ಮಂತ್ರಿ ಅವರ ಸಭೆ
Posted On:
23 SEP 2021 8:07PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕ್ವಾಲ್ಕೋಮ್ ಸಿ.ಇ.ಒ. ಶ್ರೀ ಕ್ರಿಸ್ಟಿಯಾನೋ ಅಮೋನ್ ಅವರನ್ನು ಭೇಟಿಯಾದರು.
ಮಾತುಕತೆಯಲ್ಲಿ ಅವರು ಭಾರತದ ದೂರಸಂಪರ್ಕ ಮತ್ತು ವಿದ್ಯುನ್ಮಾನ ವಲಯದಲ್ಲಿ ಒದಗಿಸಲಾಗುವ ಹೂಡಿಕೆ ಅವಕಾಶಗಳ ಬಗ್ಗೆ ಚರ್ಚಿಸಿದರು. ಇತ್ತೀಚೆಗೆ ಆರಂಭಿಸಲಾದ ವಿದ್ಯುನ್ಮಾನ ವಿನ್ಯಾಸ ಮತ್ತು ಉತ್ಪಾದನಾ ವ್ಯವಸ್ಥೆಗಾಗಿರುವ (ಇ.ಎಸ್.ಡಿ.ಎಂ.) ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆ (ಪಿ.ಐ.ಎಲ್.) ಸಹಿತ, ಭಾರತದಲ್ಲಿಯ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯಲ್ಲಾಗುತ್ತಿರುವ ಬೆಳವಣಿಗೆಗಳು , ಭಾರತದಲ್ಲಿ ಸ್ಥಳೀಯ ಅನ್ವೇಷಣಾ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡಲು ವ್ಯೂಹಗಳ ರಚನೆ ವಿಷಯಗಳು ಮಾತುಕತೆಯಲ್ಲಿ ಪ್ರಸ್ತಾಪವಾದವು.
***
(Release ID: 1757494)
Visitor Counter : 187
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam