ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ)ಯ ನಾಲ್ಕನೆ ಹಂತದಲ್ಲಿ ದೇಶದಾದ್ಯಂತ ಶೇ 56.53% ಆಹಾರ ಧಾನ್ಯಗಳ ವಿತರಣೆ

ಪಿಎಂಜಿಕೆಎವೈನ ನಾಲ್ಕನೆ ಹಂತದಲ್ಲಿ ಅಂಡಮಾನ್‌ ನಿಕೋಬಾರ್‌ಗಳಲ್ಲಿ ಅತಿ ಹೆಚ್ಚು ಆಹಾರ ಧಾನ್ಯಗಳ ವಿತರಣೆ

ಕೇಂದ್ರೀಯ ಆಡಳಿತ ಪ್ರದೇಶವಾದ ಅಂಡಮಾನ್‌ ನಿಕೋಬಾರ್‌ನಲ್ಲಿ ಶೇ.93ರಷ್ಟು, ಅತಿ ಹೆಚ್ಚು ಪ್ರಮಾಣದ ದವಸಧಾನ್ಯ ಒದಗಿಸಲಾಗಿದೆ

Posted On: 22 SEP 2021 4:28PM by PIB Bengaluru

ಕೇಂದ್ರಾಡಳಿತ ಪ್ರದೇಶ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹವು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯ ನಾಲ್ಕನೇ ಹಂತದಲ್ಲಿ ಅತಿ ಹೆಚ್ಚು ಆಹಾರ ಧಾನ್ಯ ಪಡೆದ ಪ್ರದೇಶವಾಗಿದೆ.  

ಕೇಂದ್ರಾಡಳಿತ ಪ್ರದೇಶ ಅಂಡಮಾನ್‌ ಮತ್ತು ನಿಕೋಬಾರ್‌ಗೆ ನಿಗದಿಯಾದ ಆಹಾರ ಧಾನ್ಯಗಳ ಪ್ರಮಾಣದಲ್ಲಿ ಶೇ 93ರಷ್ಟು ಆಹಾರ ಧಾನ್ಯವನ್ನು ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯ ನಾಲ್ಕನೆ ಹಂತದಲ್ಲಿ ಪಡೆದುಕೊಂಡಿದೆ (ಜುಲೈ2021–ಸೆ.15ರವರೆಗಿನ ಅವಧಿ). ಒಡಿಶಾ ರಾಜ್ಯವು ಇದಕ್ಕೆ ಸಮೀಪವಾಗಿ ಶೇ 92ರಷ್ಟು, ತ್ರಿಪುರಾ ಮತ್ತು ಮೇಘಾಲಯಗಳು ಮೂರನೆಯ ಸ್ಥಾನದಲ್ಲಿ ಶೇ 73ರಷ್ಟು ಪಡೆದಿವೆ. ಇದೇ ಅವಧಿಯಲ್ಲಿ ತೆಲಂಗಾಣ, ಮಿಝೋರಾಮ್‌ ಹಾಗೂ ಅರುಣಾಚಲ ಪ್ರದೇಶ ರಾಜ್ಯಗಳು ಶೇ 71ರಷ್ಟು ಪಡೆದಿವೆ. ಪಿಎಂಜಿಕೆಎವೈನ ನಾಲ್ಕನೆ ಹಂತ 2021ರ ಜುಲೈನಿಂದ ಸೆ.15ರವರೆಗೆ ನಿಗದಿಯಾಗಿತ್ತು. ಈ ಅವಧಿಯಲ್ಲಿ ಇಡೀ ರಾಷ್ಟ್ರದಲ್ಲಿ ಶೇ 56.23ರಷ್ಟು ಹಂಚಿಕೆಯಾಗಿದೆ. 

ಮೂರನೆಯ ಹಂತದಲ್ಲಿ ಗರಿಷ್ಠಮಟ್ಟದ ಆಹಾರ ಧಾನ್ಯ ಹಂಚಿಕೆಯಾಗಿತ್ತು. ಶೇ 98.41ರಷ್ಟು ಹಂಚಿಕೆಯಾಗಿದ್ದು ಗಮನಾರ್ಹ. 

ಭಾರತ ಸರ್ಕಾರವು ಪಿಎಂಜಿಕೆಎವೈ ಯೋಜನೆಯಲ್ಲಿ 600ಎಲ್‌ಎಂಟಿಯಷ್ಟು ಆಹಾರಧಾನ್ಯವನ್ನು ನಾಲ್ಕು ಹಂತಗಳಲ್ಲಿ ಹಂಚಿಕೆ ಮಾಡಲಾಗಿದೆ. ಎಲ್ಲ ಹಂತಗಳಲ್ಲಿಯೂ ಒಟ್ಟು ಶೇ 82.76ರಷ್ಟು ಆಹಾರ ಧಾನ್ಯವು ಹಂಚಿಕೆಯಾಗಿದೆ. ಯೋಜನೆ ಆರಂಭವಾದ ನಂತರ ಸೆ.2021ರವರೆಗಿನ ಅವಧಿಯಲ್ಲಿ ಈ ಹಂಚಿಕೆಯಾಗಿದೆ. 

ಯೋಜನೆಯ ಪ್ರತಿ ಹಂತದಲ್ಲಿಯೂ ಕೇಂದ್ರವು ಆಹಾರ ಧಾನ್ಯವನ್ನು ವಿತರಿಸುತ್ತದೆ. ಒಮ್ಮೆ ರಾಜ್ಯ ಸರ್ಕಾರವು ಆಯಾ ರಾಜ್ಯಗಳಿಗೆ ಹಂಚಿಕೆಯಾಗಿರುವ ಆಹಾರ ಧಾನ್ಯಗಳನ್ನು ಕೇಂದ್ರದಿಂದ ಪಡೆಯುವುದಕ್ಕೆ ಲಿಫ್ಟಿಂಗ್‌ ಎಂದು ಕರೆಯಲಾಗುತ್ತಿದೆ. ಹೀಗೆ ಪಿಎಂಜಿಕೆಎವೈ ಯೋಜನೆಯ ಅಡಿಯಲ್ಲಿ ಆಹಾರ ಧಾನ್ಯ ಪಡೆದಿರುವ ವಿವರ ಇಲ್ಲಿದೆ. 

ರಾಜ್ಯ ಹಾಗೂ ಕೇಂದ್ರ ಆಡಳಿತ ಪ್ರಾದೇಶಿಕವಾರು ಹಂಚಿಕೆಯಾಗಿರುವ ಪ್ರಮಾಣ ಮತ್ತು ಪಡೆದಿರುವ ಪ್ರಮಾಣದ ವಿವರ

ಈ ಕೋವಿಡ್‌ನಂತಹ ದುರಿತ ಕಾಲದಲ್ಲಿ ಬಡವರು ಮತ್ತು ಅಗತ್ಯವುಳ್ಳ ಕಾರ್ಮಿಕ ಜನರು ಆಹಾರಧಾನ್ಯಕ್ಕಾಗಿ ಕಷ್ಟಪಡುವುದನ್ನು ಮನಗಂಡು, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆ ಅಡಿಯಲ್ಲಿ ಅವರಿಗೆ ನೀಡುತ್ತಿದ್ದ ಪಡಿತರದ ಪ್ರಮಾಣವನ್ನು ದ್ವಿಗುಣಗೊಳಿಸಲಾಯಿತು. ರಾಷ್ಟ್ರೀಯ ಆಹಾರ ಸುರಕ್ಷಾ ಕಾಯ್ದೆ ಅನ್ವಯ ದೇಶದಲ್ಲಿ 80 ಕೋಟಿ ಜನರಿಗೆ ಪಡಿತರ ವಿತರಿಸಲಾಗುತ್ತದೆ. ಹೀಗೆ ಪಡೆಯುವ ಫಲಾನುಭವಿಗಳಿಗೆ ಕೇಂದ್ರಸರ್ಕಾರವು ಈ ಯೋಜನೆಯ ಮೂಲಕ ಕುಟುಂಬದ ಪ್ರತಿ ಸದಸ್ಯನಿಗೆ 5 ಕೆ.ಜಿಯಷ್ಟು ಹೆಚ್ಚುವರಿ ಆಹಾರ ಧಾನ್ಯವನ್ನು ಪ್ರತಿತಿಂಗಳೂ ಉಚಿತವಾಗಿ ನೀಡುವಂತೆ ಮಾಡಿತು. ರಾಷ್ಟ್ರೀಯ ಆಹಾರ ಸುರಕ್ಷಾ ನೀತಿ ಅನ್ವಯ ಅಂತ್ಯೋದಯ ಅನ್ನ ಯೋಜನೆಯನ್ನು ಪಡಿತರ ಚೀಟಿ ಪಡೆದಿರುವ ಕುಟುಂಬ ಸದಸ್ಯರಿಗೆ ನೀಡಲಾಗುತ್ತದೆ. (35 ಕೆ.ಜಿ. ಪ್ರತಿ ಕುಟುಂಬಕ್ಕೆ ಹಾಗೂ ಪ್ರತಿ ಸದಸ್ಯನಿಗೆ ತಲಾ ಐದು ಕೇಜಿ ಹೆಚ್ಚುವರಿ ಧಾನ್ಯವನ್ನು ಏಪ್ರಿಲ್‌ ತಿಂಗಳಿನಿಂದ ಜೂನ್‌ ತಿಂಗಳವರೆಗೂ ಮೂರು ತಿಂಗಳ ಅವಧಿಗೆ ವಿತರಿಸಲಾಗಿದೆ. ಆದರೆ ಕೋವಿಡ್‌ನ ದುಷ್ಪರಿಣಾಮದಿಂದಾಗಿ ಆರ್ಥಿಕ ಹಿನ್ನೆಡೆಯ ಅವಧಿ ಮುಂದುವರಿಯಿತು. ಈ ಯೋಜನೆಯನ್ನು ಇನ್ನೈದು ತಿಂಗಳಿಗೆ ವಿಸ್ತರಿಸಲಾಯಿತು. ಜುಲೈ ತಿಂಗಳಿನಿಂದ ನವೆಂಬರ್‌ 2020ರವರೆಗೂ ಯೋಜನೆಯನ್ನು ವಿಸ್ತರಿಸಲಾಯಿತು. ಕೋವಿಡ್‌ ದುರಿತ ಕಾಲದ ಎರಡನೆಯ ಅಲೆ ಆರಂಭವಾದ ನಂತರ ಪಿಎಂಜಿಕೆಎವೈ ಯೋಜನೆಯನ್ನು ಮತ್ತೆರಡು ತಿಂಗಳಿಗೆ ವಿಸ್ತರಿಸಲಾಯಿತು. ಮೇ ಮತ್ತು ಜೂನ್‌ 2021ರ ಅವಧಿಗೆ ವಿಸ್ತರಿಸಲಾಯಿತು. ನಂತರ ಮತ್ತೆ ಐದು ತಿಂಗಳವರೆಗೆ ಜುಲೈ ನಿಂದ ಸೆಪ್ಟೆಂಬರ್‌ 2021ರ ಅವಧಿಯವರೆಗೆ ಪಿಎಂಜಿಕೆಎವೈ ಯೋಜನೆಯನ್ನು ವಿಸ್ತರಿಸಲಾಗಿದೆ.  

***(Release ID: 1757067) Visitor Counter : 93