ಉಕ್ಕು ಸಚಿವಾಲಯ

ರಾಷ್ಟ್ರೀಯ ನಿರ್ಮಾಣ ಕಾರ್ಯದಲ್ಲಿ ಪೈಪ್‌ಲೈನ್‌ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸ್ಟೀಲ್‌ ಬಳಕೆ ಹೆಚ್ಚಿಸಲು ಸಹಕಾರಿ ಹಾಗೂ ಸಂಯುಕ್ತ ಮಾರ್ಗದ ಅಗತ್ಯ: ಕೇಂದ್ರ ಉಕ್ಕು ಸಚಿವರ ಅಭಿಪ್ರಾಯ; ಭಾರತೀಯ ಸ್ಟೀಲ್‌ ಸಂಸ್ಥೆಯೊಂದಿಗೆ ಸಭೆ ಆಯೋಜನೆ


ಹೈಡ್ರೋಜನ್‌ ಬಳಕೆಯ ಹೆಚ್ಚಳಕ್ಕೆ ಶ್ರೀ ರಾಮ ಚಂದ್ರ ಪ್ರಸಾದ್‌ ಸಿಂಗ್‌ ಉತ್ತೇಜನ 

Posted On: 20 SEP 2021 4:20PM by PIB Bengaluru

ಕೇಂದ್ರ ಉಕ್ಕಿನ ಸಚಿವರಾದ ಶ್ರೀ ರಮಚಂದ್ರ ಪ್ರಸಾದ್‌ ಸಿಂಗ್‌ ಭಾರತೀಯ ಉಕ್ಕು ಸಂಸ್ಥೆಯೊಂದಿಗೆ ಸಭೆ (Indian Steel Association ISA) ಏರ್ಪಡಿಸಿ, ಸಂವಾದದಲ್ಲಿ ಪಾಲ್ಗೊಂಡರು. ಸಮಗ್ರ ಸ್ಟೀಲ್‌ ಉತ್ಪಾದಕರ (Integrated steel producers (ISPs))  ಪ್ರಾತಿನಿಧ್ಯವು  ಸಭೆಯಲ್ಲಿತ್ತು. ದೇಶದ ಶೇ 90ರಷ್ಟು ಉಕ್ಕು ಉತ್ಪಾದಿಸುವ ಐಎಸ್‌ಎ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಕ್ಷೇತ್ರದ ಮುಂಚೂಣಿಯಲ್ಲಿರುವ ಉತ್ಪಾದಕ ನಾಯಕರು, ದಿಲಿಪ್‌ ಒಮ್ಮೆನ್‌ (ಅಧ್ಯಕ್ಷರು ಐಎಸ್‌ಎ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಎಎಂ/ಎನ್‌ ಎಸ್‌ ಇಂಡಿಯಾ), ಸೋಮ ಮಂಡಲ್ (ಅಧ್ಯಕ್ಷರು ಎಸ್‌ಎಐಎಲ್‌), ಟಿ.ವಿ. ನರೇಂದ್ರನ್‌ (ಸಿಇಒ ಟಾಟಾ ಸ್ಟೀಲ್‌ ಲಿ.), ಸಜ್ಜನ್‌ ಜಿಂದಾಲ್‌ (ಅಧ್ಯಕ್ಷರು ಜೆಎಸ್‌ಡಬ್ಲು ಲಿ), ನವೀನ್‌ ಜಿಂದಾಲ್‌ (ಅಧ್ಯಕ್ಷರು ಜೆಎಸ್‌ಪಿಎಲ್‌) ಅವರನ್ನೂ ಒಳಗೊಂಡಂತೆ ಬಹುತೇಕ ಉತ್ಪಾದನಾ ಕಂಪನಿಗಳು ಪಾಲ್ಗೊಂಡಿದ್ದವು. ಸಭೆಯಲ್ಲಿ ಸರ್ಕಾರದಿಂದ ಉಕ್ಕಿನ ಉತ್ಪಾದನಾ ಕೈಗಾರಿಕೆಗಳಿಗೆ ಅಗತ್ಯ ಇರುವ ಬೆಂಬಲದ ಕುರಿತು ಚರ್ಚಿಸಲಾಯಿತು. ಉಕ್ಕಿನ ಬೇಡಿಕೆಯ ಸೃಷ್ಟಿ, ಪಿಎಲ್‌ಐ ಸ್ಕೀಮ್‌ನ ನಿಯಮಗಳ ಕುರಿತು ಮಾಹಿತಿ, ರಾಷ್ಟ್ರೀಯ ಖನಿಜ ಸೂಚ್ಯಂಕದ ಕುರಿತು ಮಾಹಿತಿ, ಸರಕು ಸಾಗಾಣಿಕೆ ಹಾಗೂ ಸಾಮರ್ಥ್ಯ ಹೆಚ್ಚಳಕ್ಕೆ ಸಂಬಂಧಿಸಿದ ಅನುಮತಿ ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ವಿಲೇ ಮಾಡುವ ಬಗ್ಗೆ ಚರ್ಚಿಸಲಾಯಿತು.

ಸಚಿವರು ಉತ್ಪಾದಕರಿಗೆ ಬೇಡಿಕೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ಅಗತ್ಯದ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು. ಸಹಜವಾಗಿ ಮತ್ತು ನೈಸರ್ಗಿಕವಾಗಿ ಬೇಡಿಕೆಯನ್ನು ಹೆಚ್ಚಿಸಲು ಮನೆ ನಿರ್ಮಾಣ, ಗ್ರಹಬಳಕೆ ಗ್ಯಾಸ್‌, ನೀರು ಸರಬರಾಜು ಮುಂತಾದವುಗಳಲ್ಲಿ ಸ್ಟೀಲ್‌ ಪೈಪುಗಳನ್ನು ಬಳಸುವ ಕುರಿತು ವ್ಯಾಪಕ ಪ್ರಚಾರ ಕೈಗೊಂಡು ಜಾಗೃತಿ ಮೂಡಿಸಲು ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು.

2021 ಜುಲೈನಲ್ಲಿ ನಿರ್ದೇಶಿಸಲಾಗಿರುವ ಉತ್ಪಾದನಾ ಸಂಬಂಧಿ ಉತ್ತೇಜನಾ ವಿಶೇಷ  ಯೋಜನೆಗೆ ಸಂಬಂಧಿಸಿದಂತೆ ಅಗತ್ಯಕ್ರಮಗಳನ್ನು ಕೈಗೊಳ್ಳಲು ಸಚಿವಾಲಯದ ಅಧಿಕಾರಿಗಳಿಗೆ ಕೇಂದ್ರ ಸಚಿವರಾದ ಶ್ರೀ ರಾಮ ಚಂದ್ರ ಪ್ರಸಾದ್‌ ಸಿಂಗ್‌ ಸೂಚಿಸಿದರು. ಉತ್ಪಾದನಾ ಕ್ಷೇತ್ರಕ್ಕೆ ನೀಡಲಾದ ಯೋಜನೆ ಸಮರ್ಥನೀಯವಾಗಿ ಕಾರ್ಯಾನುಷ್ಠಾನಕ್ಕೆ ಬರಬೇಕು ಎಂದು ಸೂಚಿಸಿದರು. ಸರುಕು ಸಾಗಾಣಿಕೆಯಲ್ಲಿ ಒಳನಾಡಿನ ಜಲಮಾರ್ಗಗಳ ಬಳಕೆಗೆ ಹೆಚ್ಚು ಗಮನ ನೀಡುವಂತೆ ತಿಳಿಸಿದರು. ಶ್ರೀ ಸಿಂಗ್‌ ಅವರು ಉತ್ಪಾದನಾ ಜೋಡಣೆಯ ಯೋಜನೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಕಾರ್ಯಾನುಷ್ಠಾನಕ್ಕೆ ತರುವ ಮುನ್ನ ಎಲ್ಲ ಸ್ಟೀಲ್‌ ಉತ್ಪಾದಕರೊಂದಿಗೂ ಮಾತನಾಡಬೇಕು. ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸಚಿವಾಲಯದ ನಡುವೆ ಉತ್ತಮ ಬಾಂಧವ್ಯ ಮತ್ತು ಸಂವಹನಗಳೆರಡೂ ಇರಬೇಕು ಎನ್ನುವ ವಿಷಯಕ್ಕೆ ಹೆಚ್ಚು ಒತ್ತು ನೀಡಿದರು.

ಉಕ್ಕಿನ ಕ್ಷೇತ್ರವು ತನ್ನ ಸರಕು ಸಾಗಾಣಿಕೆಗೆ, ಕಚ್ಚಾ ವಸ್ತುಗಳ ಮತ್ತು ಸಿದ್ಧ ವಸ್ತುಗಳ ಸಾಗಾಣಿಕೆಗೆ ರೈಲು ಮಾರ್ಗವನ್ನೇ ಹೆಚ್ಚು ಬಳಸುತ್ತದೆ. ರೈಲ್ವೆ ಸಚಿವಾಲಯದೊಂದಿಗೆ ಕ್ಷೇತ್ರದ ಅಗತ್ಯಗಳ ಕುರಿತು ತ್ವರಿತವಾಗಿ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಬೇಕು. ಅಷ್ಟೇ ಅಲ್ಲ, ಉಕ್ಕು ಉತ್ಪಾದನಾ ವಲಯದಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ, ಮಾಲಿನ್ಯವನ್ನು ತಡೆಯುವತ್ತಲೂ ಗಮನಹರಿಸುವಂತೆ ಸೂಚಿಸಿದರು. ನಿಟ್ಟಿನಲ್ಲಿ ಜಲಜನಕವನ್ನು ಬೃಹತ್‌ ಪ್ರಮಾಣದಲ್ಲಿ ಬಳಸುವಂತೆ ಸಲಹೆ ನೀಡಿದರು

ಗುಣಮಟ್ಟ ನಿಯಂತ್ರಣ ಆದೇಶ (QCO) ವು ನಿರ್ಧರಿಸಿರುವ 145 ಮಾನದಂಡಗಳ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರುವಲ್ಲಿ ಸಚಿವಾಲಯದ ಶ್ರಮ ಮತ್ತು ಉತ್ಸಾಹವನ್ನು ಐಎಸ್‌ಎ ಶ್ಲಾಘಿಸಿತು. ಇದು ಮುಂಬರುವ ದಿನಗಳಲ್ಲಿ ಹೆಚ್ಚುವರಿ ಬಂಡವಾಳ ಹೂಡಲು ಉತ್ಸಾಹದಾಯಿ ನಡೆಯಾಗಿದೆ ಎಂದೂ ಹೇಳಿತು. ಐಎಸ್‌ಎ ಪ್ರತಿನಿಧಿಗಳು ಭಾರತೀಯ ಸ್ಟೀಲ್‌ ಕ್ಷೇತ್ರದಲ್ಲಿ ಕಚ್ಚಾ ವಸ್ತುಗಳ ಬೆಲೆ ಹಾಗೂ ಸಾಗಾಣಿಕೆ ದರ ಹೆಚ್ಚಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಯೊಂದಿಗೆ ಸ್ಪರ್ಧಿಸುವುದು ಕಷ್ಟವಾಗುತ್ತಿರುವ ಬಗ್ಗೆಯೂ ಗಮನ ಸೆಳೆದರು. ರಾಷ್ಟ್ರೀಯ ಖನಿಜ ಸೂಚ್ಯಂಗ (ಎನ್‌ಎಂಐ ನ್ಯಾಷ್ನಲ್‌ ಮಿನರಲ್‌ ಇಂಡೆಕ್ಸ್‌) ಅನ್ನು ಎಂಎಂಡಿಆರ್‌ಗೆ ಮುಂಚೆಯೇ ಪರಿಚಯಿಸಿದ್ದು ಹಾಗೂ ಮಸೂದೆಯ 2021 ತಿದ್ದುಪಡಿಯಂತೆರಾಯಧನದ ಮೇಲೆ ರಾಯಧನಕುರಿತು ಸಹ ಚರ್ಚಿಸಿದರು. ಒಂದು ಸಮಿತಿಯನ್ನು ರಚಿಸಲಾಗಿದ್ದು ಎರಡೂ ವಿಷಯಗಳ ಕುರಿತು ತ್ವರಿತವಾಗಿ ನಿರ್ಣಯ ತೆಗೆದುಕೊಳ್ಳುವ ಕುರಿತು ಚಿಂತಿಸಲಾಗಿದೆ ಎಂದು ಐಎಸ್‌ಎ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಯಿತು. ಉಕ್ಕಿನ ಉತ್ಪಾದನಾ ಕ್ಷೇತ್ರದ ನಾಯಕರು, ದೇಶದ ಒಳ ವಹಿವಾಟಿನಲ್ಲಿ ಉಕ್ಕಿನ ಬಳಕೆಯನ್ನು ಹೆಚ್ಚಿಸಲು ಕ್ರಮಕೈಗೊಳ್ಳಬೇಕು. ಬೇಡಿಕೆ ಹೆಚ್ಚುವಂತೆ ಮಾಡುವಲ್ಲಿ ಕೇಂದ್ರ ಸಚಿವಾಲಯವು ಮುಂದಡಿ ಇಡಬೇಕು. ಪ್ರಚಾರ ಹಾಗೂ ಜಾಗೃತಿ ಅಭಿಯಾನವನ್ನು ಕೈಗೊಳ್ಳಬೇಕು. ದೇಶದ ನಿರ್ಮಾಣ ಕ್ಷೇತ್ರದಲ್ಲಿ ಅತಿಹೆಚ್ಚು ಬಳಕೆ ಆಗುವಂತೆ ಮಾಡಬೇಕು ಎಂಬ ವಿಷಯಕ್ಕೆ ಹೆಚ್ಚು ಒತ್ತು ನೀಡಿದರು.

ಪರಿಸರ ಹಾಗೂ ಅರಣ್ಯ ಇಲಾಖೆಯ ಅನುಮೋದನೆಯ ಪ್ರಕ್ರಿಯೆ ಕುರಿತು ಚರ್ಚಿಸಲಾಯಿತು. ಉತ್ಪಾದನಾ ಪ್ರಮಾಣ ಹೆಚ್ಚಿಸಲು ಅಗತ್ಯ ಇರುವ ಎಲ್ಲ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದರು.   

ತಮ್ಮ ಉಪಸಂಹಾರದ ಮಾತುಗಳಲ್ಲಿ ಸಚಿವರು ಆತ್ಮನಿರ್ಭರ್‌ ಭಾರತ ಆಗುವ ನಿಟ್ಟಿನಲ್ಲಿ ಉಕ್ಕು ಉತ್ಪಾದನಾ ಕ್ಷೇತ್ರ ಸಕ್ರಿಯವಾಗಿ ಭಾಗವಹಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಎಂಎಸ್‌ಎಂಇ ಜೊತೆಗೆ ಪ್ರತಿ ಉತ್ಪಾದನಾ ಸಂಸ್ಥೆ ಹಾಗೂ ಉತ್ಪಾದಕರು ಬದ್ದರಾಗಿರಬೇಕು. ಪ್ರಕ್ರಿಯೆಯಲ್ಲಿ ದೇಶ ಮತ್ತು ಕೈಗಾರಿಕಾ ಕ್ಷೇತ್ರ ಒಟ್ಟೊಟ್ಟಿಗೆ ಅಭಿವೃದ್ಧಿಯಾಗುತ್ತದೆ. ನಮ್ಮ ದೇಶದ ಅಭಿವೃದ್ಧಿ ಕಥಾಯಾನದಲ್ಲಿ ಒಟ್ಟಿಗೆ ಬೆಳೆದ ಉದಾಹರಣೆಯೂ ಒಂದು ಪಾಠವಾಗುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದೂ ತಿಳಿಸಿದರು.

***



(Release ID: 1756644) Visitor Counter : 150