ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಸೆಪ್ಟಂಬರ್ 20ರಿಂದ 26ವರೆಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಿಂದ ‘ಆಜಾ಼ದಿ ಕಾ ಅಮೃತ ಮಹೋತ್ಸವ’ ಆಚರಣೆ
ವಾಣಿಜ್ಯ ಇಲಾಖೆಯಿಂದ ‘ವಾಣಿಜ್ಯ ಸಪ್ತಾಹ’ ಆಚರಣೆ
ದೇಶಾದ್ಯಂತ ಆತ್ಮ ನಿರ್ಭರ ಭಾರತ, ಭಾರತ ಆರ್ಥಿಕ ಶಕ್ತಿಯಾಗಿ ಉದಯವಾಗುತ್ತಿರುವುದು, ಹಸಿರು ಮತ್ತು ಸ್ವಚ್ಛ ಎಸ್ ಇಝಡ್ ಗಳನ್ನು ಬಿಂಬಿಸುವ ಹಲವು ಕಾರ್ಯಕ್ರಮ ಆಯೋಜನೆ
ದೇಶದ ಎಲ್ಲ 739 ಜಿಲ್ಲೆಗಳನ್ನು ಒಳಗೊಂಡಂತೆ ‘ಕೃಷಿ ತೋಟದಿಂದ ವಿದೇಶ ನೆಲಕ್ಕೆ’ ಗೋಷ್ಠಿಗಳನ್ನು ಬೆಂಬಲಿಸುವ ಮತ್ತು ವಾಣಿಜ್ಯ ಸಮ್ಮೇಳನಗಳಿಗೆ ಒತ್ತು ನೀಡುವ ‘ವಾಣಿಜ್ಯ ಉತ್ಸವ’ಗಳ ಆಯೋಜನೆ
“ಆತ್ಮ ನಿರ್ಭರತೆ ಕಡೆಗೆ - ಆಜಾ಼ದಿ ಮತ್ತು ರಫ್ತು ಉತ್ತೇಜನ/ಬದಲಿ ಆಮದು’’ ಘೋಕವಾಕ್ಯದಡಿ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ (ಸ್ಥಳದ ವಿವರ ಅಗತ್ಯವಿದೆ)- ಸೇರಿ ದೇಶದ ಐದು ಭಾಗದಲ್ಲಿ ಐದು ರಾಷ್ಟ್ರೀಯ ವಿಚಾರ ಸಂಕಿರಣ/ವಸ್ತು ಪ್ರದರ್ಶನಗಳ ಆಯೋಜನೆ
ಸೆಪ್ಟಂಬರ್ 21-22ರ ನಡುವೆ 35 ರಫ್ತು ಉತ್ತೇಜನ ಕಾರ್ಯಕ್ರಮ/ವಸ್ತುಪ್ರದರ್ಶನ ನಡೆಯಲಿವೆ; ಭಾರತ ಆರ್ಥಿಕ ಶಕ್ತಿಯಾಗಿ ಉದಯವಾಗುತ್ತಿದೆ ಎನ್ನುವುದನ್ನು ಬಿಂಬಿಸಲು ಪ್ರತಿಯೊಂದು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕನಿಷ್ಠ ಒಂದು ಕಾರ್ಯಕ್ರಮ
ಡಿಪಿಐಐಟಿಯಿಂದ ರಾಷ್ಟ್ರೀಯ ಏಕಗವಾಕ್ಷಿ ಯೋಜನೆ ಮತ್ತು ಕೈಗಾರಿಕಾ ಪಾರ್ಕ್ ಗಳ ಶ್ರೇಯಾಂಕ ವ್ಯವಸ್ಥೆಗೆ ಚಾಲನೆ
ಇನ್ವೆಸ್ಟ ಇಂಡಿಯಾದಿಂದ ಈಶಾನ್ಯ ಭಾಗದಲ್ಲಿ ವರ್ಚುವಲ್ ಹೂಡಿಕೆದಾರರ ಶೃಂಗಸಭೆ ಆಯೋಜನೆ
“ಆತ್ಮನಿರ್ಭರ್-ಆಜಾ಼ದಿ ಮತ್ತು ರಫ್ತು ಉತ್ತೇಜನ/ಬದಲಿ ಆಮದು’ ಘೋಷ ವಾಕ್ಯದ ಬಗ್ಗೆ ರಾಷ್ಟ್ರ
Posted On:
19 SEP 2021 2:27PM by PIB Bengaluru
75 ವರ್ಷಗಳ ಪ್ರಗತಿಪರ ಭಾರತ ಮತ್ತು ಅದರ ವೈಭವದ ಇತಿಹಾಸವನ್ನು ಆಚರಿಸಲು ಮತ್ತು ಸಂಸ್ಮರಣೆಗಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ‘ಆಜಾ಼ದಿ ಕಾ ಅಮೃತ ಮಹೋತ್ಸವ’ ಆಚರಣೆಯ ಭಾಗವಾಗಿ ಮುಂದಿನ ವಾರವೀಡಿ ವಿಶೇಷ ಕಾರ್ಯಕ್ರಮಗಳು ಮತ್ತು ಸಮಾರಂಭಗಳನ್ನು ಆಯೋಜಿಸಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 2021ರ ಸೆಪ್ಟಂಬರ್ 20ರಿಂದ 26ವರೆಗೆ ‘ವಾಣಿಜ್ಯ ಸಪ್ತಾಹ’ (ವ್ಯಾಪಾರ ಮತ್ತು ವಾಣಿಜ್ಯ ಸಪ್ತಾಹ) ಆಚರಿಸಲಿದೆ. ಆತ್ಮನಿರ್ಭರ ಭಾರತ, ಭಾರತ ಆರ್ಥಿಕ ಶಕ್ತಿಯಾಗಿ ಉದಯಿಸುತ್ತಿರುವುದು ಮತ್ತು ಹಸಿರು ಹಾಗೂ ಸ್ವಚ್ಛ ವಿಶೇಷ ವಿತ್ತ ವಲಯ (ಎಸ್ ಇಝಡ್) ಗಳನ್ನು ಬಿಂಬಿಸುವ ಹಲವು ಕಾರ್ಯಕ್ರಮ ಮತ್ತು ಸಮಾರಂಭಗಳು ದೇಶಾದ್ಯಂತ ನಡೆಯಲಿವೆ.ಜೊತೆಗೆ ದೇಶದ ಎಲ್ಲ 739 ಜಿಲ್ಲೆಗಳನ್ನು ಒಳಗೊಂಡಂತೆ ‘ಕೃಷಿ ತೋಟದಿಂದ ವಿದೇಶಿ ನೆಲಕ್ಕೆ’ ಒತ್ತು ನೀಡುವ ಗೋಷ್ಠಿಗಳನ್ನು ಮತ್ತು ರಫ್ತು ಸಮ್ಮೇಳನಗಳನ್ನು ಒಳಗೊಂಡ ‘ವಾಣಿಜ್ಯ ಉತ್ಸವ’ಗಳನ್ನು ನಡೆಸಲಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019ರ ಆಗಸ್ಟ್ 15ರಂದು ಕೆಂಪು ಕೋಟೆಯ ಪ್ರಾಂಗಣದಿಂದ ಮಾಡಿದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರತಿಯೊಂದು ಜಿಲ್ಲೆಯೂ ರಫ್ತು ತಾಣವಾಗಬೇಕೆಂದು ಕರೆ ನೀಡಿದ್ದರು, ಅದರಿಂದ ಸ್ಫೂರ್ತಿ ಪಡೆದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರ ಮಾರ್ಗದರ್ಶನದಲ್ಲಿ 2020ರ ಸೆಪ್ಟಂಬರ್ ನಲ್ಲಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ (ಒಡಿಒಪಿ) ಯೋಜನೆಯನ್ನು ಆನಾವರಣಗೊಳಿಸಲಾಯಿತು. ಒಡಿಒಪಿ ಒಂದು ಜಿಲ್ಲೆಯ ನಿಜವಾದ ಸಾರ್ಮಥ್ಯವನ್ನು ಅರ್ಥ ಮಾಡಿಕೊಳ್ಳುವ, ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಮತ್ತು ಉದ್ಯೋಗ ಮತ್ತು ಗ್ರಾಮೀಣ ಉದ್ಯಮಶೀಲತೆಯನ್ನು ಉತ್ತೇಜಿಸುವ ಮತ್ತು ನಮ್ಮನ್ನು ಆತ್ಮ ನಿರ್ಭರ ಭಾರತ ಗುರಿಯತ್ತ ಕೊಂಡೊಯ್ಯುವ ಒಂದು ಪರಿವರ್ತನಾತ್ಮಕ ಹೆಜ್ಜೆ ಎಂದು ಪರಿಗಣಿಸಲಾಗುವುದು.
2021ರ ಸೆಪ್ಟಂಬರ್ 24ರಿಂದ 26ರವರೆಗೆ ನಡೆಯಲಿರುವ ವಾಣಿಜ್ಯ ಉತ್ಸವದಲ್ಲಿ, ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ(ಡಿಜಿಎಫ್ ಟಿ) ಮತ್ತು ರಫ್ತು ಮತ್ತು ಮಾರುಕಟ್ಟೆ ಅಭಿವೃದ್ಧಿ ನೆರವು ಸಂಸ್ಥೆ( ಇ ಮತ್ತು ಎಂಡಿಎ) ಮತ್ತು ಅಯಾ ರಾಜ್ಯ ಸರ್ಕಾರಗಳ ನೆರವಿನೊಂದಿಗೆ 100 ಜಿಲ್ಲೆಗಳಲ್ಲಿ ಬೃಹತ್ ಕಾರ್ಯಕ್ರಮಗಳು ಸೇರಿದಂತೆ 700ಕ್ಕೂ ಅಧಿಕ ಜಿಲ್ಲೆಗಳಲ್ಲಿ ರಫ್ತು ಶೃಂಗಸಭೆ ಮತ್ತು ಮೇಳಗಳು ನಡೆಯಲಿವೆ. ಆಯಾ ಜಿಲ್ಲಾಧಿಕಾರಿಗಳು/ಜಿಲ್ಲಾ ಕೆಲಕ್ಟರ್ ಗಳ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ರಫ್ತು ಉತ್ತೇಜನ ಸಮಿತಿ(ಡಿಇಪಿಸಿ)ಗಳು ಈ ಸಮಾವೇಶಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಲೀಡ್ ಬ್ಯಾಂಕ್, ಸ್ಥಳೀಯ ರಫ್ತು ಒಕ್ಕೂಟಗಳು/ ಸಂಸ್ಥೆಗಳು ಮತ್ತು ರಫ್ತು ಉತ್ತೇಜನ ಮಂಡಳಿ(ಇಪಿಸಿ)ಗಳು ಸೇರಿದಂತೆ ಎಲ್ಲ ಭಾಗಿದಾರರನ್ನು ಒಳಗೊಂಡಂತೆ ವಿದೇಶಿ ವ್ಯಾಪಾರದ ವಿಷಯಗಳ ಕುರಿತು ಸ್ಥಳೀಯ ರಫ್ತುದಾರರು/ಉದ್ದಿಮೆದಾರರಿಗೆ 2-3 ಗಂಟೆಗಳ ಜಾಗೃತ ಗೋಷ್ಠಿಗಳೂ ಸಹ ಇದರಲ್ಲಿ ಸೇರಿವೆ.
ಅಲ್ಲದೆ, “ಆತ್ಮ ನಿರ್ಭರತೆ ಕಡೆಗೆ - ಆಜಾ಼ದಿ ಮತ್ತು ರಫ್ತು ಉತ್ತೇಜನ/ಬದಲಿ ಆಮದು’’ ಘೋಕ ವಾಕ್ಯದಡಿ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ (ಸ್ಥಳದ ವಿವರ ಅಗತ್ಯವಿದೆ) ಸೇರಿ ದೇಶದ ಐದು ಭಾಗದಲ್ಲಿ ಐದು ರಾಷ್ಟ್ರೀಯ ವಿಚಾರ ಸಂಕಿರಣ/ವಸ್ತು ಪ್ರದರ್ಶನಗಳನ್ನು ಭಾರತೀಯ ವಿದೇಶಿ ವ್ಯಾಪಾರ ಕೇಂದ್ರ (ಐಐಎಫ್ ಟಿ) ಆಯೋಜಿಸಲಾಗುವುದು. ಈ ಕಾರ್ಯಕ್ರಮಗಳಲ್ಲಿ ಸರ್ಕಾರದ ಇ-ಮಾರುಕಟ್ಟೆ ತಾಣ (ಜಿಇಎಂ)ಗಳಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಇಪಿಸಿಎಸ್ ಗಳ ನೋಂದಣಿ ಪ್ರಕ್ರಿಯೆಯನ್ನೂ ಸಹ ಪೂರ್ಣಗೊಳಿಸಲಾಗುವುದು.
ಮತ್ತೊಂದು ಪ್ರಮುಖ ಅಭಿಯಾನ “ವಾಣಿಜ್ಯ ಸಪ್ತಾಹ’ದಲ್ಲಿ, 2021ರ ಸೆಪ್ಟಂಬರ್ 21-22ರ ನಡುವೆ 35 ರಫ್ತು ಉತ್ತೇಜನ ಕಾರ್ಯಕ್ರಮ/ವಸ್ತು ಪ್ರದರ್ಶನಗಳನ್ನು ಆಯೋಜಿಸಲಾಗುವುದು, ಎಲ್ಲ 14 ಎಫ್ ಪಿಸಿಗಳಿಂದ ಭಾರತವನ್ನು ಉದಯಿಸುತ್ತಿರುವ ಆರ್ಥಿಕ ಶಕ್ತಿಯನ್ನಾಗಿ ಬಿಂಬಿಸುವ ಕಾರ್ಯಕ್ರಮಗಳು ಕನಿಷ್ಠ ಪ್ರತಿಯೊಂದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದನ್ನಾದರೂ ನಡೆಸಲಾಗುವುದು. ಇಪಿಸಿಗಳು ಸ್ಥಳೀಯ ರಫ್ತುದಾರರು, ಉತ್ಪಾದಕರು ಮತ್ತು ಕೈಗಾರಿಕಾ ಘಟಕಗಳನ್ನು ಒಗ್ಗೂಡಿಸಿ ರಫ್ತು ಉತ್ತೇಜನವನ್ನು ಜನಾಂದೋಲನವನ್ನಾಗಿ ಮಾಡಲಿವೆ. ಹಲವು ಕೇಂದ್ರ ಸಚಿವರುಗಳು ಮತ್ತು ಅಯಾ ರಾಜ್ಯಗಳು ಮುಖ್ಯಮಂತ್ರಿಗಳು/ಸಚಿವರು ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡುವರು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದವರೊಂದಿಗೆ ಸಂವಾದ ನಡೆಸುವರು.
ಈ ಮಧ್ಯೆ, ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ (ಡಿಪಿಐಐಟಿ) ರಾಷ್ಟ್ರೀಯ ಏಕಗವಾಕ್ಷಿ ಯೋಜನೆ ಮತ್ತು ಕೈಗಾರಿಕಾ ಪಾರ್ಕ್ ಗಳ ಶ್ರೇಯಾಂಕ ವ್ಯವಸ್ಥೆ- ಈ ಎರಡಕ್ಕೂ ಚಾಲನೆ ನೀಡುವ ಕಾರ್ಯಕ್ರಮ ಆಯೋಜಿಸಿದೆ. ಈ ಡಿಜಿಟಲ್ ವೇದಿಕೆ ಹೂಡಿಕೆದಾರರಿಗೆ, ಭಾರತದಲ್ಲಿ ವ್ಯಾಪಾರವನ್ನು ಆರಂಭಿಸಲು ಅಗತ್ಯವಿರುವ ಪೂರ್ವ ಕಾರ್ಯಾಚರಣೆ ಅನುಮೋದನೆಗಳನ್ನು ಗುರುತಿಸಲು ಮತ್ತು ಅವುಗಳಿಗೆ ಅರ್ಜಿ ಸಲ್ಲಿಸಲು ನೆರವಾಗಲಿದೆ. ಇದು ಹೂಡಿಕೆ ಪೂರ್ವ ಸಲಹೆ, ಭೂ ಬ್ಯಾಂಕ್ ಗೆ ಸಂಬಂಧಿಸಿದ ಮಾಹಿತಿ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಅಗತ್ಯ ಅನುಮೋದನೆಗಳನ್ನು ಪಡೆಯುವುದು ಸೇರಿದಂತೆ ಮೊದಲಿನಿಂದ ಕೊನೆಯವರೆಗೆ ಎಲ್ಲರ ರೀತಿಯ ಅನುಕೂಲ, ನೆರವು ನೀಡಲಿದೆ. ಕೈಗಾರಿಕಾ ಪಾರ್ಕ್ ಶ್ರೇಯಾಂಕ ವ್ಯವಸ್ಥೆ (ಐಪಿಆರ್ ಎಸ್), ಅತ್ಯುತ್ತಮ ಸಾಧನೆ ಮಾಡುವ ಪಾರ್ಕ್ ಗಳನ್ನು ಗುರುತಿಸಲಿದೆ, ಅಗತ್ಯ ಮಧ್ಯಪ್ರವೇಶಗಳನ್ನು ಮಾಡಲಿದೆ ಮತ್ತು ಹೂಡಿಕೆದಾರರು ಹಾಗೂ ನೀತಿ ನಿರೂಪಕರಿಗೆ ನಿರ್ಣಯ ಪೂರಕ ವ್ಯವಸ್ಥೆಯಾಗಿ ಸೇವೆ ಸಲ್ಲಿಸಲಿದೆ. “ಕೈಗಾರಿಕಾ ಪಾರ್ಕ್ ಶ್ರೇಯಾಂಕ ವ್ಯವಸ್ಥೆ 2.0’’ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತದೆ ಮತ್ತು ಪ್ರಾಯೋಗಿಕ ಹಂತಕ್ಕೆ ಮತ್ತಷ್ಟು ಗುಣಾತ್ಮಕ ಮೌಲ್ಯವನ್ನು ತಂದುಕೊಡುವ ಗುರಿಯನ್ನು ಹೊಂದಿದೆ. ಐಪಿಆರ್ ಎಸ್ 2.0 ಅಡಿಯಲ್ಲಿ ಖಾಸಗಿ ಕೈಗಾರಿಕಾ ಪಾರ್ಕ್ ಗಳು ಮತ್ತು ವಿಶೇಷ ವಿತ್ತ ವಲಯಗಳು ಸೇರಿದಂತೆ ಕೈಗಾರಿಕಾ ಪಾರ್ಕ್ ಗಳ ಮೌಲ್ಯಮಾಪನಕ್ಕೆ ಗುಣಾತ್ಮಕ ಮಾನದಂಡಗಳನ್ನು ಪರಿಚಯಿಸುವುದರೊಂದಿಗೆ ಈ ಪಾರ್ಕ್ ಮತ್ತು ವಲಯಗಳನ್ನು ಗುರುತಿಸುವ ಕೆಲಸ ಕೈಗೊಳ್ಳಲಾಗುವುದು, ಆ 4 ಮಾನದಂಡದ ಆಧಾರಸ್ತಂಭಗಳೆಂದರೆ- ಆಂತರಿಕ ಮೂಲಸೌಕರ್ಯ ಮತ್ತು ಬಳಕೆ, ಬಾಹ್ಯ ಮೂಲಸೌಕರ್ಯ ಮತ್ತು ಸಂಪರ್ಕ, ವ್ಯಾಪಾರ ಬೆಂಬಲ ವ್ಯವಸ್ಥೆ ಮತ್ತು ಪರಿಸರ ಹಾಗೂ ಸರಕ್ಷತಾ ನಿರ್ವಹಣೆ.
ಕೈಗಾರಿಕಾ ಕಾರಿಡಾರ್ ಕಾರ್ಯಕ್ರಮಗಳು ದೇಶದ ಉತ್ಪಾದನಾ ಸಾಮರ್ಥ್ಯವನ್ನು ಅರಿತುಕೊಳ್ಳುವ ಮತ್ತು ಜಿಡಿಪಿಗೆ ಅದರ ಕೊಡುಗೆಯನ್ನು ಹೆಚ್ಚಿಸುವ ಪ್ರಯತ್ನಗಳಿಗೆ ಪೂರಕವಾಗಿದೆ. ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳು, ತಮ್ಮ ರಾಜ್ಯಗಳಲ್ಲಿ ಕೈಗಾರಿಕಾ ಕಾರಿಡಾರ್ ಗಳಿಂದ ಆಗಿರುವ ಪ್ರಗತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಿವೆ. ಈ ಕಾರ್ಯಕ್ರಮಗಳನ್ನು ಗುಜರಾತ್ ನ ಧೋಲೆರಾ ಕೈಗಾರಿಕಾ ಸಿಟಿ ಅಭಿವೃದ್ಧಿ ನಿಯಮಿತ (ಡಿಐಸಿಡಿಎಲ್), ಮಹಾರಾಷ್ಟ್ರದ ಔರಂಗಾಬಾದ್ ಕೈಗಾರಿಕಾ ಟೌನ್ ಶಿಪ್ ನಿಯಮಿತ (ಎಐಟಿಎಲ್ ), ಉತ್ತರ ಪ್ರದೇಶದ ಡಿಎಂಐಸಿ ಸಮಗ್ರ ಕೈಗಾರಿಕಾ ಟೌನ್ ಶಿಪ್ ಗ್ರೇಟರ್ ನೋಯ್ಡಾ ಲಿಮಿಟೆಡ್ (ಐಐಟಿಜಿಎನ್ ಎಲ್ ), ಕರ್ನಾಟಕದ ಸಿಬಿಐಸಿ ತುಮಕೂರು ಕೈಗಾರಿಕಾ ಟೌನ್ ಶಿಪ್ ಲಿಮಿಟೆಡ್ ಮತ್ತು ಆಂಧ್ರಪ್ರದೇಶದ ಎನ್ ಐಸಿಡಿಐಟಿ ಕೃಷ್ಣಪಟ್ಟಣಂ ಕೈಗಾರಿಕಾ ಸಿಟಿ ಅಭಿವೃದ್ಧಿ ನಿಯಮಿತ ಮತ್ತು ಮಧ್ಯಪ್ರದೇಶದ ಡಿಎಂಐಸಿ ವಿಕ್ರಂ ಉದ್ಯೋಗಪುರಿ ನಿಯಮಿತ (ವಿಯುಎಲ್)ಗಳು ಕಾರ್ಯಕ್ರಮಗಳನ್ನು ಆಯೋಜಿಸಲಿವೆ.
ಅನುಪಾಲನಾ ಹೊರೆಯನ್ನು ತಗ್ಗಿಸಲು ಮಾಡಿದ ಕೆಲಸಗಳನ್ನು ಬಿಂಬಿಸಲು ಡಿಪಿಐಐಟಿ ಎಲ್ಲ ಸಚಿವಾಲಯಗಳು/ಇಲಾಖೆಗಳು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜೊತೆ ಸೇರಿ ರಾಷ್ಟ್ರ ಮಟ್ಟದ ಕಾರ್ಯಾಗಾರಗಳನ್ನು ಆಯೋಜಿಸಲಿದೆ. ಈ ಪ್ರಯತ್ನವು ಮೂರು ಅಂಶಗಳನ್ನು ಕೇಂದ್ರೀಕರಿಸಿದೆ- ಅವುಗಳೆಂದರೆ ಎಲ್ಲ ಪ್ರಕ್ರಿಯೆಗಳಲ್ಲಿನ ನಿಬಂಧನೆಗಳ ಹೊರೆಯನ್ನು ನಿವಾರಿಸುವುದು, ನಿಯಮಗಳು, ಅಧಿಸೂಚನೆಗಳು, ಸುತ್ತೋಲೆಗಳು, ಕಚೇರಿ ಜ್ಞಾಪನಾಪತ್ರಗಳು ಇತ್ಯಾದಿ. ಆಡಳಿತದಲ್ಲಿ ಯಾವುದೇ ಸ್ಪಷ್ಟವಾದ ಸುಧಾರಣೆಯನ್ನು ಸಾಧಿಸದೆ ಸಮಯ ಮತ್ತು ವೆಚ್ಚದ ಹೊರೆ ಹೆಚ್ಚಿಸುವುದು, ನಿರಶನಗೊಳಿಸುವುದು/ತಿದ್ದುಪಡಿ ಮಾಡುವುದು/ಅನಗತ್ಯವಾದ ಕಾನೂನುಗಳು ಮತ್ತು ತಾಂತ್ರಿಕ ಮತ್ತು ಸಣ್ಣ ನಿಯಮ ಪಾಲನೆ ಮಾಡದಿರುವ ವಿಷಯಗಳಲ್ಲಿ ಅನುಚಿತ ವರ್ತನೆಗಳ ಎಲ್ಲ ಕಾನೂನುಗಳನ್ನು ಅಪರಾಧಮುಕ್ತಗೊಳಿಸುವುದು, ಸಾರ್ವಜನಿಕ ಹಿತಾಸಕ್ತಿ ಬುಡಮೇಲು ಮಾಡುವ ಮತ್ತು ಗಂಭೀರ ಅಪರಾಧಗಳನ್ನು ಶಿಕ್ಷಿಸುವ ಕಾನೂನುಗಳು ಹಾಗೆಯೇ ಇರುತ್ತವೆ.
ಭಾರತದಾದ್ಯಂತ ಮತ್ತು ಲಾಸ್ಟಿಕ್ ಡೇಟಾ ಬ್ಯಾಂಕ್ ನಾದ್ಯಂತ ಸ್ಪಷ್ಟವಾಗಿ ಗೋಚರಿಸುವಂತೆ ಆಮದು ಮತ್ತು ರಫ್ತು ಕಂಟೇನರ್ ಗೋಚರತೆ ಸೇವೆಯ ಆಧಾರದ ಮೇಲೆ ಸೃಷ್ಟಿಯಾದ ಪ್ರಗತಿ ಉದ್ಯೋಗ ಮತ್ತು ವ್ಯಾಪಾರದ ಅವಕಾಶಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳನ್ನು ಎನ್ಐಸಿಡಿಸಿ ಕೋಲ್ಕತ್ತಾ, ಚೆನ್ನೈ ಮತ್ತು ಮುಂಬೈ ಬಂದರುಗಳಲ್ಲಿ ಆಯೋಜಿಸಲಿದೆ. ಎನ್ ಐಸಿಡಿಸಿ, ಎಸ್ ಪಿವಿ ಅಡಿ ಕೈಗೊಂಡಿರುವ ಕ್ರಮಗಳು ಮತ್ತು ರಾಜಸ್ಥಾನದ ನೀಮ್ರಾನಾದಲ್ಲಿ 6 ಮೆಗಾ ವ್ಯಾಟ್ ಮಾದರಿ ಸೌರ ವಿದ್ಯುತ್ ಯೋಜನೆಯ ಪ್ರಗತಿಯನ್ನು ಪ್ರಮುಖವಾಗಿ ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.
ಇನ್ವೆಸ್ಟ್ ಇಂಡಿಯಾ ಸಂಸ್ಥೆ ಈಶಾನ್ಯ ಭಾಗದಲ್ಲಿ ವರ್ಚುವಲ್ ಹೂಡಿಕೆದಾರರ ಸಮಾವೇಶ ಅಥವಾ ಹೂಡಿಕೆದಾರರ ವೇದಿಕೆಗಳನ್ನು ಆಯೋಜಿಸಲಿದೆ ಮತ್ತು ಖಾಸಗಿ ಕೈಗಾರಿಕಾ ಪಾರ್ಕ್ ಗಳೊಂದಿಗೆ ಸಂವಾದ ಆಯೋಜಿಸಲಿದೆ.
ವಾಣಿಜ್ಯ ಇಲಾಖೆಯ ಪ್ಲಾಂಟೇಶನ್ ವಿಭಾಗ ಆಯೋಜಿಸಲಿರುವ ‘ಕೃಷಿ ತೋಟದಿಂದ ವಿದೇಶಿ ನೆಲಕ್ಕೆ’ ವಿಷಯದಡಿ ಸೆಪ್ಟೆಂಬರ್ 26ರಂದು ದೇಶಾದ್ಯಂತ ಎಲ್ಲಾ ಪ್ಲಾಂಟೇಶನ್ ಗಳಲ್ಲಿ ಮತ್ತು ಪ್ರಮುಖ ಸ್ಥಳಗಳಲ್ಲಿ ಆಯೋಜಿಸಲಿರುವ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು ಹತ್ತು ಲಕ್ಷ ಪ್ಲಾಂಟೇಶನ್ ಕಾರ್ಮಿಕರು ಭಾಗವಹಿಸಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಪ್ರಾಥಮಿಕ ಆದ್ಯತೆಗೆ ಅನುಗುಣವಾಗಿ ಸೆಪ್ಟೆಂಬರ 23ರಂದು 250ಕ್ಕೂ ಅಧಿಕ ವಿಶೇಷ ವಿತ್ತ ವಲಯಗಳಲ್ಲಿ(ಎಸ್ಇಝೆಡ್) ಸ್ವಚ್ಛತಾ ಅಭಿಯಾನ ಓಟಗಳನ್ನು ಕೈಗೊಳ್ಳಲಾಗುವುದು ಮತ್ತು “ಹಸಿರು ಮತ್ತು ಸ್ವಚ್ಛ ಎಸ್ಇಝೆಡ್” ಗೆ ಒತ್ತು ನೀಡಲು ಸಸಿ ನೆಡುವ ಅಭಿಯಾನವನ್ನು ಕೈಗೊಳ್ಳಲಾಗುವುದು.
ವಾಣಿಜ್ಯ ಸಪ್ತಾಹ ಆರಂಭಕ್ಕೆ ಜತೆಯಾಗಿ ಭಾರತೀಯ ಬ್ರಾಂಡ್ ಈಕ್ವಿಟಿ ಫೌಂಡೇಶನ್ (ಐಬಿಇಎಫ್)ನಿಂದ ಸೆಪ್ಟೆಂಬರ್ 20ರಂದು “ಆತ್ಮನಿರ್ಭರ ಭಾರತ”ದ ಕಡೆಗೆ – ಆಜಾ಼ದಿ ಮತ್ತು ರಫ್ತು ಉತ್ತೇಜನ/ಬದಲಿ ಆಮದು” ಘೋಷವಾಕ್ಯದಡಿ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ ಐದು ವಿಭಾಗಗಳಿಗೂ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿದ್ದು, ಪ್ರತಿಯೊಂದು ವಿಭಾಗದಲ್ಲೂ ಅಗ್ರ ಐದು ಪ್ರವೇಶಗಳಿಗೆ ಬಹುಮಾನ ಲಭ್ಯವಾಗಲಿದೆ.
ಆಜಾ಼ದಿ ಕಾ ಅಮೃತ ಮಹೋತ್ಸವ ಪ್ರತಿಯೊಂದು ರಾಜ್ಯ, ಸಚಿವಾಲಯ ಮತ್ತು ಇಲಾಖೆಗಳಲ್ಲಿ ನಾನಾ ರೂಪಗಳಲ್ಲಿ ಆಚರಿಸಲಾಗುತ್ತಿದೆ. ಇದು ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಅಸ್ಮಿತೆಯ ಪ್ರಗತಿಯನ್ನು ಬಿಂಬಿಸುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2021ರ ಮಾರ್ಚ್ 12ರಂದು ಅಹಮದಾಬಾದ್ ನಲ್ಲಿ 2022ರ ಆಗಸ್ಟ್ 15ಕ್ಕೂ ಮುನ್ನ 75 ವಾರ ನಡೆಯುವ ‘ಆಜಾ಼ದಿ ಕಾ ಅಮೃತ ಮಹೋತ್ಸವ’ ಪೂರ್ವಭಾವಿ ಚಟುವಟಿಕೆಗಳಿಗೆ ಚಾಲನೆ ನೀಡಿದ್ದರು ಮತ್ತು ಈ ಕಾರ್ಯಕ್ರಮಗಳು 2023ರ ಆಗಸ್ಟ್ 15ರ ವರೆಗೆ ಮುಂದುವರಿಯಲಿದೆ. ಪ್ರಧಾನಮಂತ್ರಿ ಅವರು ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯಲು ಮತ್ತು ರಾಷ್ಟ್ರದ ಜನತೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 75 ವಾರಗಳ ಉತ್ಸವವನ್ನು ಆಚರಿಸುವಂತೆ ಜನತೆಗೆ ಕರೆ ನೀಡಿದ್ದರು.
***
(Release ID: 1756289)
Visitor Counter : 420