ಸಂಪುಟ
ಒತ್ತಡದ ಸಾಲ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲು ರಾಷ್ಟ್ರೀಯ ಸ್ವತ್ತು ಪುನರ್ ನಿರ್ಮಾಣ ಕಂಪನಿ ನಿಯಮಿತ ನೀಡಿದ ಭದ್ರತಾ ರಸೀದಿಗಳನ್ನು ಹಿಂತಿರುಗಿಸಲು ಕೇಂದ್ರ ಸರ್ಕಾರದ ಖಾತ್ರಿಗೆ ಸಂಪುಟ ಅನುಮೋದನೆ
2021-22ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಎಆರ್ ಸಿ ಪ್ರಕಟ
ಆರ್ ಬಿಐನ ನಿಬಂಧನೆಗೆ ಒಳಪಟ್ಟು ಹಂತಗಳಲ್ಲಿ ಸುಮಾರು 2 ಲಕ್ಷ ಕೋಟಿ ರೂ.ಗಳಷ್ಟು ಒತ್ತಡದ ಸ್ವತ್ತುಗಳನ್ನು ಸ್ವಾಧೀನ ಉದ್ದೇಶ ಹೊಂದಿರುವ ಎನ್ ಎಆರ್ ಸಿಎಲ್
Posted On:
15 SEP 2021 4:13PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒತ್ತಡದ ಸಾಲ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲು ರಾಷ್ಟ್ರೀಯ ಸ್ವತ್ತು ಪುನರ್ ನಿರ್ಮಾಣ ಕಂಪನಿ ನಿಯಮಿತ (ಎನ್ ಎಆರ್ ಸಿಎಲ್) ನೀಡಿದ ಭದ್ರತಾ ರಸೀದಿಗಳನ್ನು(ಎಸ್ ಆರ್ ಸಿ) ಹಿಂತಿರುಗಿಸಲು 30,600 ಕೋಟಿ ರೂ. ಕೇಂದ್ರ ಸರ್ಕಾರದ ಖಾತ್ರಿ ಒದಗಿಸಲು ಅನುಮೋದನೆ ನೀಡಿದೆ. ಇದು 2021-22 ಹಣಕಾಸು ವರ್ಷದ ಬಜೆಟ್ ನಲ್ಲಿ ಮಾಡಿದ್ದ ಘೋಷಣೆಗೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಎನ್ ಎಆರ್ ಸಿಎಲ್ ನೀಡಿದ ಎಸ್ ಆರ್ ಗಳಿಗೆ ಭಾರತ ಸರ್ಕಾರ ಸಂಪೂರ್ಣ ಖಾತ್ರಿ ನೀಡುತ್ತದೆ. ಭಾರತ ಸರ್ಕಾರದ ಖಾತ್ರಿ 30,600 ಕೋಟಿ ರೂ.ಗಳಿಗೆ ಇರಲಿದೆ ಮತ್ತು ಅದು 5 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಎಸ್ ಆರ್ ನ ಮುಖಬೆಲೆ ಮತ್ತು ರೆಸಲ್ಯೂಷನ್ ಮತ್ತು ಲಿಕ್ವಿಡೇಷನ್ ನೈಜ ರಿಯಲೈಜೇಷನ್ ನಡುವಿನ ಕೊರತೆಯನ್ನು ಪೂರೈಸಲು ಭಾರತ ಸರ್ಕಾರದ ಖಾತ್ರಿಯನ್ನು ಎನ್ ಎಆರ್ ಸಿಎಲ್ ಬಳಸಿಕೊಳ್ಳಬಹುದು. ಎನ್ ಎಆರ್ ಸಿಎಲ್ ನ ಮೇಲೆ ವಾರ್ಷಿಕ ಖಾತ್ರಿ ಶುಲ್ಕ ಪಾವತಿಸುವ ಹೊಣೆಗಾರಿಕೆಯಿರುತ್ತದೆ.
ಪ್ರಯೋಜನಗಳು:
ಎನ್ ಎಆರ್ ಸಿಎಲ್- ಐಡಿಎಂಸಿಎಲ್ ವ್ಯವಸ್ಥೆಯು ಸಾಲದ ಕ್ರೂಡೀಕರಣಕ್ಕೆ ಸಹಾಯ ಮಾಡುತ್ತದೆ, ಸದ್ಯ ಅದು ನಾನಾ ಸಾಲದಾತರಿಂದ ವಿಜಭನೆಯಾಗಿದೆ, ಹೀಗಾಗಿ ಎಲ್ಲಿ ಅನ್ವಯವಾಗುತ್ತದೋ ಅಲ್ಲಿ, ಐಬಿಸಿ ಪ್ರಕ್ರಿಯೆಗಳ ಮೂಲಕ ಸೇರಿದಂತೆ ತ್ವರಿತ ಹಾಗೂ ಒಂದೇ ಅಂಶದಲ್ಲಿ ತೀರ್ಮಾನ ಕೈಗೊಳ್ಳಲು ನೆರವಾಗುತ್ತದೆ. ಇದು ಒತ್ತಡದ ಸ್ವತ್ತುಗಳನ್ನು ಪರಿಹರಿಸುವಲ್ಲಿ ತ್ವರಿತ ಕ್ರಮವನ್ನು ಉತ್ತೇಜಿಸುತ್ತದೆ ಮತ್ತು ಆ ಮೂಲಕ ಉತ್ತಮ ಮೌಲ್ಯ ಪಡೆಯಲು ಸಾಧ್ಯವಾಗುತ್ತದೆ.
ಭಾರತೀಯ ಸಾಲ ಪರಿಹಾರ ಕಂಪನಿ ನಿಯಮಿತ (ಐಆರ್ ಡಿಸಿಎಲ್) ಮೌಲ್ಯ ವೃದ್ಧಿಗೆ ಮಾರುಕಟ್ಟೆ ಪರಿಣತಿಯನ್ನು ಬಳಸಿಕೊಳ್ಳಲಿದೆ. ಈ ಮನೋಭಾವದಿಂದಾಗಿ ಬ್ಯಾಂಕ್ ನ ಸಿಬ್ಬಂದಿಯನ್ನು ಮುಕ್ತಗೊಳಿಸಲು ಹಾಗೂ ಅವರು ತಮ್ಮ ವಹಿವಾಟು ಹೆಚ್ಚಳ ಮತ್ತು ಸಾಲದ ಪ್ರಗತಿ ಬಗ್ಗೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಈ ಒತ್ತಡದ ಸ್ವತ್ತುಗಳು ಮತ್ತು ಎಸ್ ಆರ್ ಗಳನ್ನು ಹೊಂದಿರುವವರು, ಬ್ಯಾಂಕುಗಳು ಲಾಭವನ್ನು ಪಡೆಯುತ್ತವೆ. ಭಾರತ ಸರ್ಕಾರದ ಖಾತ್ರಿ ಎಸ್ ಆರ್ ಗಳ ಲಿಕ್ವಿಡಿಟಿಯನ್ನು ಮತ್ತು ಎಸ್ ಆರ್ ಗಳ ವ್ಯಾಪಾರವನ್ನು ಹೆಚ್ಚಿಸುತ್ತವೆ.
ಹಿನ್ನೆಲೆ:
ಸರ್ಕಾರದ 4 ‘ಆರ್’ ತಂತ್ರ, ಗುರುತಿಸುವಿಕೆ, ಪರಿಹಾರ, ಮರು ಬಂಡವಾಳ ಹೂಡಿಕೆ ಮತ್ತು ಸುಧಾರಣೆ, ಇವು ಸಾರ್ವಜನಿಕ ವಲಯ ಬ್ಯಾಂಕುಗಳು( ಪಿಎಸ್ ಬಿಗಳ) ಕಾರ್ಯವೈಖರಿ ಬದಲಿಸಲು ಕಾರಣವಾಗಿವೆ. ಹೆಚ್ಚಿನ ಪ್ರಮಾಣದ ಎನ್ ಪಿಎ ಹೊಂದಿರುವವರಿಗೆ ತ್ವರಿತ ಇತ್ಯರ್ಥಕ್ಕೆ ಹೆಚ್ಚುವರಿ ಕ್ರಮಗಳ ಅವಕಾಶಗಳನ್ನು ಒದಗಿಸಲಾಗಿದೆ. ಅದರಂತೆ ಕೇಂದ್ರ ಬಜೆಟ್ 2021-22ರಲ್ಲಿ ಸರ್ಕಾರ ಸ್ವತ್ತು ಪುನರ್ ನಿರ್ಮಾಣ ಕಂಪನಿ (ಎಆರ್ ಸಿ)ಯ ಜೊತೆಗೆ ಸ್ವತ್ತು ನಿರ್ವಹಣಾ ಕಂಪನಿಯನ್ನು ಸ್ಥಾಪಿಸಿಲು ಉದ್ದೇಶಿಸಿತ್ತು, ಅದರ ಉದ್ದೇಶ ಒತ್ತಡದ ಸಾಲ ಸ್ವತ್ತುಗಳನ್ನು ಕ್ರೂಡೀಕರಿಸುವುದು ಮತ್ತು ಆನಂತರ ನಿರ್ವಹಿಸುವುದು ಹಾಗೂ ಮೌಲ್ಯ ದೊರೆತ ಕೂಡಲೇ ಅವುಗಳನ್ನು ಖರೀದಿದಾರರಿಗೆ ವಿಲೇವಾರಿ ಮಾಡುವುದಾಗಿದೆ.
ರಾಷ್ಟ್ರೀಯ ಸ್ವತ್ತು ಪುನರ್ ನಿರ್ಮಾಣ ಕಂಪನಿ ನಿಯಮಿತ (ಎನ್ ಎಆರ್ ಸಿಎಲ್ ) ಮತ್ತು ಭಾರತೀಯ ಸಾಲ ಪರಿಹಾರ ಕಂಪನಿ ನಿಯಮಿತ (ಐಡಿಆರ್ ಸಿಎಲ್ ) ಗಳನ್ನು ಬ್ಯಾಂಕುಗಳು ಸ್ಥಾಪಿಸಿವೆ. ಎನ್ ಎಆರ್ ಸಿಎಲ್, ಆರ್ ಬಿಐನ ನಿಬಂಧನೆಗೆ ಒಳಪಟ್ಟು ಹಂತಗಳಲ್ಲಿ ಸುಮಾರು 2 ಲಕ್ಷ ಕೋಟಿ ರೂ,ಗಳ ಒತ್ತಡದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದೆ. ಅವುಗಳಲ್ಲಿ ಶೇ.15ರಷ್ಟು ನಗದು ಮತ್ತು ಶೇ.85ರಷ್ಟು ಭದ್ರತಾ ಸ್ವೀಕೃತಿ(ಎಸ್ ಆರ್ )ಗಳ ಮೂಲಕ ಸ್ವಾಧೀನಪಡಿಸಿಕೊಳ್ಳಲು ಬಯಸಿದೆ.
***
(Release ID: 1756274)
Visitor Counter : 283