ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸರ್ದಾರ್ ಧಾಮ್  ಭವನ ಲೋಕಾರ್ಪಣೆ ಮತ್ತು ಸರ್ದಾರ್  ಧಾಮ್ ಎರಡನೇ ಹಂತದ ಬಾಲಕಿಯರ ವಿದ್ಯಾರ್ಥಿನಿಲಯದ ಭೂಮಿ ಪೂಜೆ ನೆರವೇರಿಸಿದ ಪ್ರಧಾನಮಂತ್ರಿ


ತಮಿಳಿನ ಶ್ರೇಷ್ಠ ಕವಿ ಸುಬ್ರಮಣ್ಯಭಾರತಿ ಅವರ 100ನೇ ಪುಣ್ಯತಿಥಿಯ ವೇಳೆ ಅವರ ಹೆಸರಿನಲ್ಲಿ ವಾರಾಣಸಿಯ ಬಿಎಚ್ ಯುನ ಕಲಾ ವಿಭಾಗದಲ್ಲಿ ತಮಿಳು ಅಧ್ಯಯನ ಪೀಠ ಆರಂಭಿಸುವುದಾಗಿ ಘೋಷಿಸಿದ ಪ್ರಧಾನಮಂತ್ರಿ

ಸರ್ದಾರ್ ಪಟೇಲ್ ಅವರ  ಕಲ್ಪನೆಯ ‘ಏಕ್ ಭಾರತ್ ಶ್ರೇಷ್ಠ ಭಾರತ್ ‘ತತ್ವವು ತಮಿಳಿನ ಮಹಾಕವಿ ಭಾರತಿಯರ ತಮಿಳು ಬರಹಗಳಲ್ಲಿ ಸಂಪೂರ್ಣ ದೈವತ್ವದೊಂದಿಗೆ ಹೊಳೆಯುತ್ತಿದೆ

ಮಾನವೀಯ ಮೌಲ್ಯಗಳ ಮೂಲಕ ಮಾತ್ರ 9/11 ನಂತಹ ದುರಂತಗಳಿಗೆ ಶಾಶ್ವತ ಪರಿಹಾರ ಸಾಧ್ಯವೆಂಬುದು ಇಡೀ ಜಗತ್ತಿಗೆ ಇಂದು ಅರ್ಥವಾಗಿದೆ: ಪ್ರಧಾನಮಂತ್ರಿ

ಸಾಂಕ್ರಾಮಿಕವು ಭಾರತೀಯ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ, ಆದರೆ ಹಾನಿಗಿಂತ ವೇಗವಾಗಿ ನಾವು ಚೇತರಿಸಿಕೊಳ್ಳುತ್ತಿದ್ದೇವೆ: ಪ್ರಧಾನಮಂತ್ರಿ

ದೊಡ್ಡ ಆರ್ಥಿಕತೆಗಳು ರಕ್ಷಣಾ ವಿಧಾನ ಪಾಲಿಸುತ್ತಿದ್ದರೆ, ಭಾರತ ಸುಧಾರಣೆ ಹಾದಿಯಲ್ಲಿದೆ: ಪ್ರಧಾನಮಂತ್ರಿ

Posted On: 11 SEP 2021 1:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ದಾರ್ ಧಾಮ್  ಭವನ ಲೋಕಾರ್ಪಣೆ ಮತ್ತು ಸರ್ದಾರ್  ಧಾಮ್ ಎರಡನೇ ಹಂತದ ಬಾಲಕಿಯರ ವಿದ್ಯಾರ್ಥಿನಿಲಯದ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಉಪಸ್ಥಿತರಿದ್ದರು. 

ಸರ್ದಾರ್ ಧಾಮ್ ಭವನ ಗಣೇಶೋತ್ಸವ ಸಂದರ್ಭದಲ್ಲಿ ಉದ್ಘಾಟನೆಯಾಗುತ್ತಿರುವುದು ಸಂತೋಷಕರ ಸಂಗತಿ ಎಂದು ಪ್ರಧಾನಮಂತ್ರಿ ಅವರು ಸಂತಸ ವ್ಯಕ್ತಪಡಿಸಿದರು. ಅವರು ಗಣೇಶ ಚತುರ್ಥಿ, ಗಣೇಶೋತ್ಸವ ಮತ್ತು ಋಷಿ ಪಂಚಮಿ ಹಾಗೂ ಕ್ಷಮವಾಣಿ ದಿವಸ್ ಅಂಗವಾಗಿ ಜನತೆಗೆ ಶುಭ ಕೋರಿದರು. ಸರ್ದಾರ್ ಧಾಮ್ ಟ್ರಸ್ಟ್ ಜತೆ ಸಹಯೋಗ ಹೊಂದಿರುವ ಎಲ್ಲ ಸದಸ್ಯರ ಮಾನವೀಯತೆಯ ಸೇವೆ ಮತ್ತು ಸಮರ್ಪಣೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಪಾಟಿದಾರ್ ಸಮಾಜದ ಯುವಕರು, ಬಡವರು ಮತ್ತು ವಿಶೇಷವಾಗಿ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿರುವುದು ಶ್ಲಾಘನೀಯ ಎಂದು ಅವರು ಹೇಳಿದರು. 

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂದು ಉದ್ಘಾಟಿಸಿದ ವಿದ್ಯಾರ್ಥಿನಿಲಯ ಸೌಕರ್ಯ ಹಲವು ಬಾಲಕಿಯರು ಜೀವನದಲ್ಲಿ ಮುಂದೆಬರಲು ಸಹಾಯಕವಾಗಲಿದೆ ಎಂದರು. ಈ ಅತ್ಯಾಧುನಿಕ ಕಟ್ಟಡ, ಬಾಲಕಿಯರ ವಿದ್ಯಾರ್ಥಿನಿಲಯ ಮತ್ತು ಆಧುನಿಕ ಗ್ರಂಥಾಲಯ ಯುವಜನತೆಯನ್ನು ಸಬಲೀಕರಣಗೊಳಿಸಲಿದೆ ಎಂದರು. ಉದ್ಯಮಶೀಲ ಅಭಿವೃದ್ಧಿ ಕೇಂದ್ರ, ಗುಜರಾತ್ ನ ಬಲಿಷ್ಠ ವ್ಯಾಪಾರಿ ಅಸ್ಮಿತೆಯನ್ನು ಶ್ರೀಮಂತಗೊಳಿಸಲಿದೆ ಮತ್ತು ನಾಗರಿಕ ಸೇವಾ ಕೇಂದ್ರ, ನಾಗರಿಕ ಸೇವೆ, ರಕ್ಷಣಾ ವಲಯ ಮತ್ತು ನ್ಯಾಯಾಂಗ ಸೇವೆಗಳಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಆಸಕ್ತಿ ಹೊಂದಿರುವ ಯುವಜನತೆಗೆ ಹೊಸ ದಿಕ್ಕು ತೋರಲಿದೆ ಎಂದು ಅವರು ಹೇಳಿದರು. ಸರ್ದಾರ್ ಧಾಮ್ ಕೇವಲ ದೇಶದ ಭವಿಷ್ಯ ನಿರ್ಮಿಸುವ ಕಟ್ಟಡವಷ್ಟೇ ಅಲ್ಲದೆ, ಸರ್ದಾರ್ ಸಾಹೇಬ್ ಅವರ ಆದರ್ಶಗಳಂತೆ ಬದುಕಲು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಲಿದೆ ಎಂದರು.

ಇಂದು ಸೆಪ್ಟೆಂಬರ್ 11, ಜಗತ್ತಿನ ಇತಿಹಾಸದಲ್ಲಿ ಮಾನವೀಯತೆಗೆ ಪೆಟ್ಟು ನೀಡಿದ ದಿನ ಎಂದು ತಿಳಿಯಲಾಗಿದೆ. ಆದರೆ ಈ ದಿನ ಇಡೀ ವಿಶ್ವಕ್ಕೆ ಸಾಕಷ್ಟು ಪಾಠ ಕಲಿಸಿದೆ. ಶತಮಾನದ ಹಿಂದೆ 1893ರ ಸೆಪ್ಟೆಂಬರ್ 11ರಂದು ಚಿಕಾಗೊದಲ್ಲಿ ವಿಶ್ವ ಧಾರ್ಮಿಕ ಸಂಸದ್ ಸಭೆ ನಡೆದಿತ್ತು. ಇದೇ ದಿನ ಸ್ವಾಮಿ ವಿವೇಕಾನಂದರು ಜಾಗತಿಕ ವೇದಿಕೆಯ ಮೇಲೆ ನಿಂತಿದ್ದರು ಮತ್ತು ಇಡೀ ಜಗತ್ತಿಗೆ ಭಾರತದ ಮಾನವೀಯ ಮೌಲ್ಯಗಳನ್ನು ಪರಿಚಯಿಸಿದರು. ಮಾನವೀಯ ಮೌಲ್ಯಗಳಿಂದ ಮಾತ್ರ 9/11ನಂತಹ ದುರಂತಗಳಿಗೆ ಶಾಶ್ವತ ಪರಿಹಾರ ಸಾಧ್ಯ ಎಂಬುದು ಇಂದು ಇಡೀ ವಿಶ್ವಕ್ಕೆ ಮನವರಿಕೆಯಾಗಿದೆ.

ಇಂದು ಸೆಪ್ಟೆಂಬರ್ 11, ಇದು ಮತ್ತೊಂದು ದೊಡ್ಡ ಸಂದರ್ಭವಾಗಿದೆ, ಭಾರತದ ಶ್ರೇಷ್ಠ  ವಿದ್ವಾಂಸ, ತತ್ವಜ್ಞಾನಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಬ್ರಹ್ಮಣ್ಯ ಭಾರತಿ ಅವರ 100ನೇ ಜಯಂತಿ. ಸರ್ದಾರ್ ಸಾಹೇಬ್ ಅವರ ಏಕ ಭಾರತ್  ಶ್ರೇಷ್ಠ ಭಾರತ್ ಸಿದ್ಧಾಂತ ಕಲ್ಪನೆಯನ್ನು ಮಹಾಕವಿ ಭಾರತಿ ಅವರು ತಮಿಳು ಭಾಷೆಯಲ್ಲಿ ಪೂರ್ಣ ದೈವತ್ವದೊಂದಿಗೆ ಪ್ರಕಾಶಿಸಿಸುವಂತೆ ಮಾಡಿದ್ದಾರೆ. ಸುಬ್ರಹ್ಮಣ್ಯ ಭಾರತಿ ಅವರು ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದಿದ್ದರು ಮತ್ತು ಶ್ರೀ ಅರಬಿಂದೋ ಅವರಿಂದ ಪ್ರಭಾವಿತರಾಗಿದ್ದರು. ಭಾರತಿ  ಅವರು ಕಾಶಿಯಲ್ಲಿ ನೆಲೆಸಿದ್ದಾಗ ಅವರ ಚಿಂತನೆಗಳಿಗೆ ಹೊಸ ವೇಗ ಸಿಕ್ಕಿತು ಮತ್ತು ಹೊಸ ಶಕ್ತಿಯನ್ನು ಪಡೆದುಕೊಂಡರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸುಬ್ರಹ್ಮಣ್ಯ ಭಾರತಿ ಜಿ ಹೆಸರಿನಲ್ಲಿ ಪೀಠವನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಮಂತ್ರಿ ಪ್ರಕಟಿಸಿದರು. ಬಿಎಚ್ ಯುನ ಕಲಾ ವಿಭಾಗದಲ್ಲಿ ತಮಿಳು ಅಧ್ಯಯನಕ್ಕೆ ‘ಸುಬ್ರಹ್ಮಣ್ಯ ಭಾರತಿ ಪೀಠ’ ಸ್ಥಾಪಿಸಲಾಗುವುದು ಎಂದು ಹೇಳಿದರು. ಸುಬ್ರಹ್ಮಣ್ಯ ಭಾರತಿ ಜೀ ಅವರು ಸದಾ ಮನುಕುಲದ ಏಕತೆ ಮತ್ತು ಭಾರತದ ಒಗ್ಗಟ್ಟನ್ನು ವಿಶೇಷವಾಗಿ ಪ್ರತಿಪಾದಿಸುತ್ತಿದ್ದರು. ಅವರ ಆದರ್ಶಗಳು ಭಾರತದ ಚಿಂತನೆ ಮತ್ತು ಸಿದ್ಧಾಂತದ ಅವಿಭಾಜ್ಯ ಅಂಗವಾಗಿದೆ.

ಗುಜರಾತ್ ಹಿಂದಿನಿಂದ ಈವರೆಗೆ ಸಾಮೂಹಿಕ ಪ್ರಯತ್ನಗಳ ನೆಲೆವೀಡಾಗಿದೆ. ಗಾಂಧೀಜಿ ಅವರು ಇಲ್ಲಿಂದ ದಂಡಿಯಾತ್ರೆಯನ್ನು ಆರಂಭಿಸಿದ್ದರು. ಅದು ಈಗಲೂ ದೇಶದ ಸ್ವಾತಂತ್ರ್ಯ ಹೋರಾಟದ ಸಾಮೂಹಿಕ ಪ್ರಯತ್ನಗಳ ಸಂಕೇತವಾಗಿದೆ. ಅಂತೆಯೇ ಕೇಡಾ ಚಳವಳಿ  ವೇಳೆ ಸರ್ದಾರ್ ಪಟೇಲ್ ಅವರ ನಾಯಕತ್ವದಲ್ಲಿ ರೈತರು, ಯುವಕರು ಮತ್ತು ಬಡವರು ಬ್ರಿಟೀಷ್ ಸರ್ಕಾರವನ್ನು ಶರಣಾಗಲು ಒತ್ತಾಯಿಸಿತ್ತು. ಸ್ಫೂರ್ತಿ, ಆ ಶಕ್ತಿಯು ಗುಜರಾತ್ ನ ಮಣ್ಣಿನಲ್ಲಿರುವ ಸರ್ದಾರ್ ಸಾಹೇಬ್ ಅವರ ಆಗಸದ ಎತ್ತರದ ಪ್ರತಿಮೆ ಏಕತಾ ಮೂರ್ತಿ  ರೂಪದಲ್ಲಿ ನಮ್ಮ ಮುಂದೆ ನಿಂತಿದೆ ಎಂದರು,.

ಸಮಾಜದಲ್ಲಿ ಹಿಂದುಳಿದ ವರ್ಗಗಳನ್ನು ಮುನ್ನೆಲೆಗೆ ತರಲು ನಿರಂತರ ಪ್ರುಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಒಂದೆಡೆ ದಲಿತರು ಮತ್ತು ಸಾಮಾಜಿಕವಾಗಿ ಹಿಂದುಳಿದವರ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ ಮತ್ತೊಂದೆಡೆ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲು ನೀಡಲಾಗಿದೆ. ಈ ಎಲ್ಲ ಪ್ರಯತ್ನಗಳು ಸಮಾಜದಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು.  

ಭವಿಷ್ಯದಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಕೌಶಲ್ಯಗಳನ್ನು ಆರಂಭದಿಂದಲೇ ಕಲಿಸುವ ಕೆಲಸವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಮಾಡಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಕೌಶಲ್ಯ ಭಾರತ ಯೋಜನೆ’ ಕೂಡ ದೇಶದ ಬಹು ದೊಡ್ಡ ಆದ್ಯತೆಯಾಗಿದೆ ಎಂದು ಹೇಳಿದರು. ಆ ಮಿಷನ್ ಅಡಿ ಲಕ್ಷಾಂತರ ಯುವಕರಿಗೆ ನಾನಾ ಕೌಶಲ್ಯಗಳನ್ನು ಕಲಿಯುವ ಮತ್ತು ಸ್ವತಂತ್ರವಾಗಿ ಬದಕುವ ಅವಕಾಶವನ್ನು ಒದಗಿಸಿದೆ ಎಂದರು.

ರಾಷ್ಟ್ರೀಯ ಅಪ್ರೆಂಟಿಷಿಪ್ ಉತ್ತೇಜನ ಯೋಜನೆಯಡಿ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ತಮ್ಮ ಆದಾಯವನ್ನು ವೃದ್ಧಿಸಿಕೊಳ್ಳುವ ಅವಕಾಶ ದೊರೆತಿದೆ. ಗುಜರಾತ್ ನಲ್ಲಿ ಹಲವು ವರ್ಷಗಳ ನಿರಂತರ ಪ್ರಯತ್ನದಿಂದಾಗಿ ಒಂದೆಡೆ ಶಾಲೆಯಿಂದ ಹೊರಗುಳಿಯುತ್ತಿದ್ದ ಮಕ್ಕಳ ಸಂಖ್ಯೆ ಶೇ.1ಕ್ಕೆ ಇಳಿಕೆಯಾಗಿದೆ ಮತ್ತೊಂದೆಡೆ ಲಕ್ಷಾಂತರ ಯುವಕರಿಗೆ ನಾನಾ ಯೋಜನೆಗಳ ಮೂಲಕ ಹೊಸ ಭವಿಷ್ಯ ಒದಗಿಸಲಾಗುತ್ತಿದೆ. ಸ್ಟಾರ್ಟ್ ಅಪ್ ಇಂಡಿಯಾದಂತಹ ಅಭಿಯಾನದ ಮೂಲಕ ಗುಜರಾತ್ ನ ಪ್ರತಿಭಾವಂತ ಯುವಕರು ಹೊಸ ಪೂರಕ ವ್ಯವಸ್ಥೆಯನ್ನು ಹೊಂದುತ್ತಿದ್ದಾರೆ ಎಂದರು.

ಪ್ರಧಾನಮಂತ್ರಿ ಅವರು ಪಾಟಿದಾರ್ ಸಮಾಜವನ್ನು ಶ್ಲಾಘಿಸಿ, ಆ ಸಮಾಜದವರು ಎಲ್ಲೇ ಹೋದರೂ  ಸಹ ಅವರು ವ್ಯಾಪಾರದಲ್ಲಿ ಹೊಸ ಹೆಗ್ಗರುತು ಮೂಡಿಸಲಿದ್ದಾರೆ ಎಂದರು. “ನಿಮ್ಮ ಈ ಕೌಶಲ್ಯವನ್ನು ಕೇವಲ ಗುಜರಾತ್ ನಲ್ಲಿ ಮತ್ತು ದೇಶದಲ್ಲಿ ಮಾತ್ರ ಗುರುತಿಸಲಾಗುತ್ತಿಲ್ಲ, ಇಡೀ ವಿಶ್ವದಲ್ಲಿ ಗುರುತಿಸಲಾಗುತ್ತಿದೆ’’ಎಂದು ಹೇಳಿದರು. ಪಾಟಿದಾರ್ ಸಮಾಜದ ಮತ್ತೊಂದು ಶ್ರೇಷ್ಠ ಅಂಶವೆಂದರೆ, ಅವರು ಎಲ್ಲೆ ಇದ್ದರೂ ಸಹ ಅವರಿಗೆ ಭಾರತದ ಹಿತಾಸಕ್ತಿ ಅತ್ಯಂತ ಪರಮೋಚ್ಚವಾಗಿರುತ್ತದೆ ಎಂದರು.

ಸಾಂಕ್ರಾಮಿಕ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ, ಆದರೆ ಹಾನಿಗಿಂತ ಹೆಚ್ಚು ವೇಗದಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೊಡ್ಡ ಆರ್ಥಿಕತೆಗಳು ರಕ್ಷಣಾತ್ಮಕ ವಿಧಾನಗಳನ್ನು ಅನುಸರಿಸುತ್ತಿರುವಾಗ, ಭಾರತ ಸುಧಾರಣೆಗಳ ಹಾದಿಯಲ್ಲಿದೆ ಎಂದರು. ಜಾಗತಿಕ ಪೂರೈಕೆ ಸರಪಳಿ ವ್ಯತ್ಯಯವಾಗಿರುವ ಹೊತ್ತಿನಲ್ಲಿ, ನಾವು ಭಾರತವನ್ನು ನೆಚ್ಚಿನ ತಾಣವನ್ನಾಗಿ ಮಾಡಲು ಪಿಎಲ್ ಐ ಯೋಜನೆಗಳನ್ನು ಆರಂಭಿಸುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು.  ಇತ್ತೀಚೆಗೆ ಆರಂಭಿಸಿರುವ ಜವಳಿ ವಲಯದ ಪಿಎಲ್ ಐ ಯೋಜನೆ ಸೂರತ್ ನಂತಹ ನಗರಗಳಿಗೆ ಹೆಚ್ಚಿನ ಅನುಕೂಲಕಾರಿಯಾಗಿದೆ ಎಂದರು.  

***


(Release ID: 1754121) Visitor Counter : 284