ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಬಾಂಗ್ಲಾದೇಶದ ವಾರ್ತಾ ಮತ್ತು ಪ್ರಸಾರ ಸಚಿವರಾದ ಗೌರವಾನ್ವಿತ ಡಾ. ಹಸನ್ ಮಹ್ಮುದ್ ಅವರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ 


“ಬಂಗಬಂಧು“ ಚಿತ್ರವನ್ನು ತ್ವರಿತವಾಗಿ ಪೂರ್ಣಗೊಳಿಸಲು ಭಾರತ – ಬಾಂಗ್ಲಾದೇಶ ಸಮ್ಮತಿ: ಜಾಗತಿಕವಾಗಿ 2022 ರಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ

2021  ರ ಡಿಸೆಂಬರ್ 6 ರಂದು “ಮೈತ್ರಿ ದಿವಸ್” ಆಚರಣೆಯ ಕಾರ್ಯಕ್ರಮಕ್ಕಾಗಿ ವಿಶೇಷ ಚೌಕಟ್ಟು ರೂಪಿಸಲು ನಿರ್ಧಾರ

Posted On: 07 SEP 2021 1:54PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಬಾಂಗ್ಲಾದೇಶದ ವಾರ್ತಾ ಮತ್ತು ಪ್ರಸಾರ ಸಚಿವರಾದ ಗೌರವಾನ್ವಿಯ ಡಾ. ಹಸನ್ ಮಹ್ಮುದ್ ನೇತೃತ್ವದ ನಿಯೋಗದ ಜತೆಗೆ ಪರಸ್ಪರ ಹಿತಾಸಕ್ತಿಯ ವಿಷಯಗಳು ಹಾಗೂ ಎರಡೂ ದೇಶಗಳ ನಡುವೆ ಪ್ರಸಾರ ಮತ್ತು ಮನೋರಂಜನಾ ಕ್ಷೇತ್ರದ ಬಲವರ್ಧನೆ, ಜನರಿಂದ ಜನರ ನಡುವಿನ ಬಾಂಧವ್ಯ ವರ್ಧನೆ, ಎರಡೂ  ದೇಶಗಳ ನಡುವಿನ ಸಾಪ್ಟ್ ಪವರ್ ಇಂಟರ್ಫೇಸ್ ಸಾಮರ್ಥ್ಯವನ್ನು ಅನ್ವೇಷಣೆ ಮಾಡುವ ಕುರಿತು ಚರ್ಚೆ ನಡೆಸಿದರು.

1.  ಪರಸ್ಪರ ಹಿತಾಸಕ್ತಿಯ ಮತ್ತು ಸಹಕಾರ ಕುರಿತು ಮಾತುಕತೆ ನಡೆಸಲು ಆತಿಥ್ಯ ನೀಡಿದ್ದಕ್ಕಾಗಿ ಶ್ರೀ ಅನುರಾಗ್ ಠಾಕೂರ್ ಅವರಿಗೆ ಡಾ. ಹಸನ್ ಮಹ್ಮುದ್ ಅವರು ಧನ್ಯವಾದ ಸಲ್ಲಿಸಿದರು2021 ಮಾರ್ಚ್ ನಲ್ಲಿ ಬಾಂಗ್ಲಾದೇಶಕ್ಕೆ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ನೀಡಿದ ಹಾಗೂ ಭಾರತ ಸರ್ಕಾರ ಕೈಗೊಂಡ ಸಕಾರಾತ್ಮಕ ಕ್ರಮಗಳನ್ನು ಅವರು ಶ್ಲಾಘಿಸಿದರು.

2.   ಶ್ರೀ ಶೇಖ್ ಮುಜಿಬುರ್ ರೆಹಮಾನ್ ಅವರ ಕಾಲದ ಮತ್ತು ಜೀವನ ಕುರಿತಬಂಗಬಂಧುಚಲನಚಿತ್ರ ನಿರ್ಮಾಣ ಕುರಿತಂತೆ ಶ್ರೀ ಅನುರಾಗ್ ಠಾಕೂರ್ ತೃಪ್ತಿ ವ್ಯಕ್ತಪಡಿಸಿದರು ಮತ್ತು ಚಲನಚಿತ್ರದ ಪ್ರಮುಖ ಭಾಗದ ನಿರ್ಮಾಣ ಪೂರ್ಣಗೊಂಡಿದೆ. 2022 ಮಾರ್ಚ್ ವೇಳೆಗೆ ಚಲನಚಿತ್ರ ನಿರ್ಮಾಣ ಪೂರ್ಣಗೊಳ‍್ಳಲಿದೆ ಹಾಗೂ ಕೋವಿಡ್ ಪರಿಸ್ಥಿತಿ ಅನುಮತಿ ಕೊಟ್ಟರೆ 2022 ಮಾರ್ಚ್ ವೇಳೆಗೆ ಚಲನಚಿತ್ರ ಜಾಗತಿಕವಾಗಿ ಬಿಡುಗಡೆಯಾಗಲಿದೆ ಎಂದು ಹೇಳಿದರು.

3.  “1971 ಬಾಂಗ್ಲಾದೇಶ ವಿಮೋಚನೆಕುರಿತ ಸಾಕ್ಷ್ಯಚಿತ್ರ ನಿರ್ಮಾಣವನ್ನು ಸಕ್ರಿಯವಾಗಿ ಮುಂದುವರಿಸಲು ಸಮ್ಮತಿಸಲಾಗಿದೆ. ಡಿಜಿಟಲ್ ಮನೋರಂಜನೆ ಮತ್ತು ಪರಸ್ಪರ ವಿನಿಮಯ ಮತ್ತು ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವ ಬಗ್ಗೆಯೂ ಚರ್ಚೆಗಳು ನಡೆದವು.  

4.   ಪರಸ್ಪರ ಒಪ್ಪಿತ ಕ್ರಿಯಾ ಯೋಜನೆ ಮೂಲಕ 2021 ರಂದುಮೈತ್ರಿ ದಿವಸ್ಆಚರಣೆಗೆ ಇಬ್ಬರೂ ಸಚಿವರು ಚರ್ಚೆ ನಡೆಸಿದ್ದು, ಇದಕ್ಕೆ ಸಮ್ಮತಿಸಿದ್ದಾರೆ. 2021 ಜನವರಿಯಲ್ಲಿ ನಡೆದ 51ನೇ .ಎಫ್.ಎಫ್. ನಲ್ಲಿ ಬಾಂಗ್ಲಾದೇಶ ಸರ್ಕಾರ ಪಾಲ್ಗೊಂಡಿದ್ದಕ್ಕೆ ಶ್ರೀ ಠಾಕೂರ್ ಧನ್ಯವಾದ ಸಲ್ಲಿಸಿದರು. ನವೆಂಬರ್  ನಲ್ಲಿ ಗೋವಾದಲ್ಲಿ ನಡೆಯಲಿರುವ 52ನೇ .ಎಫ್.ಎಫ್. ನಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ. ಎರಡೂ ದೇಶಗಳ ನಡುವೆ ಸಾಂಸ್ಕೃತಿಕ ಮತ್ತು ಜನರ ನಡುವಿನ ಬಾಂಧವನ್ನು ಬಲಪಡಿಸಲು ಇಬ್ಬರೂ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ.

***


(Release ID: 1752836)