ವಾರ್ತಾ ಮತ್ತು ಪ್ರಸಾರ ಸಚಿವಾಲಯ
ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ ಡಾ.ಎಲ್.ಮುರುಗನ್;
ಧಾರಾಪುರಂ ಮಾರ್ಗವಾಗಿ ಈರೋಡ್ ಮತ್ತು ಪಳನಿ ನಡುವೆ ಬ್ರಾಡ್ ಗೇಜ್ ರೈಲ್ವೆ ಮಾರ್ಗಕ್ಕೆ ಮನವಿ
प्रविष्टि तिथि:
07 SEP 2021 1:11PM by PIB Bengaluru
ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ಅವರು ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಧಾರಾಪುರಂ ಮಾರ್ಗವಾಗಿ ಈರೋಡ್ ಮತ್ತು ಪಳನಿ ನಡುವೆ ಬ್ರಾಡ್ ಗೇಜ್ ರೈಲ್ವೆ ಮಾರ್ಗದ ಕುರಿತು ಚರ್ಚೆ ನಡೆಸಿದರು.
ಆ ಪ್ರದೇಶದ ಜನರ ಸಮಗ್ರ ಅಭಿವೃದ್ಧಿಗೆ ಮತ್ತು ಕೃಷಿ-ಆರ್ಥಿಕತೆ ಉತ್ತೇಜನಕ್ಕೆ ಬ್ರಾಡ್ ಗೇಜ್ ರೈಲು ಮಾರ್ಗ ಹೊಂದಬೇಕೆನ್ನುವುದು ಧರ್ಮಪುರಂ ಜನರ ಬಹುವರ್ಷಗಳ ಬೇಡಿಕೆಯಾಗಿದೆ.
ಅಲ್ಲದೆ, ಡಾ,ಮುರುಗನ್ ಅವರು ಕಾಂಚಿಪುರಂ ಮಾರ್ಗವಾಗಿ ವಾರಾಣಸಿ ಮತ್ತು ರಾಮೇಶ್ವರಂ ನಡುವೆ ನಿರಂತರ ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭಿಸುವಂತೆ ಮನವಿ ಮಾಡಿದರು. ಇದರಿಂದಾಗಿ ಪಾರಂಪರಿಕ ನಗರ ಕಾಂಚಿಪುರಂ ರಾಮಾಯಣ ಸರ್ಕೀಟ್ ಜೊತೆ ಸಂಪರ್ಕ ಹೊಂದಲಿದ್ದು, ಇದು ದೇಶೀಯ ಪ್ರವಾಸೋದ್ಯಮ ಉತ್ತೇಜನಕ್ಕೆ ನೆರವಾಗಲಿದೆ.
ಭೇಟಿಯ ವೇಳೆ ಶ್ರೀ ಅಶ್ವಿನಿ ವೈಷ್ಣವ್ ಅವರು ಎರಡೂ ಮನವಿಗಳನ್ನು ಅತ್ಯಂತ ವಿವರವಾಗಿ ಪರಿಶೀಲಿಸಿದರು ಮತ್ತು ತಮಿಳುನಾಡಿನಲ್ಲಿ ರೈಲ್ವೆ ಜಾಲವನ್ನು ಮೇಲ್ದರ್ಜೆಗೇರಿಸಲು ಮತ್ತು ಅಭಿವೃದ್ಧಿಗೊಳಿಸಲು ಸಾಧ್ಯವಾದ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದರು.
***
(रिलीज़ आईडी: 1752819)
आगंतुक पटल : 333