ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೆಪ್ಟೆಂಬರ್ 7ರಂದು ಶಿಕ್ಷಕ ಪರ್ವದ ಉದ್ಘಾಟನಾ ಸಮಾವೇಶ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ಶಿಕ್ಷಣ ವಲಯದಲ್ಲಿನ ಪ್ರಮುಖ ಬಹು ಉಪಕ್ರಮಗಳಿಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ

Posted On: 05 SEP 2021 2:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ಸೆಪ್ಟೆಂಬರ್ 7ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಕ್ಷಕ ಪರ್ವದ ಉದ್ಘಾಟನಾ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಂದರ್ಭದಲ್ಲಿ ಅವರು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಬಹು ಉಪಕ್ರಮಗಳಿಗೂ ಚಾಲನೆ ನೀಡಲಿದ್ದಾರೆ

ಪ್ರಧಾನಮಂತ್ರಿಯವರು ಭಾರತೀಯ ಸಂಜ್ಞಾ ಭಾಷೆಯ ನಿಘಂಟು (ಸಾರ್ವತ್ರಿಕ ಕಲಿಕಾ ವಿನ್ಯಾಸಕ್ಕೆ ಅನುಗುಣವಾಗಿ ಶ್ರವಣ ವಿಶೇಷ ಚೇತನರಿಗೆ ಶ್ರವಣ ಮತ್ತು ಪಠ್ಯ ಅಂತರ್ಗತ ಸಂಜ್ಞಾ ಭಾಷೆಯ ವಿಡಿಯೋ), ಮಾತನಾಡುವ ಪುಸ್ತಕಗಳು (ದೃಷ್ಟಿವಿಶೇಷ ಚೇತನರಿಗೆ ಆಡಿಯೋ ಪುಸ್ತಕಗಳು), ಸಿ.ಬಿ.ಎಸ್‌.. ಶಾಲಾ ಗುಣಮಟ್ಟದ ಭರವಸೆ ಮತ್ತು ಮೌಲ್ಯಮಾಪನ ಚೌಕಟ್ಟು, ನಿಪುಣ್ ಭಾರತ್ ಮತ್ತು ವಿದ್ಯಾಂಜಲಿ ಪೋರ್ಟಲ್‌ ಗಾಗಿ ನಿಷ್ಠಾ ಶಿಕ್ಷಕರ ತರಬೇತಿ ಕಾರ್ಯಕ್ರಮ (ಶಾಲಾ ಸ್ವಯಂಸೇವಕರು/ ದಾನಿಗಳು/ ಶಾಲಾ ಅಭಿವೃದ್ಧಿಗಾಗಿ ಸಿ.ಎಸ್‌.ಆರ್. ಕೊಡುಗೆದಾರರಿಗೆ ಅನುಕೂಲ ಮಾಡಿಕೊಡಲು)ಕ್ಕೂ ಚಾಲನೆ ನೀಡಲಿದ್ದಾರೆ.

'ಶಿಕ್ಷಕ ಪರ್ವ-2021' ವಿಷಯ "ಗುಣಮಟ್ಟ ಮತ್ತು ಸುಸ್ಥಿರ ಶಾಲೆಗಳು: ಭಾರತದ ಶಾಲೆಗಳಿಂದ ಕಲಿಕೆ" ಎಂಬುದಾಗಿದೆ. ಇದರ ಆಚರಣೆಯು ಎಲ್ಲಾ ಹಂತಗಳಲ್ಲಿ ಶಿಕ್ಷಣದ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ವಿನೂತನ ಅಭ್ಯಾಸಗಳನ್ನು ಉತ್ತೇಜಿಸುತ್ತದೆ ಆದರೆ ದೇಶಾದ್ಯಂತ ಶಾಲೆಗಳಲ್ಲಿ ಗುಣಮಟ್ಟ, ಅಂತರ್ಗತ ರೂಢಿಗಳು ಮತ್ತು ಸುಸ್ಥಿರತೆಯನ್ನು ಸುಧಾರಿಸುತ್ತದೆ.

ಕೇಂದ್ರ ಶಿಕ್ಷಣ ಸಚಿವರು ಮತ್ತು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವರು ಸಮಾರಂಭದ ವೇಳೆ ಉಪಸ್ಥಿತರಿರುವರು.

***


(Release ID: 1752315) Visitor Counter : 343