ಪ್ರಧಾನ ಮಂತ್ರಿಯವರ ಕಛೇರಿ

ಸೆಪ್ಟೆಂಬರ್ 6ರಂದು ಹಿಮಾಚಲ ಪ್ರದೇಶದ ಕೋವಿಡ್ ಲಸಿಕೆ ಕಾರ್ಯಕ್ರಮದ ಆರೋಗ್ಯ ಕಾರ್ಯಕರ್ತರು ಮತ್ತು ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿರುವ ಪ್ರಧಾನಮಂತ್ರಿ

Posted On: 04 SEP 2021 7:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ಸೆಪ್ಟೆಂಬರ್ 6ರಂದು ಬೆಳಗ್ಗೆ 11 ಗಂಟೆಗೆ ಹಿಮಾಚಲ ಪ್ರದೇಶದ  ಕೋವಿಡ್ ಲಸಿಕೆ ಕಾರ್ಯಕ್ರಮದ ಆರೋಗ್ಯ ಕಾರ್ಯಕರ್ತರು ಮತ್ತು ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಲಿದ್ದಾರೆ.

ಹಿಮಾಚಲ ಪ್ರದೇಶವು ತನ್ನ ಸಂಪೂರ್ಣ ಅರ್ಹ ಜನಸಂಖ್ಯೆಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಯಶಸ್ವಿಯಾಗಿ ನೀಡಿದೆ. ದುರ್ಗಮ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸಲು ಭೌಗೋಳಿಕ ಆದ್ಯತೆ, ಸಾಮೂಹಿಕ ಜನಜಾಗೃತಿಗೆ ಉಪಕ್ರಮಗಳು ಮತ್ತು ಆಶಾ ಕಾರ್ಯಕರ್ತರಿಂದ ಮನೆ-ಮನೆ  ಭೇಟಿ ಸೇರಿದಂತೆ ರಾಜ್ಯದ ನಾನಾ ಪ್ರಯತ್ನಗಳ ಫಲ ಇದಾಗಿದೆ. ರಾಜ್ಯವು ಮಹಿಳೆಯರು, ವೃದ್ಧರು, ದಿವ್ಯಾಂಗರು, ಕೈಗಾರಿಕಾ ಕಾರ್ಮಿಕರು, ದಿನಗೂಲಿಗಳು ಇತ್ಯಾದಿ ವರ್ಗದತ್ತ ವಿಶೇಷ ಗಮನ ಹರಿಸಿತು ಮತ್ತು ಮೈಲುಗಲ್ಲನ್ನು ಸಾಧಿಸಲು "ಸುರಕ್ಷಾ ಕಿ ಯುಕ್ತಿ - ಕೊರೊನಾ ಸೆ ಮುಕ್ತಿ" ಮುಂತಾದ ವಿಶೇಷ ಅಭಿಯಾನಗಳನ್ನು ಹಮ್ಮಿಕೊಂಡಿತು.

ಸಂವಾದ ಕಾರ್ಯಕ್ರಮದಲ್ಲಿ ಹಿಮಾಚಲದ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.

***



(Release ID: 1752234) Visitor Counter : 163