ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಟೋಕಿಯೋ ಪ್ಯಾರಾಲಿಂಪಿಕ್ಸ್ 2020ರಲ್ಲಿ ರಜತ ಪದಕ ಗೆದ್ದ ಮರಿಯಪ್ಪನ್ ಟಿ ಮತ್ತು ಅವರ ತರಬೇತುದಾರ ರಾಜಾ ಬಿ ಯನ್ನು ಸನ್ಮಾನಿಸಿದ ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್

Posted On: 04 SEP 2021 6:08PM by PIB Bengaluru

ಪ್ರಮುಖ ಮುಖ್ಯಾಂಶಗಳು

  • ಇದು ಮರಿಯಪ್ಪನ್ ಅವರಿಗೆ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಎರಡನೇ ಪದಕವಾಗಿದೆ. 2016 ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಅವರು ಚಿನ್ನದ ಪದಕ ಗೆದ್ದಿದ್ದರು.

ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು, ಟೋಕಿಯೋ ಪ್ಯಾರಾಲಿಂಪಿಕ್ಸ್ 2020ಯಲ್ಲಿ ಬೆಳ್ಳಿಯ ಪದಕ ಗೆದ್ದ ಮರಿಯಪ್ಪನ್ ಟಿ ಮತ್ತು ಅವರ ತರಬೇತುದಾರ ರಾಜಾ ಬಿ ಅವರನ್ನು ನವದೆಹಲಿಯಲ್ಲಿಂದು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಠಾಕೂರ್, "ಮರಿಯಪ್ಪನ್ ಅವರು ರಿಯೋ ಮತ್ತು ಈಗ ಟೋಕಿಯೋದಲ್ಲಿ ತಮ್ಮ ಉತ್ತಮ ಪ್ರದರ್ಶನದಿಂದ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ನಾನು ಅವರನ್ನು ಅಭಿನಂದಿಸುತ್ತೇನೆ, ಮತ್ತು ನಮ್ಮ ಎಲ್ಲ ಪ್ಯಾರಾ ಅಥ್ಲೀಟ್ ಗಳ ಅದ್ಭುತ ಪ್ರದರ್ಶನಕ್ಕೆ ಅಭಿನಂದನೆ ಸಲ್ಲಿಸಲು ಈ ಸಂದರ್ಭವನ್ನು ಬಳಸಿಕೊಳ್ಳುತ್ತೇನೆ" ಎಂದರು.

ಕ್ರೀಡಾ ಸಚಿವರೊಂದಿಗೆ ಮಾತನಾಡಿದ ಮರಿಯಪ್ಪನ್, "ನಾನು ದೇಶಕ್ಕೆ ಬಂಗಾರದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದೆ, ಆದರೆ ಪಂದ್ಯದ ದಿನದ ಹವಾಮಾನದಿಂದಾಗಿ ಆ ಕನಸು ನನಸಾಗಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಮತ್ತೆ ಬಂಗಾರದ ಪದಕ ತುವ ವಿಶ್ವಾಸ ನನಗಿದೆ." ಎಂದು ತಿಳಿಸಿದರು.

***(Release ID: 1752092) Visitor Counter : 194