ಉಕ್ಕು ಸಚಿವಾಲಯ
azadi ka amrit mahotsav

ಆಜಾ಼ದಿ  ಕಾ ಅಮೃತ್ ಮಹೋತ್ಸವ್ ಅಂಗವಾಗಿ ಸೇಲ್‌ನ ರೂರ್ಕೇರ ಉಕ್ಕುಘಟಕದಿಂದ ಫಿಟ್ ಇಂಡಿಯಾದಡಿ ಸ್ವಾತಂತ್ರ್ಯ ಓಟ ಆಯೋಜನೆ

प्रविष्टि तिथि: 03 SEP 2021 1:06PM by PIB Bengaluru

ಆಜಾ಼ದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಸೇಲ್ ರೂರ್ಕೇರ ಉಕ್ಕು ಘಟಕದಿಂದ ಫಿಟ್ ಇಂಡಿಯಾದಡಿ ಸ್ವಾತಂತ್ರ್ಯ ಓಟ ಆಯೋಜಿಸಲಾಗಿತ್ತು. ಬಿ.ಎಸ್.ಎಲ್ ಮತ್ತು .ಎಸ್.ಪಿ ಉಸ್ತುವಾರಿ ನಿರ್ದೇಶಕ ಶ್ರೀ ಅಮರೇಂದು ಪ್ರಕಾಶ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು.

ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಕಾಶ್ ಅವರು, “ಪ್ರತಿಯೊಬ್ಬರೂ ತಮ್ಮ ಆರೋಗ್ಯ ರಕ್ಷಣೆಗೆ ಪರಮೋಚ್ಚ ಆದ್ಯತೆ ನೀಡಬೇಕು ಮತ್ತುಫಿಟ್ನೇಸ್ ಕಿ ಡೋಸ್ಆಧಾ ಘಂಟಾ ರೋಸ್ಎಂಬ ಮಂತ್ರವನ್ನು ಅಳವಡಿಸಿಕೊಳ್ಳಬೇಕು. ಆರೋಗ್ಯ  ಮತ್ತು ಸದೃಢತೆ ಒಟ್ಟಿಗೆ ಸಾಗಬೇಕು. ಎರಡು ವಲಯದಲ್ಲಿ ಯಾವುದರಲ್ಲೂ ರಾಜೀ ಮಾಡಿಕೊಳ್ಳಬಾರದು ಎಂದರು.

ಪ್ರತಿಯೊಬ್ಬರೂ ದಿನನಿತ್ಯ ಕನಿಷ್ಠ 30 ನಿಮಿಷಗಳ ಕಾಲ ದೈಹಿಕ  ಚಟುವಟಿಕೆಯಲ್ಲಿ ತೊಡಗುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಓಟ ಆರಂಭಗೊಂಡಿತು.

ರನ್  ಫಾರ್ ಇಂಡಿಯಾ ಕಾರ್ಯಕ್ರಮ ಭಾರತದ 75 ನೇ ಸ್ವಾತಂತ್ರ್ಯೋತ್ಸವದ ಮಹತ್ವದ ಆಚರಣೆಯಲ್ಲಿ ದೇಶದ ನಾಗರಿಕರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವ ಮತ್ತು ಆರೋಗ್ಯ, ಸದೃಢತೆ, ದೇಶದ ಪ್ರತಿಯೊಬ್ಬ ನಾಗರಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ.

***


(रिलीज़ आईडी: 1751673) आगंतुक पटल : 326
इस विज्ञप्ति को इन भाषाओं में पढ़ें: हिन्दी , Punjabi , English , Gujarati , Urdu , Tamil , Telugu