ಹಣಕಾಸು ಸಚಿವಾಲಯ
azadi ka amrit mahotsav

ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ರೂ.13,385.70 ಕೋಟಿ ಸಹಾಯ ಧನ ಬಿಡುಗಡೆ ಮಾಡಲಾಗಿದೆ


ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 2021-22 ರಲ್ಲಿ ಇದುವರೆಗೆ ಒಟ್ಟು ಅನುದಾನದ ಮೊತ್ತ ರೂ.25,129.98 ಕೋಟಿ ಬಿಡುಗಡೆ ಮಾಡಲಾಗಿದೆ

Posted On: 31 AUG 2021 12:35PM by PIB Bengaluru

ವೆಚ್ಚಇಲಾಖೆ, ಹಣಕಾಸು ಸಚಿವಾಲಯವು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ನೀಡಲು ಸೋಮವಾರದಂದು 25 ರಾಜ್ಯಗಳಿಗೆ ರೂ 13,385.70 ಕೋಟಿಯನ್ನು ಬಿಡುಗಡೆ ಮಾಡಿತು. ಸಹಾಯ ಧನವು 2021-22 ವರ್ಷದ ಟೈಡ್ ಅನುದಾನದ 1ನೇ ಕಂತಾಗಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಅನುದಾನ ಬಿಡುಗಡೆ ಮಾಡಲಾಗಿದೆ.

ಎರಡು ಪ್ರಮುಖ ಸೇವೆಗಳನ್ನು ಸುಧಾರಿಸಲು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ (ಆರ್ಎಲ್ಬಿ) ಟೈಡ್ ಅನುದಾನ ಬಿಡುಗಡೆ ಮಾಡಲಾಗಿದೆ  () ಬಯಲು ಶೌಚ ಮುಕ್ತ (ಒಡಿಎಫ್) ಸ್ಥಿತಿಯ ನೈರ್ಮಲ್ಯ ಮತ್ತು ನಿರ್ವಹಣೆ ಮತ್ತು (ಬಿ) ಕುಡಿಯುವ ನೀರು ಪೂರೈಕೆ, ಮಳೆ ನೀರು ಕೊಯ್ಲು ಮತ್ತು ನೀರಿನ ಮರುಬಳಕೆ

ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಂಚಿಕೆಯಾದ ಒಟ್ಟು ಅನುದಾನದಲ್ಲಿ, ಶೇಕಡ 60 'ಟೈಡ್ ಗ್ರಾಂಟ್' ಆಗಿದೆ.  ಕುಡಿಯುವ ನೀರು ಪೂರೈಕೆ, ಮಳೆನೀರು ಕೊಯ್ಲು ಮತ್ತು ನೈರ್ಮಲ್ಯದಂತಹ ರಾಷ್ಟ್ರೀಯ ಆದ್ಯತೆಗಳಿಗಾಗಿ ಇದನ್ನು ಮೀಸಲಿಡಲಾಗಿದೆ. ಉಳಿದ ಶೇಕಡ 40  'ಅನ್ಟೈಡ್ ಗ್ರ್ಯಾಂಟ್' ಆಗಿದ್ದು  ಸಂಬಳ ಪಾವತಿಯನ್ನು ಹೊರತುಪಡಿಸಿ, ನಿರ್ದಿಷ್ಟ ಸ್ಥಳದ ಅಗತ್ಯಗಳಿಗಾಗಿ ಪಂಚಾಯಿತ್ ರಾಜ್ ಸಂಸ್ಥೆಗಳ ನಿರ್ಣಯದಂತೆ ಬಳಸಿಕೊಳ್ಳಬೇಕು.

ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ನೈರ್ಮಲ್ಯ ಮತ್ತು ಕುಡಿಯುವ ನೀರಿಗಾಗಿ ಕೇಂದ್ರ ಮತ್ತು ರಾಜ್ಯದಿಂದ ಮಂಜೂರಾದ ನಿಧಿಯ ಮೇಲೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚುವರಿ ನಿಧಿಯ ಲಭ್ಯತೆಯನ್ನು ಖಾತ್ರಿಪಡಿಸುವುದು 'ಟೈಡ್ ಗ್ರಾಂಟ್'ಗಳ ಉದ್ದೇಶ.

ರಾಜ್ಯಗಳು ಕೇಂದ್ರ ಸರ್ಕಾರದಿಂದ ಸ್ವೀಕರಿಸಿದ 10 ಕೆಲಸದ ದಿನಗಳಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನವನ್ನು ವರ್ಗಾಯಿಸಬೇಕಾಗುತ್ತದೆ.  10 ಕೆಲಸದ ದಿನಗಳನ್ನು ಮೀರಿದ ಯಾವುದೇ ವಿಳಂಬಕ್ಕೆ ರಾಜ್ಯ ಸರ್ಕಾರಗಳು ಬಡ್ಡಿಯೊಂದಿಗೆ ಅನುದಾನವನ್ನು ಬಿಡುಗಡೆ ಮಾಡಬೇಕಾಗುತ್ತದೆ.

ರಾಜ್ಯವಾರು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅನುದಾನ (ಆರ್ಎಲ್ಬಿ) ಇಂದು ಬಿಡುಗಡೆಯಾಗಿದೆ ಮತ್ತು ಇಲ್ಲಿಯವರೆಗೆ ಬಿಡುಗಡೆಯಾದ ಒಟ್ಟು ಆರ್ಎಲ್ಬಿ ಅನುದಾನದ ವಿವರಗಳನ್ನು  ಕೆಳಗೆ ನೀಡಲಾಗಿದೆ:

ಕ್ರಮ ಸಂಖ್ಯೆ

ರಾಜ್ಯದ ಹೆಸರು

31-08-2021 ರಂದು ಬಿಡುಗಡೆಯಾದ ಆರ್ಎಲ್ಬಿ ಅನುದಾನದ ಮೊತ್ತ

(ಕೋಟಿ ರೂ.)

2021-22 ರಲ್ಲಿ ಇಲ್ಲಿಯವರೆಗೆ ಬಿಡುಗಡೆಯಾದ ಒಟ್ಟು ಆರ್ಎಲ್ಬಿ ಅನುದಾನ

(ಕೋಟಿ ರೂ.)

1

ಆಂಧ್ರಪ್ರದೇಶ

581.7

969.50

2

ಅರುಣಾಚಲ ಪ್ರದೇಶ

51

142.75

3

ಅಸ್ಸಾಂ

355.8

593.00

4

ಬಿಹಾರ

1112.7

1854.50

5

ಛತ್ತೀಸ್ಗಢ

322.5

537.50

6

ಗುಜರಾತ್

708.6

1181.00

7

ಹರಿಯಾಣ

280.5

467.50

8

ಹಿಮಾಚಲ ಪ್ರದೇಶ

95.1

158.50

9

ಜಾರ್ಖಂಡ್

374.7

624.50

10

ಕರ್ನಾಟಕ

713.1

1188.50

11

ಕೇರಳ

360.9

601.50

12

ಮಧ್ಯಪ್ರದೇಶ

883.2

1472.00

13

ಮಹಾರಾಷ್ಟ್ರ

1292.1

2153.50

14

ಮಣಿಪುರ

39.3

65.50

15

ಮಿಜೋರಾಂ

20.7

34.50

16

ಒರಿಸ್ಸಾ

500.7

834.50

17

ಪಂಜಾಬ್

307.8

860.00

18

ರಾಜಸ್ಥಾನ

856.2

2392.50

19

ಸಿಕ್ಕಿಂ

9.3

15.50

20

ತಮಿಳುನಾಡು

799.8

2783.23

21

ತೆಲಂಗಾಣ

409.5

682.50

22

ತ್ರಿಪುರ

42.3

70.50

23

ಉತ್ತರ ಪ್ರದೇಶ

2162.4

3604.00

24

ಉತ್ತರಾಖಂಡ

127.5

212.50

25

ಪಶ್ಚಿಮ ಬಂಗಾಳ

978.3

1630.50

 

Total

13,385.70

25,129.98

***


(Release ID: 1750743) Visitor Counter : 276