ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಒಟ್ಟು 63.43 ಕೋಟಿ ಗೂ ಹೆಚ್ಚು ಕೋವಿಡ್ -19 ಲಸಿಕೆ ನೀಡಿಕೆ


ಪ್ರಸ್ತುತ ಚೇತರಿಕೆ ದರ 97.51% ರಷ್ಟು

ಕಳೆದ 24 ಗಂಟೆಗಳಲ್ಲಿ 42,909 ಹೊಸ ಪ್ರಕರಣಗಳು ಪತ್ತೆ

ಭಾರತದಲ್ಲಿ ಒಟ್ಟು ಸಂಖ್ಯೆಯಲ್ಲಿ ಸಕ್ರಿಯ (3,76,324) ಪ್ರಕರಣಗಳು 1.15% ರಷ್ಟು

ವಾರದ ಪಾಸಿಟಿವಿಟಿ ದರ (2.41%) 66 ದಿನಗಳಿಂದ 3% ಕ್ಕಿಂತ ಕಡಿಮೆ

Posted On: 30 AUG 2021 10:05AM by PIB Bengaluru

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 31,14,696  ಕೋವಿಡ್ – 19 ಲಸಿಕೆ ಡೋಸ್ ಗಳನ್ನು ನೀಡಲಾಗಿದ್ದು, ದೇಶದಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ದೊರೆತ ತಾತ್ಕಾಲಿಕ ಮಾಹಿತಿಯಂತೆ ಒಟ್ಟು 63.43 ಕೋಟಿ (63,43,81,358) ಗೂ ಹೆಚ್ಚು ಕೋವಿಡ್ ಲಸಿಕೆ ಡೋಸ್ ಗಳನ್ನು ಹಾಕಾಗಲಿದೆ.  ಇದನ್ನು 68,14,305 ಅವಧಿಯಲ್ಲಿ ಸಾಧಿಸಲಾಗಿದೆ.

ಇಂದು ಬೆಳಿಗ್ಗೆ 8 ಗಂಟೆಗೆ ದೊರೆತ ತಾತ್ಕಾಲಿಕ ಮಾಹಿತಿಯಂತೆ ವಿಭಾಗವಾರು ಅಂಕಿ ಅಂಶಗಳು ಇವುಗಳನ್ನು ಒಳಗೊಂಡಿದೆ.

 

ಎಚ್.ಸಿ.ಡಬ್ಲ್ಯೂ ಗಳು

ಮೊದಲ ಡೋಸ್

1,03,57,456

ಎರಡನೇ ಡೋಸ್

83,55,737

ಎಫ್.ಎಲ್.ಡಬ್ಲ್ಯೂ ಗಳು

ಮೊದಲ ಡೋಸ್

1,83,19,387

ಎರಡನೇ ಡೋಸ್

1,30,84,369

 

 18-44 ವಯೋಮಿತಿಯವರು  

ಮೊದಲ ಡೋಸ್

24,41,76,113

ಎರಡನೇ ಡೋಸ್

2,65,28,385

 

45-59 ವಯೋಮಿತಿಯವರು  

ಮೊದಲ ಡೋಸ್

12,93,88,782

ಎರಡನೇ ಡೋಸ್

5,34,76,008

 

60 ವರ್ಷ ಮೀರಿದವರು

ಮೊದಲ ಡೋಸ್

8,62,64,550

ಎರಡನೇ ಡೋಸ್

4,44,30,571

ಒಟ್ಟು

63,43,81,358

 

ದೇಶಾದ್ಯಂತ ಕೋವಿಡ್ – 19 ಲಸಿಕೆಯ ವೇಗ ವರ್ಧಿಸಲು ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. 

ಕಳೆದ 24 ಗಂಟೆಗಳಲ್ಲಿ 34,763 ಮಂದಿ ಚೇತರಿಸಿಕೊಂಡಿದ್ದು, ಈ ವರೆಗೆ [ ಸಾಂಕ್ರಾಮಿಕ ಕಂಡು ಬಂದ ನಂತರದಿಂದ] ಒಟ್ಟು 3,19,23,405 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಪರಿಣಾಮ ಭಾರತದಲ್ಲಿ ಚೇತರಿಕೆ ದರ 97.51% ರಷ್ಟಿದೆ.

ಕೇಂದ್ರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಸಹಯೋಗದಿಂದಾಗಿ ನಿರಂತರ 64 ದಿನಗಳಿಂದ ದೈನಂದಿನ ಸೋಂಕು ಪ್ರಕರಣಗಳ ಪ್ರವೃತ್ತಿ 50,000 ಕ್ಕಿಂತ ಕಡಿಮೆ ದಾಖಲಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 42,909 ಹೊಸ ಪ್ರಕರಣಗಳು ದೃಢಪಟ್ಟಿವೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳು ಪ್ರಸ್ತುತ 3,76,324 ರಷ್ಟಿದೆ. ದೇಶದ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 1.15%  ರಷ್ಟಿದೆ.

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ವಿಸ್ತರಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 14,19,990 ಪರೀಕ್ಷೆಗಳನ್ನು ಮಾಡಲಾಗಿದೆ. ಭಾರತದಲ್ಲಿ ಈ ವರೆಗೆ 52.01 ಕೋಟಿ (52,01,46,525) ಗೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಪರೀಕ್ಷಾ ಸಾಮಾರ್ಥ್ಯ ಹೆಚ್ಚಿಸಲಾಗಿದ್ದು, ವಾರದ ಪಾಸಿಟಿವಿಟಿ ದರ 2.41% ರಷ್ಟಿದೆ. ನಿರಂತರ 66 ದಿನಗಳಿಂದ 3% ಕ್ಕೂ ಕಡಿಮೆ ದಾಖಲಾಗುತ್ತಿದೆ. ದೈನಂದಿನ ಪಾಸಿಟಿವಿಟಿ ದರ 3.02% ರಷ್ಟಿದ್ದು, ಸತತ 84 ದಿನಗಳಿಂದ ದೈನಂದಿನ ಪಾಸಿಟಿವಿಟಿ ದರ 5% ಕ್ಕೂ ಕಡಿಮೆ ದಾಖಲಾಗುತ್ತಿದೆ.

 

****



(Release ID: 1750440) Visitor Counter : 243