ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ರಾಷ್ಟ್ರೀಯ ಕ್ರೀಡಾ ದಿನವಾದ ಇಂದು ಫಿಟ್ ಇಂಡಿಯಾ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್


ಫಿಟ್ ಇಂಡಿಯಾ ಮೊಬೈಲ್ ಆ್ಯಪ್ 135 ಕೋಟಿ ಭಾರತೀಯರ ಅತ್ಯಂತ ಸಮಗ್ರ ಫಿಟ್ನೆಸ್ ಆ್ಯಪ್ ಆಗಿದೆ : ಶ್ರೀ ಅನುರಾಗ್ ಠಾಕೂರ್

Posted On: 29 AUG 2021 2:15PM by PIB Bengaluru

ಪ್ರಮುಖ ಅಂಶಗಳು

  • ಇದು ಉಚಿತ ಆ್ಯಪ್ ಆಗಿದ್ದು, ನಮ್ಮ ಫಿಟ್ನೆಸ್ ಗೆ ಅಮೂಲ್ಯವಾದದ್ದು : ಶ್ರೀ ಅನುರಾಗ್ ಠಾಕೂರ್
  • ಫಿಟ್ ಇಂಡಿಯಾ ಆ್ಯಪ್ ನವ ಭಾರತವನ್ನು ಸದೃಢ ಭಾರತವನ್ನಾಗಿ ಮಾಡಲಿದೆ : ಶ್ರೀ ನಿಶಿತ್ ಪ್ರಾಮಾಣಿಕ್  
  • ಸಚಿವರು ವರ್ಚುವಲ್ ಮೂಲಕ ಭಾರತೀಯ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್, ಕುಸ್ತಿಪಟು ಸಂಗ್ರಾಮ್ ಸಿಂಗ್, ಕ್ರೀಡಾ ಪತ್ರಕರ್ತ ಅಜಯ್ ಮೆಮೊನ್ ಮತ್ತು ಪೈಲೆಟ್ ಹಾಗೂ ಕ್ಯಾಪ್ಟನ್ ಅನ್ಯಾ ದಿವ್ಯಾ ಮತ್ತಿತರ ಜತೆ ಸಂವಾದ ನಡೆಸಿದರು.
  • ಫಿಟ್ ಇಂಡಿಯಾ ಆ‍್ಯಪ್ ಉಚಿತವಾದ್ದದ್ದು ಮತ್ತು ಇಂಗ್ಲೀಷ್, ಹಿಂದಿ ಎರಡೂ ಭಾಷೆಯಲ್ಲಿ ಲಭ್ಯವಿದ್ದು, ಆಂಡ್ರಾಯ್ಡ್ ಮತ್ತು ಐ.ಎಸ್.ಒ ವೇದಿಕೆಲ್ಲಿ ಲಭ್ಯ.
  • ಫಿಟ್ ಇಂಡಿಯಾ ಆಂದೋಲನದಲ್ಲಿ ಸಾರ್ವಜನಿಕರು ಭಾಗಹಿಸುವ ಮೂಲಕ ಆಜಾ಼ದಿ ಕಾ ಅಮೃತ್ ಮಹೋತ್ಸವ್ ಯಶಸ್ವಿಗೊಳಿಸುವಂತೆ ಮನವಿ ಮಾಡಿದ ಶ್ರೀ ಠಾಕೂರ್

ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಫಿಟ್ ಇಂಡಿಯಾ ಎರಡನೇ ವಾರ್ಷಿಕೋತ್ಸವ ಮತ್ತು ಆಜಾ಼ದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ‍್ರೀ ಅನುರಾಗ್ ಠಾಕೂರ್  ಫಿಟ್ ಇಂಡಿಯಾ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದರು. ಯುವ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ಶ್ರೀ ನಿಶಿತ್ ಪ್ರಮಾಣಿಕ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕ್ರೀಡಾ ಇಲಾಖೆ ಕಾರ್ಯದರ್ಶಿ ಶ್ರೀ ರವಿ ಮಿತ್ತಲ್ ಮತ್ತು ಯುವ ವ್ಯವಹಾರಗಳ ಕಾರ್ಯದರ್ಶಿ ಶ್ರೀಮತಿ ಉಷಾ ಶರ್ಮಾ ಅವರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮೊಬೈಲ್ ಆ‍್ಯಪ್ ಬಿಡುಗಡೆಗೂ ಮುನ್ನ ಶ್ರೀ ಅನುರಾಗ್ ಠಾಕೂರ್ ಅವರು ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹಾಕಿ ದಂತ ಕಥೆ ಮೇಜರ್ ಧ್ಯಾನ್ ಚಂದ್ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಶ್ರೀ ನಿಶಿತ್ ಪ್ರಮಾಣಿಕ್ ಅವರು ಸಹ ಪುತ್ಥಳಿಗೆ ಗೌರವ ಸಲ್ಲಿಸಿದರು.

ಸಚಿವರು ವರ್ಚುವಲ್ ಮೂಲಕ ಭಾರತೀಯ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್, ಕುಸ್ತಿಪಟು ಸಂಗ್ರಾಮ್ ಸಿಂಗ್, ಕ್ರೀಡಾ ಪತ್ರಕರ್ತ ಅಜಯ್ ಮೆಮೊನ್ ಮತ್ತು ಪೈಲೆಟ್,  ಕ್ಯಾಪ್ಟನ್ ಅನ್ಯಾ ದಿವ್ಯಾ, ಶಾಲಾ ವಿದ್ಯಾರ್ಥಿ ಮತ್ತು ಗೃಹಿಣಿಯೊಂದಿಗೆ ಸಂವಾದ ನಡೆಸಿದರು. ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ನಂತರ ಆ್ಯಪ್ ಬಳಕೆ ಕುರಿತು ಮಾಹಿತಿ ನೀಡಲಾಯಿತು.  ಫಿಟ್ ಇಂಡಿಯಾ ಆ್ಯಪ್ ಉಚಿತವಾಗಿದ್ದು, ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಮತ್ತು ಆಂಡ್ರಾಯ್ಡ್ ಮತ್ತು ಐ.ಓ.ಎಸ್ ವೇದಿಕೆಗಳಲ್ಲಿ ಇದು ಲಭ್ಯವಿದೆ. ಇದನ್ನು ಬೇಸಿಕ್ ಸ್ಮಾರ್ಟ್ ಫೋನ್ ಗಳಲ್ಲೂ ಕಾರ್ಯನಿರ್ವಹಿಸುವಂತೆ ಅಭಿವೃದ್ಧಿಪಡಿಸಲಾಗಿದೆ.

ರಾಷ್ಟ್ರೀಯ ಕ್ರೀಡಾ ದಿನ ಹಾಗೂ ಫಿಟ್ ಇಂಡಿಯಾದ ಎರಡನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರನ್ನು ಅಭಿನಂದಿಸಿದ ಅವರು, “ಫಿಟ್ ಇಂಡಿಯಾ ಮೊಬೈಲ್ ಆ್ಯಪ್ ಪ್ರತಿಯೊಬ್ಬ ಭಾರತೀಯನ ಅಂಗೈಯಲ್ಲಿ ಫಿಟ್ನೆಸ್ ಮಟ್ಟವನ್ನು ಸುಲಭವಾಗಿ ಅಳೆಯಬಹುದಾಗಿದೆ. ಇದರಲ್ಲಿ ಕೆಲವು ಅಸಾಧಾರಣ ವೈಶಿಷ್ಟ್ಯಗಳಿದ್ದು, “ಫಿಟ್ನೆಸ್ ಸ್ಕೋರ್”, ಅನಿಮೇಟೆಡ್ ವಿಡಿಯೋಸ್, ಆಕ್ಟಿವಿಟಿ ಟ್ರಾಕರ್ಸ್ ಮತ್ತು ಮೈ ಪ್ಲಾನ್ ನಂತಹ ವೈಯಕ್ತಿಕವಾಗಿ ಬೇಕಾಗಿರುವ ಅಗತ್ಯಗಳನ್ನು ಇದು ಪೂರೈಸಲಿದೆ.

 


 

“ ಕಳೆದ ವರ್ಷ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಯಸ್ಸಿಗೆ ಅನುಗುಣವಾಗಿ ಸೂಕ್ತವಾದ ಫಿಟ್ನೆಸ್ ಶಿಷ್ಟಾಚಾರ ಆರಂಭಿಸಿದ್ದರು. ಇವುಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿವೆ.  ಅಂತಾರಾಷ್ಟ್ರೀಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ. ಶ್ರೀ ನರೇಂದ್ರ ಮೋದಿ ಅವರು ದೇಶದ ಜನರಿಗೆ ಫಿಟ್ನೆಸ್ ಮಂತ್ರವನ್ನೂ  ಸಹ ನೀಡಿದ್ದಾರೆ. – “ ಫಿಟ್ನೇಸ್ ಕಿ ಡೋಸ್, ಆಧಾ ಘಂಟಾ ರೋಸ್” ಎಂದು ಹೇಳಿದರು.


ಪ್ರತಿಯೊಬ್ಬ ಭಾರತೀಯರ ಬದುಕಿನಲ್ಲಿ ಫಿಟ್ನೆಸ್ ಅವಿಭಾಜ್ಯ ಅಂಗವನ್ನಾಗಿ ಮಾಡುವ ಗುರಿಯೊಂದಿಗೆ ರಾಷ್ಟ್ರೀಯ ಕ್ರೀಡಾ ದಿನದಂದು ಗೌರವಾನ್ವಿತ ಪ್ರಧಾನಮಂತ್ರಿ ಅವರು 2019 ರ ಆಗಸ್ಟ್ 29 ರಂದು ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ ನೀಡಿದ್ದರು. ಇಂದು ಇದು ಜನಾಂದೋಲನವಾಗಿದೆ. ಫಿಟ್ ಇಂಡಿಯಾ ಆಂದೋಲನದಲ್ಲಿ ಸಾರ್ವಜನಿಕರು ಭಾಗಹಿಸುವ ಮೂಲಕ ಆಜಾ಼ದಿ ಕಾ ಅಮೃತ್ ಮಹೋತ್ಸವ್ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಆರೋಗ್ಯಕರ ಸದೃಢ ಭಾರತ ನಾವು ನಮ್ಮ ನಾಗರಿಕರಿಗೆ ಕಲ್ಪಿಸುವ ಹೊಸ ಭಾರತವಾಗಿದೆ. “ಫಿಟ್ ಇಂಡಿಯಾ ಮೊಬೈಲ್ ಆ್ಯಪ್ 135 ಕೋಟಿ ಭಾರತೀಯರ ಅತ್ಯಂತ ಸಮಗ್ರ ಫಿಟ್ನೇಸ್ ಆ್ಯಪ್ ಆಗಿದೆ” ಎಂದು ಶ್ರೀ ಅನುರಾಗ್ ಠಾಕೂರ್ ಹೇಳಿದರು.

ನಮ್ಮ ಯುವ ಸಮೂಹ ಸದೃಢಗೊಳ್ಳುವುದನ್ನು ಅರಿತುಕೊಳ್ಳುವ ಮೂಲಕ ಅವರು ದೇಶಕ್ಕೆ ಅರ್ಥಪೂರ್ಣ ಕೊಡುಗೆ ನೀಡುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಯೊಬ್ಬರೂ ಮೊಬೈಲ್ ಆ್ಯಪ್ ಅನ್ನು ಜನಪ್ರಿಯಗೊಳಿಸಬೇಕು. “ ಈ ಆ್ಯಪ್ ಉಚಿತವಾಗಿದೆ, ಆದರೆ ನಮ್ಮ ಫಿಟ್ನೇಸ್ ಗೆ ಇದು ಅಮೂಲ್ಯವಾದದ್ದು” ಎಂದು ಹೇಳಿದರು.  


ಶ‍್ರೀ ನಿಶಿತ್ ಪ್ರಮಾಣಿಕ್ ಮಾತನಾಡಿ, ಫಿಟ್ ಇಂಡಿಯಾವನ್ನು ಜನಾಂದೋಲನವನ್ನಾಗಿ ಮಾಡುವಲ್ಲಿ ದೇಶವಾಸಿಗಳ ಕೊಡುಗೆ ನಂಬಲಸಾಧ್ಯವಾಗಿದೆ. ಫಿಟ್ ಇಂಡಿಯಾ ಆ್ಯಪ್ ನವ ಭಾರತವನ್ನು ಫಿಟ್ ಇಂಡಿಯಾ ಮಾಡಲು ಸಹಾಯ ಮಾಡಲಿದೆ. ಕ್ರೀಡಾ ಸಚಿವ ಶ‍್ರೀ ಅನುರಾಗ್ ಠಾಕೂರ್ ಸದೃಢ ಭಾರತ ನಿರ್ಮಾಣದಲ್ಲಿ ನಮಗೆ ಮಾದರಿಯಾಗಿದ್ದಾರೆ ಮತ್ತು ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ  ಎಂದು ಹೇಳಿದರು.


ವರ್ಚುವಲ್ ಸಂವಾದ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್ ಈ ಆ್ಯಪ್ ವೈಶಿಷ್ಟ್ಯಗಳು ಸುಲಭವಾಗಿ ಬಳಕೆ ಮಾಡುವಂತಿವೆ. ಆರೋಗ್ಯದ ಮಾನದಂಡಗಳನ್ನು ನೋಡಲು ಇದರ ಉಪಯೋಗ ಹೆಚ್ಚಿದೆ ಎಂದರು. ಸ್ವತಃ ಪೈಲೆಟ್ ಆಗಿರುವ ಕ್ಯಾಪ್ಟನ್ ಅನ್ಯಾ ದಿವ್ಯಾ ಮಾತನಾಡಿ, ಯಾವ ಪ್ರಮಾಣದಲ್ಲಿ ನೀರು ಸೇವಿಸಬೇಕು ಮತ್ತು ಬಿಡುವಿಲ್ಲದ ಕರ್ತವ್ಯದ ನಡುವೆ ಎಷ್ಟು ಸಮಯ ನಿದ್ರಿಸಬೇಕು ಎನ್ನುವ ಮಾಹಿತಿ ನೋಡಲು ಸಹಕಾರಿಯಾಗಿದೆ ಎಂದು ಆ್ಯಪ್ ಮಹತ್ವವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಇವರು ದೇಹದ ಮೇಲ್ಬಾಗಕ್ಕೆ ಶಕ್ತಿ ತುಂಬುವ ಪುಶ್ ಅಪ್ ಗಳ ಕಸರತ್ತು ಪ್ರದರ್ಶಿಸಿದರು. ಈ ವ್ಯಾಯಾಮಗಳ ವಿಧಾನಗಳು ಆ್ಯಪ್ ನಲ್ಲಿ ಲಭ್ಯವಿದ್ದು, ಪ್ರತಿಯೊಬ್ಬರು ಆ್ಯಪ್ ಅನ್ನು ಹೊಂದಬಹುದಾಗಿದೆ. ಶ್ರೀ ಅನುರಾಗ್ ಠಾಕೂರ್ ಮತ್ತು ಶ್ರೀ ನಿಶಿತ್ ಪ್ರಮಾಣಿಕ್ ಅವರು ಕುಸ್ತಿಪಟು ಸಂಗ್ರಾಮ್ ಸಿಂಗ್ ಅವರೊಂದಿಗೆ ದೇಹದ ಸ್ಥಿರತೆ ಮತ್ತು ಸಮತೋಲನ ಕಾಯ್ದುಕೊಳ್ಳುವ ಯೋಗಾಸನವನ್ನು ಪ್ರದರ್ಶಿಸಿದರು. ಪತ್ರಕರ್ತ ಅಜಯ್ ಮೆಮೊನ್ ಹಿರಿಯ ನಾಗರಿಕರಿಗೆ ಪಿಟ್ನೆಸ್ ನ ಮಹತ್ವ ಕುರಿತು ಬೆಳಕು ಚೆಲ್ಲಿದರು.  ಫಿಟ್ ಆಗಿರಲು ಖುರ್ಚಿ ಹಿಗ್ಗಿಸುವ ಕಸರತ್ತು ಮಾಡಿದರು. 8 ನೇ ತರಗತಿ ವಿದ್ಯಾರ್ಥಿನಿ ಶೃತಿ ತೋಮರ್ ದೈಹಿಕ ಸದೃಢತೆ ಕುರಿತು ಮಾತನಾಡಿದರು. ಗೃಹಿಣಿ ಶ‍್ಯಾಮ್ಲೀ ಶರ್ಮಾ ದಿನನಿತ್ಯದ ಮನೆ ಕೆಲಸಗಳ ನಡುವೆ ಸದೃಢವಾಗಿರಲು ಆ್ಯಪ್ ನ ಉಪಯೋಗದ ಬಗ್ಗೆ ಮಾತನಾಡಿದರು.

ಫಿಟ್ ಇಂಡಿಯಾ ಅಭಿಯಾನವನ್ನು 2019 ರ ಆಗಸ್ಟ್ 29 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸದೃಢ  ಭಾರತ ಮತ್ತು ಆರೋಗ್ಯವಂತ ದೇಶ ನಿರ್ಮಿಸುವ ಉದ್ದೇಶದಿಂದ ಉದ್ಘಾಟಿಸಿದ್ದರು.  ಇದರ ಮುಖ್ಯ ಸಂದೇಶವೆಂದರೆ ಸುಲಭವಾಗಿ ಫಿಟ್ನೆಸ್ ಅನ್ನು ಅಳವಡಿಸಿಕೊಳ‍್ಳಬಹುದು. ಸಂತಸದಾಯಕವಾಗಿ ಉಚಿತವಾಗಿ ಎಲ್ಲಿ ಬೇಕಾದರೂ ದೈಹಿಕ ಕಸರತ್ತಿನ ಅಭ್ಯಾಸ ಮಾಡಬಹುದು. ಒಂದು ವರ್ಷದ ಹಿಂದೆ ಪ್ರಧಾನಮಂತ್ರಿ  ಅವರು 1. 5-18, 2. 18-65, 3. 65 ವಯೋಮಿತಿ ಮೀರಿದವರಿಗಾಗಿ ಮೂರು ಮಾದರಿಯ ಸೂಕ್ತ ಫಿಟ್ನೆಸ್ ಶಿಷ್ಟಾಚಾರವನ್ನು ಪ್ರಕಟಿಸಿದ್ದರು. ಇದನ್ನು ತಜ್ಞರ ಸಮಿತಿ ಅಭಿವೃದ್ದಿಪಡಿಸಿದ್ದು, ಇದಕ್ಕೆ ವಿಶ್ವ ಆರೋಗ್ಯ ಸಂಘಟನೆ [ಡಬ್ಲ್ಯೂಎಚ್] ಅನುಮೋದನೆ ನೀಡಿದೆ. ಪ್ರಧಾನಮಂತ್ರಿ  ಅವರು ಸಹ ದೇಶದ ಜನರಿಗೆ ಸ್ಪಷ್ಟವಾದ ಕರೆ ನೀಡಿದ್ದಾರೆ. – “ಫಿಟ್ನೆಸ್ ಕಿ ಡೋಸ್, ಆಧಾಗಂಟಾ ರೋಜ್” ಆಗಿದೆ.

ಫಿಟ್ ಇಂಡಿಯಾ ಆ್ಯಪ್ ನ ಅಸಾಧಾರಣ ವೈಶಿಷ್ಟ್ಯಗಳೆಂದರೆ ವಯೋಮಿತಿಗೆ ಅನುಗುಣವಾಗಿ ಈಕೆ/ ಆತನಿಗೆ ಫಿಟ್ನೆಸ್ ನ ಅಂಕಗಳನ್ನು ನೀಡುವ ಮತ್ತು ಯೋಗ ಶಿಷ್ಟಾಚಾರಗಳು ಸೇರಿದಂತೆ ದೈಹಿಕ ಚಟುವಟಿಕೆಗಳ ಮೂಲಕ ಹೇಗೆ ಫಿಟ್ನೆಸ್ ಅನ್ನು ಸುಧಾರಿಸಬಹುದು ಎನ್ನುವ ಶಿಫಾರಸ್ಸುಗಳನ್ನು ಇದು ಒಳಗೊಂಡಿದೆ.  ವ್ಯಕ್ತಿಗಳು ಪಿಟ್ನೆಸ್ ಪರೀಕ್ಷೆಗಳನ್ನು ನಡೆಸುವ ವಿಧಾನದ ಬಗ್ಗೆ ಅರ್ಥಮಾಡಿಕೊಳ್ಳಲು ಅನಿಮೇಟೆಡ್ ವಿಡಿಯೋಗಳನ್ನು ಸಹ ನೀಡಲಾಗಿದೆ. ಈ ವೈಶಿಷ್ಟ್ಯಗಳು ಪ್ರಧಾನಮಂತ್ರಿಯವರು ಪ್ರಾರಂಭಿಸಿದ ವಯಸ್ಸಿಗೆ ಸೂಕ್ತವಾದ ಫಿಟ್ನೆಸ್ ಶಿಷ್ಟಾಚಾರಗಳನ್ನು ಆಧರಿಸಿದೆ.

ಫಿಟ್ನೆಸ್ ಶಿಷ್ಟಾಚಾರದ ವೈಶಿಷ್ಟ್ಯ ವಿವಿಧ ವಯೋಮಾನದ ಬಳಕೆದಾರರಿಗೆ ವಿವಿಧ ವ್ಯಾಯಾಮಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಈ ಶಿಷ್ಟಾಚಾರ ಸಾರ್ವತ್ರಿಕವಾಗಿ ಅನುಸರಿಸುವ ಮತ್ತು ಆರೋಗ್ಯ ತಜ್ಞರಿಂದ ಸೂಕ್ತ ರೀತಿಯಲ್ಲಿ ಅಂಗೀಕರಿಸಿದ ವ್ಯಾಯಾಮಗಳಾಗಿವೆ.

 

ಹೆಚ್ಚುವರಿ ವೈಶಿಷ್ಟ್ಯಗಳು  

ಪ್ರತಿಯೊಬ್ಬರ ದೈಹಿಕ ಪರಿಸ್ಥಿತಿ, ಜೀವನ ಶೈಲಿ, ಲಿಂಗ, ವಯೋಮತಿಗೆ ಅನುಗುಣವಾಗಿ ಪ್ರತಿಯೊಬ್ಬರಿಗೂ ವಿಭಿನ್ನ ಆಹಾರ, ನೀರು ಮತ್ತು ಚಟುವಟಿಕೆ ಅಗತ್ಯವಾಗಿದೆ. ಫಿಟ್ ಇಂಡಿಯಾದ ಮೊಬೈಲ್ ಆ್ಯಪ್ ನ “ಮೈ ಪ್ಲಾನ್ “ ನಲ್ಲಿ ಪ್ರತಿಯೊಬ್ಬ ವ್ಯಕ್ತಿ ತಮ್ಮ ಪ್ರಸ್ತುತ ಜೀವನ ಶೈಲಿಯನ್ನು ವ್ಯಾಖ್ಯಾನಿಸಲು ಅವಕಾಶ ಮಾಡಿಕೊಡುತ್ತದೆ. ದೈಹಿಕ ಚಟುವಟಿಕೆಗೆ ಎಷ್ಟು ಸಮಯ ವಿನಿಯೋಗಿಸಬೇಕು, ಎಷ್ಟು  ನೀರುಸೇವಿಸಬೇಕು, ನಿದ್ರೆ, ಪ್ರಸ್ತುತ ದೇಹ ತೂಕ ಮತ್ತು ಎತ್ತರಕ್ಕೆ ತಕ್ಕಂತೆ ಎಷ್ಟು ತೂಕ ಇರಬೇಕು. ಆಹಾರ ಸೇವನೆಯ ಯೋಜನೆ, ಆಕೆ/ ಆತನ ಗುರಿಗಳನ್ನು ತಲುಪಲು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಕುರಿತು ಮಾಹಿತಿ ನೀಡಲಿದೆ. ಫಿಟ್ ಇಂಡಿಯಾ ಮೊಬೈಲ್ ಆ್ಯಪ್ ಭಾರತೀಯ ಆಹಾರ ಯೋಜನೆ, ಎಷ್ಟು ಲೋಟ ನೀರು ಸೇವನೆ, ಎಷ್ಟು ಗಂಟೆ ನಿದ್ರೆ ಮಾಡಬೇಕು ಎನ್ನುವ  ಕುರಿತೂ ವಿವರ ನೀಡಲಿದೆ.   

“ ಆಕ್ಟಿವಿಟಿ ಟ್ರಾಕರ್ “ ಅಪ್ಲಿಕೇಶನ್ ವ್ಯಕ್ತಿಗಳಿಗೆ  ತಮ್ಮ ದೈನಂದಿನ ಚಟುವಟಿಕೆ ಮಟ್ಟವನ್ನು ಗಮನದಲ್ಲಿಟ್ಟುಕೊಳ‍್ಳಲು ನೆರವಾಗುತ್ತದೆ. ನೈಜ ಸಮಯದ  “ಸ್ಟೆಪ್ ಟ್ರಾಕರ್ “ ವ್ಯಕ್ತಿಗಳಿಗೆ ತಮ್ಮ ದೈನಂದಿನ ಹಂತಗಳನ್ನು ಅನುಸರಿಸಲು ಸಹಾಯ ಮಾಡುತ್ತದೆ ಮತ್ತು ತಮಗಾಗಿ ಉನ್ನತ ಗುರಿಗಳನ್ನು ಹೊಂದಲು ಪ್ರೋತ್ಸಾಹಿಸುತ್ತದೆ.  ವ್ಯಕ್ತಿಗಳು ತಮ್ಮ ದೈನಂದಿನ ಕ್ಯಾಲೊರಿ, ನೀರು ಸೇವನೆ ಮತ್ತು ನಿದ್ರೆಯ ಅವಧಿ ಕುರಿತು ವಿವರ ನೀಡಲಿದೆ.   

ವ್ಯಕ್ತಿಗಳು ಪ್ರತಿಗಂಟೆಯ ರಿಮೈಂಡರ್ ಗಳನ್ನು ಅಳವಡಿಸಿಕೊಂಡು ಪಿಟ್ನೆಸ್  ನ ಅಂಕಗಳನ್ನು ಸಾಧಿಸಲು ನೆರವಾಗುತ್ತದೆ. ತಮ್ಮ ದೈನಂದಿನ ಫಿಟ್ನೆಸ್  ಮತ್ತು ಚಟುವಟಿಕೆಗಳ ದತ್ತಾಂಶಗಳ ಮೂಲಕ ಚಟುವಟಿಕೆಗಳನ್ನು ಕೈಗೊಳ್ಳಲು ಮತ್ತು ಹೆಚ್ಚು ಜನರನ್ನು ಫಿಟ್ನೇಸ್ ವ್ಯಾಪ್ತಿಗೆ ತರಲು, ಜೀವನ ಶೈಲಿಯಲ್ಲಿ ಬದಲಾವಣೆ ತರಲು ಸಹಕಾರಿಯಾಗಲಿದೆ.

ಈ ಆ್ಯಪ್ ವ್ಯಕ್ತಿಗಳು, ಶಾಲಾ ಗುಂಪುಗಳು ಮತ್ತು ಸಂಘಟನೆಗಳಿಗೆ ಹಲವಾರು ಫೀಟ್ ಇಂಡಿಯಾದ ಪ್ರಮಾಣ ಪತ್ರ ಪಡೆಯುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ಒದಗಿಸುತ್ತದೆ.  ಜನತೆ ತಮ್ಮ ಫಿಟ್ನೇಸ್ ನ ಯಶೋಗಾಥೆಗಳನ್ನು ಹಂಚಿಕೊಳ್ಳಲು ಇದು ವೇದಿಕೆಯೂ ಸಹ ಆಗಿದೆ.
 

****



(Release ID: 1750242) Visitor Counter : 297