ಪ್ರಧಾನ ಮಂತ್ರಿಯವರ ಕಛೇರಿ

ಇಟಲಿ ಪ್ರಧಾನ ಮಂತ್ರಿ ಮಾರಿಯೊ ಡ್ರಾಘಿ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ

Posted On: 27 AUG 2021 10:50PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಟಲಿ ಪ್ರಧಾನ ಮಂತ್ರಿ ಮಾರಿಯೊ ಡ್ರಾಘಿ ಅವರೊಂದಿಗೆ  ದೂರವಾಣಿ ಮಾತುಕತೆ ನಡೆಸಿದರು.

ಆಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳು ಮತ್ತು ಆ ಪ್ರದೇಶ ಸೇರಿದಂತೆ ಇಡೀ ಜಗತ್ತಿಗೆ ಆಗುತ್ತಿರುವ ಪರಿಣಾಮಗಳ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದರು.

ಕಾಬೂಲ್ ಅಂತಾರಾಷ್ಟ್ರೀಯ ಏರ್|ಪೋರ್ಟ್ ಮೇಲೆ ನಿನ್ನೆ ನಡೆದಿರುವ ಭಯೋತ್ಪಾದಕರ ಭೀಕರ ಮತ್ತು ಪೈಶಾಚಿಕ ದಾಳಿ ಖಂಡಿಸಿದ ನಾಯಕರು, ಕಾಬೂಲ್|ನಲ್ಲಿ ನಿಲುಗಡೆಯಾಗಿರುವ ಹೊರರಾಷ್ಟ್ರಗಳ ಜನರನ್ನು ಸುರಕ್ಷಿತವಾಗಿ ವಾಪಸ್ ಕಳಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ಜಿ20 ಸಮಾವೇಶದಂತಹ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಆಫ್ಘಾನಿಸ್ತಾನದ ಮಾನವತೆಯ ಬಿಕ್ಕಟ್ಟು ಚರ್ಚೆಯಾಗಬೇಕು. ಇದಕ್ಕೆ ಅಂತಾರಾಷ್ಟ್ರೀಯ ಸಹಕಾರ ಏರ್ಪಡಬೇಕು. ಆಫ್ಘಾನಿಸ್ತಾನಕ್ಕೆ ದೀರ್ಘತಾಲೀನ ಭದ್ರತೆ ಒದಗಿಸುವುದು ಇಂದಿನ ಅಗತ್ಯವಾಗಿದೆ ಎಂದು ನಾಯಕರು ಪರಸ್ಪರ ಮಾತುಕತೆ ನಡೆಸಿದರು.

ಹವಾಮಾನ ಬದಲಾವಣೆ ಸೇರಿದಂತೆ ಜಿ20 ಕಾರ್ಯಸೂಚಿಗಳ ಕುರಿತು ಮಾತುಕತೆ ನಡೆಸಿದ ಉಭಯ ನಾಯಕರು, ನವೆಂಬರ್|ನಲ್ಲಿ ಜರುಗುವ ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆ ಸಮಾವೇಶ ಸಿಒಪಿ-26ರ ಕಾರ್ಯಸೂಚಿ, ಉದ್ದೇಶ ಮತ್ತು ಕಾರ್ಯತಂತ್ರಗಳ ಕುರಿತು ಚರ್ಚಿಸಿದರು.

ಜಿ20 ಸಮಾವೇಶದ ನಿರ್ಣಯದ ಅಡಿ, ಫಲಪ್ರದ ಮಾತುಕತೆ ನಡೆಸಿದ ಇಟಲಿಯ ಕ್ರಿಯಾಶೀಲ ನಾಯಕತ್ವವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದರು.

ಆಫ್ಘಾನಿಸ್ತಾನ ಸೇರಿದಂತೆ ದ್ವಿಪಕ್ಷೀಯ ಮತ್ತು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಭಾರತ ಮತ್ತು ಇಟಲಿ ಸದಾ ಸಂಪರ್ಕ ಸಾಧಿಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು.

***(Release ID: 1749858) Visitor Counter : 156