ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹೊಸ ಡ್ರೋನ್ ನಿಯಮಗಳೊಂದಿಗೆ ಭಾರತದಲ್ಲಿ ಈ ವಲಯ ಹೆಗ್ಗುರುತಿನ ಕ್ಷಣಕ್ಕೆ ಸಾಕ್ಷಿಯಾಗಿದೆ: ಪ್ರಧಾನಿ

प्रविष्टि तिथि: 26 AUG 2021 1:26PM by PIB Bengaluru

ಹೊಸ ಡ್ರೋನ್ ನಿಯಮಗಳೊಂದಿಗೆ ಭಾರತದಲ್ಲಿ ವಲಯ ಹೆಗ್ಗುರುತಿನ ಕ್ಷಣಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಹೊಸ ಡ್ರೋನ್ ನಿಯಮಗಳು ನವೋದ್ಯಮಗಳಿಗೆ ಮತ್ತು ವಲಯದಲ್ಲಿ ಕೆಲಸ ಮಾಡುವ ನಮ್ಮ ಯುವಕರಿಗೆ ಭಾರಿ ಸಹಾಯ ಮಾಡುತ್ತವೆ ಎಂದು ಅವರು ಹೇಳಿದ್ದಾರೆ.

ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ, "ಹೊಸ ಡ್ರೋನ್ ನಿಯಮಗಳೊಂದಿಗೆ ಭಾರತದಲ್ಲಿ ವಲಯ ಒಂದು ಹೆಗ್ಗುರುತಿನ  ಕ್ಷಣಕ್ಕೆ ಸಾಕ್ಷಿಯಾಗಿದೆ. ನಿಯಮಗಳು ವಿಶ್ವಾಸ ಮತ್ತು ಸ್ವಯಂ ಪ್ರಮಾಣೀಕರಣದ ಪ್ರತಿಜ್ಞೆಯನ್ನು ಆಧರಿಸಿವೆ. ಇವುಗಳ ಮೂಲಕ ಅನುಮೋದನೆಗಳು, ಅನುಸರಣಾ ಅವಶ್ಯಕತೆಗಳು ಮತ್ತು ಪ್ರವೇಶ ಅಡೆತಡೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ.

ಹೊಸ ಡ್ರೋನ್ ನಿಯಮಗಳು ನವೋದ್ಯಮಗಳಿಗೆ ಮತ್ತು ವಲಯದಲ್ಲಿ ಕೆಲಸ ಮಾಡುವ ನಮ್ಮ ಯುವಕರಿಗೆ ಭಾರಿ ಸಹಾಯ ಮಾಡಲಿವೆ. ನಾವಿನ್ಯತೆ ಮತ್ತು ವ್ಯವಹಾರಕ್ಕೆ ಹೊಸ ಸಾಧ್ಯತೆಗಳನ್ನು ಇವು ತೆರೆಯಲಿವೆ. ಭಾರತವನ್ನು ಡ್ರೋನ್ ಕೇಂದ್ರವನ್ನಾಗಿ ಮಾಡಲು ನಾವಿನ್ಯತೆ, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಭಾರತದ ಸಾಮರ್ಥ್ಯವನ್ನು ಬಳಸಿಕೊಳ್ಳಲು ಇದರಿಂದ ಸಹಾಯಕವಾಗಲಿದೆ." ಎಂದಿದ್ದಾರೆ.

***


(रिलीज़ आईडी: 1749269) आगंतुक पटल : 242
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam