ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕೋವಿಡ್ 19 ಲಸಿಕೆ ನೀಡುವಿಕೆಯ ಪ್ರಗತಿಯನ್ನು ಕೇಂದ್ರವು ಪರಿಶೀಲಿಸುತ್ತದೆ
ಶಾಲಾ ಶಿಕ್ಷಕರಿಗೆ ರೋಗನಿರೋಧಕ ಶಕ್ತಿ ಒದಗಿಸಲು ಆಗಸ್ಟ್ ಕೊನೆಯ ವಾರದಲ್ಲಿ ಕೇಂದ್ರವು 2 ಕೋಟಿ ಹೆಚ್ಚುವರಿ ಲಸಿಕೆ ಡೋಸ್‌ಗಳನ್ನು ನೀಡಲಿದೆ
ಕೋವಿಡ್ 19 ಔಷಧಿಗಳ ಬಫರ್ ಸ್ಟಾಕ್ ಅನ್ನು ನಿರ್ವಹಿಸುವ ತಂತ್ರವನ್ನು ಪರಿಶೀಲಿಸಲಾಗಿದೆ
Posted On:
25 AUG 2021 4:32PM by PIB Bengaluru
ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಅವರ ಅಧ್ಯಕ್ಷತೆಯಲ್ಲಿ ಇಂದು ಎಲ್ಲಾ ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕೇಂದ್ರ ಔಷಧ ವಿಭಾಗದ ಕಾರ್ಯದರ್ಶಿ ಎಸ್. ಅಪರ್ಣಾ ಅವರ ಉಪಸ್ಥಿತಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಕೋವಿಡ್ -19 ಲಸಿಕೆಯ ಪ್ರಗತಿಯನ್ನು ಪರಿಶೀಲಿಸಲಾಗಿದೆ ಮತ್ತು ರಾಜ್ಯಗಳು ಎರಡನೇ ಡೋಸ್ ಕವರೇಜ್ ಹೆಚ್ಚಿಸುವ ಜೊತೆಗೆ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳ (ಸರ್ಕಾರಿ ಮತ್ತು ಖಾಸಗಿ) ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಡೆಗೆ ಗಮನಹರಿಸಲು ಸೂಚಿಸಲಾಗಿದೆ. ತುರ್ತು ಕೋವಿಡ್ ರೆಸ್ಪಾನ್ಸ್ ಪ್ಯಾಕೇಜ್ (ಇಸಿಆರ್‌ಪಿ) ನಿಧಿಯ ತ್ವರಿತ ಬಳಕೆ ಕುರಿತು ರಾಜ್ಯಗಳಿಗೆ ತಿಳಿಸಲಾಯಿತು. ಮುಂದಿನ ಹಬ್ಬಗಳು ಬರುವ ಮುನ್ನ ಕೋವಿಡ್ ಸೂಕ್ತ ವರ್ತನೆ ಮತ್ತು ಇತರ ಮುನ್ನೆಚ್ಚರಿಕೆ ಕ್ರಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಸೂಚಿಸಲಾಗಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು ಎರಡನೇ ಡೋಸ್ ವ್ಯಾಪ್ತಿಯನ್ನು ಹೆಚ್ಚಿಸಲು ಒಂದು ನಿರ್ದಿಷ್ಟ ಜಿಲ್ಲಾ ಮಟ್ಟದ ಯೋಜನೆಯನ್ನು ಹೊಂದಲು ಒತ್ತು ನೀಡಿದರು. ನಿರ್ದಿಷ್ಟ ದಿನಗಳು / ನಿರ್ದಿಷ್ಟ ವ್ಯಾಕ್ಸಿನೇಷನ್ ಸ್ಥಳ (ಸಿವಿಸಿ) ಗಳು/ ಪ್ರತಿ ದಿನ ನಿರ್ದಿಷ್ಟ ವೇಳಾಪಟ್ಟಿ / ಲಸಿಕೆಗಳ ಎರಡನೇ ಡೋಸ್ ಅನ್ನು ಪ್ರತ್ಯೇಕವಾಗಿ ನಿರ್ವಹಿಸಲು ಪ್ರತ್ಯೇಕ ಕ್ಯೂ, ಇಂತಹ ತಂತ್ರಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಸೂಚಿಸಲಾಗಿದೆ. ಫಲಾನುಭವಿಗಳಲ್ಲಿ ಹೆಚ್ಚಿನ ಜಾಗೃತಿಗಾಗಿ ವ್ಯಾಪಕವಾದ ಐಇಸಿ ಅಭಿಯಾನಗಳನ್ನು ಕೈಗೊಳ್ಳಲು ಸಲಹೆ ನೀಡಲಾಯಿತು. ಲಸಿಕೆ ವ್ಯಾಪ್ತಿಯು ರಾಜ್ಯದ ಸರಾಸರಿಗಿಂತ ಕಡಿಮೆ ಇರುವ ಜಿಲ್ಲೆಗಳನ್ನು ಗುರುತಿಸಲು ಮತ್ತು ಈ ಜಿಲ್ಲೆಗಳಲ್ಲಿ ಲಸಿಕೆ ನೀಡುವಿಕೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವಂತೆ ರಾಜ್ಯಗಳನ್ನು ಕೋರಲಾಗಿದೆ.
ಕೇಂದ್ರ ಆರೋಗ್ಯ ಸಚಿವರು ಮಾಡಿದ ಘೋಷಣೆಗೆ ಅನುಗುಣವಾಗಿ, 2 ಕೋಟಿಗೂ ಹೆಚ್ಚು ಹೆಚ್ಚುವರಿ ಲಸಿಕೆ ಡೋಸ್‌ಗಳನ್ನು ಆದ್ಯತೆಯ ಆಧಾರದ ಮೇಲೆ ಶಾಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ನೀಡಲು ಆಗಸ್ಟ್ 27 ರಿಂದ ಆಗಸ್ಟ್ 31, 2021 ರವರೆಗೆ ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಯುಡಿಐಎಸ್‌ಇ (ಶಿಕ್ಷಣದ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ) ದತ್ತಾಂಶವನ್ನು ಬಳಸಿಕೊಳ್ಳಬಹುದು ಮತ್ತು ರಾಜ್ಯ ಶಿಕ್ಷಣ ಇಲಾಖೆಗಳು, ಕೇಂದ್ರೀಯ ವಿದ್ಯಾಲಯ ಸಂಘಟನೆ, ನವೋದಯ ವಿದ್ಯಾಲಯ ಸಂಘಟನೆ ಮುಂತಾದವುಗಳೊಂದಿಗೆ ಕಾರ್ಯ ನಿರ್ವಹಿಸಬಹುದು.
ಮುಂಬರುವ ಹಬ್ಬದ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ/ಏರಿಕೆಯ ಬಗ್ಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜ್ಯಗಳಿಗೆ ಎಚ್ಚರಿಕೆ ನೀಡಿದರು ಮತ್ತು ಇದನ್ನು ತಡೆಯಲು ಸಾಧ್ಯವಿರುವ ಎಲ್ಲ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು. ಓಣಂ ನಂತರ ಕಳೆದ ಒಂದು ವಾರದಲ್ಲಿ ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿವೆ ಎಂದು ಅವರು ಉದಾಹರಿಸಿದರು.
ಇಸಿಆರ್.ಪಿ- II ಪ್ಯಾಕೇಜ್‌ನ 50% ಹಣವನ್ನು ಈಗಾಗಲೇ ಕೇಂದ್ರ ಸರ್ಕಾರವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಿದೆ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅವಧಿಬದ್ಧ ಇಸಿಆರ್.ಪಿಯ ಅಡಿಯಲ್ಲಿ ಉಪಕರಣಗಳು, ಯಂತ್ರೋಪಕರಣಗಳು, ಹಾಸಿಗೆಗಳು, ಔಷಧಗಳು ಇತ್ಯಾದಿಗಳನ್ನು ಖರೀದಿಸಲು ತಕ್ಷಣವೇ ಖರೀದಿ ಮತ್ತು ಪೂರೈಕೆ ಆದೇಶಗಳನ್ನು ಪ್ರಕ್ರಿಯೆಗೊಳಿಸಲು ಸೂಚಿಸಲಾಗಿದೆ. ರಾಜ್ಯಗಳು ತಿಂಗಳವಾರು ವೆಚ್ಚದ ಯೋಜನೆಯನ್ನು ಮಾಡಲು ಮತ್ತು ವಾಸ್ತವವಾಗಿ ಅನುಗುಣವಾದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಕೋರಲಾಯಿತು.
ಕೋವಿಡ್ -19 ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳ ಸಾಕಷ್ಟು ಬಫರ್ ಸ್ಟಾಕ್ ಅನ್ನು ನಿರ್ವಹಿಸುವ ನೀತಿಯನ್ನು ಪರಿಶೀಲಿಸಲಾಯಿತು. ಕೇಂದ್ರ ಆರೋಗ್ಯ ಸಚಿವಾಲಯದಿಂದ ಕಡ್ಡಾಯಗೊಳಿಸಲಾಗಿರುವ ಎಂಟು ಅಗತ್ಯವಾದ ಕೋವಿಡ್ ಔಷಧಿಗಳನ್ನು ಅಗತ್ಯವೆಂದು ಪರಿಗಣಿಸುವ ರಾಜ್ಯಗಳು ಕೋವಿಡ್ ಔಷಧಿಗಳ ಬಫರ್ ಸ್ಟಾಕ್ಅನ್ನು ಸಹ ಸಂಗ್ರಹಿಸಬಹುದು ಮತ್ತು ನಿರ್ವಹಿಸಬಹುದು.
ಕೋವಿಡ್-19 ಔಷಧಿಗಳಲ್ಲಿ ಹೆಚ್ಚಿನವು ಉತ್ಪಾದನೆಯಾಗಿ (ಔಷಧಿ ಬ್ಯಾಚ್ ಗಳು ಅಗತ್ಯ ಗುಣಮಟ್ಟದ ಪರೀಕ್ಷೆಗೆ ಒಳಪಟ್ಟಾಗ) ಎರಡರಿಂದ ನಾಲ್ಕು ವಾರಗಳ ನಂತರ ಮಾತ್ರ ಬಳಕೆಗೆ ಸರಬರಾಜು ಮಾಡಲಾಗುವುದರಿಂದ ಅವುಗಳನ್ನು ಪಡೆಯಲು ಮುಂಗಡ ಯೋಜನೆಯು ಅಗತ್ಯವೆಂದು ಕೇಂದ್ರ ಕಾರ್ಯದರ್ಶಿ (ಔಷಧ)ಯವರು ರಾಜ್ಯಗಳಿಗೆ ಸೂಚಿಸಿದರು ಪ್ರಕರಣಗಳು ಕಡಿಮೆಯಾದಾಗ ಮತ್ತು ಬೇಡಿಕೆಯು ಕಡಿಮೆಯಿದ್ದಾಗ ಮುಂಚಿತವಾಗಿ ಸಂಗ್ರಹಿಸಲು ಉತ್ಪಾದನೆಯ ಸಾಗಾಣಿಕೆ ಮತ್ತು ದಾಸ್ತಾನು ಮಿತಿಮೀರದಂತೆ ನಿರ್ವಹಿಸುವ ರೀತಿಯಲ್ಲಿ ಸಂಗ್ರಹಿಸಲು ಅವರು ರಾಜ್ಯಗಳಿಗೆ ಸಲಹೆ ನೀಡಿದರು.
ಶ್ರೀಮತಿ ವಂದನಾ ಗುರ್ನಾನಿ, ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರು (ಎನ್ ಎಚ್ ಎಮ್), ಡಾ.ಮನೋಹರ್ ಅಗ್ನಾನಿ, ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ), ಶ್ರೀವಿಕಾಶ್ ಶೀಲ್, ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ), ಶ್ರೀ ವಿಶಾಲ್ ಚೌಹಾಣ್, ಜಂಟಿ ಕಾರ್ಯದರ್ಶಿ (ಆರೋಗ್ಯ) ಪ್ರಧಾನ ಕಾರ್ಯದರ್ಶಿ (ಆರೋಗ್ಯ), ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ), ಮಿಷನ್ ನಿರ್ದೇಶಕರು (ಎನ್ ಎಚ್ ಎಮ್) ಮತ್ತು ಎಲ್ಲಾ ರಾಜ್ಯಗಳ/ ಕೇಂದ್ರಾಡಳಿತ ಪ್ರದೇಶಗಳ ರಾಜ್ಯ ಸರ್ವೆಲನ್ಸ್ ಅಧಿಕಾರಿಗಳು ಹಾಜರಿದ್ದರು
***
(Release ID: 1749149)
Visitor Counter : 215