ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

58.25 ಕೋಟಿ ಮೈಲುಗಲ್ಲು ದಾಟಿದ ಭಾರತದ ಒಟ್ಟಾರೆ ಕೋವಿಡ್-19 ಲಸಿಕೀಕರಣ ವ್ಯಾಪ್ತಿ


ಕಳೆದ ಮಾರ್ಚ್ 2020ರಿಂದೀಚೆಗೆ ಚೇತರಿಕೆ ಪ್ರಮಾಣ (ಶೇ.97.63) ಅತ್ಯಧಿಕ

ಕಳೆದ 24 ಗಂಟೆಗಳಲ್ಲಿ ಹೊಸದಾಗಿ 25,072 ಕೋವಿಡ್ ಪ್ರಕರಣಗಳು ದೃಢ

ಸದ್ಯ ಭಾರತದ ಒಟ್ಟಾರೆ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣ (3,33,924) ಕಳೆದ 155 ದಿನಗಳಲ್ಲಿಯೇ ಅತಿ ಕಡಿಮೆ

ಒಟ್ಟಾರೆ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.1.03ರಷ್ಟು ಮಾತ್ರ; ಕಳೆದ ಮಾರ್ಚ್ 2020ರಿಂದೀಚೆಗೆ ಅತಿ ಕಡಿಮೆ

ಕಳೆದ 28 ದಿನಗಳಿಂದೀಚೆಗೆ ಪ್ರತಿದಿನದ ಪಾಸಿಟಿವಿಟಿ ದರ (ಶೇ.1.94) ಶೇಕಡ 3ಕ್ಕಿಂತಲೂ ಕಡಿಮೆ

Posted On: 23 AUG 2021 11:50AM by PIB Bengaluru

ಇಂದು ಬೆಳಿಗ್ಗೆ 8ಗಂಟೆವರೆಗೆ ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ ಭಾರತದಲ್ಲಿ ಒಟ್ಟು ಕೋವಿಡ್-19 ಲಸಿಕೀಕರಣ ವ್ಯಾಪ್ತಿ 58.25 ಕೋಟಿ (58,25,49,595) ದಾಟಿದೆ. ಇದನ್ನು 64,69,222 ಸೆಷನ್ಸ್ ಗಳಲ್ಲಿ ಸಾಧಿಸಲಾಗಿದೆ.

ಇಂದು ಬೆಳಿಗ್ಗೆ 8 ಗಂಟೆವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಒಟ್ಟು ಲಸಿಕೆ ಪಡೆದವರ ವಿವರ ಹೀಗಿದೆ.

ಎಚ್ ಸಿಡಬ್ಲ್ಯೂ

1ನೇ ಡೋಸ್

1,03,53,405

2ನೇ ಡೋಸ್

82,15,000

ಎಫ್ ಎಲ್ ಡಬ್ಲ್ಯೂ ಎಸ್

1ನೇ ಡೋಸ್

1,83,04,397

2ನೇ ಡೋಸ್

1,25,74,264

18-44 ವರ್ಷ ವಯೋಮಾನದವರು

1ನೇ ಡೋಸ್

21,69,00,386

2ನೇ ಡೋಸ್

1,94,77,956

45-59 ವರ್ಷ ವಯೋಮಾನದವರು

1ನೇ ಡೋಸ್

12,26,16,599

2ನೇ ಡೋಸ್

4,87,88,970

60 ವರ್ಷ ಮೇಲ್ಪಟ್ಟವರು

1ನೇ ಡೋಸ್

8,33,38,747

2ನೇ ಡೋಸ್

4,19,79,871

ಒಟ್ಟು

 

2021 ಜೂನ್ 21ರಿಂದ ಸಾರ್ವತ್ರಿಕ ಕೋವಿಡ್-19 ಲಸಿಕೀಕರಣದ ಹೊಸ ಹಂತ ಆರಂಭವಾಗಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಕೋವಿಡ್-19 ಲಸಿಕೀಕರಣ ವ್ಯಾಪ್ತಿ ಮತ್ತು ವೇಗವನ್ನು ವೃದ್ಧಿಸಲು ಬದ್ಧವಾಗಿದೆ.

ಕಳೆದ 24 ಗಂಟೆಗಳಲ್ಲಿ 44,157 ರೋಗಿಗಳು ಚೇತರಿಸಿಕೊಳ್ಳುವುದರೊಂದಿಗೆ (ಸಾಂಕ್ರಾಮಿಕ ಆರಂಭವಾದ ನಂತರ) ಒಟ್ಟು ಸೋಂಕಿತರ ಪೈಕಿ ಈಗಾಗಲೇ 3,16,80,626. ಸೋಂಕಿತರು ಗುಣಮುಖರಾಗಿದ್ದಾರೆ.

ಇದರಿಂದಾಗಿ ಕ್ರಮೇಣ ಭಾರತದ ಚೇತರಿಕೆ ಪ್ರಮಾಣ ಶೇ. 97.63%, ತಲುಪಿದ್ದು, ಇದು ಕಳೆದ 2020 ಮಾರ್ಚ್ ನಿಂದೀಚೆಗೆ ಅತ್ಯಧಿಕವಾಗಿದೆ.

 

ಕೇಂದ್ರ ಸರ್ಕಾರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಹಾಗೂ ಸಹಭಾಗಿತ್ವದ ಪ್ರಯತ್ನಗಳಿಂದಾಗಿ ಸತತ 57 ದಿನಗಳಿಂದ ಪ್ರತಿ ದಿನ ಹೊಸ ಪ್ರಕರಣಗಳ ಸಂಖ್ಯೆ 50,000ಕ್ಕಿಂತಲೂ ಕಡಿಮೆ ಇದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 25,072 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದು ಕಳೆದ 160 ದಿನಗಳಲ್ಲಿಯೇ ಅತಿ ಕಡಿಮೆ.

 

ಹೆಚ್ಚಿನ ಸಂಖ್ಯೆಯ ಸೋಂಕಿತರು ಗುಣಮುಖವಾಗುತ್ತಿರುವುದರಿಂದ ಮತ್ತು ಹೊಸ ಪ್ರಕರಣಗಳ ಸಂಖ್ಯೆ ತಗ್ಗುತ್ತಿರುವುದರಿಂದ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 3,33,924 ಇದ್ದು, ಇದು ಕಳೆದ 155 ದಿನಗಳಲ್ಲಿಯೇ ಅತಿ ಕಡಿಮೆಯಾಗಿದೆ ಮತ್ತು ಕಳೆದ ಮಾರ್ಚ್ 2020ರಿಂದೀಚೆಗೆ ದೇಶದ ಒಟ್ಟಾರೆ ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 1.03% ರಷ್ಟಾಗುತ್ತದೆ.

ದೇಶದಲ್ಲಿ ಒಟ್ಟಾರೆ ಕೋವಿಡ್ ಸೋಂಕು ಪರೀಕ್ಷೆಗಳ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಲಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 12,95,160 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆ ಭಾರತ ಈವರೆಗೆ 50.75 ಕೋಟಿ(50,75,51,399) ಪರೀಕ್ಷೆಗಳನ್ನು ನಡೆಸಲಾಗಿದೆ.

ಒಂದೆಡೆ ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಲಾಗುತ್ತಿದೆ. ಮತ್ತೊಂದೆಡೆ ವಾರದ ಪಾಸಿಟಿವಿಟಿ ದರ ಇಳಿಕೆಯಾಗುತ್ತಿರುವುದು ಕಂಡುಬಂದಿದೆ. ವಾರದ ಪಾಸಿಟಿವಿಟಿ ದರ ಸದ್ಯ ಶೇ.1.91ರಷ್ಟಿದ್ದು, ಇದು ಕಳೆದ 59 ದಿನಗಳಲ್ಲಿ ಶೇ.3ಕ್ಕಿಂತ ಕಡಿಮೆಯಾಗಿದೆ. ದಿನದ ಪಾಸಿಟಿವಿಟಿ ದರ ಇಂದು ಶೇ1.94ರಷ್ಟಿದೆ. ದಿನದ ಪಾಸಿಟಿವಿಟಿ ದರ ಕಳೆದ 28 ದಿನಗಳಿಂದ ನಿರಂತರವಾಗಿ ಶೇ.3ಕ್ಕಿಂತ ಕಡಿಮೆ ಇದೆ ಮತ್ತು ಕಳೆದ 77 ದಿನಗಳಿಂದ ಶೇ.5ಕ್ಕಿಂತ ಕಡಿಮೆ ಮುಂದುವರಿದಿದೆ.

 

***



(Release ID: 1748232) Visitor Counter : 225