ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ಕಲ್ಯಾಣ್ ಸಿಂಗ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 21 AUG 2021 10:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ ಮತ್ತು ಹಿರಿಯ ಮುಖಂಡ ಶ್ರೀ ಕಲ್ಯಾಣ್ ಸಿಂಗ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ, "ನಾನು ಪದಗಳಿಗೆ ಮೀರಿ ದುಃಖಿತನಾಗಿದ್ದೇನೆ. ಕಲ್ಯಾಣ್ ಸಿಂಗ್ ಜೀ... ಮುತ್ಸದ್ದಿ, ಹಿರಿಯ ಆಡಳಿತಗಾರ, ತಳಮಟ್ಟದ ನಾಯಕ ಮತ್ತು ಮಹಾನ್ ವ್ಯಕ್ತಿ. ಅವರು ಉತ್ತರ ಪ್ರದೇಶದ ಅಭಿವೃದ್ಧಿಗೆ ಅಳಿಸಲಾಗದ ಕೊಡುಗೆಯನ್ನು ಬಿಟ್ಟುಹೋಗಿದ್ದಾರೆ. ಅವರ ಪುತ್ರ ಶ್ರೀ ರಾಜ್‌ವೀರ್ ಸಿಂಗ್ ಅವರೊಂದಿಗೆ ಮಾತನಾಡಿ ಸಂತಾಪ ವ್ಯಕ್ತಪಡಿಸಿದೆ. ಓಂ ಶಾಂತಿ.”

ಭಾರತದ ಸಾಂಸ್ಕೃತಿಕ ಪುನರುತ್ಥಾನಕ್ಕೆ ನೀಡಿದ ಕೊಡುಗೆಗಳಿಗಾಗಿ ಮುಂದಿನ ಪೀಳಿಗೆಗಳು ಕಲ್ಯಾಣ್ ಸಿಂಗ್ ಅವರಿಗೆ ಎಂದೆಂದಿಗೂ ಆಭಾರಿಯಾಗಿರಲಿವೆ. ಭಾರತೀಯ ಮೌಲ್ಯಗಳಲ್ಲಿ ಅವರ ನಂಬಿಕೆ  ಆಳವಾಗಿ ಬೇರೂರಿತ್ತು ಮತ್ತು ನಮ್ಮ ಶತಮಾನಗಳ ಹಿಂದಿನ ಸಂಪ್ರದಾಯಗಳ ಬಗ್ಗೆ ಅವರು ಹೆಮ್ಮೆ ಹೊಂದಿದ್ದರು.”

ಕಲ್ಯಾಣ್ ಸಿಂಗ್ ಅವರು ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಸೇರಿದ ಕೋಟ್ಯಂತರ ಜನರಿಗೆ ಧ್ವನಿಯಾದರು . ರೈತರು, ಯುವಕರು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಅವರು ನಾನಾ ಪ್ರಯತ್ನಗಳನ್ನು ಮಾಡಿದರು." ಎಂದಿದ್ದಾರೆ.


***


(Release ID: 1748150) Visitor Counter : 183