ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತಿನ ಸೋಮನಾಥದಲ್ಲಿ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ

Posted On: 20 AUG 2021 2:38PM by PIB Bengaluru

ಜೈ ಸೋಮನಾಥ್!.ನಮ್ಮೊಂದಿಗೆ ಕಾರ್ಯಕ್ರಮದಲ್ಲಿ ಸೇರಿಕೊಂಡಿರುವ ನಮ್ಮ ಗೌರವಾನ್ವಿತ ಲಾಲ್ ಕೃಷ್ಣ ಆಡ್ವಾಣಿ ಜೀ,ಗೃಹ ಸಚಿವರಾದ ಶ್ರೀ ಅಮಿತ್ ಶಾ ಜೀ, ಶ್ರೀಪಾದ ನಾಯಕ್ ಜೀ, ಅಜಯ್ ಭಟ್ ಜೀ, ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ಜೀ, ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಭಾಯಿ, ಗುಜರಾತ್ ಸರಕಾರದ ಪ್ರವಾಸೋದ್ಯಮ ಸಚಿವರಾದ ಜವಾಹರ್ ಜೀ, ವಾಸನ್ ಭಾಯಿ, ಲೋಕಸಭೆಯಲ್ಲಿ ನನ್ನ ಸಹೋದ್ಯೋಗಿಯಾಗಿರುವ ರಾಜೇಶ್ ಭಾಯಿ, ಸೋಮನಾಥ ದೇವಾಲಯದ ಟ್ರಸ್ಟಿನ ಟ್ರಸ್ಟೀ  ಶ್ರೀ ಪ್ರವೀಣ್ ಲಾಹಿರಿ ಜೀ, ಮತ್ತು ಎಲ್ಲಾ ಭಕ್ತರೇ, ಮಹಿಳೆಯರೇ ಹಾಗು ಮಹನೀಯರೇ!

ಪವಿತ್ರ ಕಾರ್ಯಕ್ರಮಕ್ಕೆ ನಾನು ವೀಡಿಯೋ ಕಾನ್ಫರೆನ್ಸ್ ಮೂಲಕ ಸೇರ್ಪಡೆಯಾಗಿದ್ದರೂ, ನನ್ನ ಹೃದಯದಲ್ಲಿ ನಾನು ಶ್ರೀ ಸೋಮನಾಥ ಭಗವಾನ್ ಪಾದದ ಬಳಿ ಇದ್ದೇನೆ ಎಂಬುದು ನನ್ನ ಭಾವನೆಯಾಗಿದೆ. ಸೋಮನಾಥ ದೇವಾಲಯದ ಟ್ರಸ್ಟಿನ ಅಧ್ಯಕ್ಷನಾಗಿ ಪವಿತ್ರ ಸ್ಥಳದ ಸೇವೆ ಮಾಡುವ ಅವಕಾಶ ನನಗೆ ಲಭ್ಯವಾಗಿದೆ. ಇಂದು ಮತ್ತೊಮ್ಮೆ, ನಾವು ಪವಿತ್ರ ದೇವಾಲಯದ  ಪರಿವರ್ತನೆಯನ್ನು ಕಾಣುತ್ತಿದ್ದೇವೆ.ಇಂದು ನನಗೆ ಸಮುದ್ರ ದರ್ಶನದ ಪಥವನ್ನು, ಸೋಮನಾಥ ಪ್ರದರ್ಶನ ಗ್ಯಾಲರಿಯನ್ನು ಮತ್ತು ಜುನಾ ಸೋಮನಾಥ ದೇವಾಲಯವನ್ನು ನವೀಕರಣದ ಬಳಿಕ ಅದರ  ನವರೂಪದಲ್ಲಿ ಉದ್ಘಾಟನೆ ಮಾಡುವ ಅವಕಾಶ ಲಭ್ಯವಾಗಿದೆ. ಇದರ ಜೊತೆಗೆ ಇಂದು ಪಾರ್ವತಿ ಮಾತಾ ದೇವಾಲಯಕ್ಕೆ ಶಿಲಾನ್ಯಾಸ ಕೂಡಾ ಮಾಡಲಾಗಿದೆ. ಇದು ಭಗವಾನ್ ಸೋಮನಾಥ ಜೀ ಅವರ ಆಶೀರ್ವಾದ ಎಂದು ಭಾವಿಸುತ್ತೇನೆ. ಇಲ್ಲಿ ಪವಿತ್ರ ಯೋಗಾಯೋಗ, ಅದೂ ಪವಿತ್ರ ಶ್ರಾವಣ ಮಾಸದಲ್ಲಿ ಸಂಭವಿಸಿದೆ. ಸಂದರ್ಭದಲ್ಲಿ  ನಾನು ನಿಮೆಲ್ಲರನ್ನೂ, ಟ್ರಸ್ಟಿನ ಎಲ್ಲಾ ಸದಸ್ಯರನ್ನೂ, ಸೋಮನಾಥ ಭಗವಾನರ ದೇಶ ವಿದೇಶಗಳಲ್ಲಿರುವ ಕೋಟ್ಯಂತರ ಭಕ್ತರನ್ನೂ   ಅಭಿನಂದಿಸುತ್ತೇನೆ. ನಿರ್ದಿಷ್ಟವಾಗಿ ನಾನು ಕೂಡಾ ಭಾರತದ ಪ್ರಾಚೀನ ವೈಭವವನ್ನು ಪುನಶ್ಚೇತನಗೊಳಿಸುವ ಇಚ್ಛಾಶಕ್ತಿಯನ್ನು ತೋರಿದ  ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್  ಜೀ ಅವರ ಪಾದಕ್ಕೆ ಶಿರಬಾಗಿ ನಮಿಸುತ್ತೇನೆ. ಸರ್ದಾರ್ ಸಾಹೇಬ್ ಅವರು ಸೋಮನಾಥ ದೇವಾಲಯ ಸ್ವತಂತ್ರ ಭಾರತದ ಸ್ವಾತಂತ್ರ್ಯದ ಪ್ರತೀಕವಾಗಬೇಕು ಎಂದು ಆಶಿಸಿದ್ದರು. ಇಂದು ಸರ್ದಾರ್ ಸಾಹೇಬ್ ಅವರ ಪ್ರಯತ್ನಗಳನ್ನು ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಸೋಮನಾಥ ದೇವಾಲಯಕ್ಕೆ  ಹೊಸ ಭವ್ಯತೆಯನ್ನು ನೀಡುವ ಮೂಲಕ ಮುಂದೆ ಕೊಂಡೊಯ್ಯುತ್ತಿರುವುದು ನಮಗೆ ದೊರೆತ ಅದೃಷ್ಟದ ಅವಕಾಶ. ಇಂದು ನಾನು ವಿಶ್ವನಾಥದಿಂದ ಹಿಡಿದು ಸೋಮನಾಥದವರೆಗೆ ಅನೇಕ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದ ಲೋಕಮಾನ್ಯ ಅಹಿಲ್ಯಾಬಾಯಿ ಹೋಳ್ಕರ್ ಅವರಿಗೂ ಶಿರಬಾಗಿ ನಮಿಸುತ್ತೇನೆ. ಅವರ  ಜೀವನದಲ್ಲಿದ್ದ ಪ್ರಾಚೀನತೆ ಮತ್ತು ಆಧುನಿಕತೆಯ ಸಂಗಮ,   ಅದನ್ನು ಒಂದು ಆದರ್ಶ ಎಂದು ಭಾವಿಸಿ ದೇಶವು ಮುನ್ನಡೆಯುತ್ತಿದೆ.

ಸ್ನೇಹಿತರೇ,

ಗುಜರಾತ್ ಆಧುನಿಕತೆಯನ್ನು ಪ್ರವಾಸೋದ್ಯಮದ ಜೊತೆ ಬೆಸೆಯುವುದರಿಂದಾಗುವ ಪ್ರಯೋಜನವನ್ನು ನೋಡಿದೆ. ಏಕತಾ ಪ್ರತಿಮೆಯಾಗಿರಲಿ, ಅಥವಾ ಕಚ್ ಪುನಶ್ಚೇತನವಾಗಲಿ ಬಹಳ ಹತ್ತಿರದಿಂದ ಇದನ್ನು ನೋಡಬಹುದು. ಧಾರ್ಮಿಕ ಪ್ರವಾಸೋದ್ಯಮದಲ್ಲಿ ಹೊಸ ಸಾಧ್ಯತೆಗಳನ್ನು ಅನ್ವೇಷಣೆ ಮಾಡುವುದು ಮತ್ತು ತೀರ್ಥ ಯಾತ್ರೆ ಹಾಗು ಸ್ಥಳೀಯ ಆರ್ಥಿಕತೆಯ ಜೊತೆಗೆ ಸಂಪರ್ಕವನ್ನು ಬಲಪಡಿಸುವುದು ಕಾಲದ ಅಗತ್ಯವಾಗಿದೆ. ಉದಾಹರಣೆಗೆ ದೇಶಾದ್ಯಂತದಿಂದ ಮತ್ತು ಜಗತ್ತಿನ ವಿವಿಧೆಡೆಗಳಿಂದ ಇದುವರೆಗೆ ಸೋಮನಾಥ ದೇವಾಲಯಕ್ಕೆ ಬರುತ್ತಿದ್ದರು. ಈಗ ಸಮುದ್ರ ದರ್ಶನ ಪಥ, ವಸ್ತುಪ್ರದರ್ಶನ, ಯಾತ್ರಿಗಳ ಪ್ಲಾಜಾ ಮತ್ತು ಶಾಪಿಂಗ್ ಕಾಂಪ್ಲೆಕ್ಸ್ ಇಲ್ಲಿಗೆ ಪ್ರವಾಸಿಗರನ್ನು ಆಕರ್ಷಿಸಲಿದೆ. ಈಗ ಜನರು ಜುನಾ ಸೋಮನಾಥ ದೇವಾಲಯದ ಮನಮುಟ್ಟುವಂತಹ ಆಕರ್ಷಕ ಮಾದರಿಯನ್ನೂ ನೋಡಬಹುದಾಗಿದೆ ಮತ್ತು ಅವರು ಹೊಸ ಪಾರ್ವತಿ ದೇವಾಲಯಕ್ಕೂ ಭೇಟಿ ನೀಡುವರು. ಇದು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡುವುದಲ್ಲದೆ ಕ್ಷೇತ್ರದ ದೈವಿಕತೆ ಕೂಡಾ ಹೆಚ್ಚುತ್ತದೆ. ಇದಕ್ಕಿಂತ ಹೆಚ್ಚಾಗಿ ಸೋಮನಾಥ ದೇವಾಲಯದ ಸುತ್ತು ಪೌಳಿ ಸಮುದ್ರದ ಬಳಿ ಇರುವ ದೇವಾಲಯಕ್ಕೆ ಭದ್ರತೆಯನ್ನು ಒದಗಿಸಲಿದೆ. ಇಂದು ಸೋಮನಾಥ ಪ್ರದರ್ಶನ ಗ್ಯಾಲರಿಯನ್ನೂ ಉದ್ಘಾಟಿಸಲಾಗಿದೆ. ಇದು ಕೂಡಾ ನಮ್ಮ ಯುವಕರಿಗೆ ಅವಕಾಶಗಳನ್ನು ಒದಗಿಸಲಿದೆ ಮತ್ತು ಭವಿಷ್ಯದ ತಲೆಮಾರಿಗೆ ಇತಿಹಾಸದ ಜೊತೆ ಜೋಡಿಸಿಕೊಳ್ಳಲು ಅವಕಾಶ ಮತ್ತು ನಮ್ಮ ನಂಬಿಕೆಯನ್ನು ಅದರ ಪ್ರಾಚೀನ ರೂಪದಲ್ಲಿ ಅರ್ಥ ಮಾಡಿಕೊಳ್ಳಲು ಅವಕಾಶಗಳನ್ನು ಒದಗಿಸುತ್ತದೆ.

ಸ್ನೇಹಿತರೇ,

ಸೋಮನಾಥವು ಶತಮಾನಗಳಿಂದ ಶಿವನ ಭೂಮಿಯಾಗಿದೆ. ನಮ್ಮ ಪ್ರಾಚೀನ ಧರ್ಮ ಗ್ರಂಥಗಳಲ್ಲಿ ಹೇಳಲಾಗುತ್ತಿದೆ:

"शं करोति सः शंकरः"

ಅಂದರೆ ಯಾರು ಕಲ್ಯಾಣವನ್ನು ಮಾಡುವರೋ, ಸಾಧನೆಗೆ ಕಾರಣರಾಗುವರೋ  ಅದು ಶಿವ ಎಂದು. ಹಾನಿಯಲ್ಲಿಯೂ, ನಾಶದಲ್ಲಿಯೂ ಅಭಿವೃದ್ಧಿಯ ಬೀಜವನ್ನು ಮೊಳಕೆ ಬರುವಂತೆ ಮಾಡುವುದು ಶಿವ. ಮತ್ತು ಸರ್ವನಾಶದಲ್ಲಿಯೂ ಸೃಜನಶೀಲತೆಗೆ ಜನ್ಮ ನೀಡುವುದೂ ಶಿವನೇ. ಶಿವ ಸಹಿಷ್ಣು ಮತ್ತು ಶಾಂತ ಸ್ವರೂಪಿ ಮತ್ತು ಶಾಶ್ವತಆದುದರಿಂದ ಶಿವನಲ್ಲಿಯ ನಮ್ಮ ನಂಬಿಕೆ ಕಾಲದ ಮಿತಿಯಾಚೆಗೂ ನಮ್ಮ ಅಸ್ತಿತ್ವದ ಅರಿವನ್ನು ಮೂಡಿಸುತ್ತದೆ ಮತ್ತು ನಮಗೆ ಕಾಲನ ಸವಾಲುಗಳನ್ನು ಎದುರಿಸಲು ಶಕ್ತಿಯನ್ನು ಕೊಡುತ್ತದೆ. ಹಾಗು ಸೋಮನಾಥ ದೇವಾಲಯ ನಮ್ಮ ಆತ್ಮ ವಿಶ್ವಾಸಕ್ಕೆ ಒಂದು ಪ್ರೇರಣೆ

ಸ್ನೇಹಿತರೇ,

ಭವ್ಯವಾದ ರಚನೆಯನ್ನು ಯಾರೇ ನೋಡಲಿ, ಇದನ್ನು ಬರೇ ದೇವಾಲಯ ಎಂದು ಅವರು ಪರಿಗಣಿಸುವುದಿಲ್ಲ, ಸಾವಿರಾರು ವರ್ಷಗಳಿಂದ ನಮಗೆ ಪ್ರೇರಣೆ ನೀಡುತ್ತಿರುವ, ಮಾನವತೆಯ ಮೌಲ್ಯಗಳನ್ನು ಘೋಷಿಸುತ್ತಿರುವುದರ, ಸಾರುತ್ತಿರುವುದರ  ಅಸ್ತಿತ್ವಸಂಕೇತ  ಇದು ಎಂದು ಭಾವಿಸುತ್ತಾರೆ. ನಮ್ಮ ಋಷಿ ಮುನಿಗಳು ಸಾವಿರಾರು ವರ್ಷಗಳ ಹಿಂದೆಪ್ರಭಾಸ ಕ್ಷೇತ್ರ”  ಎಂದು (ಜ್ಞಾನದ ದೈವಿಕ ನೆಲೆಸಾರಿದ ಮತ್ತು ಸತ್ಯವನ್ನು ಸುಳ್ಳಿನಿಂದ ಸೋಲಿಸಲಾಗದು ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟ ನೆಲೆ ಇದು. ನಂಬಿಕೆಯನ್ನು ಭಯೋತ್ಪಾದನೆಯಿಂದ ದಮನಿಸಲಾಗದು. ನೂರಾರು ವರ್ಷಗಳ ಇತಿಹಾಸದಲ್ಲಿ ದೇವಾಲಯವನ್ನು ಹಲವು ಬಾರಿ ಹಾಳುಗೆಡವಲಾಗಿದೆ. ವಿಗ್ರಹವನ್ನು ವಿರೂಪ ಮಾಡಲಾಗಿದೆ. ಮತ್ತು ಅದನ್ನು ಅಳಿಸಿ ಹಾಕಲು ಪ್ರತಿಯೊಂದು ರೀತಿಯ ಪ್ರಯತ್ನಗಳೂ ನಡೆದಿವೆ.ಆದರೆ ಅದನ್ನು ಹಾಳುಗೆಡವಲು, ಕೆಡವಿ ಹಾಕಲು ಪ್ರತೀ ಬಾರಿ ಪ್ರಯತ್ನಗಳು ನಡೆದಾಗಲೂ ಅದು ಮತ್ತೆ ತಲೆ ಎತ್ತಿದೆಆದುದರಿಂದ ಭಗವಾನ್ ಸೋಮನಾಥ ದೇವಾಲಯವು ಇಂದು ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ  ನಂಬಿಕೆ ಮತ್ತು ಸಮಾಧಾನ ನೀಡುವ ಕ್ಷೇತ್ರವಾಗಿದೆ. ಭಯೋತ್ಪಾದನೆಯ ಆಧಾರದ ಮೇಲೆ ಸಾಮ್ರಾಜ್ಯ ಸ್ಥಾಪಿಸುವ ಕಲ್ಪನೆಯ ದುಷ್ಟ ಶಕ್ತಿಗಳು ಕೆಲ ಕಾಲ ಮೇಲುಗೈ ಸಾಧಿಸುತ್ತವೆ. ಆದರೆ ಅವುಗಳ ಅಸ್ತಿತ್ವ ಶಾಶ್ವತವಾದುದಲ್ಲ. ಅವುಗಳು ಮಾನವತೆಯನ್ನು ಬಹಳ ದೀರ್ಘಕಾಲ ದಮನಿಸಲಾರವು. ಕೆಲವು ನಿರಂಕುಶಮತಿಗಳು ಸೋಮನಾಥ ದೇವಾಲಯವನ್ನು ನಾಶ ಮಾಡಲು ಹೊರಟರೂ ಇದು ನಿಜವಾಗಿದೆ ಮತ್ತು ಜಗತ್ತು ಇಂದು ಇಂತಹ ತಾತ್ವಿಕತೆಯ ಬಗ್ಗೆ ಕಳವಳ ಹೊಂದಿರುವಾಗಲೂ ಇದು ಸತ್ಯವನ್ನೇ ಎತ್ತಿ ಹಿಡಿದಿದೆ.

ಸ್ನೇಹಿತರೇ,

ನಮಗೆಲ್ಲಾ ತಿಳಿದಿರುವಂತೆ ಸೋಮನಾಥ ದೇವಾಲಯದ ಮರುನಿರ್ಮಾಣದ ಯಾತ್ರೆ ಮತ್ತು ಭವ್ಯವಾಗಿ ಇದರ ಅಭಿವೃದ್ಧಿ ಹಲವು ವರ್ಷಗಳ ಅಥವಾ ಕೆಲವು ದಶಕಗಳ ಫಲ ಮಾತ್ರವಲ್ಲ. ಇದು ಶತಮಾನಗಳ  ಬಲಿಷ್ಟ ಇಚ್ಛಾಶಕ್ತಿ ಮತ್ತು ತಾತ್ವಿಕ ನಿರಂತರತೆಯ ಫಲ. ರಾಜೇಂದ್ರ ಪ್ರಸಾದ್ ಜೀ, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಕೆ.ಎಂ.ಮುನ್ಷಿ ಅವರು ಸ್ವಾತಂತ್ರ್ಯದ ಬಳಿಕವೂ ಆಂದೋಲನದಲ್ಲಿ ಕಷ್ಟ ಪರಂಪರೆಗಳನ್ನು ಎದುರಿಸಿದರು. ಆದರೆ ಅಂತಿಮವಾಗಿ 1950 ರಲ್ಲಿ ಸೋಮನಾಥ ದೇವಾಲಯವು ನವಭಾರತದ ದೈವಿಕ ಸ್ಥಂಭವಾಗಿ ನಿಲ್ಲುವಂತಾಯಿತು. ಇಂದು ದೇಶವು ತನ್ನೆಲ್ಲಾ ಸಮಸ್ಯೆಗಳಿಗೆ ಸೌಹಾರ್ದಯುತವಾದ ಪರಿಹಾರವನ್ನು ಕಂಡುಕೊಳ್ಳುವ ಬದ್ಧತೆಯೊಂದಿಗೆ ಮುಂದುವರಿಯುತ್ತಿದೆ. ಇಂದು ನವಭಾರತದ ಹೆಮ್ಮೆಯ ಹೊಳೆಯುವ, ಮಿನುಗುವ ಸ್ಥಂಭವೊಂದು ರಾಮ ದೇವಾಲಯದ ರೀತಿಯಲ್ಲಿ  ಸ್ಥಾಪನೆಯಾಗತೊಡಗಿದೆ.

ಸ್ನೇಹಿತರೇ,

ನಮ್ಮ ಚಿಂತನೆಯು ಚರಿತ್ರೆಯನ್ನು ಕಲಿಯುವ ಮೂಲಕ ಸುಧಾರಣೆಗೊಳ್ಳಬೇಕು ಮತ್ತು ನವ ಭವಿಷ್ಯವನ್ನು ನಿರ್ಮಾಣ ಮಾಡುವಂತಾಗಬೇಕು. ಆದುದರಿಂದ ನಾನುಭಾರತ್ ಜೋಡೋ ಆಂದೋಲನ ಬಗ್ಗೆ ಮಾತನಾಡುವಾಗ ಅದು ಭೌಗೋಳಿಕ ಅಥವಾ ತಾತ್ವಿಕ ಸಂಯೋಜನೆಗಳಿಗೆ ಮಾತ್ರವೇ ಸೀಮಿತವಾಗಿರುವುದಲ್ಲ. ಇದು ನಮ್ಮನ್ನು ನಮ್ಮ ಚರಿತ್ರೆಯೊಂದಿಗೆ ಬೆಸೆಯುವ ಮತ್ತು ಮೂಲಕ ಭವಿಷ್ಯದ ಭಾರತವನ್ನು ನಿರ್ಮಿಸುವ ದೃಢ ಸಂಕಲ್ಪವನ್ನೂ ಒಳಗೊಂಡಿದೆ. ನಂಬಿಕೆಯೊಂದಿಗೆ ನಾವು ಹಳೆಯ ಅವಶೇಷಗಳ ಮೇಲೆ ಹಳೆಯ ಪ್ರೇರಣೆಗಳ ನೆನಪುಗಳೊಂದಿಗೆ ಆಧುನಿಕ ಭವ್ಯ ವೈಭವವನ್ನು ನಿರ್ಮಾಣ ಮಾಡಿದ್ದೇವೆ. ಸೋಮನಾಥಕ್ಕೆ ಬಂದಾಗ ರಾಜೇಂದ್ರ ಪ್ರಸಾದ್ ಜೀ ಅವರು ಹೇಳಿದ್ದನ್ನು ಸದಾ ನೆನಪಿಟ್ಟುಕೊಳ್ಳಬೇಕು. ಅವರು ಹೇಳಿದ್ದರು- ” ಶತಮಾನಗಳ ಹಿಂದೆ ಭಾರತವು ಚಿನ್ನದ ಮತ್ತು ಬೆಳ್ಳಿಯ ಸಂಗ್ರಹಾಲಯವಾಗಿತ್ತು. ವಿಶ್ವದ ಬಹಳ ದೊಡ್ಡ ಪ್ರಮಾಣದ ಚಿನ್ನ ಭಾರತದ ದೇವಾಲಯಗಳಲ್ಲಿತ್ತು. ನನ್ನ ದೃಷ್ಟಿಯಲ್ಲಿ ಸೋಮನಾಥ ದೇವಾಲಯದ ಮರುನಿರ್ಮಾಣ ಪೂರ್ಣಗೊಳ್ಳುವ ದಿನ ಎಂದರೆ ಬೃಹತ್ ದೇವಾಲಯವು ತನ್ನ ನೆಲೆಗಟ್ಟಿನ ಮೇಲೆ ಎದ್ದು ನಿಲ್ಲುವುದರ ಜೊತೆಗೆ ಸಮೃದ್ಧ ಭಾರತದ ಕಟ್ಟಡ ಕೂಡಾ ಸಿದ್ದಗೊಂಡ ದಿನ ಮತ್ತು ಅದರ ಚಿಹ್ನೆ ಕೂಡಾ ಸೋಮನಾಥ ದೇವಾಲಯ ಆಗಿರಲಿದೆ”.  ನಮ್ಮ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಜೀ ಅವರ ಕನಸು ನಮ್ಮೆಲ್ಲರಿಗೂ ಬಹಳ ದೊಡ್ಡ ಪ್ರೇರಣೆ.

ಸ್ನೇಹಿತರೇ,

ನಮಗೆ ಚರಿತ್ರೆಯ ಸಾರ ಮತ್ತು ನಂಬಿಕೆ ಎಂದರೆ-

ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್

ನಮ್ಮ ದೇಶದಲ್ಲಿ ಸ್ಥಾಪನೆಯಾಗಿರುವ 12 ಜ್ಯೋತಿರ್ಲಿಂಗಗಳುಸೌರಾಷ್ಟ್ರೇ ಸೋಮನಾಥಮ್ಎಂದು ಸೋಮನಾಥ ದೇವಾಲಯದಿಂದಲೇ ಆರಂಭಗೊಳ್ಳುತ್ತವೆ. ಪಶ್ಚಿಮದಲ್ಲಿ ಸೋಮನಾಥ ಮತ್ತು ನಾಗೇಶ್ವರದಿಂದ ಪೂರ್ವದಲ್ಲಿ ಬೈದ್ಯನಾಥ, ಉತ್ತರದಲ್ಲಿ ಬಾಬಾ ಕೇದಾರನಾಥದಿಂದ ಶ್ರೀ ರಾಮೇಶ್ವರದವರೆಗೆ ಅಂದರೆ ಭಾರತದ ದಕ್ಷಿಣ ತುದಿಯಲ್ಲಿ, 12 ಜ್ಯೋತಿರ್ಲಿಂಗಗಳು ಇಡೀ ಭಾರತವನ್ನು ಜೋಡಿಸುವ ಕೆಲಸವನ್ನು ಮಾಡುತ್ತವೆ. ಅದೇ ರೀತಿ ನಮ್ಮ ಚಾರ್ ಧಾಮಗಳು (ನಾಲ್ಕು ದೈವಿಕ ನೆಲೆಗಳು) , 56 ಶಕ್ತಿ ಪೀಠಗಳ ನಮ್ಮ ಪರಿಕಲ್ಪನೆ (ದೈವಿಕ ಶಕ್ತಿಯ ಪವಿತ್ರ ಸ್ಥಳಗಳು) , ದೇಶಾದ್ಯಂತ ವಿವಿಧ ಯಾತ್ರಾ ಕೇಂದ್ರಗಳು ನಿಜವಾಗಿಯೂ ಏಕ ಭಾರತ್, ಶ್ರೇಷ್ಠ ಭಾರತ್ ಸ್ಫೂರ್ತಿಯ ಅಭಿವ್ಯಕ್ತಿಗಳು. ಭಾರತವು ಶತಮಾನಗಳಿಂದ  ಇಷ್ಟೊಂದು ವೈವಿಧ್ಯಗಳೊಂದಿಗೆ ಹೇಗೆ  ಏಕತ್ರವಾಗಿದೆ ಎಂದು ಜಗತ್ತು ಅಚ್ಚರಿಪಡುತ್ತಿದೆ. ಸೋಮನಾಥಕ್ಕೆ ಬರಲು ಭಕ್ತಾದಿಗಳು ಪೂರ್ವದಿಂದ ಪಶ್ಚಿಮಕ್ಕೆ ಸಾವಿರಾರು ಕಿಲೋ ಮೀಟರ್ ನಡೆಯುತ್ತಾರೆ, ತಮ್ಮ ಹಣೆಯ ಮೇಲೆ ಕಾಶಿಯ ಮಣ್ಣನ್ನು ಹಚ್ಚಿಕೊಳ್ಳಲು ದಕ್ಷಿಣ ಭಾರತದ ಸಾವಿರಾರು ಭಕ್ತರು ಕಾಶಿಗೆ ಬರುವುದನ್ನು ನೀವು ನೋಡುತ್ತೀರಿ, ಅದರಲ್ಲಿ ಭಾರತದ ಶಕ್ತಿ ಸಾಮರ್ಥ್ಯವನ್ನು  ನೀವು ಕಾಣಬಹುದು. ನಮಗೆ ಪರಸ್ಪರ ಭಾಷೆ ಅರ್ಥವಾಗುವುದಿಲ್ಲ, ನಮ್ಮ ಬಟ್ಟೆ ಬರೆಗಳು, ವೇಷ ಭೂಷಣ ಭಿನ್ನ, ಆಹಾರಾಭ್ಯಾಸಗಳು ಕೂಡಾ ಭಿನ್ನ. ಆದರೆ ನಾವೆಲ್ಲ ಒಂದು ಎಂಬ ಭಾವನೆ ನಮ್ಮಲ್ಲಿದೆ. ಭಾರತವನ್ನು ಏಕತೆಯ ಸೂತ್ರದಲ್ಲಿ ಬಂಧಿಸುವಲ್ಲಿ ಮತ್ತು ಶತಮಾನಗಳಿಂದ ನಮ್ಮಲ್ಲಿ ಪರಸ್ಪರ ಮಾತುಕತೆ ಸ್ಥಾಪಿಸುವಲ್ಲಿ ನಮ್ಮ ಆಧ್ಯಾತ್ಮಿಕತೆ ಪ್ರಮುಖ ಪಾತ್ರವನ್ನು ವಹಿಸಿದೆ. ಮತ್ತು ಅದನ್ನು ಬಲಪಡಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.

ಸ್ನೇಹಿತರೇ,

ಇಂದು ಇಡೀ ಜಗತ್ತೇ ಭಾರತದ ಯೋಗ, ತತ್ವಜ್ಞಾನ, ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯತ್ತ ಆಕರ್ಷಿತವಾಗುತ್ತಿದೆ. ನಮ್ಮ ಬೇರುಗಳ ಜೊತೆ ಸಂಪರ್ಕಿಸುವ ನವ ಜಾಗೃತಿ ನಮ್ಮ ಹೊಸ ತಲೆಮಾರಿನಲ್ಲಿದೆ. ಆದುದರಿಂದ ಪ್ರವಾಸೋದ್ಯಮ ಮತ್ತು ಧಾರ್ಮಿಕ, ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅವಕಾಶವಿದೆ. ಸಾಮರ್ಥ್ಯವನ್ನು  ಸಾಕಾರಗೊಳಿಸಲು ದೇಶವು ಆಧುನಿಕ ಮೂಲಸೌಕರ್ಯವನ್ನು ನಿರ್ಮಾಣ ಮಾಡುತ್ತಿದೆ ಮತ್ತು ಪ್ರಾಚೀನ ಭವ್ಯತೆಗೆ ಪುನಶ್ಚೇತನ ನೀಡುತ್ತಿದೆ. ರಾಮಾಯಣ ಸರ್ಕ್ಯೂಟ್ ಉದಾಹರಣೆ ನಮ್ಮ ಮುಂದಿದೆ. ಇಂದು ದೇಶದ ಮತ್ತು ವಿದೇಶಗಳ ಶ್ರೀರಾಮ ಭಕ್ತರು ರಾಮಾಯಣ ಸರ್ಕ್ಯೂಟ್ ಮೂಲಕ ಶ್ರೀರಾಮ ಭಗವಾನ್ ಅವರ ಜೀವಿತಕ್ಕೆ ಸಂಬಂಧಿಸಿದ ಅನೇಕ ಹೊಸ ಸ್ಥಳಗಳನ್ನು ತಿಳಿದುಕೊಳ್ಳುವಂತಾಗಿದೆ. ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಶ್ರೀರಾಮ ದೇವರು ಹೇಗೆ ಇಡೀ ಭಾರತದ ಶ್ರೀ ರಾಮ ಆಗಿದ್ದಾರೆ ಎಂಬುದರ ಅನುಭವ ಪಡೆಯಲು ಸಾಧ್ಯವಾಗುತ್ತದೆ. ಅದೇ ರೀತಿ ಬುದ್ಧ ಸರ್ಕ್ಯೂಟ್ ಕೂಡಾ ಜಗತ್ತಿನ ಬುದ್ಧಾನುಯಾಯಿಗಳು ಭಾರತಕ್ಕೆ ಭೇಟಿ  ನೀಡಲು ಅನುವು ಮಾಡಿ ಕೊಡುತ್ತಿದೆ. ಇಂದು ನಿಟ್ಟಿನಲ್ಲಿ ಕೆಲಸಗಳು ತ್ವರಿತಗತಿಯಿಂದ ನಡೆಯುತ್ತಿವೆ. ಅದೇ ರೀತಿ ಪ್ರವಾಸೋದ್ಯಮ ಸಚಿವಾಲಯಸ್ವದೇಶ ದರ್ಶನ್ ಯೋಜನೆಅಡಿಯಲ್ಲಿ 15 ವಿವಿಧ ಶೀರ್ಷಿಕೆಗಳ ಅಡಿಯಲ್ಲಿ ಪ್ರವಾಸೀ ಸರ್ಕ್ಯೂಟ್ ಗಳನ್ನು ಅಭಿವೃದ್ಧಿ ಮಾಡುತ್ತಿದೆ. ಸರ್ಕ್ಯೂಟ್ ಗಳು ಪ್ರವಾಸೋದ್ಯಮಕ್ಕೆ ಅವಕಾಶಗಳನ್ನು ರೂಪಿಸುತ್ತಿರುವುದಲ್ಲದೆ, ದೇಶದ ಹಲವು ನಿರ್ಲಕ್ಷಿತ ಪ್ರದೇಶಗಳಲ್ಲಿ ಅಭಿವೃದ್ಧಿಗೂ ಕಾರಣವಾಗಿವೆ.

ಸ್ನೇಹಿತರೇ,

ಇದು ನಮ್ಮ ಪೂರ್ವಜರ ಚಿಂತನೆಯಾಗಿತ್ತು, ಅವರು ದೂರದ ಪ್ರದೇಶಗಳನ್ನು ನಮ್ಮ ನಂಬಿಕೆಯೊಂದಿಗೆ ಬೆಸೆಯುವ ಕಾರ್ಯವನ್ನು ಮಾಡಿದ್ದಾರೆ, ಅವರ ಸಂಬಂಧಗಳ ಬಗ್ಗೆ ನಮಗೆ ಅರಿವು  ಮೂಡಿಸಿದ್ದಾರೆ. ಆದರೆ ದುರ್ದೈವವಶಾತ್, ನಾವು ಸಮರ್ಥರಾದಾಗ, ನಮಗೆ ಆಧುನಿಕ ತಂತ್ರಜ್ಞಾನ ಮತ್ತು ಸಂಪನ್ಮೂಲಗಳು ಲಭ್ಯವಾದಾಗ ಪ್ರದೇಶಗಳನ್ನುಅಲ್ಲಿಗೆ  ತಲುಪಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕೈಬಿಟ್ಟೆವು. ನಮ್ಮ ಪರ್ವತ ಪ್ರದೇಶಗಳು ಇದಕ್ಕೆ ಉತ್ತಮ ಉದಾಹರಣೆ. ಆದರೆ ಇಂದು ದೇಶವು ಪವಿತ್ರ ಯಾತ್ರಾ ಸ್ಥಳಗಳ  ದೂರವನ್ನು ಜೋಡಿಸಲು ಉದ್ಯುಕ್ತವಾಗಿದೆ. ವೈಷ್ಣೋದೇವಿ ದೇವಾಲಯ ಸುತ್ತ ಅಭಿವೃದ್ಧಿ ಇರಲಿ, ಅಥವಾ ಈಶಾನ್ಯ ಭಾರತದಲ್ಲಿ ಅತ್ಯುತ್ತಮ ಮೂಲಸೌಕರ್ಯ ಇರಲಿ, ಇವುಗಳಿಂದಾಗಿ ದೇಶದಲ್ಲಿಂದು ದೂರವು ಕಡಿಮೆಯಾಗುತ್ತಿದೆ, ಕುಗ್ಗುತ್ತಿದೆ. ಅದೇ ರೀತಿ 2014ರಲ್ಲಿ ದೇಶದಲ್ಲಿ ಪವಿತ್ರ ಯಾತ್ರಾಸ್ಥಳಗಳ ಅಭಿವೃದ್ಧಿಗಾಗಿಪ್ರಸಾದ ಯೋಜನೆಯನ್ನು ಘೋಷಿಸಲಾಗಿದೆ. ಯೋಜನೆ ಅಡಿಯಲ್ಲಿ ದೇಶದ ಸುಮಾರು 40 ಪ್ರಮುಖ ಯಾತ್ರಾ ಕೇಂದ್ರಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಅವುಗಳಲ್ಲಿ 15 ಯೋಜನೆಗಳು ಪೂರ್ಣಗೊಂಡಿವೆ. ಗುಜರಾತಿನಲ್ಲಿ ಕೂಡಾ ಪ್ರಸಾದ ಯೋಜನೆ ಅಡಿಯಲ್ಲಿ ಸುಮಾರು 100 ಕೋ.ರೂ.ಗಳಿಗೂ ಅಧಿಕ ಮೊತ್ತದ ಮೂರು ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಸೋಮನಾಥ ಮತ್ತು ಗುಜರಾತಿನ ಇತರ ಪ್ರವಾಸೀ ತಾಣಗಳನ್ನು, ನಗರಗಳನ್ನು  ಜೋಡಿಸುವ ಕಾರ್ಯಕ್ಕೆ ವಿಶೇಷ ಆದ್ಯತೆಯನ್ನು ನೀಡಲಾಗುತ್ತಿದೆ. ಇದರ ಹಿಂದಿನ ಚಿಂತನೆ ಏನೆಂದರೆ ಪ್ರವಾಸಿಗರು ಒಂದು ಸ್ಥಳಕ್ಕೆ ಭೇಟಿ ನೀಡಿದಾಗ ಅವರು ಇನ್ನೊಂದು ಸ್ಥಳಕ್ಕೂ ಹೋಗುವಂತಾಗಬೇಕು ಎನ್ನುವುದು. ಅದೇ ರೀತಿ ದೇಶಾದ್ಯಂತ 19 ಪ್ರತಿಮಾತ್ಮಕ ಪ್ರವಾಸೀ ತಾಣಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಎಲ್ಲ ಯೋಜನೆಗಳೂ ಭವಿಷ್ಯದಲ್ಲಿ ನಮ್ಮ ಪ್ರವಾಸೋದ್ಯಮಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಲಿವೆ.

ಸ್ನೇಹಿತರೇ,

ಇಂದು ದೇಶವು ಸಾಮಾನ್ಯ ಜನರನ್ನು ಜೋಡಿಸುತ್ತಿರುವುದು ಮಾತ್ರವಲ್ಲ, ಪ್ರವಾಸೋದ್ಯಮದ ಮೂಲಕ ಅದೂ ಪ್ರಗತಿ ಸಾಧಿಸುತ್ತಿದೆ.ಇದರ ಪರಿಣಾಮವಾಗಿ ನಮ್ಮ ದೇಶವು 2013ರಲ್ಲಿ ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ 65 ನೇ ಸ್ಥಾನದಲ್ಲಿದ್ದುದು ಈಗ 2019ರಲ್ಲಿ 34 ನೇ ಸ್ಥಾನಕ್ಕೇರಿದೆ. ಅಂತಾರಾಷ್ಟ್ರೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಏಳು ವರ್ಷಗಳ ಅವಧಿಯಲ್ಲಿ ಹಲವಾರು ನೀತಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅವುಗಳಿಂದ ಇಂದು ದೇಶಕ್ಕೆ ಲಾಭವಾಗುತ್ತಿದೆ. ದೇಶವು -ವೀಸಾ  ಆಡಳಿತದಂತಹ ತ್ವರಿತಗತಿಯ ಕ್ರಮಗಳನ್ನು ಕೈಗೊಂಡಿದೆ. ಆಗಮನ ಬಳಿಕ ವೀಸಾ ಮತ್ತು ವೀಸಾ ಶುಲ್ಕದ ಇಳಿಕೆಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದೇ ರೀತಿ ಪ್ರವಾಸೋದ್ಯಮ ವಲಯದಲ್ಲಿ ಆತಿಥ್ಯ ಕ್ಷೇತ್ರದ ಜಿ.ಎಸ್.ಟಿ. ಯನ್ನೂ ಕಡಿಮೆ ಮಾಡಲಾಗಿದೆ. ಇದರಿಂದ ಪ್ರವಾಸೋದ್ಯಮ ವಲಯಕ್ಕೆ ಬಹಳ ದೊಡ್ಡ ಲಾಭವಾಗಲಿದೆ ಮತ್ತು ಕೋವಿಡ್ ಪರಿಣಾಮಗಳಿಂದ ಚೇತರಿಸಿಕೊಳ್ಳಲು ಸಹಾಯವಾಗಲಿದೆ. ಪ್ರವಾಸಿಗರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಉದಾಹರಣೆಗೆ ಕೆಲವು ಪ್ರವಾಸಿಗರು ಸಾಹಸ ಪ್ರವಾಸೋದ್ಯಮಕ್ಕೆ ಬಹಳ ಉತ್ಸಾಹಿಗಳಾಗಿರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು 120 ಶಿಖರಾಗ್ರಗಳನ್ನು ಟ್ರೆಕ್ಕಿಂಗ್ ಗೆ ತೆರೆಯಲಾಗಿದೆ. ಪ್ರವಾಸಿಗರಿಗೆ ಯಾವುದೇ ಅನಾನುಕೂಲವಾಗದಂತೆ ಖಾತ್ರಿಪಡಿಸಲು  ಮಾರ್ಗದರ್ಶಿಗಳಿಗೆ ತರಬೇತಿ ನೀಡಲಾಗುತ್ತಿದೆ ಮತ್ತು ಹೊಸ ಸ್ಥಳಗಳ ಬಗ್ಗೆ ವಿವರವಾದ ಮಾಹಿತಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಇದು ಕೂಡಾ ಬೃಹತ್ ಸಂಖ್ಯೆಯ ಉದ್ಯೋಗಾವಕಾಶಗಳನ್ನು ನಿರ್ಮಾಣ ಮಾಡುತ್ತಿದೆ.

ಸ್ನೇಹಿತರೇ,

ನಮ್ಮ ದೇಶದ ಸಂಪ್ರದಾಯಗಳು ಕಠಿಣ ಪರಿಸ್ಥಿತಿಗಳಿಂದ ಹೊರಬರಲು ಪ್ರೇರಣೆ ನೀಡುತ್ತವೆ ಮತ್ತು ನಮ್ಮ ಯಾತನೆಗಳನ್ನು ಬದಿಗಿರಿಸಿ ಮುನ್ನಡೆಯಲು ಸಹಾಯ ಮಾಡುತ್ತವೆ. ಕೊರೊನಾದಲ್ಲಿ ಜನರಿಗೆ ಪ್ರವಾಸೋದ್ಯಮ ಒಂದು ಆಶಾಕಿರಣವಾಗಿದ್ದುದನ್ನು ನಾವು ಗಮನಿಸಿದ್ದೇವೆ. ಆದುದರಿಂದ ನಾವು ನಿರಂತರವಾಗಿ ನಮ್ಮ ಪ್ರವಾಸೋದ್ಯಮದ ವಿಶಿಷ್ಟತೆಯನ್ನು ಮತ್ತು ಸಂಸ್ಕೃತಿಯನ್ನು ವಿಸ್ತರಿಸುತ್ತಾ ಮತ್ತು ಉತ್ತೇಜಿಸುತ್ತಾ ಸಾಗಬೇಕು. ಆದರೆ ಇದೇ ವೇಳೆಗೆ ನಾವು ಅವಶ್ಯ ಮುಂಜಾಗರೂಕತಾ ಕ್ರಮಗಳನ್ನು ಮನಸ್ಸಿನಲ್ಲಿಡಬೇಕು. ಸ್ಫೂರ್ತಿಯೊಂದಿಗೆ ದೇಶವು ನಿರಂತರವಾಗಿ ಮುನ್ನಡೆಯುತ್ತಿರುತ್ತದೆ ಮತ್ತು ನಮ್ಮ ಪರಂಪರೆಗಳು ಹಾಗು ಭವ್ಯತೆ ನವಭಾರತ ನಿರ್ಮಾಣದಲ್ಲಿ ನಮಗೆ ಸದಾ ಮಾರ್ಗದರ್ಶಿಯಾಗಿರುತ್ತವೆ ಎಂಬ ಬಗ್ಗೆ ನನಗೆ ಭರವಸೆ ಇದೆ. ಸೋಮನಾಥ ಭಗವಾನರ ಆಶೀರ್ವಾದ ನಮ್ಮ ಮೇಲೆ ನಿರಂತರವಾಗಿರಲಿ ಮತ್ತು ಬಡವರಲ್ಲಿ ಬಡವರ ಕಲ್ಯಾಣಕ್ಕಾಗಿ ಹೊಸ ಶಕ್ತಿಯೊಂದಿಗೆ ದುಡಿಯಲು ಅನುಗ್ರಹ ಮಾಡಲಿ, ಇದರಿಂದ ನಮಗೆ ಜನಸಾಮಾನ್ಯರಿಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಮತ್ತು ಆತನ ಬದುಕಿನಲ್ಲಿ ಪರಿವರ್ತನೆ ತರುವುದಕ್ಕೂ ಅವಕಾಶವಾಗುತ್ತದೆ!. ಶುಭ ಹಾರೈಕೆಗಳೊಂದಿಗೆ ನಿಮ್ಮೆಲ್ಲರಿಗೂ ಬಹಳ ಧನ್ಯವಾದಗಳು!! ಜೈ ಸೋಮನಾಥ!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***


(Release ID: 1748146) Visitor Counter : 301