ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೋವಿಡ್-19 ಇಂದಿನ ಪರಿಷ್ಕೃತ ವರದಿ

Posted On: 20 AUG 2021 9:14AM by PIB Bengaluru

ದೇಶಾದ್ಯಂತ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಇದುವರೆಗೆ ಒಟ್ಟು 57.22 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ.

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 36,571 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.12%ಗೆ ತಗ್ಗಿದೆ; 2020 ಮಾರ್ಚ್ ನಿಂದ ಕಂಡುಬಂದಿರುವ ಕನಿಷ್ಠ ಶೇಕಡಾವಾರು ದರ ಇದಾಗಿದೆ.

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 3,63,605ಕ್ಕೆ ಇಳಿಕೆ ಕಂಡಿದೆ; ಕಳೆದ 150 ದಿನಗಳಲ್ಲಿ ಅತ್ಯಂತ ಕನಿಷ್ಠ ಸಂಖ್ಯೆ ಇದಾಗಿದೆ.

ಚೇತರಿಕೆ ದರ ಇದೀಗ 97.54%ಗೆ ಸುಧಾರಣೆ ಕಂಡಿದೆ; 2020 ಮಾರ್ಚ್ ನಿಂದ ಗರಿಷ್ಠ ಚೇತರಿಕೆ ದರ ಇದಾಗಿದೆ.

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 36,555 ರೋಗಿಗಳು ಗುಣಮುಖರಾಗಿದ್ದಾರೆ. ಇದರೊಂದಿಗೆ ದೇಶಾದ್ಯಂತ ಒಟ್ಟಾರೆ 3,15,61,635 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ವಾರದ ಪಾಸಿಟಿವಿಟಿ ದರ 1.93%ಗೆ ಇಳಿಕೆ ಕಂಡಿದ್ದು, ಸತತ 56 ದಿನಗಳಿಂದ 3% ಮಟ್ಟದ ಕೆಳಗೆ ಕಾಯ್ದುಕೊಂಡಿದೆ.

ದೈನಂದಿನ ಪಾಸಿಟಿವಿಟಿ ದರ 1.94%ಗೆ ತಗ್ಗಿದ್ದು, ಸತತ 25 ದಿನಗಳಿಂದ 3% ಮಟ್ಟದಿಂದ ಕೆಳಗಿದೆ.

ದೇಶಾದ್ಯಂತ ಇದುವರೆಗೆ 50.26 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

***


(Release ID: 1747590) Visitor Counter : 234