ಉಕ್ಕು ಸಚಿವಾಲಯ
ಆಜಾ಼ದಿ ಕ ಅಮೃತಮಹೋತ್ಸವ ಆಚರಣೆ ಅಂಗವಾಗಿ ಉಕ್ಕು ಸಚಿವಾಲಯದ ಎಸ್ ಎಐಎಲ್-ಬಿಎಸ್ ಪಿ ಮತ್ತು ಎಸ್ ಎಐಎಲ್-ಬಿಐಎಸ್ ಎಲ್ ನಿಂದ ನಾನಾ ಸ್ಪರ್ಧೆಗಳ ಆಯೋಜನೆ
Posted On:
19 AUG 2021 2:07PM by PIB Bengaluru
ಆಜಾ಼ದಿ ಕ ಅಮೃತಮಹೋತ್ಸವ ಆಚರಣೆ ಅಂಗವಾಗಿ ಉಕ್ಕು ಸಚಿವಾಲಯದ ಸಾರ್ವಜನಿಕ ವಲಯದ ಮಹಾರತ್ನ ಉದ್ದಿಮೆ ಎಸ್ ಎಐಎಲ್ ತನ್ನ ಭಿಲ್ಲಾಯ್ ಘಟಕದಲ್ಲಿ ‘India@ 75’ ವಿಷಯದ ಕುರಿತು ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿತ್ತು. ಎಂಎಂಟಿ ಬ್ಯಾಚ್-2021ರ ಮ್ಯಾನೇಜ್ ಮೆಂಟ್ ಟ್ರೈನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಿ ಅಂಡ್ ಎ ದ ಇಡಿ ಶ್ರೀ ಎಸ್.ಕೆ.ದುಬೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿದರು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ‘India@75’ ಎಂಬ ವಿಷಯದ ಬಗ್ಗೆ ಆಸಕ್ತಿದಾಯಕ ಮತ್ತು ಮಾಹಿತಿ ನೀಡುವ ಪ್ರಶ್ನೆಗಳಿಗೆ ಉತ್ತರಿಸಿದರು.
ಭದ್ರಾವತಿಯಲ್ಲಿನ ಎಸ್ ಎಐಎಲ್-ವಿಎಸ್ ಐಎಲ್ ಘಟಕದ ವಿಎಸ್ ಐಎಲ್ ಸಿಲ್ವರ್ ಜ್ಯೂಬಿಲಿ ಕ್ರೀಡಾಂಗಣದಲ್ಲಿ, ಭಾರಿ ಉತ್ಸಾಹದಿಂದ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಆಜಾ಼ದಿ ಕ ಅಮೃತಮಹೋತ್ಸವ ಆಚರಣೆ ಭಾಗವಾಗಿ ಘಟಕದಲ್ಲಿ ದೇಶಭಕ್ತಿ ಗೀತೆಗಳ ಗಾಯಕ ಮತ್ತು ರಂಗೋಲಿ ಸ್ಪರ್ಧೆಯನ್ನೂ ಸಹ ಆಯೋಜಿಸಲಾಗಿತ್ತು.
***
(Release ID: 1747381)
Visitor Counter : 263