ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ವಿಶ್ವ ಯುವ ಬಿಲ್ಲುಗಾರಿಕೆ ಚಾಂಪಿಯನ್ ಶಿಪ್ ವಿಜೇತರನ್ನು ಭೇಟಿ ಮಾಡಿದ ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್; ಪದಕ ಗೆದ್ದ ಕ್ರೀಡಾಪಟುಗಳಿಗೆ ಅಭಿನಂದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ ತಳಮಟ್ಟದ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಲು ಕೈಗೊಂಡ ಉಪಕ್ರಮಗಳಿಂದ  ಉತ್ತಮ ಫಲಿತಾಂಶ: ಅನುರಾಗ್ ಠಾಕೂರ್

Posted On: 17 AUG 2021 5:49PM by PIB Bengaluru

ಪ್ರಮುಖಾಂಶ:

• ಪೋಲಂಡ್|ನ ರೊಕ್ಲಾದಲ್ಲಿ ನಡೆದ ವಿಶ್ವ ಯುವ ಬಿಲ್ಲುಗಾರಿಕೆ ಕ್ರೀಡಾಕೂಟದಲ್ಲಿ ಟೀಂ ಇಂಡಿಯಾ ಒಟು 15 ಪದಕಗಳನ್ನು ಗೆದ್ದಿದೆ - 8 ಚಿನ್ನ, 2 ಬೆಳ್ಳಿ ಮತ್ತು 5 ಕಂಚು ಭಾರತದ ಪಾಲಾಗಿವೆ.

ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಥಾಕೂರ್ ಅವರು ವಿಶ್ವ ಯುವ ಬಿಲ್ಲುಗಾರಿಕೆ ಚಾಂಪಿಯನ್|ಶಿಪ್ ವಿಜೇತ ಭಾರತೀಯ ಕ್ರೀಡಾಪಟುಗಳನ್ನು ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿ, ಸಂವಾದ ನಡೆಸಿದರು. ಪೋಲಂಡ್|ನ ರಾಕ್ಲಾದಲ್ಲಿ ನಡೆದ ವಿಶ್ವ ಯುವ ಬಿಲ್ಲುಗಾರಿಕೆ ಕ್ರೀಡಾಕೂಟದಲ್ಲಿ 8 ಚಿನ್ನ, 2 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ಗೆದ್ದಿರುವ ಟೀಂ ಇಂಡಿಯಾವು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದೆ ಎಂದು ಅವರು ಕ್ರೀಡಾ ವಿಜೇತರನ್ನು ಅಭಿನಂದಿಸಿದರು.

ದೇಶದಲ್ಲಿ ಕೆಳ ಮಟ್ಟದ ಸುಪ್ತ ಪ್ರತಿಭೆಗಳು ವಿಶಿಷ್ಟ ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ, ಕೆಳಮಟ್ಟದ ಸುಪ್ತ ಪ್ರತಿಭೆಗಳನ್ನು ಹುಡುಕಿ, ಪೋಷಿಸುವ ಖೇಲೊ ಇಂಡಿಯಾದಂತಹ ಯೋಜನೆಗಳನ್ನು ಜಾರಿ ಮಾಡಿದ ಫಲವಾಗಿ, ಇದೀಗ ಸಕಾರಾತ್ಮಕ ಫಲಿತಾಂಶ ಹೊರಮೂಡುತ್ತಿದೆ. ನಿಮ್ಮಂತಹ ಪ್ರತಿಭೆಗಳಿಂದ ಸಾಧನೆ ಸಾಧ್ಯವಾಗುತ್ತಿದೆ. ದೇಶಾದ್ಯಂತ ನಮ್ಮ ಯುವ ಸಮುದಾಯ ಎಲ್ಲಾ ಕ್ರೀಡೆಗಳಲ್ಲಿ ಪ್ರಶಂಸೆ ಮತ್ತು ಕೀರ್ತಿ ತರುತ್ತಿದ್ದಾರೆ.  ಮುಂದಿನ ದಿನಗಳಲ್ಲೂ  ಅವರು ಕ್ರೀಡಾ ರಂಗದಲ್ಲಿ ಅಪಾರ ಭರವಸೆ ಮತ್ತು ಆಶಾವಾದಗಳನ್ನು ಮೂಡಿಸಿದ್ದಾರೆ. ನಾನು ಎಲ್ಲಾ ವಿಶ್ವ ಯುವ ಬಿಲ್ಲುಗಾರಿಕೆ ಕ್ರೀಡಾಕೂಟ ವಿಜೇತರನ್ನು ಅಭಿನಂದಿಸುತ್ತೇನೆ ಮತ್ತು ಮುಂದಿನ ಸ್ಪರ್ಧೆಗಳಲ್ಲಿ ಅವರಿಗೆ ಶುಭ ಹಾರೈಸುತ್ತೇನೆ.  ಅವರು ಹಿರಿಯ ತಂಡಕ್ಕೆ ಪರಿವರ್ತನೆಯಾದಾಗ, ಉನ್ನತ ಮಟ್ಟದ ಸಾಧನೆಗೆ ಅಗತ್ಯವಾದ ಎಲ್ಲಾ ನೆರವು ಮತ್ತು ಬೆಂಬಲವನ್ನು ಸರ್ಕಾರ ನೀಡಲಿದೆ ಎಂದು ಶ್ರೀ ಠಾಕೂರ್ ಭರವಸೆ ನೀಡಿದರು.

ಕೆಡೆಟ್ ಸಂಯುಕ್ತ ಮಹಿಳಾ ತಂಡ, ಕೆಡೆಟ್ ಸಂಯುಕ್ತ ಪುರುಷರ ತಂಡ, ಕಿರಿಯ ರೀಕರ್ವ್ ಪುರುಷರ ತಂಡ, ಕೆಡೆಟ್ ರೀಕರ್ವ್ ಪುರುಷರ ತಂಡ, ಕೆಡೆಟ್ ಸಂಯುಕ್ತ ಪುರುಷರ ತಂಡ, ಕೆಡೆಟ್ ರೀಕರ್ವ್ ಮಿಶ್ರ ತಂಡ, ಕಿರಿಯ ರೀಕರ್ವ್ ಮಿಶ್ರ ತಂಡ, ಕಿರಿಯ ರೀಕರ್ವ್ ಮಿಶ್ರ ತಂಡ ಮತ್ತು ಕಿರಿಯ ರೀಕರ್ವ್ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಕೊಮೊಲಿಕ ಬಾರಿ ಅವರು ಸ್ವರ್ಣ ಪದಕ ಗೆದ್ದಿದ್ದಾರೆ.

ವೈಯಕ್ತಿಕ ಮತ್ತು ಮಿಶ್ರ ಡಬಲ್ಸ್ ವಿಭಾಗದಲ್ಲಿ 2 ಚಿನ್ನ ಗೆದ್ದಿರುವ ಕೊಮೊಲಿಕ ಅವರು 2019ರ ವಿಶ್ವ ಕೆಡೆಟ್ ಬಿಲ್ಲುಗಾರಿಕೆ ಚಾಂಪಿಯನ್|ಶಿಪ್|ನಲ್ಲಿ ಅಪೇಕ್ಷಿತ ಪದಕ ಗೆದ್ದಿದ್ದರು. ‘ಟಾರ್ಗೆಟ್  ಒಲಿಂಪಿಕ್ ಫೋಡಿಯಂ ಯೋಜನೆ’ಯ ಪ್ರಮುಖ ತಂಡದಲ್ಲಿರುವ ಕೊಮಾಲಿಕ ಅವರು, ಟಾಟಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟು. 2021 ಮಾರ್ಚ್|ನಲ್ಲಿ ಡೆಹ್ರಾಡೂನ್ ನಲ್ಲಿ ನಡೆದ 41ನೇ ಎನ್|ಟಿಪಿಸಿ ಕಿರಿಯ ಬಿಲ್ಲುಗಾರಿಕೆ ರಾಷ್ಟ್ರೀಯ ಚಾಂಪಿಯನ್|ಶಿಪ್ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಕೊಮಾಲಿಕ ಅವರು ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಖೇಲೊ ಇಂಡಿಯಾ ಕ್ರೀಡಾಕೂಟಗಳಿಂದ ಆಕೆಯ ಅದ್ಭುತ ಪ್ರತಿಭೆ ಮುಂಚೂಣಿಗೆ ಬಂದು, 2019 ಮತ್ತು 2020ರ ಸಾಲಿನ ಖೇಲೊ ಇಂಡಿಯಾ ಯುವ ಕ್ರೀಡಾಕೂಟಗಳಲ್ಲಿ ಉನ್ನತ ಪ್ರದರ್ಶನ ನೀಡಿದ್ದರು. ಕಳೆದ ವರ್ಷದ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟಗಳಲ್ಲೂ ಅವರು ಉತ್ತಮ ಸಾಧನೆ ಮಾಡಿದ್ದರು.

ಪೋಲಂಡ್ ಬಿಲ್ಲುಗಾರಿಕೆ ಕ್ರೀಡಾಕೂಟದ ಕೆಡೆಟ್ ಸಂಯುಕ್ತ ವೈಯಕ್ತಿಕ ವಿಭಾಗದಲ್ಲಿ ಪ್ರಿಯಾ ಗುರ್ಜಾರ್, ಸಂಯುಕ್ತ ಕಿರಿಯ ವೈಯಕ್ತಿಕ (ಪುರುಷ ಮತ್ತು ಮಹಿಳೆ) ವಿಭಾಗದಲ್ಲಿ ಸಾಕ್ಷಿ ಚೌಧರಿ ಅವರು ಬೆಳ್ಳಿ ಗೆದ್ದಿದ್ದಾರೆ. ಸಂಯುಕ್ತ ಕೆಡೆಟ್ ಮಹಿಳಾ ವಿಭಾಗದಲ್ಲಿ ಪರ್ನಿತ್ ಕೌರ್, ಸಂಯುಕ್ತ ಕಿರಿಯ ವೈಯಕ್ತಿಕ (ಪುರುಷ ಮತ್ತು ಮಹಿಳಾ) ವಿಭಾಗದಲ್ಲಿ ರಿಶಬ್ ಯಾದವ್, ರೀಕರ್ವ್ ಕೆಡೆಟ್ ವೈಯಕ್ತಿಕ (ಪುರುಷ ಮತ್ತು ಮಹಿಳೆ) ವಿಭಾಗ ಹಾಗೂ ಮತ್ತು ಕೆಡೆಟ್ ರೀಕರ್ವ್ ಮಹಿಳೆಯರ ತಂಡದಲ್ಲಿ ಮಂಜಿರಿ ಮನೋಜ್ ಮತ್ತು ಬಿಶಾಲ್ ಚಂಗ್|ಮಯ್ ಅವರು ಕಂಚಿನ ಪದಕ ಗೆದ್ದಿದ್ದಾರೆ.

***


(Release ID: 1746866) Visitor Counter : 194