ಪ್ರಧಾನ ಮಂತ್ರಿಯವರ ಕಛೇರಿ

ನಮ್ಮ ಜನರ ಹೋರಾಟ ಮತ್ತು ತ್ಯಾಗಗಳ ನೆನಪಿನಲ್ಲಿ ಆಗಸ್ಟ್ 14 ವಿಭಜನೆಯ ಕರಾಳ ಸ್ಮರಣಾ ದಿನವಾಗಿ ಆಚರಣೆ: ಪ್ರಧಾನಮಂತ್ರಿ

Posted On: 14 AUG 2021 10:54AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮ್ಮ ಜನರ ಹೋರಾಟ ಮತ್ತು ತ್ಯಾಗಗಳ ನೆನಪಿನಲ್ಲಿ ಆಗಸ್ಟ್ 14 ವಿಭಜನೆಯ ಕರಾಳ ಸ್ಮರಣಾ ದಿನವಾಗಿ ಆಚರಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸರಣಿ ಟ್ವೀಟ್ ಗಳಲ್ಲಿ, “ವಿಭಜನೆಯ ನೋವು ಎಂದಿಗೂ ಮರೆಯಲಾಗದು. ಬುದ್ದಿಹೀನ ದ್ವೇಷ ಮತ್ತು ಹಿಂಸಾಚಾರದಿಂದಾಗಿ ನಮ್ಮ ಲಕ್ಷಾಂತರ ಸಹೋದರಿಯರು ಮತ್ತು ಸಹೋದರರು ನಿರಾಶ್ರಿತರಾದರು ಮತ್ತು ಹಲವರು ಜೀವ ಕಳೆದುಕೊಂಡರು. ನಮ್ಮ ಜನರ ಹೋರಾಟ ಮತ್ತು ತ್ಯಾಗಗಳ ನೆನಪಿನಲ್ಲಿ ಆಗಸ್ಟ್ 14 ವಿಭಜನೆಯ ಕರಾಳ ಸ್ಮರಣಾ ದಿನವಾಗಿ ಆಚರಿಸಲಾಗುವುದು

ಸಾಮಾಜಿಕ ವಿಭಜನೆ, ಅಸಾಮರಸ್ಯದ ವಿಷವನ್ನು ತೆಗೆದುಹಾಕುವ ಮತ್ತು ಏಕತೆ, ಸಾಮಾಜಿಕ ಸಾಮರಸ್ಯ ಹಾಗೂ ಮಾನವ ಸಬಲೀಕರಣದ ಚೈತನ್ಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ವಿಭಜನೆ ಕರಾಳ ಸ್ಮರಣಾ ದಿನ  #PartitionHorrorsRemembranceDay ಸದಾ ನಮಗೆ ನೆನಪಿಸಲಿ ‘’ಎಂದು ಹೇಳಿದ್ದಾರೆ.

देश के बंटवारे के दर्द को कभी भुलाया नहीं जा सकता। नफरत और हिंसा की वजह से हमारे लाखों बहनों और भाइयों को विस्थापित होना पड़ा और अपनी जान तक गंवानी पड़ी। उन लोगों के संघर्ष और बलिदान की याद में 14 अगस्त को 'विभाजन विभीषिका स्मृति दिवस' के तौर पर मनाने का निर्णय लिया गया है।

#PartitionHorrorsRemembranceDay का यह दिन हमें भेदभाव, वैमनस्य और दुर्भावना के जहर को खत्म करने के लिए केवल प्रेरित करेगा, बल्कि इससे एकता, सामाजिक सद्भाव और मानवीय संवेदनाएं भी मजबूत होंगी।"

***



(Release ID: 1745806) Visitor Counter : 253